Ayra: ನೀನೇ ನನ್ನ ಶಕ್ತಿ, ನೀನೇ ನನ್ನ ದೌರ್ಬಲ್ಯ, ಎಲ್ಲವೂ ನೀನೇ: ರಾಕಿಂಗ್​ ಸ್ಟಾರ್​​ ಯಶ್​

Ayra: ಅಪ್ಪ ಎಷ್ಟೇ ಸ್ಟಾರ್​ ನಟ ಆಗಲಿ, ಸಿರಿವಂತ ಆಗಲಿ, ಸಾಮಾನ್ಯ ವ್ಯಕ್ತಿಯಾಗಲಿ ಮಗಳ ಮುಂದೆ ಆದ ಶೂನ್ಯ. ಮಗಳೇ ಸರ್ವಸ್ವ ಎಂಬುದನ್ನು ಮತ್ತೆ ನೆನೆಪಿಸಿದ್ದಾರೆ ಯಶ್​.

Seema.R | news18-kannada
Updated:December 2, 2019, 7:20 PM IST
Ayra: ನೀನೇ ನನ್ನ ಶಕ್ತಿ, ನೀನೇ ನನ್ನ ದೌರ್ಬಲ್ಯ, ಎಲ್ಲವೂ ನೀನೇ: ರಾಕಿಂಗ್​ ಸ್ಟಾರ್​​ ಯಶ್​
ಮಗಳು ಆಯ್ರಾಳೊಂದಿಗೆ ಯಶ್​
  • Share this:
ಸಾಮಾನ್ಯ ಕುಟುಂಬದಿಂದ ಬಂದ ಯಶ್​ ಕನ್ನಡ ಚಿತ್ರರಂಗದಲ್ಲಿ ದೃಢವಾಗಿ ನಿಂತು ತಮ್ಮ ಹೆಸರನ್ನು ಭಾರತದ ಚಿತ್ರರಂಗದಲ್ಲಿ ಛಾಪು ಮೂಡಿಸಿದವರು. ಆದರೆ, ಯಶ್​ ಹಿಂದಿನ ಶಕ್ತಿ, ದೌರ್ಬಲ್ಯದ ಕುರಿತು ಇದೇ ಮೊದಲ ಬಾರಿಗೆ ಅವರು ಬಾಯ್ಬಿಟ್ಟಿದ್ದಾರೆ.

ಹೌದು, ಯಶ್​ ಅವರ ಯಶಸ್ಸು ಸೇರಿದಂತೆ ಎಲ್ಲದಕ್ಕೂ ಕಾರಣ ಅವರ ಮಗಳು ಆಯ್ರಾ. ತಮ್ಮ ಮಗಳ ಮೊದಲ ಹುಟ್ಟುಹಬ್ಬದಂದು ಯಶ್​ ಈ ಸತ್ಯ ಬಿಚ್ಚಿಟ್ಟಿದ್ದಾರೆ.

ತಮ್ಮ ಮುದ್ದಿನ ಮಗಳು ಆಯ್ರಾಗೆ ಇಂದು ಒಂದು ವರ್ಷದ ಸಂಭ್ರ. ಈ ಸಿಹಿ ದಿನದಂದು ಮಗಳ ಕುರಿತ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು. ನೀನೇ ನನಗೆ ಎಲ್ಲಾ ಎಂದು ಮನಮಿಡಿಯುವಂತೆ ಸಂದೇಶ ನೀಡಿದ್ದಾರೆ.



ಅಪ್ಪ ಎಷ್ಟೇ ಸ್ಟಾರ್​ ನಟ ಆಗಲಿ, ಸಿರಿವಂತ ಆಗಲಿ, ಸಾಮಾನ್ಯ ವ್ಯಕ್ತಿಯಾಗಲಿ ಮಗಳ ಮುಂದೆ ಆದ ಶೂನ್ಯ. ಮಗಳೇ ಸರ್ವಸ್ವ ಎಂಬುದನ್ನು ಮತ್ತೆ ನೆನೆಪಿಸಿದ್ದಾರೆ ಯಶ್​.

ಅಪ್ಪ ಎಂಬ ಬಡ್ತಿಯನ್ನು ನೀಡುವ ನೀನು ನನ್ನ ಮನದಲ್ಲಿನ ಮೃದುತ್ವವನ್ನು ಹೊರಗೆಡವಿದೆ ಎನ್ನುವ ಮೂಲಕ ರಾಜಹುಲಿಯಲ್ಲಿನ ಮುಗ್ಧತೆಯನ್ನು ಹೊರಹಾಕಿದ್ದಾರೆ.

Loading...

ನಟ ರಾಕಿಂಗ್​​ಸ್ಟಾರ್​ಗೂ ಮುನ್ನ ನಟಿ ರಾಧಿಕಾ ಪಂಡಿತ್​ ಕೂಡ ತಮ್ಮ ಮಗಳ ಹುಟ್ಟು ಹಬ್ಬಕ್ಕೆ ವಿಶೇಷವಾಗಿ ಶುಭಾಶಯ ಕೋರಿದ್ದರು.  ಸಾಮಾಜಿಕ ಜಾಲತಾಣದಲ್ಲಿಯೂ ಕೂಡ ರಾಕಿಂಗ್​ ದಂಪತಿಗಳ ಮಗಳಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

First published:December 2, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...