• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Rocking Star Yash: ಮುಂದಿನ ಸಿನಿಮಾದಲ್ಲೂ ಗಡ್ಡಕ್ಕಿಲ್ಲ ಮುಕ್ತಿ! ಇದೇ ಟ್ರೆಂಡ್​ ಮುಂದುವರಿಸ್ತಾರೆ ರಾಕಿ ಭಾಯ್​

Rocking Star Yash: ಮುಂದಿನ ಸಿನಿಮಾದಲ್ಲೂ ಗಡ್ಡಕ್ಕಿಲ್ಲ ಮುಕ್ತಿ! ಇದೇ ಟ್ರೆಂಡ್​ ಮುಂದುವರಿಸ್ತಾರೆ ರಾಕಿ ಭಾಯ್​

ರಾಕಿಂಗ್​ ಸ್ಟಾರ್​ ಯಶ್​​

ರಾಕಿಂಗ್​ ಸ್ಟಾರ್​ ಯಶ್​​

Rocking Star Yash: ಇದೀಗ ರಾಕಿ ಭಾಯ್​ ಅವರ ಮುಂದಿನ ಸಿನಿಮಾದ ಬಿಗ್​ ಅಪ್​ಡೇಟ್​ ಒಂದು ಸಿಕ್ಕಿದೆ. 'ಕೆಜಿಎಫ್ 2' ರಿಲೀಸ್ ಆಗಿ ತಿಂಗಳಾದರೂ ಯಶ್ ಗಡ್ಡಕ್ಕೆ ಮುಕ್ತಿ ಸಿಕ್ಕಿಲ್ಲ. ಇದಕ್ಕೆ ಕಾರಣ ಯಶ್ ಮುಂದಿನ ಸಿನಿಮಾ ಎನ್ನುವ ಸುದ್ದಿ ಹರಿದಾಡುತ್ತಿದೆ.

  • Share this:

ಕೆಜಿಎಫ್ (KGF) ಚಿತ್ರದ ಮೂಲಕ ಸ್ಟಾರ್ ಹೀರೋ ಆಗಿ ಮೆರೆದ ರಾಕಿ ಭಾಯ್ (Rocky Bhai) ಈಗ ಏನೇ ಮಾಡಿದರೂ ಹಾಟ್ ಟಾಪಿಕ್ ಆಗಿದ್ದಾರೆ.ಇವರಿಗೆ ಸಂಬಂಧಿಸಿದ ಯಾವುದೇ ಸಣ್ಣ ವಿಷಯವೂ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇತ್ತೀಚಿಗೆ ಯಶ್‌ (Yash) ಗೆ ಸಂಬಂಧಿಸಿದ ಮತ್ತೊಂದು ಕುತೂಹಲಕಾರಿ ವಿಷಯ ವೈರಲ್ ಆಗಿದೆ.ಕೆಜಿಎಫ್ ಸ್ಟಾರ್ ಸೋಷಿಯಲ್ ಮೀಡಿಯಾ (Social Media) ದಲ್ಲಿ ಸಕ್ರಿಯರಾಗಿದ್ದಾರೆ. ಕುಟುಂಬ ಸಮೇತ.. ಮಕ್ಕಳಿಗೆ ಸಂಬಂಧಿಸಿದ ವಿಷಯಗಳನ್ನು ಸದಾ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಗಡ್ಡ (Beard) ದ ಮೂಲಕ ಯುವಜನತೆಯಲ್ಲಿ ಕ್ರೇಜ್ (Craze) ತಂದ ಹೀರೋ (Hero) ಇಂದಿಗೂ ಅದೆಷ್ಟೋ ಅಭಿಮಾನಿಗಳಿಗೆ ಮಾದರಿಯಾಗಿದ್ದಾರೆ.


ಸದ್ಯಕ್ಕಿಲ್ಲ ಯಶ್​ ಗಡ್ಡಕ್ಕೆ ಕತ್ತರಿ!


ಇದೀಗ ರಾಕಿ ಭಾಯ್​ ಅವರ ಮುಂದಿನ ಸಿನಿಮಾದ ಬಿಗ್​ ಅಪ್​ಡೇಟ್​ ಒಂದು ಸಿಕ್ಕಿದೆ. 'ಕೆಜಿಎಫ್ 2' ರಿಲೀಸ್ ಆಗಿ ತಿಂಗಳಾದರೂ ಯಶ್ ಗಡ್ಡಕ್ಕೆ ಮುಕ್ತಿ ಸಿಕ್ಕಿಲ್ಲ. ಇದಕ್ಕೆ ಕಾರಣ ಯಶ್ ಮುಂದಿನ ಸಿನಿಮಾ ಎನ್ನುವ ಸುದ್ದಿ ಹರಿದಾಡುತ್ತಿದೆ.ಯಶ್ ಈ ಗಡ್ಡದಾರಿ ಅವತಾರ ಅಭಿಮಾನಿಗಳಿಗೆ ಬಲು ಇಷ್ಟವಾಗಿದೆ. ಹಾಗಾಗಿ ಯಶ್ ಕೂಡ ಸಿನಿಮಾ ಬಿಟ್ಟು ಸಾರ್ವಜನಿಕವಾಗಿವೂ ಈ ಲುಕ್ ಮೇಂಟೇನ್ ಮಾಡುತ್ತಿದ್ದಾರೆ. ಕೆಜಿಎಫ್​ 2 ಸಿನಿಮಾ ರಿಲೀಸ್ ಆದರೂ ರಾಕಿ ಭಾಯ್​ ಗಡ್ಡ ಯಾಕೆ ತೆಗೆತಿಲ್ಲಾ ಅಂತ ಅಭಿಮಾನಿಗಳು ಕನ್ಫೂಸ್​ ಆಗಿದ್ದರು. ಇದಕ್ಕೆ ಉತ್ತರ ಸಿಕ್ಕಿದೆ.


ಮುಂದಿನ ಸಿನಿಮಾದಲ್ಲೂ ಇರಲಿದ್ಯಾ ಇದೇ ಲುಕ್​?


ಬಹುತೇಕ ಎಲ್ಲಾ ಚಿತ್ರಗಳಲ್ಲೂ ಯಶ್ ಲೈಟ್ ಆಗಿ ಗಡ್ಡ ಬಿಟ್ಟಿದ್ದಾರೆ. ಕ್ಲೀನ್ ಶೇವ್ ಆಗಿ ಕಾಣಿಸಿಕೊಂಡಿಲ್ಲ. 'ಕಿರಾತಕ', 'ರಾಜಧಾನಿ', 'ಮಿಸ್ಟರ್ ಅಂಡ್ ಮಿಸ್ಸಸ್ ರಾಮಾಚಾರಿ', 'ಗೂಗ್ಲಿ' ಸೇರಿದಂತೆ ಹಲವು ಸಿನಿಮಾಗಳಲ್ಲಿ ಭಿನ್ನ ಗಡ್ಡದ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ 'ಲಕ್ಕಿ' ಮತ್ತು 'ರಾಜಹುಲಿ' ಚಿತ್ರಗಳಲ್ಲಿ ಡಿಫ್ರೆಂಟ್ ಲುಕ್ ಟ್ರೈ ಮಾಡಿದ್ದಾರೆ. ಇದೀಗ ತಮ್ಮ ಮುಂದಿನ ಸಿನಿಮಾದಲ್ಲೂ ರಾಕಿ ಭಾಯ್​ ಬಹುತೇಕ ಕೆಜಿಎಫ್​ ನಲ್ಲಿ ಬಿಟ್ಟಿದ್ದ ಗಡ್ಡದ ಲುಕ್​ ಮುಂದುವರೆಸುತ್ತಾರೆ ಅಂತ ಹೇಳಲಾಗುತ್ತಿದೆ.


ಇದನ್ನೂ ಓದಿ: ಸಲ್ಮಾನ್​ ಖಾನ್​ ಕುಟುಂಬದಲ್ಲಿ ಮತ್ತೊಂದು ಡಿವೋರ್ಸ್, ಇವ್ರ್​ ಫ್ಯಾಮಿಲಿಗೆ ಮದ್ವೆನೇ ಆಗಿಬರಲ್ಲ ಎಂದ ಫ್ಯಾನ್ಸ್​!


ಕೆಜಿಎಫ್​ ಚಾಪ್ಟರ್​ 3 ಬರೋದು ಕನ್ಫರ್ಮ್​!


ಸಿನಿಮಾದ ಕೊನೇ ಸೀನ್ ನೋಡಿದವರಿಗೆಲ್ಲ ಒಂದು ಅಚ್ಚರಿ ಸಿಕ್ಕಿದೆ. ಅದೇನೆಂದರೆ, 'ಕೆಜಿಎಫ್: ಚಾಪ್ಟರ್ 3' ಶುರುವಾಗಲಿದೆ ಎಂಬುದು. ಈ ಬಗ್ಗೆ ಯಾರೂ ಕೂಡ ಅಧಿಕೃತ ಮಾಹಿತಿ ನೀಡಿರಲಿಲ್ಲ. ಆದರೆ ನಟ ಯಶ್ ಈಚೆಗೆ ನೀಡಿದ ಸಂದರ್ಶನವೊಂದರಲ್ಲಿ ಈ ಕುರಿತು ಮಾತನಾಡಿದ್ದಾರೆ. ಇದೀಗ ಈ ಸಿನಿಮಾದ ಮತ್ತೊಂದು ಅಪ್​ಡೇಟ್ ಸಿಕ್ಕಿದೆ.ಕೆಜಿಎಫ್​ 2 ಸಿನಿಮಾದಲ್ಲಿ ಸಂಜಯ್​ ದತ್​ ಅಧೀರನ ಪಾತ್ರದಲ್ಲಿ ಮಿಂಚಿದ್ದರು. ಕೆಜಿಎಫ್​ 2 ಸಿನಿಮಾದ ಕೊನೆಯಲ್ಲಿ ಅಧೀರನ ಪಾತ್ರ ಸಾಯುತ್ತೆ. ನಂತರ ಕೆಜಿಎಫ್​  3ಗೆ ಲಿಂಕ್​ ಕೊಡಲಾಗಿದೆ. ಇದಾದ ಬಳಿಕ ಸೋಷಿಯಲ್​ ಮೀಡಿಯಾದಲ್ಲಿ ಚಾಪ್ಟರ್​3ಗೆ ಯಾರು ವಿಲನ್​ ಎಂಬುದರ ಬಗ್ಗೆ ಚರ್ಚೆಯಾಗುತ್ತಿತ್ತು. ಇದಕ್ಕೆ ಉತ್ತರ ಸಿಕ್ಕಿದೆ.


ಇದನ್ನೂ ಓದಿ: ಅಂದು ಬರಿಗಾಲಲ್ಲಿ ಬಂದಿದ್ದ ರಾಕಿಂಗ್ ಸ್ಟಾರ್ ಶೂ ಕಲೆಕ್ಷನ್ ನೋಡಿದ್ರೆ ವ್ಹಾವ್ ಎನ್ನದೇ ಇರೋದಿಲ್ಲ


ಇದೀಗ ‘ಕೆಜಿಎಫ್: ಚಾಪ್ಟರ್ 3’ ಸಿನಿಮಾದಲ್ಲಿ ಖಳನಾಯಕನಾಗಿ ರಾಣಾ ದಗ್ಗುಬಾಟಿ ಕಾಣಿಸಿಕೊಳ್ಳಬಹುದಾ? ಹೀಗಂತ ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಊಹಿಸುತ್ತಿದ್ದಾರೆ.  ನಟ ಯಶ್ ಮಾಡಿರುವ ಒಂದು ಟ್ವೀಟ್ ಈ ಸುಳಿವನ್ನು ನೀಡಿದೆ.ಕೆಜಿಎಫ್: ಚಾಪ್ಟರ್ 2’ ಸಿನಿಮಾ ಬಿಡುಗಡೆಯಾದ ಬಳಿಕ "ನೀವು ಮತ್ತೊಮ್ಮೆ ಸಾಧಿಸಿದ್ದೀರಿ. ಸಿನಿಮಾ ಚೆನ್ನಾಗಿದೆ. ಇಡೀ ‘ಕೆಜಿಎಫ್’ ತಂಡಕ್ಕೆ ನನ್ನ ಅಭಿನಂದನೆಗಳು" ಎಂದು ನಟ ರಾಣಾ ದಗ್ಗುಬಾಟಿ ಟ್ವೀಟ್ ಮಾಡಿದ್ದರು.

First published: