ನಾ ಮಕ್ಕಳ ಜೊತೆ ಬ್ಯುಸಿ ಕಣ್ರಪ್ಪ, ಸದ್ಯಕ್ಕೆ ಸ್ವಲ್ಪ ಅಡ್ಜೆಸ್ಟ್ ಮಾಡ್ಕೊಳ್ಳಿ; ಆಯ್ರಾ-ಯಶ್ ವಿಡಿಯೋ ವೈರಲ್

Yash-Radhika: ಇದೀಗ ಮತ್ತೊಮ್ಮೆ ಮಗಳ ಸಂಭಾಷನೆಯೊಂದಿಗೆ ತಮ್ಮ ಆಗಮನದ ಖುಷಿ ಹಂಚಿಕೊಂಡಿರುವಂತೆ ಆಯ್ರಾಳ ವಿಡಿಯೋವೊಂದನ್ನು ಯಶ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

news18-kannada
Updated:October 30, 2019, 8:25 PM IST
ನಾ ಮಕ್ಕಳ ಜೊತೆ ಬ್ಯುಸಿ ಕಣ್ರಪ್ಪ, ಸದ್ಯಕ್ಕೆ ಸ್ವಲ್ಪ ಅಡ್ಜೆಸ್ಟ್ ಮಾಡ್ಕೊಳ್ಳಿ; ಆಯ್ರಾ-ಯಶ್ ವಿಡಿಯೋ ವೈರಲ್
Yash
  • Share this:
ಜೂನಿಯರ್ ಯಶ್​ರ ಆಗಮನದೊಂದಿಗೆ ಮಿಸ್ಟರ್ ಅ್ಯಂಡ್ ಮಿಸೆಸ್ ರಾಮಾಚಾರಿ ಫುಲ್ ಖುಷಿಯಲ್ಲಿದ್ದಾರೆ. ಈ ಖುಷಿಗೆ ಕಿಚ್ಚು ಹಚ್ಚುವಂತೆ ಇದೀಗ ರಾಕಿಂಗ್ ಸ್ಟಾರ್ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಈ ಹಿಂದೆ ಎರಡನೇ ಬಾರಿ ತಂದೆಯಾಗುತ್ತಿರುವ ಸುದ್ದಿಯನ್ನು ಆಯ್ರಾಳ ವಿಡಿಯೋ ಮೂಲಕ ಅಭಿಮಾನಿಗಳೊಂದಿಗೆ ರಾಕಿಂಗ್ ದಂಪತಿ ಶೇರ್​ ಮಾಡಿಕೊಂಡಿದ್ದರು.

ಇದೀಗ ಮತ್ತೊಮ್ಮೆ ಮಗಳ ಸಂಭಾಷನೆಯೊಂದಿಗೆ ತಮ್ಮ ಆಗಮನದ ಖುಷಿ ಹಂಚಿಕೊಂಡಿರುವಂತೆ ಆಯ್ರಾಳ ವಿಡಿಯೋವೊಂದನ್ನು ಯಶ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ತಮ್ಮನ ಕರೆಗೆ ಅಕ್ಕ ಪ್ರತಿಕ್ರಿಯಿಸುವಂತೆ ವಿಡಿಯೋವೊಂದನ್ನು ಯಶ್ ಹಂಚಿಕೊಂಡಿದ್ದು, ಇದನ್ನು ಆಯ್ರಾ ಜೂ.ಯಶ್ ಜೊತೆ ಮಾತಾಡುವಂತೆ ಚಿತ್ರಿಸಿಕೊಂಡಿದ್ದಾರೆ. ಅದರೊಂದಿಗೆ ನಮ್ಮ ಸಂತಸ ಇಮ್ಮಡಿಯಾಗಿದೆ. ಇನ್ನು ಮಕ್ಕಳಿಬ್ಬರ ಮಾತುಕತೆ ಕಿವಿ ತುಂಬಿಸಿಕೊಳ್ಳಲು ಕಾಯುತ್ತಿರುವುದಾಗಿ ರಾಕಿ ಭಾಯ್ ತಿಳಿಸಿದ್ದಾರೆ.

ಇದನ್ನೂ ಓದಿ: ರಾಕಿಂಗ್ ದಂಪತಿಗೆ ಗಂಡು ಮಗು: ಜೂನಿಯರ್ ಯಶ್​ಗೆ ಹೆಸರು ಕೂಡ ಫಿಕ್ಸ್​?

ಅದರೊಂದಿಗೆ ತಾಯಿ ಮಗು ಕ್ಷೇಮವಾಗಿದ್ದಾರೆ. ನಿಮ್ಮ ಈ ಪ್ರೀತಿ ..ಅಭಿಮಾನದ ಹಾರೈಕೆಗೆ ಹೃದಯ ತುಂಬಿ ಬಂದಿದೆ ಎಂದು ತಿಳಿಸಿದ್ದಾರೆ. ಈ ಮೂಲಕ ಬೆಳಿಗ್ಗೆಯಿಂದ ಹಾರೈಸಿದ ಅಭಿಮಾನಿಗಳಿಗೆ ರಾಕಿಂಗ್ ಸ್ಟಾರ್ ಧನ್ಯವಾದ ಹೇಳಿದ್ದಾರೆ. ಇದೀಗ ರಾಕಿ ಭಾಯ್ ಹಂಚಿಕೊಂಡಿರುವ ವಿಡಿಯೋ ವೈರಲ್ ಆಗಿದ್ದು, ಮತ್ತೊಮ್ಮೆ ಆಯ್ರಾ  ಸೋಷಿಯಲ್ ಮೀಡಿಯಾದಲ್ಲಿ ಮಿಂಚುತ್ತಿದ್ದಾರೆ.

ಬಿಗ್ ಬಿ ನೀಡಿದ ಬಿಗ್ ದೀಪಾವಳಿ ಪಾರ್ಟಿಯಲ್ಲಿ ಕಾಣಿಸಿಕೊಂಡ ದಕ್ಷಿಣ ಭಾರತದ ಸ್ಟಾರ್ ನಟ..!



 
First published: October 30, 2019, 8:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading