News18 India World Cup 2019

ಅಂಬಿ ಕನಸಿನ ಮನೆಗೆ ರಾಕಿಂಗ್​ ದಂಪತಿ: ಪಕ್ಕದ ಮನೆಗೆ ಬಂದ ಸುಮಕ್ಕನಿಗೆ ಶುಭ ಹಾರೈಸಿದ ಮೇಘನಾ..!

ಅಂಬಿಯ ಕನಸಿನ ಕೊನೆಗೂ ಸುಮಲತಾ ಹಾಗೂ ಅಭಿಷೇಕ್​ ಕಾಲಿಟ್ಟಿದ್ದಾರೆ. ಕಳೆದ ಶುಕ್ರವಾರವಷ್ಟೆ ಈ ಮನೆಗೆ ಪೂಜೆ ಮಾಡುವ ಮೂಲಕ ಸುಮಲತಾ ಹಾಗೂ ಅಭಿಷೇಕ್​ ಅಂಬರೀಷ್​ ಗೃಹ ಪ್ರವೇಶ ಮಾಡಿದ್ದಾರೆ.

Anitha E | news18
Updated:May 20, 2019, 5:50 PM IST
ಅಂಬಿ ಕನಸಿನ ಮನೆಗೆ ರಾಕಿಂಗ್​ ದಂಪತಿ: ಪಕ್ಕದ ಮನೆಗೆ ಬಂದ ಸುಮಕ್ಕನಿಗೆ ಶುಭ ಹಾರೈಸಿದ ಮೇಘನಾ..!
ಅಂಬಿಯ ಕನಸಿನ ಮನೆಯಲ್ಲಿ ಸುಮಲತಾರ ಜತೆ ರಾಕಿಂಗ್​ ದಂಪತಿ
Anitha E | news18
Updated: May 20, 2019, 5:50 PM IST
ಅಂಬಿ ಬದುಕಿದ್ದಾಗಲೇ ತಮ್ಮ ಕನಸಿನ ಮನೆಗೆ ಆದಷ್ಟು ಬೇಗ ಹೋಗಬೇಕೆಂದು ಆಸೆಪಟ್ಟಿದ್ದರು. ಆದರೆ ಅದು ಸಾಧ್ಯವಾಗಲೇ ಇಲ್ಲ. ಜೆ.ಪಿ.ನಗರದಲ್ಲಿರುವ ಆ ಮನೆಯ ಕೆಲಸಗಳು ಆಗ ಮುಗಿಯದ ಕಾರಣಕ್ಕೆ ಅಂಬಿ ಅವರ ಕನಸು ನನಸಾಗಲೇ ಇಲ್ಲ.

ಆದರೆ ಈಗ ಮನೆಯ ಕೆಲಸ ಸಂಪೂರ್ಣವಾಗಿ ಮುಗಿದಿದ್ದು, ಕಳೆದ ಶುಕ್ರವಾರಷ್ಟೆ ಸುಮಲತಾ ಹಾಗೂ ಅಭಿಷೇಕ್​ ಅಂಬರೀಷ್​ ಹೊಸ ಮನೆಗೆ ಕಾಲಿಟ್ಟಿದ್ದಾರೆ. ಆಗ ಕುಟುಂಬದ ಆಪ್ತರಿಗಷ್ಟೆ ಗೃಹ ಪ್ರವೇಶದ ಕಾರ್ಯಕ್ಕೆ ಆಹ್ವಾನಿಸಲಾಗಿತ್ತು.

ಇದನ್ನೂ ಓದಿ: ಅಂಬಿ ಮಗನ ಚಿತ್ರದಲ್ಲಿ ನಟಿಸಲು ರಜಿನಿ ಹಂಬಲ: ಭಿಕ್ಷುಕನ ಪಾತ್ರವನ್ನಾದರೂ ಕೊಡಿ ಅಂದಿದ್ದರಂತೆ ತಲೈವಾ ?

ಸರಳವಾಗಿ ಸಂಬಂಧಿಕರೊಂದಿಗೆ ಹೊಸ ಮನೆಯ ಪೂಜೆ ಮುಗಿಸಿರುವ ಸುಮಲತಾ ಅಂಬರೀಷ್​ ಅವರಿಗೆ ಈಗ ಸ್ಯಾಂಡಲ್​ವುಡ್​ ತಾರಾ ಬಳಗ ಶುಭ ಕೋರುತ್ತಿದ್ದಾರೆ. ಸದ್ಯ ರಾಕಿಂಗ್​ ಜೋಡಿ ಯಶ್ ಹಾಗೂ ರಾಧಿಕಾ ಈ ಮನೆಗೆ ಭೇಟಿ ಕೊಟ್ಟಿದ್ದು, ಸುಮಲತಾರಿಗೆ ಶುಭ ಕೋರಿದ್ದಾರೆ.



ಅಲ್ಲದೆ ಈ ಮನೆಯೊಂದಿಗೆ ಅಂಬಿಗೆ 29 ವರ್ಷಗಳ ನಂಟಿತ್ತು. ಈ ಹಿಂದೆ ಅಂಬಿ ಹಾಗೂ ಕುಟುಂಬ ಇದೇ ಮನೆಯಲ್ಲಿದ್ದರು. ನಂತರ ಮನೆಯ ಮರು ನಿರ್ಮಾಣಕ್ಕಾಗಿ ಆ ಮನೆಯಿಂದ ದೂರ ಇದ್ದರು. ನಂತರ ಅಂಬಿ ಆ ಮನೆಗೆ ಹಿಂತಿರುಗಿ ಬರಲೇ ಇಲ್ಲ.
Loading...

ನಟಿ ಮೇಘನಾ ರಾಜ್​ ಹಾಗೂ ಚಿರು ಸರ್ಜಾ ಸಹ ಇದೇ ಏರಿಯಾದಲ್ಲಿದ್ದು, ಅಂಬಿ ಮನೆಯ ನೆರೆ ಮನೆಯವರಾಗಿದ್ದಾರೆ. ಅದಕ್ಕೆ ಸುಮಕ್ಕ ಹಾಗೂ ಅಭಿಷೇಕ್​ಗೆ ಮತ್ತೆ ಮನೆಗೆ ಬಂದ ಖುಷಿಯಲ್ಲಿ ಸ್ವಾಗತ ಕೋರಿದ್ದಾರೆ. ಈ ಬಗ್ಗೆ ಮೇಘನಾ ಟ್ವೀಟ್​ ಮಾಡುವ ಮೂಲಕ ಒಂದು ಫೋಟೋವನ್ನೂ ಹಂಚಿಕೊಂಡಿದ್ದಾರೆ.



ಗಂಡನನ್ನು ಕಳೆದುಕೊಂಡ ನೋವಿದ್ದರೂ ಸಹ ಸುಮಲತಾರಿಗೆ ಈ ಮನೆಯಲ್ಲಿ ಅಂಬಿಯೊಂದಿಗೆ ಕಳೆದ ಸವಿಯಾದ ಮರೆಯಲಾರದ ನೆನಪುಗಳು ಇದೇ ಮನೆಯಲ್ಲಿದೆ.

 

Cannes 2019: ಸಮ್ಮರ್​ ಲುಕ್​ನಲ್ಲಿ ಕಾನ್ಸ್​ನಲ್ಲಿ ಕಾಣಿಸಿಕೊಂಡ ಬಾಲಿವುಡ್​ ಕ್ವೀನ್​ ಕಂಗನಾ..!
First published:May 20, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...