ರಾಕಿಂಗ್ ಸ್ಟಾರ್ ಯಶ್ 'ಕೆಜಿಎಫ್ ಚಾಪ್ಟರ್ 2' ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಕೆಲಸಗಳು ಪೂರ್ಣಗೊಳ್ಳುವ ಹಂತಕ್ಕೆ ಬಂದು ನಿಂತಿದೆ. ಈ ಮಧ್ಯೆ ಯಶ್ ತಮ್ಮ ಕುಟುಂಬದವರಿಗೂ ಹೆಚ್ಚಿನ ಸಮಯ ಕೊಡುತ್ತಿದ್ದಾರೆ. ಎರಡನೇ ಮಗು ಜನಿಸಿದಾಗ ಯಶ್ ಶೂಟಿಂಗ್ನಿಂದ ಬ್ರೇಕ್ ಪಡೆದುಕೊಂಡು ಸಂಪೂರ್ಣವಾಗಿ ಕುಟುಂಬದ ಜೊತೆ ಸಮಯ ಕಳೆದಿದ್ದರು. ಈಗ ಸಿನಿಮಾ ಕೆಲಸಗಳ ಮಧ್ಯೆಯೂ ಯಶ್ ಕುಟುಂಬ ಸಮೇತ ಮೈಸೂರಿನ ನಂಜುಂಡೇಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.
ಯಶ್ ದೇವರ ಮೇಲೆ ಸಾಕಷ್ಟು ಭಕ್ತಿ ಹೊಂದಿದ್ದಾರೆ. ಹೀಗಾಗಿ, ಅವರು ಆಗಾಗ ದೇವಾಲಯಗಳಿಗೆ ಭೇಟಿ ನೀಡುತ್ತಿರುತ್ತಾರೆ. ಯಶ್ ತಮ್ಮ ಮಗಳ ಮುಡಿ ಕೊಡಿಸುವ ಹರಕೆ ಹೊತ್ತಿದ್ದರು. ಆ ಹರಕೆ ತೀರಿಸಲೆಂದು ಯಶ್ ಮತ್ತು ರಾಧಿಕಾ ಪಂಡಿತ್ ಇಂದು ಮಗಳು ಆಯ್ರಾ ಜೊತೆ ಆಗಮಿಸಿದ್ದರು. ಮಗಳ ಮುಡಿ ಒಪ್ಪಿಸುವ ಮೂಲಕ ಹರಕೆ ತೀರಿಸಿದರು.
ದೇವಾಲಯದ ಗರ್ಭಗುಡಿಯ ಮುಂಭಾಗದಲ್ಲಿ ಕುಳಿತು ಯಶ್- ರಾಧಿಕಾ ಪಂಡಿತ್ ನಂಜುಂಡೇಶ್ವರನಿಗೆ ನಮಿಸಿದರು. ಮುಂಜಾನೆಯೇ ದೇವಾಲಯದಲ್ಲಿ ಯಶ್ ಮತ್ತು ರಾಧಿಕಾ ನೋಡಿ ಅಭಿಮಾನಿಗಳು ಸಂತಸಪಟ್ಟರು. ಅಷ್ಟೇ ಅಲ್ಲ ರಾಕಿ ಭಾಯ್ಗೆ ಜೈಕಾರ ಕೂಡ ಹಾಕಿದರು.
ಈಗಾಗಲೇ 'ಕೆಜಿಎಫ್ ಚಾಪ್ಟರ್ 2' ಸಿನಿಮಾ ತಂಡ ಈಗಾಗಲೇ ಕುಂಬಳಕಾಯಿ ಒಡೆಯುವ ಸಂಭ್ರಮದಲ್ಲಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಚಾಲನೆ ನೀಡಿದೆ. ಮೂಲಗಳ ಪ್ರಕಾರ ದಸರಾ ಹಬ್ಬಕ್ಕೆ ಅಂದರೆ ಅಕ್ಟೋಬರ್ 23ಕ್ಕೆ 'ಕೆಜಿಎಫ್ 2' ತೆರೆಗೆ ಬರಲಿದೆಯಂತೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ