ಒಂದೇ ಚಿತ್ರದಲ್ಲಿ ರಾಕಿಂಗ್ ಸ್ಟಾರ್-ಪವರ್ ಸ್ಟಾರ್; ಯಶ್-ಅಪ್ಪು ಕೊಟ್ರು ಸಿಹಿ ಸುದ್ದಿ!

ಯಶ್​-ಅಪ್ಪು ಗೆಳೆತನ ನೋಡಿದ ನಂತರ ಇಬ್ಬರೂ ಒಂದೇ ಸಿನಿಮಾದಲ್ಲಿ ನಟಿಸಿದರೆ ಉತ್ತಮ ಎಂಬುದು ಅಭಿಮಾನಿಗಳ ಬಯಕೆ ಆಗಿತ್ತು. ಅನೇಕರು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬರೆದುಕೊಂಡಿದ್ದರು ಕೂಡ. ಈಗ ಆ ದಿನ ಹತ್ತಿರವಾಗುವ ಮುನ್ಸೂಚನೆ ಸಿಕ್ಕಿದೆ.

Rajesh Duggumane | news18
Updated:February 10, 2019, 2:09 PM IST
ಒಂದೇ ಚಿತ್ರದಲ್ಲಿ ರಾಕಿಂಗ್ ಸ್ಟಾರ್-ಪವರ್ ಸ್ಟಾರ್; ಯಶ್-ಅಪ್ಪು ಕೊಟ್ರು ಸಿಹಿ ಸುದ್ದಿ!
ಯಶ್​-ಪುನೀತ್​
Rajesh Duggumane | news18
Updated: February 10, 2019, 2:09 PM IST
ರಕ್ಷಾ ಜಾಸ್ಮಿನ್​

ಯಶ್​ ನಟನೆಯ ‘ಕೆಜಿಎಫ್​’ ಚಿತ್ರ ಬಿಡುಗಡೆ ಕಾಣುವಾಗ ‘ಪವರ್​ ಸ್ಟಾರ್​’ ಪುನೀತ್​ ರಾಜ್​ಕುಮಾರ್​ ಬೆಂಬಲಕ್ಕೆ ನಿಂತಿದ್ದರು. ಪುನೀತ್​ ಅಭಿನಯದ ‘ನಟಸಾರ್ವಭೌಮ’ ತೆರೆಗೆ ಬರುವಾಗ ಯಶ್​ ಈ ಚಿತ್ರದ ಬೆನ್ನಿಗೆ ನಿಂತಿದ್ದರು. ಇವರಿಬ್ಬರ ಗೆಳೆತನ ನೋಡಿ ಅನೇಕರು ಖುಷಿ ಪಟ್ಟಿದ್ದರು. ಈಗ ಇಬ್ಬರೂ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ರಾಕಿಂಗ್​ ಸ್ಟಾರ್​ ಹಾಗೂ ಪವರ್​ ಸ್ಟಾರ್​ ಒಂದೇ ಚಿತ್ರದಲ್ಲಿ ನಟಿಸಲಿದ್ದಾರಂತೆ! ಈ ವಿಚಾರವನ್ನು ಅವರೇ ಹೇಳಿಕೊಂಡಿದ್ದಾರೆ.

ಯಶ್​-ಅಪ್ಪು ಗೆಳೆತನ ನೋಡಿದ ನಂತರ ಇಬ್ಬರೂ ಒಂದೇ ಸಿನಿಮಾದಲ್ಲಿ ನಟಿಸಿದರೆ ಉತ್ತಮ ಎಂಬುದು ಅಭಿಮಾನಿಗಳ ಬಯಕೆ ಆಗಿತ್ತು. ಅನೇಕರು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬರೆದುಕೊಂಡಿದ್ದರು ಕೂಡ. ಈಗ ಆ ದಿನ ಹತ್ತಿರವಾಗುವ ಮುನ್ಸೂಚನೆ ಸಿಕ್ಕಿದೆ. ಉತ್ತಮ ಕಥೆ ಸಿಕ್ಕರೆ ಒಟ್ಟಿಗೆ ನಟಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ ಅವರು.

ಪೂರ್ಣಚಂದ್ರ ತೇಜಸ್ವಿ ಅವರು ಬರೆದ ‘ಜುಗಾರಿ ಕ್ರಾಸ್​’ ಕಾದಂಬರಿಯನ್ನು ನಿರ್ದೇಶಕ ಟಿ.ಎಸ್​. ನಾಗಾಭರಣ ಬೆಳ್ಳಿ ಪರದೆಮೇಲೆ ತರುತ್ತಿದ್ದಾರೆ. ಈ ಚಿತ್ರದ ಮುಹೂರ್ತ ಇಂದು ನೆರವೇರಿತು. ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಯಶ್​-ಪುನೀತ್​ ಆಗಮಿಸಿದ್ದರು. ಈ ವೇಳೆ ಅವರು ತಮ್ಮ ಮನದಾಳದ ಮಾತನ್ನು ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ: ‘ಕೆಜಿಎಫ್ 2’ನಲ್ಲಿ ಸಂಜಯ್ ದತ್ ನಟಿಸ್ತಾರಾ?; ಹೌದು ಅಂತಾರೆ ಯಶ್!

ಒಂದೇ ಚಿತ್ರದಲ್ಲಿ ನಟಿಸುವುದು ಯಶ್​-ಪುನೀತ್​ ಇಬ್ಬರಿಗೂ ಇಷ್ಟವಿದೆಯಂತೆ! ಈ ಬಗ್ಗೆ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. “ಒಂದೇ ಸಿನಿಮಾದಲ್ಲಿ ಅಭಿನಯಿಸಲು ನಮಗೆ ಇಷ್ಟ ಇದೆ. ಒಳ್ಳೆಯ ಕಥೆ ಸಿಕ್ಕರೆ ಖಂಡಿತವಾಗಿಯೂ ನಾವು ಒಟ್ಟಿಗೆ ತೆರೆ ಹಂಚಿಕೊಳ್ಳುತ್ತೇವೆ,” ಎಂದು ಕೈ ಕುಲುಕುತ್ತಾ ಪುನೀತ್- ಯಶ್ ಉತ್ತರಿಸಿದರು.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚರ್ಚೆ ಜೋರಾಗಿದೆ. ಯಾರು ಈ ಚಿತ್ರ ನಿರ್ದೇಶನ ಮಾಡಲಿದ್ದಾರೆ, ಯಾವಾಗ ಸಿನಿಮಾ ಸೆಟ್ಟೇರುತ್ತೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಸ್ವಲ್ಪ ಸಮಯ ಕಾಯಲೇಬೇಕು.
Loading...

ಇದನ್ನೂ ಓದಿ: TRAILER: 'ಆನೆ ನಡೆದಿದ್ದೇ ದಾರಿ ತಾಕತ್ತಿದ್ದರೆ ಕಟ್ಟಾಕು': 'ಯಜಮಾನ'ನ ಮಾಸ್​ ಎಂಟ್ರಿ

First published:February 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...