ಈ ವೇಳೆ ಅಂಬರೀಷ್​ ಇರಬೇಕಿತ್ತು, ನನ್ನ ಮಗಳನ್ನು ನೋಡಬೇಕಿತ್ತು; ಆಸ್ಪತ್ರೆಯಿಂದ ಮನೆಗೆ ತೆರಳುವಾಗ ಯಶ್ ಭಾವುಕ ನುಡಿ

ಮಾತು ಆರಂಭಿಸುವುದಕ್ಕೂ ಮೊದಲು ಅಭಿಮಾನಿಗಳಿಗೆ ಹಾಗೂ ಮಾದ್ಯಮದವರಿಗೆ ಧನ್ಯವಾದ ಯಶ್ ಧನ್ಯವಾದ ಅರ್ಪಿಸಿದರು. ನನಗೆ ಹೆಣ್ಣು ಮಗು ಆಗಬೆಕು ಅನ್ನೋ ಆಸೆ ಇತ್ತು. ಹಾಗೇ ಆಗಿದೆ ಎಂದು ಖುಷಿಪಟ್ಟರು.

Rajesh Duggumane | news18
Updated:December 9, 2018, 2:22 PM IST
ಈ ವೇಳೆ ಅಂಬರೀಷ್​ ಇರಬೇಕಿತ್ತು, ನನ್ನ ಮಗಳನ್ನು ನೋಡಬೇಕಿತ್ತು; ಆಸ್ಪತ್ರೆಯಿಂದ ಮನೆಗೆ ತೆರಳುವಾಗ ಯಶ್ ಭಾವುಕ ನುಡಿ
ಸುದ್ದಿಗೋಷ್ಠಿಯಲ್ಲಿ ರಾಧಿಕಾ-ಯಶ್​
  • News18
  • Last Updated: December 9, 2018, 2:22 PM IST
  • Share this:
‘ರಾಕಿಂಗ್ ಸ್ಟಾರ್’ ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿಗೆ ಇತ್ತೀಚೆಗೆ ಹೆಣ್ಣು ಮಗು ಜನಿಸಿತ್ತು. ಇಂದು ರಾಧಿಕಾ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ . ಅದಕ್ಕೂ ಮೊದಲು ಮಾಧ್ಯಮದ ಜೊತೆ ಯಶ್ ಮಾತನಾಡಿದ್ದಾರೆ.

ಮಾತು ಆರಂಭಿಸುವುದಕ್ಕೂ ಮೊದಲು ಅಭಿಮಾನಿಗಳಿಗೆ ಹಾಗೂ ಮಾಧ್ಯಮದವರಿಗೆ ಯಶ್ ಧನ್ಯವಾದ ಅರ್ಪಿಸಿದರು. "ನಾನು ರಾಧಿಕಾ ವಿವಾಹವಾಗಿ ಇಂದಿಗೆ ಎರಡು ವರ್ಷಗಳಾಗಿವೆ. ನನಗೆ ಹೆಣ್ಣು ಮಗು ಆಗಬೇಕು ಅನ್ನೋ ಆಸೆ ಇತ್ತು. ಹಾಗೆಯೇ ಆಗಿದೆ. ಹೆಣ್ಣು ಮಗು ಮನೆಗೆ ಬಂದಿರುವುದು ನಮ್ಮ ಕುಟುಂಬಕ್ಕೂ ಖುಷಿ ನೀಡಿದೆ," ಎಂದರು ಯಶ್​.

ಸದ್ಯ ಮಗುವಿನ ನಾಮಕರಣದ ಬಗ್ಗೆ ಯಶ್ ಯೋಚಿಸುತ್ತಿದ್ದಾರಂತೆ. "ಮಗುವಿಗೆ ಯಾವ ಹೆಸರಿಡಬೇಕು ಎಂದು ವಿಚಾರ ಮಾಡುತ್ತಿದ್ದೇವೆ. ರಾಧಿಕಾಗೆ ಗಂಡು ಮಗು ಎಂದರೆ ಇಷ್ಟ. ಹಾಗಾಗಿ ಹೆಸರನ್ನೂ ಕೂಡಾ ಸೆಲೆಕ್ಟ್ ಮಾಡಿಕೊಂಡಿದ್ದೆವು. ನನಗೆ ಹೆಣ್ಣು ಮಗು ಅಂದ್ರೆ ತುಂಬಾ ಇಷ್ಟ. ಹಾಗಾಗಿ ಈಗ ನಾನೇ ಏನು ಹೆಸರಿಡಬೇಕು ಎಂಬ ಬಗ್ಗೆ ಯೋಚಿಸುತ್ತೇನೆ," ಎಂದಿದ್ದಾರೆ ಯಶ್.

ಇದನ್ನೂ ಓದಿ:  ಈ ರಾಕಿ ಗ್ಯಾಂಗ್​ಸ್ಟರ್​ ಅಲ್ಲ ಮಾನ್​​ಸ್ಟರ್​; ‘ಕೆಜಿಎಫ್’ ಎರಡನೇ ಟ್ರೈಲರ್​ ಬಿಡುಗಡೆ

‘ರೆಬೆಲ್ ಸ್ಟಾರ್’ ಅಂಬರೀಶ್​ ತೊಟ್ಟಿಲು ಉಡುಗೊರೆ ಮಾಡಿರುವ ವಿಚಾರದ ಬಗ್ಗೆಯೂ ಯಶ್ ಮಾತನಾಡಿದ್ದಾರೆ. "ಅಂಬರೀಶ್ ತೊಟ್ಟಿಲು ಉಡುಗೊರೆ ಮಾಡಿದ್ದಾರೆ ಎನ್ನುವ ವಿಷಯ ಕೇಳಿದ ತಕ್ಷಣ ಭಾವುಕನಾದೆ. ಅವರು ನನ್ನನ್ನುಮಗನ ತರಹವೇ ಟ್ರೀಟ್ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಅವರೂ ಇರಬೇಕಿತ್ತು. ನನ್ನ ಮಗಳನ್ನು ನೋಡಬೇಕಿತ್ತು," ಎಂದು ಯಶ್ ಭಾವುಕರಾದರು.

First published:December 9, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading