Roberrt: ಟಾಲಿವುಡ್​ನಲ್ಲಿ ರಾಬರ್ಟ್​ ಚಿತ್ರ ರಿಲೀಸ್​?; ಸೌತ್ ಇಂಡಿಯನ್ ಫಿಲಂ ಚೇಂಬರ್​ನಲ್ಲಿ ಮಾತುಕತೆ!

ಸೌತ್ ಇಂಡಿಯನ್ ಫಿಲಂ ಚೇಂಬರ್ ಅದ್ಯಕ್ಷ ಪ್ರಸಾದ್ ನೇತೃತ್ವದಲ್ಲಿ ಇಂದು ನಡೆದ ಸಭೆ ನಡೆದಿದ್ದು, ಈ ಸಭೆಯಲ್ಲಿ ಕರ್ನಾಟಕ ಫಿಲಂ ಚೇಂಬರ್ ಅದ್ಯಕ್ಷ ಜಯರಾಜ್, ಕಾರ್ಯದರ್ಶಿ ಎನ್.ಎಂ ಸುರೇಶ್ ಭಾಗವಹಿಸಿ ರಾಬರ್ಟ್​ ಚಿತ್ರವನ್ನು ಆಂಧ್ರಪ್ರದೇಶದಲ್ಲಿ ರಿಲೀಸ್​ ಮಾಡಲು ಅನುಮತಿ ನೀಡುವಂತೆ ಮಾಡಿದ್ದಾರೆ ಎನ್ನಲಾಗಿದೆ.

ನಟ ದರ್ಶನ್​.

ನಟ ದರ್ಶನ್​.

 • Share this:
  ಚಾಲೆಂಜಿಂಗ್ ಸ್ಟಾರ್​ ದರ್ಶನ್​ ಅಭಿನಯದ ಬಹು ನಿರೀಕ್ಷಿತ ಚಿತ್ರ ರಾಬರ್ಟ್. ಚಿತ್ರದ ಎಲ್ಲಾ ಕೆಲಸವೂ ಇದೀಗ ಮುಕ್ತಾಯವಾಗಿದ್ದು, ಮಾರ್ಚ್​ 11 ರಂದು ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ಸಿದ್ದತೆ ಮಾಡಿಕೊಂಡಿದೆ. ಅಲ್ಲದೆ, ರಾಬರ್ಟ್​ ತೆಲುಗು ಅವತರಣಿಕೆಯೂ ಸಿದ್ಧವಾಗಿದ್ದು, ಅದೇ ದಿನ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲೂ ರಿಲೀಸ್ ಮಾಡಲು ಯೋಜಿಸಲಾಗಿತ್ತು. ಈ ಹಿಂದೆ ಸಿನಿಮಾದ ರಿಲೀಸ್​ ದಿನಾಂಕ ನಿಗದಿಯಾದಾಗ ಟಾಲಿವುಡ್​ ಸಿನಿಮಾವಿತರಕರು ರಾಬರ್ಟ್​ ರಿಲೀಸ್​ಗೆ ಓಕೆ ಎಂದಿದ್ದರು. ಆದರೆ ಈಗ ಇದ್ದಕ್ಕಿದ್ದಂತೆ ತಕರಾರು ತೆಗೆದಿದ್ದಾರೆ. ಈ ವಿಷಯವಾಗಿ ನಟ ದರ್ಶನ್ ಮತ್ತು ನಿರ್ಮಾಪಕ ಉಮಾಪತಿ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಮೊರೆ ಹೋಗಿದ್ದರು. ಇದೀಗ ಟಾಲಿವುಡ್ ನಲ್ಲಿ ರಾಬರ್ಟ್ ರಿಲೀಸ್ ಗೆ ಅವಾಕಶ ಕೊಡುವಂತೆ ಸೌತ್ ಇಂಡಿಯನ್ ಫಿಲಂ ಚೇಂಬರ್ ನಲ್ಲಿ ಮಾತುಕತೆ ನಡೆಸಲಾಗಿದೆ.

  ತೆಲುಗು ಚಿತ್ರಗಳು ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ರಿಲೀಸ್​ ಆಗುವ ಅದೇ ದಿನ ಕರ್ನಾಟಕದಲ್ಲೂ ರಿಲೀಸ್​ ಆಗುತ್ತದೆ. ಕರ್ನಾಟಕದಲ್ಲಿ ಇದಕ್ಕೆ ಯಾರೂ ತಕರಾರು ತೆಗೆಯುವುದಿಲ್ಲ. ಆದರೆ, ಕನ್ನಡದ ಸಿನಿಮಾಗಳು ಅಲ್ಲಿ ತೆರೆ ಕಾಣುವಾಗ ಮಾತ್ರ ಯಾಕೆ ಈ ತಕರಾರು? ಎಂಬುದು ರಾಬರ್ಟ್​ ಚಿತ್ರ ತಂಡದ ಪ್ರಶ್ನೆ. ಕಳೆದ ಒಂದು ವಾರದಿಂದ ಈ ವ್ಯಾಜ್ಯ ದಕ್ಷಿಣ ಸಿನಿ ಇಂಡಸ್ಟ್ರಿಯಲ್ಲಿ ದೊಡ್ಡ ಮಟ್ಟದ ಸಂಚಲನವನ್ನೇ ಉಂಟು ಮಾಡಿದೆ.

  ಈ ನಡುವೆ ಇಂದು ಸೌತ್ ಇಂಡಿಯನ್ ಫಿಲಂ ಚೇಂಬರ್ ಅದ್ಯಕ್ಷ ಪ್ರಸಾದ್ ನೇತೃತ್ವದಲ್ಲಿ ಇಂದು ನಡೆದ ಸಭೆ ನಡೆದಿದ್ದು, ಈ ಸಭೆಯಲ್ಲಿ ಕರ್ನಾಟಕ ಫಿಲಂ ಚೇಂಬರ್ ಅದ್ಯಕ್ಷ ಜಯರಾಜ್, ಕಾರ್ಯದರ್ಶಿ ಎನ್.ಎಂ ಸುರೇಶ್ ಭಾಗವಹಿಸಿ ರಾಬರ್ಟ್​ ಚಿತ್ರವನ್ನು ಆಂಧ್ರಪ್ರದೇಶದಲ್ಲಿ ರಿಲೀಸ್​ ಮಾಡಲು ಅನುಮತಿ ನೀಡುವಂತೆ ಮಾಡಿದ್ದು, ಅದಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ ಎನ್ನಲಾಗುತ್ತಿದೆ.

  ಇನ್ನೂ ರಾಬರ್ಟ್​ ಚಿತ್ರಕ್ಕೆ ಎದುರಾಗಿರುವ ಸಮಸ್ಯೆಯ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದ ನಟ ದರ್ಶನ್, "ತೆಲುಗಿನಲ್ಲಿ ಕೆಲವು ತೆಲುಗು ಚಿತ್ರಗಳು ರಿಲೀಸ್​ ಆಗುತ್ತಿದ್ದು, ಮಾರ್ಚ್​11 ರಂದು ರಾಬರ್ಟ್​ ಸಿನಿಮಾ ರಿಲೀಸ್​ ಆಗುತ್ತಿದ್ದು, ಅದೇ ದಿನ ಕೆಲವು ತೆಲುಗು ನಾಯಕರ ಚಿತ್ರಗಳೂ ರಿಲೀಸ್​ ಆಗುತ್ತಿವೆ. ಹೀಗಾಗಿ ಅವರ ನಾಯಕರಿಗೆ ಸಮಸ್ಯೆಯಾಗುತ್ತದೆ ಎಂದು ರಾಬರ್ಟ್​ ರಿಲೀಸ್​ಗೆ ಅವಕಾಶ ಕೊಡುವುದಿಲ್ಲ ಎಂದಿದ್ದಾರಂತೆ. ಹಾಗಾದರೆ, ಕರ್ನಾಟಕದಲ್ಲಿ ಕನ್ನಡದ ಸಿನಿಮಾಗಳ ಜೊತೆಯೇ ತೆಲುಗು ಚಿತ್ರಗಳು ರಿಲೀಸ್​ ಆಗುತ್ತಿಲ್ಲವಾ..? ಅವರು ಬಂದರೆ ನಮಗೆ ಸಮಸ್ಯೆ ಆಗುತ್ತಿಲ್ಲವಾ..? ಅದನ್ನು ನಾವೂ ಸಹಿಸಿಕೊಳ್ಳುತ್ತಿದ್ದೇವೆ. ಹಾಗಾಗಿದ್ದಾಗ ಅವರು ಏಕೆ ಕನ್ನಡ ಸಿನಿಮಾಗಳ ರಿಲೀಸ್​ಗೆ ಅಡ್ಡಿ ಮಾಡಬೇಕು?" ಎಂದು ಪ್ರಶ್ನಿಸಿದ್ದರು.

  ಇದನ್ನೂ ಓದಿ:Roberrt: ಟಾಲಿವುಡ್​ನಲ್ಲಿ ರಾಬರ್ಟ್ ಸಿನಿಮಾ ರಿಲೀಸ್​ಗೆ ಅಡ್ಡಿ: ನಿರ್ಮಾಪಕ ಉಮಾಪತಿ ಪರ ನಿಂತ ದರ್ಶನ್​..!

  ಇದೇ ಸಂದರ್ಭದಲ್ಲಿ ಕನ್ನಡಿಗರ ಭಾಷಾಭಿಮಾನದ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದ ದರ್ಶನ್, "ತೆಲುಗು ಹಾಗೂ ತಮಿಳರಿಗೆ ಇರುವ ಭಾಷಾಭಿಮಾನದಲ್ಲಿ ಸ್ವಲ್ಪವೂ ನಮ್ಮವರಿಗೆ ಇಲ್ಲ. ನಮ್ಮವರು ಭಾಷಾಭಿಮಾನ ಬೆಳೆಸಿಕೊಳ್ಳಬೇಕು. ತಮಿಳು-ತೆಲುಗಿನವರು ಬಂದರೆ ನಮ್ಮವರು ಅವರ ಭಾಷೆಯಲ್ಲೇ ಮಾತನಾಡುತ್ತಾರೆ. ಅದೇ ಅವರು ಕನ್ನಡದವರು ಬಂದರೆ ಕನ್ನಡದಲ್ಲಿ ಮಾತನಾಡುತ್ತಾರಾ?.

  ನನ್ನದು 50 ಸಿನಿಮಾಗಳು ಮುಗಿದೆ. ಆದರೆ ಮುಂದೆ ಬರುವ ಯುವ ಸ್ಟಾರ್​ಗಳ ಗತಿಯೇನು? ಅವರಿಗೂ ಇದೇ ಸಮಸ್ಯೆ ಎದುರಾಗಬಾರದು ಎಂದು ಈ ವಿಷಯವಾಗಿ ನಾನು ದನಿ ಎತ್ತಿದ್ದೇನೆ. ಈ ಹಿಂದೆ ಮೆಲ್ಲನೆ ಒಂದೊಂದೇ ಸಿನಿಮಾಗಳ ಮೂಲಕ ಬರುತ್ತಿದ್ದವರು ಈಗ ಗ್ರ್ಯಾಂಡ್​ ಆಗಿ ಎಂಟ್ರಿ ಕೊಡುತ್ತಿದ್ದಾರೆ. ಈಗ ನಾವು ಹಾಗೆ ಮಾಡೋಣ. ಅಲ್ಲಿ ಒಂದೊಂದೇ ಚಿತ್ರಗಳನ್ನು ರಿಲೀಸ್​ ಮಾಡುತ್ತಾ, ದೊಡ್ಡ ಮಟ್ಟದಲ್ಲಿ ಬೆಳೆಯಲು ಪ್ರಯತ್ನಿಸೋಣ" ಎಂದು ತಿಳಿಸಿದ್ದಾರೆ.
  Published by:MAshok Kumar
  First published: