ಉಫ್...! ಬಜೆಟ್​ ಮೂಲಕ ಎಲ್ಲರನ್ನು ನಿಬ್ಬೆರಗಾಗಿಸಿದ ರಾಬರ್ಟ್​

ಈಗಾಗಲೇ ಸ್ಯಾಂಡಲ್​ವುಡ್​ನಲ್ಲಿ ಹೆಸರಿನಲ್ಲೇ ಹೊಸ ಅಲೆಯೆಬ್ಬಿಸಿರುವ ರಾಬರ್ಟ್​ ಇದೀಗ ಬಂಡವಾಳದ ಮೂಲಕ ಎಲ್ಲರನ್ನು ನಿಬ್ಬೆರಗಾಗಿಸಿದೆ.

zahir | news18
Updated:May 27, 2019, 11:27 AM IST
ಉಫ್...! ಬಜೆಟ್​ ಮೂಲಕ ಎಲ್ಲರನ್ನು ನಿಬ್ಬೆರಗಾಗಿಸಿದ ರಾಬರ್ಟ್​
ದರ್ಶನ್
zahir | news18
Updated: May 27, 2019, 11:27 AM IST
ಚಾಲೆಂಜಿಂಗ್ ಸ್ಟಾರ್​ ಎಂಬ ಬಿರುದೊಂದಿದ್ದರೆ ಸಾಕು ಸ್ಯಾಂಡಲ್​ವುಡ್​ ನಿರ್ಮಾಪಕರು ಅದೆಷ್ಟು ಬಂಡವಾಳ ಹಾಕಲು ಹಿಂದೆ ಮುಂದೆ ನೋಡಲ್ಲ ಎಂಬ ಮಾತಿದೆ. ಏಕೆಂದರೆ ಅಂತಹದೊಂದು ಪವರ್​ ಅನ್ನು ದರ್ಶನ್​ ತೂಗುದೀಪ್​ ತನ್ನ ಬಿರುದಿನಲ್ಲಿ ಉಳಿಸಿಕೊಂಡಿದ್ದಾರೆ. ಹೀಗಾಗಿಯೇ ಬಾಕ್ಸಾಫೀಸ್​ ಸುಲ್ತಾನ್ ಅಭಿನಯದ ಚಿತ್ರಗಳು ಬಿಡುಗಡೆಯಾದ ಮೊದಲೆರೆಡು ವಾರದಲ್ಲೇ ಬಂಡವಾಳವನ್ನು ಚುಕ್ತಾ ಮಾಡುತ್ತಿರುವುದು.

ಅಂದಹಾಗೆ ಕನ್ನಡದಲ್ಲಿ ಎರಡಂಕಿ ಕೋಟಿ ಬಜೆಟ್ ಚಿತ್ರಗಳಿಗೆ ನಾಂದಿ ಹಾಡಿದ್ದೇ ಡಿ ಬಾಸ್ ಎಂದರೆ ತಪ್ಪಾಗಲಾರದು. ಕಮರ್ಷಿಯಲ್ ಸಿನಿಮಾಗಳ ಎಡೆಯಲ್ಲಿ 30 ಕೋಟಿಯಲ್ಲಿ 'ಸಂಗೊಳ್ಳಿ ರಾಯಣ್ಣ' ಸಿನಿಮಾ ನಿರ್ಮಾಣವಾಗಿತ್ತು.​ ಹಾಕಿದ ಬಂಡವಾಳಕ್ಕೆ ಮತ್ತಷ್ಟು ಕೋಟಿಗಳ ಸೇರ್ಪಡೆಯೊಂದಿಗೆ ನಿರ್ಮಾಪಕರ ಜೇಬು ತುಂಬಿಸಿದ್ದರು ದರ್ಶನ್.

ಇದೀಗ ದರ್ಶನ್​ 'ರಾಬರ್ಟ್'​ ಅಡ್ಡಾದಲ್ಲಿ ರೌದ್ರವತಾರಕ್ಕೆ ಅಣಿಯಾಗುತ್ತಿದ್ದಾರೆ. ಈಗಾಗಲೇ ಹೈದರಾಬಾದ್​ನಲ್ಲಿ ಬೀಡು ಬಿಟ್ಟಿರುವ ಚಿತ್ರತಂಡದ  ಮಾಹಿತಿ ಪ್ರಕಾರ 'ರಾಬರ್ಟ್'​ಗಾಗಿ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ವ್ಯಯಿಸುತ್ತಿರುವುದು ಬರೋಬ್ಬರಿ 50 ಕೋಟಿಯಂತೆ.

ಕಿಚ್ಚ ಸುದೀಪ್ ಅಭಿನಯದ 'ಹೆಬ್ಬುಲಿ'ಯೊಂದಿಗೆ ಸ್ಯಾಂಡಲ್​ವುಡ್​​ನ ಗಟ್ಟಿ ನಿರ್ಮಾಪಕ ಎನಿಸಿಕೊಂಡಿರುವ ಉಮಾಪತಿ 'ರಾಬರ್ಟ್'​ ಚಿತ್ರವನ್ನು ಬೇರೆ ಮಟ್ಟದಲ್ಲಿ ನಿರ್ಮಿಸಲು ನಿರ್ಧರಿಸಿದ್ದಾರಂತೆ. ಅದಕ್ಕಾಗಿ ನಿರ್ದೇಶಕ ತರುಣ್ ಸುಧೀರ್​ಗೆ ಎಲ್ಲಾ ರೀತಿಯ ಸಹಕಾರವನ್ನು ನೀಡಲು  ಓಕೆ ಅಂದಿದ್ದಾರೆ.

ಈ ಮೂಲಕ ಅಭಿಮಾನಿಗಳ ದಾಸನ ಸಿನಿ ಕೆರಿಯರ್​ ಅತ್ಯಂತ ದೊಡ್ಡ ಬಜೆಟ್​ ಚಿತ್ರವೆಂಬ ಹೆಗ್ಗಳಿಕೆ ಇನ್ನು ಮುಂದೆ ರಾಬರ್ಟ್​ ಪಾಲಾಗಲಿದೆ. ಈ ಹಿಂದೆ ಕುರುಕ್ಷೇತ್ರ ಚಿತ್ರವನ್ನು ನಿರ್ಮಾಪಕರು 80 ಕೋಟಿಯಲ್ಲಿ ನಿರ್ಮಾಣ ಮಾಡಲಾಗಿದೆ ಅಂದಿದ್ದಾರೆ. ಆದರೆ ಇದು ಏಕೈಕ ನಾಯಕ ನಟನ ಚಿತ್ರವಲ್ಲ ಎಂಬುದು ವಿಶೇಷ. ಇಲ್ಲಿ ದರ್ಶನ್​ ಜತೆ ಅಂಬರೀಷ್, ನಿಖಿಲ್, ಅರ್ಜುನ್ ಸರ್ಜಾ ಸೇರಿದಂತೆ ತಾರಾ ದಂಡೇ ಬಣ್ಣ ಹಚ್ಚಿದ್ದಾರೆ. ಹೀಗಾಗಿ ರಾಬರ್ಟ್​ ಡಿ ಬಾಸ್ ಕೆರಿಯರ್​ನ ಬಿಗ್ ಬಜೆಟ್ ಸಿನಿಮಾ ಎನಿಸಿಕೊಳ್ಳಲಿದೆ.

ಈಗಾಗಲೇ ಸ್ಯಾಂಡಲ್​ವುಡ್​ನಲ್ಲಿ ಹೆಸರಿನಲ್ಲೇ ಹೊಸ ಅಲೆಯೆಬ್ಬಿಸಿರುವ 'ರಾಬರ್ಟ್'​ ಇದೀಗ ಬಂಡವಾಳದ ಮೂಲಕ ಎಲ್ಲರನ್ನು ನಿಬ್ಬೆರಗಾಗಿಸಿದೆ. ಸದ್ಯಕ್ಕಂತು 'ರಾಬರ್ಟ್'​ ಚಿತ್ರವನ್ನು ಕನ್ನಡದಲ್ಲಿ ಮಾತ್ರ ತೆರೆಗೆ ತರಲಾಗುವುದು ಎನ್ನಲಾಗುತ್ತಿದ್ದರೂ, ಬಜೆಟ್​ ಗಮನಿಸಿದರೆ ಇದೊಂದು ಪ್ಯಾನ್ ಸಿನಿಮಾ ಆಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎನ್ನುತ್ತಾರೆ ಸಿನಿ ಪಂಡಿತರು.
Loading...

ಗೆಳೆಯ ದರ್ಶನ್ ಅವರ ಚಿತ್ರವೆಂಬ ಕಾರಣದಿಂದಲೇ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡು ಶೂಟಿಂಗ್ ಆರಂಭಿಸಿರುವ ತರುಣ್ ಸುಧೀರ್, ಮತ್ತೊಮ್ಮೆ ಬಾಕ್ಸಾಫೀಸ್ ಬೇಟೆಯಾಡುವುದು ಪಕ್ಕಾ ಎನ್ನಲಾಗುತ್ತಿದೆ. ಅದೇನೇ ಇದ್ದರೂ 'ಚೌಕ' ಚಿತ್ರದಲ್ಲಿ ವಿಶೇಷ ಪಾತ್ರ ಎಂಟ್ರಿ ಕೊಟ್ಟು ಅಭಿಮಾನಿಗಳನ್ನು ಕುಣಿದು ಕುಪ್ಪಳಿಸುವಂತೆ ಮಾಡಿದ್ದ 'ರಾಬರ್ಟ್'​ ರಿ ಎಂಟ್ರಿಯಲ್ಲೂ ಸಖತ್ ಸೌಂಡ್​ ಮಾಡುತ್ತಿದ್ದು, ಇದೇ ಸದ್ದು ಬಾಕ್ಸಾಫೀಸ್​ನಲ್ಲೂ ಇರಲಿ ಎಂಬುದು ಎಲ್ಲರ ಆಶಯ.

ಇದನ್ನೂ ಓದಿ: ಜಿಯೋ ರಿಚಾರ್ಜ್​ ಆಫರ್​ಗಳಲ್ಲಿ ಅತ್ಯುತ್ತಮ ಪ್ಲ್ಯಾನ್​​ ಯಾವುದು ಗೊತ್ತೆ?

First published:May 26, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...