Robert Movie: ರಾಬರ್ಟ್​ ಅಬ್ಬರ ಶುರು; ಭಾರೀ ಮೊತ್ತಕ್ಕೆ ಮಾರಾಟವಾಯ್ತು ದರ್ಶನ್​ ಸಿನಿಮಾದ​ ಆಡಿಯೋ ಹಕ್ಕು

Challenging Star Darshan: ಅರ್ಜುನ್ ಜನ್ಯ ಸಂಗೀತ ನಿರ್ದೇಶನ ನೀಡಿರುವ ರಾಬರ್ಟ್​ ಸಿನಿಮಾದ ಹಾಡುಗಳನ್ನು ಆನಂದ್ ಆಡಿಯೋ ಸಂಸ್ಥೆ ದುಬಾರಿ ಮೊತ್ತ ನೀಡಿ ಖರೀದಿಸಿದೆಯಂತೆ. ಚಿತ್ರೀಕರಣ ಆರಂಭವಾಗುವುದಕ್ಕೂ ಮೊದಲಿನಿಂದಲೂ ಭಾರೀ ಸದ್ದು ಮಾಡಿದ್ದ ರಾಬರ್ಟ್​ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ.

Sushma Chakre | news18-kannada
Updated:September 28, 2019, 2:18 PM IST
Robert Movie: ರಾಬರ್ಟ್​ ಅಬ್ಬರ ಶುರು; ಭಾರೀ ಮೊತ್ತಕ್ಕೆ ಮಾರಾಟವಾಯ್ತು ದರ್ಶನ್​ ಸಿನಿಮಾದ​ ಆಡಿಯೋ ಹಕ್ಕು
ಈಗಾಗಲೇ ಪಾಂಡಿಚೇರಿ, ಚೆನ್ನೈ, ಬೆಂಗಳೂರು ಸೇರಿದಂತೆ ಬಹುತೇಕ ಕಡೆಗಳಲ್ಲಿ ಶೂಟಿಂಗ್ ಮುಗಿಸಿರುವ ಚಿತ್ರತಂಡ  ಕೆಲ ದಿನಗಳ ಹಿಂದೆ ಬನಾರಸ್​ನತ್ತ ಮುಖ ಮಾಡಿರುವುದು ಗೊತ್ತಿರುವ ವಿಷಯ.
  • Share this:
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ರಾಬರ್ಟ್' ಸಿನಿಮಾ ಚಿತ್ರೀಕರಣ ಭರದಿಂದ ಸಾಗುತ್ತಿದೆ. ತರುಣ್ ಸುಧೀರ್ ನಿರ್ದೇಶಿಸುತ್ತಿರುವ 'ರಾಬರ್ಟ್'​ ಸಿನಿಮಾವನ್ನು ಡಿಸೆಂಬರ್​ ವೇಳೆಗೆ ತೆರೆಗೆ ತರಲು ಚಿತ್ರತಂಡ ಸಿದ್ಧತೆ ನಡೆಸಿದೆ. ಈಗಾಗಲೇ ಮೊದಲ ಹಂತದ ಚಿತ್ರೀಕರಣ ನಡೆಸಿರುವ 'ರಾಬರ್ಟ್'​ ತಂಡದ ಆಡಿಯೋ ಹಕ್ಕು ಭಾರೀ ಮೊತ್ತಕ್ಕೆ ಮಾರಾಟವಾಗಿದೆ ಎನ್ನಲಾಗಿದೆ.

ಪೋಸ್ಟರ್​ನಿಂದಲೇ ಸಾಕಷ್ಟು ಕುತೂಹಲ ಮೂಡಿಸಿರುವ 'ರಾಬರ್ಟ್'​ ಸಿನಿಮಾ ಕತೆಯ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿಯನ್ನೂ ಬಿಟ್ಟುಕೊಟ್ಟಿಲ್ಲ. ಈಗಾಗಲೇ ಬೆಂಗಳೂರು, ಹೈದರಾಬಾದ್, ಮೈಸೂರು ಮುಂತಾದ ಕಡೆ ಅರ್ಧಭಾಗ ಚಿತ್ರೀಕರಣ ಮುಗಿಸಿರುವ ಈ ಚಿತ್ರತಂಡ ಮುಂದಿನ ಚಿತ್ರೀಕರಣಕ್ಕಾಗಿ ಉತ್ತರ ಭಾರತದ ವಾರಾಣಸಿಗೆ ತೆರಳಲಿದೆ. ಮುಂದಿನ ತಿಂಗಳ 2ನೇ ವಾರದಲ್ಲಿ 'ರಾಬರ್ಟ್' ತಂಡ ವಾರಾಣಸಿ ಕಡೆಗೆ ಪ್ರಯಾಣ ಬೆಳೆಸಲಿದೆ. ಸದ್ಯಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೀನ್ಯಾ ಪ್ರವಾಸದಲ್ಲಿದ್ದಾರೆ.

ಇದೀಗ 'ರಾಬರ್ಟ್'​ ತಂಡದಿಂದ ಮತ್ತೊಂದು ಸಿಹಿಸುದ್ದಿ ಹೊರಬಿದ್ದಿದೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ ನೀಡಿರುವ 'ರಾಬರ್ಟ್'​ ಸಿನಿಮಾದ ಹಾಡುಗಳನ್ನು ಆನಂದ್ ಆಡಿಯೋ ಸಂಸ್ಥೆ ದುಬಾರಿ ಮೊತ್ತ ನೀಡಿ ಖರೀದಿಸಿದೆಯಂತೆ. ಚಿತ್ರೀಕರಣ ಆರಂಭವಾಗುವುದಕ್ಕೂ ಮೊದಲಿನಿಂದಲೂ ಭಾರೀ ಸದ್ದು ಮಾಡಿದ್ದ 'ರಾಬರ್ಟ್'​ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ. ಈಗಾಗಲೇ 'ಕುರುಕ್ಷೇತ್ರ' ಸಿನಿಮಾ 50 ದಿನಗಳನ್ನು ಪೂರೈಸಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇನ್ನೊಂದೆಡೆ 'ಒಡೆಯ' ಸಿನಿಮಾ ಕೂಡ ತೆರೆಗೆ ಬರುವ ಸಿದ್ಧತೆ ಮಾಡಿಕೊಳ್ಳುತ್ತಿದೆ. ದರ್ಶನ್ ವಿಭಿನ್ನ ಗೆಟಪ್​ನಲ್ಲಿ ಕಾಣಿಸಿಕೊಳ್ಳಲಿರುವ 'ರಾಬರ್ಟ್' ಸಿನಿಮಾ ಬಗ್ಗೆ ಅಭಿಮಾನಿಗಳು ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ದಾಸನ ಅಭಿಮಾನಿಗಳ ಕಾತುರತೆಗೆ ಜಸ್ಟ್​ ಬ್ರೇಕ್ ನೀಡಿದ ರಾಬರ್ಟ್​

ಈಗಾಗಲೇ 'ರಾಬರ್ಟ್'​ ಸಿನಿಮಾದ ಮ್ಯೂಸಿಕ್ ಆಲ್ಬಂನ ಬಿಡ್ಡಿಂಗ್ ಪ್ರಕ್ರಿಯೆ ಮುಗಿದಿದೆ ಎನ್ನಲಾಗಿದೆ. ಈ ಸಿನಿಮಾದ ಆಡಿಯೋ ಹಕ್ಕನ್ನು ಆನಂದ್ ಆಡಿಯೋ ಸಂಸ್ಥೆ ಪಡೆದುಕೊಂಡಿದೆ. ಕೋಟ್ಯಂತರ ರೂ. ನೀಡಿ ಆನಂದ್ ಆಡಿಯೋ ಹಕ್ಕನ್ನು ಖರೀದಿಸಿದೆ. ಎಷ್ಟೊ ಮೊತ್ತಕ್ಕೆ ಮಾರಾಟವಾಗಿದೆ ಎಂಬ ಬಗ್ಗೆ ಚಿತ್ರತಂಡವಿನ್ನೂ ಬಾಯಿಬಿಟ್ಟಿಲ್ಲ.  'ರಾಬರ್ಟ್' ಸಿನಿಮಾದ ಉಳಿದ ಅರ್ಧದ ಚಿತ್ರೀಕರಣ ಅಕ್ಟೋಬರ್ ತಿಂಗಳಿಂದ ಶುರುವಾಗಲಿದೆ. ಈ ಸಿನಿಮಾಗೆ ಅಪ್ಪಟ ಕನ್ನಡದ ಹುಡುಗಿ ಭದ್ರಾವತಿ ಮೂಲದ ಆಶಾ ಭಟ್​ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

First published:September 28, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading