ಲಾಕ್ಡೌನ್ ಅವಧಿಯಲ್ಲಿ ಸ್ಯಾಂಡಲ್ವುಡ್ ಅನೇಕ ನಟ-ನಟಿಯಲ್ಲಿ ಮನೆಯಲ್ಲಿ ಉಳಿದುಕೊಂಡು ಫ್ಯಾಮಿಲಿ ಜೊತೆಗೆ ಸಮಯ ಕಳೆಯುತ್ತಿದ್ದಾರೆ. ಇನ್ನು ಕೆಲವರು ಫಿಟ್ನೆಸ್, ಆಹಾರ, ಓದು ಹೀಗೆ ಒಂದಲ್ಲಾ ಒಂದು ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ರಾಬರ್ಟ್ ಬೆಡಗಿ ಆಶಾ ಭಟ್ ಬಿಡುವಿನ ವೇಳೆ ಹಾಡೊಂದನ್ನ ಹಾಡಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ನಟ ರಮೇಶ್ ಅರವಿಂದ್ ಮತ್ತು ಸುಹಾಸಿನಿ ನಟಿಸಿರುವ ‘ಅಮೃತವರ್ಷಿಣಿ‘ ಸಿನಿಮಾದ ‘ತುಂತುರ ನೀರ‘ ಹಾಡನ್ನು ಆಶಾ ಭಟ್ ಹಾಡಿದ್ದಾರೆ. ಜೊತೆಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ‘ಹಾಡು ಹಾಡುವುದು ನನಗೆ ಖುಷಿ ನೀಡುತ್ತದೆ. ಕಂಫರ್ಟ್ ಫೀಲ್ ಕೊಡುತ್ತದೆ. ನನ್ನಿಷ್ಟದ ಹಾಡನ್ನು ಹಾಡಲು ಪ್ರಯತ್ನಿಸಿದ್ದೇನೆ. ನಿಮಗೆ ಇಷ್ಟವಾಗಬಹುದು. ಕೊನೆಯಲ್ಲಿ ಜಾಗರೂಕತೆಯಲ್ಲಿಯೇ ಹಾಡು ಕೇಳಿ ಎಂದು ಬರೆದುಕೊಂಡಿದ್ದಾರೆ. ಅನೇಕರು ಆಶಾ ಅವರ ಮಧುರ ಗಾಯನವನ್ನು ಕೇಳಿ ಬಗೆ ಬಗೆ ಕಾಮೆಂಟ್ ಬರೆಯುತ್ತಿದ್ದಾರೆ.
ತುಂತುರು ಅಲ್ಲಿ ನೀರ ಹಾಡು- Part 1 🦋
Singing brings me comfort in the chaos , so here i tried to sing my fav Song !! Hope you guys like it 😬
PS : listen at your own risk 😜 pic.twitter.com/2DuId6pua5
— Asha Bhat (@StarAshaBhat) May 12, 2020
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ