ಹಾಲಿವುಡ್ನ (Hollywood) ಲೆಜೆಂಡರಿ ನಟ ರಾಬರ್ಟರ್ ಡೆನೀರೋ (Robert De Niro) ಅವರ 7ನೇ ಮಗುವಿನ ಆಗಮನವನ್ನು ಘೋಷಿಸಿದ್ದಾರೆ. ET Canadaದ ಜೊತೆ ಎಕ್ಸ್ಕ್ಲೂಸಿವ್ ಸಂದರ್ಶನದಲ್ಲಿ ನಟ ಈ ವಿಚಾರ ಬಹಿರಂಗಪಡಿಸಿದ್ದಾರೆ. ಎಬೌಟ್ ಮೈ ಫಾದರ್ (About My Father) ಸಿನಿಮಾ ಪ್ರಮೋಷನ್ (Movie Promotion) ವೇಳೆ ನಟ ತಾವು 79ನೇ ವಯಸ್ಸಿನಲ್ಲಿ ತಂದೆಯಾಗಿರುವುದಾಗಿ (Father) ಹೇಳಿದ್ದಾರೆ. ಈ ಸಂದರ್ಭ ನಟ ಪೇರೆಂಟಿಂಗ್ (Parenting) ಬಗ್ಗೆ ಮಾತನಾಡಿದ್ದಾರೆ. ನನಗೆ ಮಕ್ಕಳನ್ನು ತಿದ್ದುವುದು ಇಷ್ಟವಿಲ್ಲ. ಆದರೆ ಕೆಲವೊಮ್ಮೆ ಅದು ಅಗತ್ಯವಾಗಿರುತ್ತದೆ ಎಂದಿದ್ದಾರೆ.
ಅವರ ಮೊದಲ ಪತ್ನಿ ಡಯಾನ್ ಆಬಟ್ ಅವರು ನಟನ ಮಗ ರಫೇಲ್ ಹಾಗೂ ಮಗಳು ಡ್ರೆನಾ ಅವರ ತಾಯಿ. ಅವರ ಮಾಜಿ ಸಂಗಾತಿ, ರೂಪದರ್ಶಿ ಹಾಗೂ ನಟಿ ಟಾಕಿ ಸ್ಮಿತ್ ಜೊತೆ ನಟ ಅವಳಿ ಮಕ್ಕಳಿಗೆ ತಂದೆಯಾಗಿದ್ದಾರೆ. ಜೂಲಿಯನ್ ಹಾಗೂ ಆರೊನ್ ಅವಳಿ ಮಕ್ಕಳು. ಮಾಜಿ ಪತ್ನಿ ಗ್ರೇಸ್ ಹೈಟವರ್ ಅವರ ಜೊತೆ ನಟನಿಗೆ ಹೆಲೆನ್ ಗ್ರೇಸ್ ಎಂಬ ಮಗಳಿದ್ದಾಳೆ. ಹಾಗೆಯೇ ಎಲಿಯಟ್ ಎಂಬ ಮಗನಿದ್ದಾನೆ.
ಡೆನಿರೋ ಅವರ 7ನೇ ಮಗುವನ್ನು ಸ್ವಾಗತಿಸುತ್ತಿರುವುದು ಎಲ್ಲರಿಗೂ ಒಂದು ಸರ್ಪೈಸಿಂಗ್ ಸುದ್ದಿಯಾಗಿತ್ತು. ಈಗ ತಡವಾಗಿ ಪೋಷಕರಾಗುವುದು ಕೂಡಾ ಟ್ರೆಂಡ್ ಆಗಿದೆ.
ಇದನ್ನೂ ಓದಿ: Kannada Movies: ಶೇಕ್ಸ್ಪಿಯರ್ ನಾಟಕಗಳಿಂದ ಸ್ಪೂರ್ತಿ ಪಡೆದ ಕನ್ನಡದ ಹಿಟ್ ಸಿನಿಮಾಗಳಿವು
ಆಸ್ಕರ್ ವಿನ್ನರ್ ನಟ ತಾತನೂ ಆಗಿದ್ದಾರೆ. ನಟ ತನ್ನ ಮಕ್ಕಳಿಗೆ ಕನಸುಗಳನ್ನು ಬೆನ್ನಟ್ಟಲು ಪ್ರೋತ್ಸಾಹಿಸುತ್ತಾರೆ. ನೀವು ನಟನಾಗಬೇಕೋ, ಅಥವಾ ಇನ್ನೇನೋ ಆಗಬೇಕಂದರೂ ಸರಿ. ನೀವು ಖುಷಿಯಾಗಿರುವ ಯಾವುದನ್ನಾದರೂ ಮಾಡಿ. ಆದರೆ ನಿಮ್ಮನ್ನು ನೀವು ಮಾರಿಕೊಳ್ಳಬೇಡಿ ಎಂದು ನಟ 2020ರ ಇಂಟರ್ವ್ಯೂನಲ್ಲಿ ಹೇಳಿದ್ದರು. ಮಕ್ಕಳು ಅವರಿಗಿಷ್ಟವಾದ ದಾರಿ ಕಂಡುಕೊಳ್ಳುವುದು ಕೂಡಾ ತುಂಬಾ ಅಗತ್ಯ ಎಂದಿದ್ದಾರೆ.
ಐರಿಷ್ ಮ್ಯಾನ್ ಖ್ಯಾತಿಯ ನಟ ದಿ ಗಾಡ್ ಫಾದರ್ 2, ರಾಗಿಂಗ್ ಬುಲ್, ಟ್ಯಾಕ್ಸಿ ಡ್ರೈವರ್ ಸಿನಿಮಾಗಳಿಂದ ಹಿಟ್ ಆಗಿದ್ದಾರೆ. ನಟ ಎರಡು ಸಲ ಆಸ್ಕರ್ ಗೆದ್ದಿದ್ದಾರೆ. 7 ಸಲ ನಾಮಿನೇಟ್ ಆಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ