ಅಮೆರಿಕನ್ ನಟ ನಿರ್ದೇಶಕ ರಾಬರ್ಟ್ ಡೆನಿರೋ(Robert De Niro) , ತಮ್ಮ 79 ರ ಇಳಿಹರೆಯದಲ್ಲಿ ಹೆಣ್ಣುಮಗುವಿನ ತಂದೆಯಾಗಿದ್ದು (Father) ಇದೀಗ 7 ಮಕ್ಕಳ ತಂದೆಯಾಗಿದ್ದಾರೆ. ನಿರೋನ ಅಧಿಕೃತ ವಲಯ ಈ ಸುದ್ದಿಯನ್ನು ದೃಢೀಕರಿಸಿದ್ದು, ಇನ್ನೊಂದು ಮಗುವಿನ (Baby) ಆಗಮನ ಜೀವನದಲ್ಲಿ ಖುಷಿಯನ್ನು ಹೆಚ್ಚಿಸಿದೆ ಎಂದು ತಿಳಿಸಿದ್ದಾರೆ.
79ರ ಹರೆಯದಲ್ಲಿ ಹೆಣ್ಣುಮಗುವಿನ ತಂದೆ
ಗಾಢ್‌ಫಾದರ್ (God Father) ನಟ ನಿರೋ, ಇದೀಗ ಏಳು ಮಕ್ಕಳ ತಂದೆಯಾಗಿದ್ದು, ಅವರ ಗೆಳತಿ ಮಾರ್ಷಲ್ ಆರ್ಟ್ಸ್ ತರಬೇತುದಾರರಾದ ಟಿಫಾನಿ ಚೆನ್ ಏಪ್ರಿಲ್ 6 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಈ ಮಗು ನಿರೋ ಅವರ ಏಳನೆಯ ಮಗುವಾಗಿದೆ.
ಇದೀಗ ಮಗುವಿಗೆ ಒಂದು ತಿಂಗಳ ವಯಸ್ಸಾಗಿದೆ. ರಾಬರ್ಟ್ ಮಗು ಜನಿಸಿದ ಸುಮಾರು ದಿನಗಳ ನಂತರ ಮಗುವಿನ ಆಗಮನದ ಸುದ್ದಿಯನ್ನು ಮಾಧ್ಯಮದೊಂದಿಗೆ ಹಂಚಿಕೊಂಡಿದ್ದು ಮಗುವಿನ ಜನನ ಸಮಯ, ಲಿಂಗ, ತೂಕದ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
ತಮ್ಮ ಚಲನಚಿತ್ರದ ಪ್ರೀಮಿಯರ್ ಶೋ ನಲ್ಲಿ ನಿರೋ ಮತ್ತೊಮ್ಮೆ ತಂದೆಯಾಗಿರುವುದಾಗಿ ಅಸೋಸಿಯೇಟೆಡ್ ಪ್ರೆಸ್‌ಗೆ ತಿಳಿಸಿದ್ದು, ಈ ಸುದ್ದಿ ಯಾವಾಗಲೂ ಉತ್ತಮ ಸುದ್ದಿ ಹಾಗೂ ನಿಗೂಢವಾಗಿದೆ ಅಂತೆಯೇ ಏನು ಸಂಭವಿಸಲಿದೆ ಎಂಬುದು ನಮಗ್ಯಾರಿಗೂ ತಿಳಿದಿರುವುದಿಲ್ಲ ಎಂದು ತಿಳಿಸಿದ್ದಾರೆ.
ನಿರೋ ಮೊದಲ ಮಗನ ವಯಸ್ಸು 51
ಆಸ್ಕರ್ ವಿಜೇತ ನಟ, ತಮ್ಮ ಮೊದಲ ವಿವಾಹದಿಂದ 51 ರ ಹರೆಯದ ಡ್ರೆನಾ ಹಾಗೂ 46ರ ಹರೆಯದ ರಾಫೆಲ್ ಎಂಬ ಇನ್ನಿಬ್ಬರು ಮಕ್ಕಳನ್ನು ಪಡೆದುಕೊಂಡಿದ್ದಾರೆ.
ಎರಡನೆಯ ವಿವಾಹದಿಂದ ಟ್ವಿನ್ಸ್ ಮಕ್ಕಳಾದ 27 ರ ಹರೆಯದ ಜೂಲಿಯನ್ ಮತ್ತು ಆರನ್, 24 ರ ಹರೆಯದ ಎಲಿಯಟ್, 11 ರ ಹರೆಯದ ಹೆಲೆನ್ ಗ್ರೇಸ್ ಮಕ್ಕಳನ್ನು ಹೊಂದಿದ್ದಾರೆ.
ತಾವು ಹಾಗೂ ತಮ್ಮ ಗೆಳತಿ ಟಿಫಾನಿ ಖುಷಿಯಾಗಿದ್ದೇವೆ
ಇದೀಗ ಜನ್ಮತಾಳಿರುವ ಹೆಣ್ಣುಮಗುವಿನ ಮಾಹಿತಿಗಳನ್ನು ತಿಳಿಸಿರುವ ನಿಯೋ ಮಗುವಿನ ಫೋಟೋವನ್ನು ಹಂಚಿಕೊಂಡಿದ್ದು ಆಕೆಯ ಜನ್ಮದಿನಾಂಕವನ್ನು ಸ್ಪಷ್ಟಪಡಿಸಿದ್ದಾರೆ ಅಂತೆಯೇ ಹುಟ್ಟಿದ ಸಮಯ ಹಾಗೂ ತೂಕದ ಮಾಹಿತಿಯನ್ನು ನೀಡಿದ್ದಾರೆ.
ತಾವು ಹಾಗೂ ತಮ್ಮ ಗೆಳತಿ ಟಿಫಾನಿ ಚೆನ್ ಮಗುವಿನ ಆಗಮನದಿಂದ ಸಂತೋಷಭರಿತರಾಗಿರುವುದಾಗಿ ತಿಳಿಸಿದ್ದು, ನಮ್ಮ ಜೀವನದ ಅತ್ಯಂತ ಅಮೂಲ್ಯ ಕ್ಷಣ ಇದಾಗಿದೆ ಎಂದು ಉಲ್ಲೇಖಿಸಿದ್ದಾರೆ.
ಈಗಾಗಲೇ ನಿರೋ ಆರು ಮಕ್ಕಳ ತಂದೆಯಾಗಿದ್ದು ಹೆಣ್ಣು ಮಗುವಿನ ಆಗಮನದೊಂದಿಗೆ ಏಳು ಮಕ್ಕಳ ಪಿತ ಎಂದೆನಿಸಿದ್ದಾರೆ. ಅವರ ಹಿರಿಯ ಪುತ್ರ ಐವತ್ತರ ಆಸುಪಾಸಿನವರಾಗಿದ್ದು ಆತ ಕೂಡ ಪುಟ್ಟ ಮಗುವಿನ ತಂದೆಯಾಗಿದ್ದಾರೆ.
ಇಳಿವಯಸ್ಸಿನಲ್ಲಿಯೂ ತಂದೆಯಾಗಿರುವುದು ಉತ್ಸಾಹವನ್ನು ಹೆಚ್ಚಿಸಿದೆ
ಏಳು ಮಕ್ಕಳ ತಂದೆಯಾಗಿರುವ 79 ರ ಹರೆಯದ ನಿರೋ, ಪಿತೃತ್ವ ಎಂಬುದು ಉತ್ತೇಜಕವಾಗಿದ್ದು ಹೆಚ್ಚು ಜವಾಬ್ದಾರಿಯುತ ಹಾಗೂ ಸಂತೋಷಭರಿತ ಹುದ್ದೆಯಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Ashika Ranganath: ವೈಟ್ ಡ್ರೆಸ್ ತೊಟ್ಟು ಕುಣಿದ ಚಿಟ್ಟೆ, ಬ್ಯೂಟಿಫುಲ್ ಬಾಲೆ ಆಶಿಕಾ ರಂಗನಾಥ್!
ಒಬ್ಬ ಉತ್ತಮ ತಂದೆ ಎಂದೆನ್ನಿಸಿಕೊಳ್ಳುವುದು ಬರಿಯ ಜವಾಬ್ದಾರಿಯನ್ನು ವಹಿಸಿಕೊಳ್ಳುವುದು ಮಾತ್ರಲ್ಲ ಬದಲಿಗೆ ಅದನ್ನು ಉತ್ಸಾಹದಿಂದ ನಿಭಾಯಿಸುವುದಾಗಿದೆ ಎಂದು ನಟ ತಿಳಿಸಿದ್ದಾರೆ.
ತಮ್ಮ ಇಳಿಹರೆಯದಲ್ಲೂ ಪುಟ್ಟ ಕಂದಮ್ಮನನ್ನು ಜೀವನದಲ್ಲಿ ಸ್ವಾಗತಿಸಿರುವುದು ನನ್ನ ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಅವರು ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ.
ಮುಂಬರುವ ಚಿತ್ರದ ಪ್ರಮೋಶನ್‌ನಲ್ಲಿ ನಿರತರಾಗಿರುವ ನಟ
ಪ್ರಸ್ತುತ ನಿರೋ ತಮ್ಮ ಹೊಸ ಕಾಮಿಡಿ ಚಿತ್ರ ಅಬೌಟ್ ಮೈ ಫಾದರ್‌ನ ಪ್ರಮೋಶನ್ ಕಾರ್ಯದಲ್ಲಿ ತೊಡಗಿದ್ದು ಮೇ 26 ರಂದು ಚಿತ್ರ ಬಿಡುಗಡೆಯಾಗಲಿದೆ.
ಪ್ರತಿಭಾವಂತ ನಟ ರಾಬರ್ಟ್ ಡಿ ನಿರೋ
ರಾಬರ್ಟ್ ಡಿ ನಿರೋ, ಅದ್ಭುತ ನಟ ನಿರ್ದೇಶಕ ಹಾಗೂ ನಿರ್ಮಾಪಕರಾಗಿ ತಮ್ಮನ್ನು ಗುರುತಿಸಿಕೊಂಡವರು ಅಂತೆಯೇ ತಮ್ಮ ಚಿತ್ರ ದಿ ಗಾಡ್‌ಫಾದರ್: ಭಾಗ II ರಲ್ಲಿನ ಪೋಷಕ ಪಾತ್ರಕ್ಕಾಗಿ ಎರಡು ಬಾರಿ ಆಸ್ಕರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡ ಪ್ರತಿಭಾವಂತರಾಗಿದ್ದಾರೆ.
ರೇಜಿಂಗ್ ಬುಲ್ ಚಿತ್ರಕ್ಕಾಗಿ ಅತ್ಯುತ್ತಮ ನಟ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಮನೋರಂಜನಾ ಕ್ಷೇತ್ರದಲ್ಲಿ ಅವರು ಮಾಡಿರುವ ಸಾಧನೆಗಳನ್ನು ಗುರುತಿಸಿ ಅವರಿಗೆ ಗೋಲ್ಡನ್ ಗ್ಲೋಬ್ಸ್‌ನ ಸೆಸಿಲ್ ಬಿ. ಡಿಮಿಲ್ಲೆ ಪ್ರಶಸ್ತಿಯನ್ನು ಸಹ ನೀಡಲಾಯಿತು ಮತ್ತು ಐದು ವರ್ಷಗಳ ನಂತರ ಅಧ್ಯಕ್ಷೀಯ ಪದಕ ಸ್ವಾತಂತ್ರ್ಯವನ್ನು ನೀಡಲಾಯಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ