ಅಭಿಮಾನಿಗಳ ದಾಸ, ಫ್ಯಾನ್ಸ್ಗಳಿಂದ ಪ್ರೀತಿಯಿಂದ ಡಿ ಬಾಸ್ ಎಂದು ಕರೆಸಿಕೊಳ್ಳುವ ದರ್ಶನ್ ಈ ಸಲವೂ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಈ ಹಿಂದೆಯೇ ಫೇಸ್ಬುಕ್ ಲೈವ್ ಬಂದಿದ್ದ ದರ್ಶನ್, ಕೊರೋನಾದಿಂದಾಗಿ ಈ ಸಲವೂ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಎಂದಿದ್ದರು. ಅಲ್ಲದೆ ಅಭಿಮಾನಿಗಳಿಗೆ ಮನೆಯ ಬಳಿ ಬರಬೇಡಿ ಎಂದು ಮನವಿ ಮಾಡಿದ್ದರು. ಜೊತೆಗೆ ಕೊರೋನಾದಿಂದಾಗಿ ಎಲ್ಲವೂ ಮನೆಗಳಲ್ಲೇ ಇದ್ದು, ನಿಮ್ಮ ಹಾಗೂ ಕುಟುಂಬದವರ ಆರೋಗಯದ ಬಗ್ಗೆ ಕಾಳಜಿ ಮಾಡಿ. ಕೊರೋನಾ ಸಂಕಷ್ಟದಿಂದಾಗಿ ಜನರಿಗೆ ಕೆಲಸಗಳು ಇಲ್ಲದೆ ಆರ್ಥಿಕವಾಗಿಯೂ ಸಮಸ್ಯೆಗಳು ಎದುರಾಗಿವೆ. ಅದಕ್ಕೆ ಯಾರೂ ಸಹ ಹಣ ಖರ್ಷು ಮಾಡಿಕೊಂಡು ದೂರದ ಊರುಗಳಿಂದ ನನ್ನ ಮನೆಯ ಬಳಿಗೆ ಬಂದು ಹಾರ-ಕೇಕ್ ಅಂತ ದುಂದು ವೆಚ್ಚ ಮಾಡಬೇಡಿ. ಅದನ್ನು ನಿಮ್ಮ ಕುಟುಂಬದ ನಿರ್ವಹಣೆಗೆ ಬಳಸಿಕೊಳ್ಳಿ ಎಂದು ಸವಿನಯವಾಗಿ ಮನವಿ ಮಾಡಿದ್ದರು.
2020 ಎಲ್ಲರಿಗೂ ಒಂದು ಪಾಠ ಕಲಿಸಿದೆ. ಕೊರೋನಾದಿಂದಾಗಿ ಸಾಕಷ್ಟು ನೊಂದಿರುವ ಕಾರಣದಿಂದ ಈ ಸಲ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಎಂದ ದರ್ಶನ್ ತಾನೇ ಅಭಿಮಾನಿಗಳನ್ನು ಭೇಟಿಯಾಗಲು ಅವರ ಊರುಗಳಿಗೆ ಬರುವುದಾಗಿಯೂ ತಿಳಿಸಿದ್ದರು. ದರ್ಶನ್ ಅಭಿಮಾನಿಗಳನ್ನು ಹುಟ್ಟುಹಬ್ಬದ ದಿನ ಭೇಟಿ ಮಾಡದೇ ಹೋದರೂ, ಅವರಿಗಾಗಿ ಒಂದು ದೊಡ್ಡ ಉಡುಗೊರೆಯನ್ನೇ ರೆಡಿ ಮಾಡಿಕೊಂಡಿದ್ದಾರೆ.
ಹೌದು, ದರ್ಶನ್ ಅವರ ಹುಟ್ಟುಹಬ್ಬದಂದು ಅಂದರೆ ಫೆ. 16ರಂದು ರಾಬರ್ಟ್ ಚಿತ್ರತಂಡ ಸಿನಿಮಾದ ಟ್ರೇಲರ್ ಅನ್ನು ಡಿಬಾಸ್ ಅಭಿಮಾನಿಗಳಿಗೆ ಉಡುಗೊರೆಯಾಗಿ ನೀಡಲಿದೆ. ಈ ವಿಷಯವನ್ನು ನಿರ್ದೇಶಕ ತರುಣ್ ಸುಧೀರ್ ಅವರು ನಿನ್ನೆ ಸಂಜೆ ಟ್ವೀಟ್ ಮಾಡುವ ಮೂಲಕ ಖಚಿತ ಪಡಿಸಿದ್ದಾರೆ.
And FINALLY...2nd update of #Roberrt 😍 for today.
Yesss...TRAILER RELEASE on #DBoss Birthday Feb16,2021..
A power packed trailer to celebrate #BossParva 💪❤#RoberrtTrailerRoarOnFeb16@UmapathyFilms @StarAshaBhat @aanandaaudio pic.twitter.com/GFWmxYhb95
— Tharun Sudhir (@TharunSudhir) February 11, 2021
Ok here it is... 1st update 😀 of #Roberrt for today 😍#JaiShriRam telugu song lyrical video on Feb 12th, 2021 @ 04:05pm..🙏#RoberrtTeluguSecondSong
ಜಗಪತಿ ಬಾಬು ಪಾತ್ರ ಪೋಸ್ಟರ್ ರಿಲೀಸ್
ಜಗಪತಿ ಬಾಬು ರಾಬರ್ಟ್ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಸಿಕೊಂಡಿದ್ದಾರೆ. ಅವರ ಪಾತ್ರ ಏನು ಹೇಗಿರಲಿದೆ ಎಂದು ಇಲ್ಲಿಯವರೆಗೆ ಚಿತ್ರತಂಡ ಯಾವುದೇ ಸುಳಿವು ನೀಡಿಲ್ಲ. ಆದರೆ ಇಂದು ಬೆಳಿಗ್ಗೆ 10.5ಕ್ಕೆ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಲಿದೆ.
How about a BONUS update 😉
Releasing the first look poster of "The man of Intensity" @IamJagguBhai sir tomorrow mrng at 10.05am on occasion of his bday 😍#DBoss #Roberrt #RoberrtJagapathiBabuLook @UmapathyFilms@aanandaaudio
— Tharun Sudhir (@TharunSudhir) February 11, 2021
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ