Darshan: ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಡಿಬಾಸ್​ ದರ್ಶನ್​: ಕಾರಣ ಇಲ್ಲಿದೆ..!

Roberrt Teaser: ದರ್ಶನ್​ ಅವರ ರಾಬರ್ಟ್​ ಸಿನಿಮಾದ ಟೀಸರ್​ಗೆ 5 ಮಿಲಿಯನ್​ ವೀಕ್ಷಣೆ ಸಿಕ್ಕಿದೆ. ಟೀಸರ್​ಗೆ 50 ಲಕ್ಷ ವೀಕ್ಷಣೆ ಸಿಕ್ಕಿದ್ದು, ಅಭಿಮಾನಿಗಳು ಇದನ್ನು ಸಂಭ್ರಮಿಸುತ್ತಿದ್ದಾರೆ. ಅಲ್ಲದೆ ನಟ ದರ್ಶನ್​ ಸಹ ಈ ವಿಷಯವಾಗಿಯೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ.

ದರ್ಶನ್​

ದರ್ಶನ್​

  • Share this:
ದರ್ಶನ್​ ಅಭಿನಯದ ಬಹುನಿರೀಕ್ಷಿತ ಸಿನಿಮಾ ರಾಬರ್ಟ್​. ಇದರ ಚಿತ್ರೀಕರಣ ಮುಗಿದಿದ್ದು, ಇನ್ನೇನು ತೆರೆಗೆ ಬರಲ ಸಜ್ಜಾಗಿದೆ. ಅಲ್ಲದ ಸರಿಯಾಗಿ ಇದ್ದಿದ್ದರೆ, ಕಳೆದ ಏಪ್ರಿಲ್​ನಲ್ಲೇ ಸಿನಿಮಾನ ರಿಲೀಸ್​ ಆಗಬೇಕಿತ್ತು. ಆದರೆ ಕೊರೋನಾ ಲಾಕ್​ಡೌನ್​ನಿಂದಾಗಿ ರಾಬರ್ಟ್​ ಸಿನಿಮಾ ರಿಲೀಸ್​ ದಿನಾಂಕ ಮುಂದಕ್ಕೆ ಹೋಗಿದೆ. ಇನ್ನು ಪ್ರತಿ ಹಬ್ಬಕ್ಕೂ ಚಿತ್ರತಂಡದ ಕಡೆಯಿಂದ ಅಭಿಮಾನಿಗಳಿಗೆ ಒಂದಿಲ್ಲೊಂದು ಸರ್ಪ್ರೈಸ್​ ನೀಡಲಾಗುತ್ತಿದೆ. ದರ್ಶನ್​ ಅವರ ಹುಟ್ಟುಹಬ್ಬದಂದು ಅಂದರೆ ಫೆಬ್ರವರಿ 16ರಂದು ಅಭಿಮಾನಿಗಳಿಗೆಂದೇ ರಾಬರ್ಟ್​ ಸಿನಿಮಾದ ಟೀಸರ್​ ರಿಲೀಸ್​ ಮಾಡಲಾಗಿತ್ತು.  ಪೋಸ್ಟರ್, ಮೋಷನ್ ಪೋಸ್ಟರ್​​ನಿಂದಲೇ ಸದ್ದು ಮಾಡಿದ್ದ ದರ್ಶನ್ ನಟನೆಯ ಬಹುನಿರೀಕ್ಷಿತ ರಾಬರ್ಟ್​ ಸಿನಿಮಾ ಟೀಸರ್​ ನೋಡಿದ ಅಭಿಮಾನಿಗಳು ಸಖತ್​ ಖುಷಿಯಲ್ಲಿದ್ದರು. ರಾಬರ್ಟ್ ಸಿನಿಮಾ ಟೀಸರ್ ರಿಲೀಸ್ ಆಗಿ ಕೇವಲ 1 ಗಂಟೆಯೊಳಗೆ 3 ಲಕ್ಷಕ್ಕೂ ಅಧಿಕ ಜನರು ವೀಕ್ಷಣೆ ಮಾಡಿದ್ದರು. ಜೊತೆಗೆ 16 ಸಾವಿರಕ್ಕೂ ಅಧಿಕ ಮಂದಿ ಈ ಟೀಸರ್‌ಗೆ ಕಾಮೆಂಟ್ ಮಾಡಿದ್ದರು. ಈಗ ಈ ಟೀಸರ್​ ಮತ್ತೊಂದು ದಾಖಲೆ ಮಾಡಿದೆ.

ಹೌದು, ದರ್ಶನ್​ ಅವರ ರಾಬರ್ಟ್​ ಸಿನಿಮಾದ ಟೀಸರ್​ಗೆ 5 ಮಿಲಿಯನ್​ ವೀಕ್ಷಣೆ ಸಿಕ್ಕಿದೆ. ಟೀಸರ್​ಗೆ 50 ಲಕ್ಷ ವೀಕ್ಷಣೆ ಸಿಕ್ಕಿದ್ದು, ಅಭಿಮಾನಿಗಳು ಇದನ್ನು ಸಂಭ್ರಮಿಸುತ್ತಿದ್ದಾರೆ. ಅಲ್ಲದೆ ನಟ ದರ್ಶನ್​ ಸಹ ಈ ವಿಷಯವಾಗಿಯೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ.ರಾಬರ್ಟ್​ ಟೀಸರ್​ಗೆ 5 ಮಿಲಿಯನ್​ ವೀಕ್ಷಣೆಗೆ ಕಾರಣವಾದ ಪ್ರತಿಯೊಬ್ಬರಿಗೂ ನನ್ನ ತುಂಬು ಹೃದಯದ ಧನ್ಯವಾದಗಳು. ನಿಮ್ಮ ದಾಸ ದರ್ಶನ್​ ಎಂದು ಡಿಬಾಸ್​ ಫೇಸ್​ಬುಕ್​, ಟ್ವಿಟರ್ ಹಾಗೂ ಇನ್​ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ.ತರುಣ್​ ಸುಧೀರ್​ ನಿರ್ದೇಶನದ ಈ ಸಿನಿಮಾವನ್ನು ಉಮಾಪತಿ ಅವರು ನಿರ್ಮಿಸಿದ್ದಾರೆ. ಇದರಲ್ಲಿ ದರ್ಶನ್​ ಅವರಿಗೆ ನಾಯಕಿಯಾಗಿ ಕನ್ನಡತಿ ಆಶಾ ಭಟ್​ ನಟಿಸಿದ್ದಾರೆ. ಆಶಾ ಭಟ್​ ಅವರ ಹುಟ್ಟುಹಬ್ಬದಂದು ಸಹ ಚಿತ್ರತಂಡ ಅವರ ಫಸ್ಟ್​ಲುಕ್​ ಪೋಸ್ಟರ್​ ರಿಲೀಸ್​ ಮಾಡಿತ್ತು.


ನಿರ್ಮಾಪಕ ಉಮಾಪತಿ ಅವರ ಹುಟ್ಟುಹಬ್ಬಕ್ಕೆ ಈ ಹಿಂದೆಯೇ ರಾಬರ್ಟ್​ ಸಿನಿಮಾ ಸಖತ್​ ಭರ್ಜರಿ ಪೋಸ್ಟರ್ ರಿಲೀಸ್​ ಮಾಡಲಾಗಿತ್ತು.  ಈಗ ನಾಳೆ ನಿರ್ದೇಶಕ ತರುಣ್​ ಸುಧೀರ್​ ಅವರ ಹುಟ್ಟುಹಬ್ಬದಂದು ಸಹ ಒಂದು ಹೊಸ ಲೆಟೆಸ್ಟ್​ ಪೋಸ್ಟರ್​ ಬಿಡುಗಡೆ ಮಾಡುವುದಾಗಿ ನಿರ್ಮಾಪಕ ಉಮಾಪತಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಈವರೆಗೆ ದರ್ಶನ್ 52 ಸಿನಿಮಾಗಳಲ್ಲಿ ನಟಿಸಿದ್ದಾರೆ. ಆ ಎಲ್ಲ ಸಿನಿಮಾಗಳಿಗಿಂತ ವಿಭಿನ್ನ ಕಥೆ ರಾಬರ್ಟ್ ಸಿನಿಮಾದ್ದು. ಪಾತ್ರ ಕೂಡ ಈವರೆಗಿನ ಎಲ್ಲ ಪಾತ್ರಗಳಿಗಿಂತ ಬೇರೆಯದ್ದೇ ರೀತಿಯಾಗಿದೆ. ಹಾಗೆ, ಡಿಬಾಸ್ ಲುಕ್ ಗೆಟಪ್ ಸಹ ಅಷ್ಟೇ ಭರ್ಜರಿಯಾಗಿರಲಿದೆ. ಇನ್ನೇನು ಚಿತ್ರಮಂದಿರಗಳು ತೆರೆಯಲಿದ್ದು, ರಾಬರ್ಟ್​ ಚಿತ್ರತಂಡ ಸಿನಿಮಾದ ರಿಲೀಸ್​ ಡೇಟ್​ ಪ್ರಕಟಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.
Published by:Anitha E
First published: