Mangli: ವಿವಾದಕ್ಕೀಡಾದ ರಾಬರ್ಟ್​ ಸಿನಿಮಾದ ಕಣ್ಣೇ ಅದಿರಿಂದಿ ಗಾಯಕಿ ಮಂಗ್ಲಿ..!

Roberrt Singer Mangli: ರಾಬರ್ಟ್​ ಸಿನಿಮಾದ ತೆಲುಗು ವರ್ಷನ್​ನಲ್ಲಿ ಕಣ್ಣೇ ಅದಿರಿಂದಿ ಹಾಡು ಸಖತ್​ ವೈರಲ್​ ಆಗಿತ್ತು. ಎಲ್ಲದಕ್ಕಿಂತ ಹೆಚ್ಚಾಗಿ ಈ ಹಾಡಿನಿಂದಾಗಿ ಗಾಯಕಿ ಮಂಗ್ಲಿ ಅವರಿಗೆ ಕನ್ನಡ ಸಿನಿರಸಿಕರ ಹೃದಯದಲ್ಲಿ ಒಂದೊಳ್ಳೆ ಸ್ಥಾನ ಸಿಕ್ಕಿತ್ತು. ಈಗ ಇದೇ ಗಾಯಕಿ ವಿವಾದಕ್ಕೀಡಾಗಿದ್ದಾರೆ.

 ಗಾಯಕಿ ಮಂಗ್ಲಿ

ಗಾಯಕಿ ಮಂಗ್ಲಿ

  • Share this:
ತೆಲುಗು ಗಾಯಕಿ ಮಂಗ್ಲಿ ಹೆಸರು ಈಗ ಯಾರಿಗೆ ಗೊತ್ತಿಲ್ಲ ಹೇಳಿ. ರಾಬರ್ಟ್​ ಸಿನಿಮಾದ ತೆಲುಗು ವರ್ಷನ್​ನಲ್ಲಿ ಕಣ್ಣೇ ಅದಿರಿಂದಿ ಹಾಡು ಹಾಡುವ ಮೂಲಕ ರಾತ್ರೋರಾತ್ರಿ ಕನ್ನಡಿಗರ ಮನ ಗೆದ್ದವರು ಈ ಗಾಯಕಿ. ಲಂಬಾಣಿ ಹುಡುಗಿ ಹಾಡಿದ್ದ ಹಾಡಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಇನ್ನು ಮಂಗ್ಲಿ ಅವರ ವಿಭಿನ್ನ ದನಿಗೆ ಲಕ್ಷಾಂತರ ಮಂದಿ ಅಭಿಮಾನಿಗಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ಮಂಗ್ಲಿ ಅವರಿಗೆ ದೊಡ್ಡ ಹಿಂಬಾಲಕರ ಬಳಗವೇ ಇದೆ. ತೆಲುಗಿನಲ್ಲಿ ಸಾಕಷ್ಟು ಸಿನಿಮಾಗಳು ಹಾಗೂ ಆಲ್ಬಂ ಹಾಡುಗಳನ್ನು ಹಾಡಿರುವ ಈ ಗಾಯಕಿ ಈಗ ವಿವಾದಕ್ಕೀಡಾಗಿದ್ದಾರೆ.  ಹೌದು, ಈ ಲಂಬಾಣಿ ಹುಡುಗಿ ಮಂಗ್ಲಿ ಹಾಡಿರುವ ಹೊಸ ಹಾಡೊಂದು ಸಾಕಷ್ಟು ಜನರ ವಿರೋಧಕ್ಕೆ ಕಾರಣವಾಗಿದೆ. ಜುಲೈ 11ರಂದು ರಿಲೀಸ್ ಆಗಿರುವ ಬೋನಂ ಪಾಟ ಹಾಡಿನ ವಿಡಿಯೋಗೆ ಈಗಾಗಲೇ 45 ಲಕ್ಷ ವೀಕ್ಷಣೆ ಕಂಡಿದೆ. 

ತೆಲುಗಿನಲ್ಲಿ ಜಾಪದ ಹಾಡುಗಳನ್ನು ಹಾಡುವ ಮೂಲಕ ಗುರುತಿಸಿಕೊಂಡಿರುವ ಮಂಗ್ಲಿ ಬೋನಾಲು ವಿಡಿಯೋ ಹಾಡನ್ನು ರಿಲೀಸ್ ಮಾಡಿದ್ದು, ಇದು ಈಗ ವಿವಾದಕ್ಕೆ ಕಾರಣವಾಗಿದೆ. ತೆಲುಗು ನಾಡಿನಲ್ಲಿ ಈಗ ಬೊನಾಲು ಹಬ್ಬದ ಸಮಯ. ತೆಲಂಗಾಣದ ಪರಿಶಿಷ್ಟ ಹಾಗೂ ಹಿಂದುಳಿದ ಜನಾಂಗದವರು ಬೊನಾಲು ಹಬ್ಬವನ್ನು ಆಚರಿಸುತ್ತಾರೆ. ಶಕ್ತಿ ದೇವತೆ ಮಹಾಕಾಳಿಯನ್ನು ಈ ಹಬ್ಬದ ಸಮಯದಲ್ಲಿ ಆರಾಧಿಸಲಾಗುತ್ತದೆ. ಹೈದರಾಬಾದ್, ಸಿಕಂದರಾಬಾದ್​, ತೆಲಂಗಾಣ ಹಾಗೂ ರಾಯಲಸೀಮಾದ ಪ್ರದೇಶಗಳಲ್ಲಿ ಆಷಾಢ ಮಾಸದಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬದಮೊದಲ ಹಾಗೂ ಕಡೆಯ ದಿನ ಎಲ್ಲಮ್ಮದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.ಈ ಬೊನಾಲು ಹಬ್ಬದ ಪ್ರಯುಕ್ತ ಮಂಗ್ಲಿ ಅವರೇ ಹಾಡಿ ಹೆಜ್ಜೆ ಹಾಕಿರುವ ಈ ವಿಡಿಯೋ ಹಾಡಿನಲ್ಲಿ ದೇವತೆಗೆ ಅಪಮಾನ ಮಾಡಲಾಗಿದೆ ಎಂದು ಸಾಕಷ್ಟು ಮಂದಿ ಆರೋಪಿಸಿದ್ದಾರೆ. ಈ ಹಾಡಿನಿಂದ ಭಕ್ತರ ಭಾವನೆಗೆ ನೋವಾಗಿದೆ ಎಂದು ಎಂದು ಸಾಕಷ್ಟು ಮಂದಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅದಕ್ಕಾಗಿಯೇ ಮಂಗ್ಲಿ ಅವರು ಕ್ಷಮೆ ಯಾಚಿಸಬೇಕು ಎಂಬ ಆಗ್ರಹವೂ ಕೇಳಿ ಬರುತ್ತಿದೆ.

ಇದನ್ನೂಓದಿ: Bigg Boss 8 Elimination: ಬಿಗ್ ಬಾಸ್​ ಮನೆಯಿಂದ ಹೊರ ಹೋಗುತ್ತಾ ಚಕ್ರವರ್ತಿಗೆ ಶಾಕ್​ ಕೊಟ್ಟ ಪ್ರಿಯಾಂಕಾ ತಿಮ್ಮೇಶ್ 

ತೆಲುಗಿನ ಬಿಗ್ ಬಾಸ್​ ಸೀಸನ್​ 5ರಲ್ಲಿ ಸ್ಪರ್ಧಿಯಾಗಿ ಮಂಗ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದೂ ಹೇಳಲಾಗುತ್ತಿದೆ. ಈ 5ನೇ ಸೀಸನ್​ ಜೂನ್​ನಲ್ಲೇ ಆರಂಭವಾಗಬೇಕಿತ್ತು. ಆದರೆ ಕೊರೋನಾ ಕಾರಣದಿಂದಾಗಿ ಇದು ಮುಂದಕ್ಕೆ ಹೋಗಿದೆ. ಆದರೆ, ಈಗ ಬಿಗ್​ ಬಾಸ್​ ಸೀಸನ್​ 5ಕ್ಕೆ ಎಲ್ಲ ರೀತಿಯ ಸಿದ್ಧತೆ ಜೋರಾಗಿ ನಡೆಯುತ್ತಿದ್ದು ಸದ್ಯದಲ್ಲೇ ಈ ಶೋ ಆರಂಭವಾಗಲಿದೆಯಂತೆ.

ಇದೇ ಗಾಯಕಿ ಮಂಗ್ಲಿ ಕನ್ನಡ ಸಿನಿಮಾದಲ್ಲಿ ಸ್ಟಾರ್​ ನಟನ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ರಾಬರ್ಟ್​ ಸಿನಿಮಾದಲ್ಲಿ ಕಣ್ಣೇ ಅದಿರಿಂದ ಹಾಡು ಹಾಡಿದ ನಂತರ ಕನ್ನಡ ಪ್ರೇಕ್ಷಕರ ಮನಸ್ಸಲ್ಲೂ ನೆಲೆಯೂರಿದ್ದಾರೆ. ರಾಬರ್ಟ್​ ಸಿನಿಮಾದ ತೆಲುಗು ವರ್ಷನ್​ನಲ್ಲಿ ಕಣ್ಣೇ ಅದಿರಿಂದಿ ಹಾಡು ಸಖತ್​ ವೈರಲ್​ ಆಗಿತ್ತು. ಎಲ್ಲದಕ್ಕಿಂತ ಹೆಚ್ಚಾಗಿ ಈ ಹಾಡಿನಿಂದಾಗಿ ಮಂಗ್ಲಿ ಅವರಿಗೆ ಕನ್ನಡ ಸಿನಿರಸಿಕರ ಹೃದಯದಲ್ಲಿ ಒಂದೊಳ್ಳೆ ಸ್ಥಾನ ಸಿಕ್ಕಿತ್ತು.

ಇದನ್ನೂ ಓದಿ: ಹುಟ್ಟುಹಬ್ಬಕ್ಕೆ ಒಂದು ದಿನ ಮುಂಚಿತವಾಗಿ ರಿಲೀಸ್ ಆಗಲಿದೆ ಸೂರ್ಯ ಅಭಿನಯದ 40ನೇ ಚಿತ್ರದ ಫಸ್ಟ್​ ಲುಕ್​

ಕನ್ನಡಿಗರಿಗೆ ಗಾಯಕಿಯಾಗಿ ಪರಿಚಯವಾದ ಮಂಗ್ಲಿ, ಈಗ ನಟಿಯಾಗಿ ಕನ್ನಡಿಗರ ಮುಂದೆ ಬರಲಿದದಾರೆ. ಮಂಗ್ಲಿ ಹ್ಯಾಟ್ರಿಕ್​ ಹೀರೋ ಶಿವರಾಜ್​ಕುಮಾರ್​ ಅವರ ಜತೆ  ನಟಿಸುತ್ತಿದ್ದಾರೆ. ಶಿವರಾಜ್​ಕುಮಾರ್​ ಅಭಿನಯದ 124ನೇ ಸಿನಿಮಾದಲ್ಲಿ ಮಂಗ್ಲಿ ನಟಿಸುತ್ತಿದ್ದಾರಂತೆ. ತೆಲುಗಿನ ನಿರ್ದೇಶಕರಾದ ರಾಮ್ ಧುಲಿಪುಡಿ ಅವರು ಮಾಡುತ್ತಿರುವ ಕನ್ನಡ ಸಿನಿಮಾದಲ್ಲಿ ಶಿವಣ್ಣನ ಎದುರು ಮಂಗ್ಲಿ ಅಭಿನಯಿಸುತ್ತಿದ್ದಾರಂತೆ. ಈ ಹಿಂದೆಯೇ ಲಂಬಾಣಿ ಸಿನಿಮಾದಲ್ಲಿ ನಟಿಸಿರು ಮಂಗ್ಲಿ ಅವರಿಗೆ ಅಭಿನಯದ ಅನುಭವವೂ ಇದೆ.
Published by:Anitha E
First published: