Roberrt: ಭಜರಂಗಿ ಅವತಾರದಲ್ಲಿ ಡಿ ಬಾಸ್: ಅಭಿಮಾನಿಗಳು ಫುಲ್ ಖುಷ್

Roberrt: ಚೌಕದಲ್ಲಿ ರಾಬರ್ಟ್​ ಲುಕ್​ನಲ್ಲಿ ವಿಶೇಷ ಪಾತ್ರದಲ್ಲಿ ಎಂಟ್ರಿಕೊಟ್ಟಿದ್ದ ದರ್ಶನ್ ಅಭಿಮಾನಿಗಳಿಗೆ ಮನರಂಜನೆಯ ರಸದೌತಣ ನೀಡಿದ್ದರು. ಕೆಲ ನಿಮಿಷಗಳ ಪಾತ್ರವಾಗಿದ್ದರೂ, ರಾಬರ್ಟ್​ನ ಖಡಕ್ ಡೈಲಾಗ್, ಫೈಟ್​ಗಳಿಗೆ ಚಿತ್ರಮಂದಿರದಲ್ಲಿ ಶಿಳ್ಳೆ ಚಪ್ಪಾಳೆಗಳ ಸುರಿಮಳೆಯಾಗಿತ್ತು.

zahir | news18-kannada
Updated:January 15, 2020, 2:33 PM IST
Roberrt: ಭಜರಂಗಿ ಅವತಾರದಲ್ಲಿ ಡಿ ಬಾಸ್: ಅಭಿಮಾನಿಗಳು ಫುಲ್ ಖುಷ್
Roberrt
  • Share this:
ಜಬರ್​ದಸ್ತ್ ಟೈಟಲ್ ಮೂಲಕವೇ ಅಭಿಮಾನಿಗಳ ಎದೆಯಲ್ಲಿ ಕಿಚ್ಚು ಹಚ್ಚಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್​ ಅವರ 'ರಾಬರ್ಟ್' ಚಿತ್ರದ​ ಎರಡನೇ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಈ ಹಿಂದೆ ಕ್ರಿಸ್ಮಸ್​ಗೆ ಭರ್ಜರಿ ಪೋಸ್ಟರ್ ಬಿಡುಗಡೆ ಮಾಡಿದ್ದ ರಾಬರ್ಟ್ ಚಿತ್ರತಂಡ ಸಂಕ್ರಾಂತಿ ಪ್ರಯುಕ್ತ ಎರಡನೇ ಪೋಸ್ಟರ್ ರಿಲೀಸ್ ಮಾಡುವುದಾಗಿ ತಿಳಿಸಿತ್ತು. ಅದರಂತೆ ಇಂದು ಬಿಡುಗಡೆಯಾಗಿರುವ ಪೋಸ್ಟರ್​ನಲ್ಲಿ ಚಾಲೆಂಜಿಂಗ್ ಸ್ಟಾರ್ ರಾಮ ಭಕ್ತ ಹನುಮನ ವೇಷದಲ್ಲಿ ದರ್ಶನ ನೀಡಿದ್ದಾರೆ. 

‬‪ಎಳ್ಳು ಬೆಲ್ಲ ಸವಿಯುತ್ತಾ ಹಬ್ಬದ ಸಂಭ್ರಮದಲ್ಲಿದ್ದ ದರ್ಶನ್ ಅಭಿಮಾನಿಗಳಿಗೆ ಹೊಸ ಅವತಾರ ಖುಷಿ ನೀಡಿದ್ದು, ರಾಬರ್ಟ್​ನ ಹೊಸ ಮೋಷನ್ ಪೋಸ್ಟರ್​ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

2018ರ ಕ್ರಿಸ್​ಮಸ್ ವೇಳೆ ಬಿಡುಗಡೆಯಾಗಿದ್ದ ಭಕ್ತಿ ಪ್ರಧಾನದ ಪೋಸ್ಟರ್​ನ್ನು ಹೋಲುವ ಈ ಮೋಷನ್ ಪೋಸ್ಟರ್​ನಲ್ಲಿ ನೃತ್ಯದ ಝಲಕ್​ಗಳನ್ನು ಬಳಸಲಾಗಿದೆ. ಬಣ್ಣದೋಕುಳಿಯಿಂದ ಕೂಡಿರುವ ರಾಬರ್ಟ್​ ಹೊಸ ಲುಕ್​ನ್ನು ಈಗಾಗಲೇ ಲಕ್ಷಕ್ಕೂ ಅಧಿಕ ಮಂದಿ ಯೂಟ್ಯೂಬ್​ನಲ್ಲಿ ವೀಕ್ಷಿಸಿದ್ದಾರೆ.

ಈ ಹಿಂದೆ  'ಈ ಕೈಗೆ ಶಬರಿ ಮುಂದೆ ಸೋಲೋದು ಗೊತ್ತು, ರಾವಣನ ಮುಂದೆ ಗೆಲ್ಲೋದು ಗೊತ್ತು' ಎನ್ನುವ ಪಂಚಿಂಗ್ ಲೈನ್‌ ಪೋಸ್ಟರ್ ನೋಡಿದ ಡಿ ಫ್ಯಾನ್ಸ್ ಇದೀಗ ಮತ್ತೊಮ್ಮೆ ರಾಬರ್ಟ್​ ಲುಕ್​ಗೆ ಫಿದಾ ಆಗಿದ್ದಾರೆ.

ಸದ್ಯ ರಾಬರ್ಟ್​ ಚಿತ್ರದ ಶೂಟಿಂಗ್ ಮುಕ್ತಾಯದ ಹಂತದಲ್ಲಿದ್ದು, ಎರಡು ಹಾಡುಗಳು ಮಾತ್ರ ಉಳಿದಿವೆ. 'ಚೌಕ' ಖ್ಯಾತಿಯ ನಿರ್ದೇಶಕ ತರುಣ್ ಸುಧೀರ್ ನಿರ್ದೇಶಿಸುತ್ತಿರುವ ಈ ಸಿನಿಮಾಗೆ ಉಮಾಪತಿಯವರು ಬಂಡವಾಳ ಹೂಡಿದ್ದಾರೆ.

'ಚೌಕ'ದಲ್ಲಿ ರಾಬರ್ಟ್​ ಲುಕ್​ನಲ್ಲಿ ವಿಶೇಷ ಪಾತ್ರದಲ್ಲಿ ಎಂಟ್ರಿಕೊಟ್ಟಿದ್ದ ದರ್ಶನ್ ಅಭಿಮಾನಿಗಳಿಗೆ ಮನರಂಜನೆಯ ರಸದೌತಣ ನೀಡಿದ್ದರು. ಕೆಲ ನಿಮಿಷಗಳ ಪಾತ್ರವಾಗಿದ್ದರೂ, 'ರಾಬರ್ಟ್'​ನ ಖಡಕ್ ಡೈಲಾಗ್, ಫೈಟ್​ಗಳಿಗೆ ಚಿತ್ರಮಂದಿರದಲ್ಲಿ ಶಿಳ್ಳೆ ಚಪ್ಪಾಳೆಗಳ ಸುರಿಮಳೆಯಾಗಿತ್ತು.

ಇದೀಗ ಅದೇ ಪಾತ್ರದಲ್ಲಿ ಡಿ ಬಾಸ್ ರಿ ಎಂಟ್ರಿ ಕೊಡುತ್ತಿರುವುದರಿಂದ ಚಿತ್ರದ ಮೇಲೆ ಭಾರೀ ನಿರೀಕ್ಷೆ ಮೂಡಿಸಿದೆ. ಹೀಗಾಗಿಯೇ ದರ್ಶನ್​ ಅವರ ಆಪ್ತರಲ್ಲಿ ಗುರುತಿಸಿಕೊಂಡಿರುವ ತರುಣ್ ಸುಧೀರ್ ಸಹ ಹಿಂದೆಂದೂ ಕಾಣದಂತಹ ರೀತಿಯಲ್ಲಿ ಡಿ ಬಾಸ್​ ಅನ್ನು ಅಭಿಮಾನಿಗಳ ಮುಂದಿಡಲು ಪಣ ತೊಟ್ಟಿದ್ದಾರೆ.
ಒಟ್ಟಿನಲ್ಲಿ 'ರಾಬರ್ಟ್'​​ನ ರಿ ಎಂಟ್ರಿಗೆ ಮುಹೂರ್ತ ಫಿಕ್ಸ್ ಆಗಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ಏಪ್ರಿಲ್ 9 ರಂದು ರಾಬರ್ಟ್ ಬಾಕ್ಸಾಫೀಸ್ ರುದ್ರನರ್ತನ ಶುರುವಾಗಲಿದೆ.
First published:January 15, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ