HOME » NEWS » Entertainment » ROBERRT PRODUCER UMAPATHY GOWDA GIFTED A CAR TO MADHAGAJA DIRECTOR MAHESH AE

ಮದಗಜ ನಿರ್ದೇಶಕರಿಗೆ ದುಬಾರಿ ಉಡುಗೊರೆ ಕೊಟ್ಟ ರಾಬರ್ಟ್ ನಿರ್ಮಾಪಕ ಉಮಾಪತಿ..!

ಉಮಾಪತಿ ಅವರು ಪ್ರೀತಿಯಿಂದ ನೀಡಿರುವ ಉಡುಗೊರೆ ಬಗ್ಗೆ ಮಹೇಶ್​ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಕಾರು ಹಾಗೂ ಅದನ್ನು ಕೊಟ್ಟ ನಿರ್ಮಾಪಕ ಉಮಾಪತಿ ಅವರೊಂದಿಗೆ ತೆಗೆಸಿಕೊಂಡಿರುವ ಫೋಟೋವನ್ನು ಶೇರ್ ಮಾಡಿದ್ದಾರೆ ಮಹೇಶ್​.

Anitha E | news18-kannada
Updated:March 25, 2021, 11:02 AM IST
ಮದಗಜ ನಿರ್ದೇಶಕರಿಗೆ ದುಬಾರಿ ಉಡುಗೊರೆ ಕೊಟ್ಟ ರಾಬರ್ಟ್ ನಿರ್ಮಾಪಕ ಉಮಾಪತಿ..!
ಹೊಸ ಕಾರಿನ ಜೊತೆ ಉಮಾಪತಿ ಹಾಗೂ ಮಹೇಶ್​
  • Share this:
ಶ್ರೀಮುರಳಿ ಅಭಿನಯದ ಬಹುನಿರೀಕ್ಷಿತ ಸಿನಿಮಾ ಮದಗಜ. ನಿರ್ದೇಶಕ ಮಹೇಶ್​ ಕುಮಾರ್ ಆ್ಯಕ್ಷನ್​ ಕಟ್​ ಹೇಳುತ್ತಿರುವ ಚಿತ್ರ ಇದಾಗಿದೆ. ಹಲವಾರು ಹಂತಗಳಲ್ಲಿ ಈ ಸಿನಿಮಾದ ಚಿತ್ರೀಕರಣ ನಡೆದಿದೆ. ಇನ್ನು ತಮ್ಮ ಸಿನಿಮಾದ ಚಿತ್ರೀಕರಣದ ನಡುವೆಯೂ ಮಹೇಶ್​ ಕುಮಾರ್ ರಾಬರ್ಟ್​ ಸಿನಿಮಾದ ಕೆಲಸಗಳಲ್ಲಿ ಭಾಗಿಯಾಗಿದ್ದರು. ಸಿನಿಮಾದ ಪ್ರಚಾರ ಕೆಲಸಗಳಿಂದ ಹಿಡಿದು ಸಿನಿಮಾ ರಿಲೀಸ್​ ಆಗುವವರೆಗೂ ಪ್ರತಿ ಹಂತದಲ್ಲೂ ಮಹೇಶ್​ ರಾಬರ್ಟ್​ ಚಿತ್ರತಂಡದೊಂದಿಗೆ ಇದ್ದರು. ಈ ಬಗ್ಗೆ ನಟ ದರ್ಶನ್​ ಅವರೇ ಈ ಹಿಂದೆ ರಾಬರ್ಟ್​ ಸಿನಿಮಾ ರಿಲೀಸ್ ಆಗುವ ಮುನ್ನ ಹೇಳಿಕೊಂಡಿದ್ದರು. ವಾಹಿನಿಯೊಂದಕ್ಕೆ ರಾಬರ್ಟ್ ಸಿನಿಮಾ ರಿಲೀಸ್ ಆಗುವ ಮುನ್ನ ನೀಡಿದ್ದ ಸಂದರ್ಶನದಲ್ಲಿ ನಿರ್ದೇಶಕ ಮಹೇಶ್​ ಅವರ ಬಗ್ಗೆ ಉಲ್ಲೇಖಿಸಿದ್ದರು. ಮದಜಗ ನಿರ್ದೇಶಕರು ರಾಬರ್ಟ್​ ಸಿನಿಮಾ ಕೆಲಸಗಳಲ್ಲಿ ಸ್ವಿಚ್ಛೆಯಿಂದ ಭಾಗಿಯಾಗುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದರು. 

ಮಹೇಶ್​ ಅವರ ನಿಸ್ವಾರ್ಥ ಕೆಲಸಕ್ಕೆ ಮನಸೋತ ರಾಬರ್ಟ್​ ಸಿನಿಮಾದ ನಿರ್ಮಾಪಕ ಉಮಾಪತಿ ಈಗ ಅವರಿಗೆ ದುಬಾರಿ ಉಡುಗೊರೆ ನೀಡಿದ್ದಾರೆ. ಹೌದು, ಮಹೇಶ್​ ಕುಮಾರ್​ ಅವರಿಗೆ ಉಮಾಪತಿ ಕಾರನ್ನು ಗಿಫ್ಟ್​ ಕೊಟ್ಟಿದ್ದಾರೆ.








ರಾಬರ್ಟ್​ ಸಿನಿಮಾಗೆ ಹಣ ಹೂಡಿರುವ ಉಮಾಪತಿ ಅವರೇ ಮದಗಜ ಸಿನಿಮಾಗೂ ಹಣ ಹಾಕಿದ್ದಾರೆ. ರಾಬರ್ಟ್​ ಸಿನಿಮಾ ರಿಲೀಸ್ ಆದ ಮೊದಲ ವಾರಕ್ಕೆ 70 ಕೋಟಿಗೂ ಅಧಿಕ ಗಳಿಕೆ ಮಾಡಿದ್ದು, ಊಹಿಸಿದ್ದಕ್ಕಿಂತಲೂ ದೊಡ್ಡ ಮಟ್ಟದಲ್ಲಿ ಹಿಟ್​ ಆಗಿದೆ. ಕನ್ನಡ ಹಾಗೂ ತೆಲುಗಿನಲ್ಲಿ ರಿಲೀಸ್​ ಆಗಿರುವ ರಾಬರ್ಟ್​ ಸಿನಿಮಾಗೆ ಲಾಕ್​ಡೌನ್​ ತೆರವುಗೊಂಡ ನಂತರ ಸಖತ್​ ಪ್ರತಿಕ್ರಿಯೆ ಸಿಗುತ್ತಿದೆ.






ರಾಬರ್ಟ್​ ಸಿನಿಮಾದ ಈ ಯಶಸ್ಸಿನ ನಂತರ ಚಿತ್ರತಂಡ ಬೆಂಗಳೂರಿನಲ್ಲಿ ಸಕ್ಸಸ್​ ಮೀಟ್​ ಆಯೋಜಿಸಿತ್ತು. ಈಗ ಸಿನಿಮಾ ಹಿಟ್​ ಆದ ಮೇಲೆ ರಾಜ್ಯದಲ್ಲಿ ವಿಜಯ ಯಾತ್ರೆ ಆಯೋಜಿಸಿದೆ.

#Roberrt ಚಿತ್ರಕ್ಕೆ ನೀವು ತೋರಿದ ಪ್ರೀತಿಗೆ , ಕೃತಜ್ಞತೆ ಹೇಳಲು ನಿಮ್ಮ್ ಊರಿಗೆ #DBoss ಹಾಗೂ #ರಾಬರ್ಟ್ ಚಿತ್ರತಂಡ ಬರುತಿದೆ. #Roberrt team will visit your city to salute u all for the love and support u showerd on us.



ಮಾ.29ರಿಂದ ಆರಂಭವಾಗುವ ವಿಜಯಯಾತ್ರೆ ಏ.1ರವರೆಗೆ ನಡೆಯಲಿದೆ. ಇನ್ನು ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಆರಂಭವಾಗಿದ್ದು, ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಈ ಕಾರಣದಿಂದಾಗಿ ವಿಜಯಯಾತ್ರೆಯ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಅನ್ನೋದನ್ನು ಕಾದು ನೋಡಬೇಕಿದೆ.
Published by: Anitha E
First published: March 25, 2021, 11:02 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories