Roberrt Poster: ರಾಬರ್ಟ್​ ಚಿತ್ರ ತಂಡದಿಂದ ರಂಜಾನ್​ ಉಡುಗೊರೆ; ಹೊಸ ಪೋಸ್ಟರ್​​​ ಇಂದು ಬಿಡುಗಡೆ

Ramadan 2020: ರಾಮನವಮಿ ಪ್ರಯುಕ್ತ ‘ರಾಬರ್ಟ್‘​ ಚಿತ್ರತಂಡ ‘ಜೈ ಶ್ರೀರಾಮ್​​ ‘ಹಾಡಿನ ಹೊಸ ವರ್ಷನ್​ ಬಿಡುಗಡೆ ಮಾಡಿದ್ದರು. ಇದೀಗ ರಂಜಾನ್​ ಹಬ್ಬದ ಪ್ರಯುಕ್ತ ಹೊಸ ಪೋಸ್ಟರ್​ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. 11. 5ಕ್ಕೆ ವಿಶೇಷ ಪೋಸ್ಟರ್​ ಬಿಡುಗಡೆ ಮಾಡುವ ‘ರಾಬರ್ಟ್‘​ ಚಿತ್ರತಂಡ  ರಂಜಾನ್​ ಹಬ್ಬಕ್ಕೆ ಶುಭಾಶಯ ಕೋರಲಿದೆ.

news18-kannada
Updated:May 25, 2020, 7:08 AM IST
Roberrt Poster: ರಾಬರ್ಟ್​ ಚಿತ್ರ ತಂಡದಿಂದ ರಂಜಾನ್​ ಉಡುಗೊರೆ; ಹೊಸ ಪೋಸ್ಟರ್​​​ ಇಂದು ಬಿಡುಗಡೆ
ರಾಬರ್ಟ್​.
  • Share this:
ಚಾಲೆಂಜಿಂಗ್​​ ಸ್ಟಾರ್​ ದರ್ಶನ್​ ಅಭಿನಯದ ‘ರಾಬರ್ಟ್‘​ ಚಿತ್ರತಂಡ ರಂಜಾನ್​ ಹಬ್ಬಕ್ಕೆ ಭರ್ಜರಿ ಉಡುಗೊರೆ ನೀಡಲು ಸಿದ್ಧವಾಗಿದೆ. ಚಿತ್ರದ ವಿಶೇಷ ಪೋಸ್ಟರ್​ ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಲಿದೆ.  ರಾಮನವಮಿ ಪ್ರಯುಕ್ತ ‘ರಾಬರ್ಟ್‘​ ಚಿತ್ರತಂಡ ‘ಜೈ ಶ್ರೀರಾಮ್​​ ‘ಹಾಡಿನ ಹೊಸ ವರ್ಷನ್​ ಬಿಡುಗಡೆ ಮಾಡಿದ್ದರು. ಇದೀಗ ರಂಜಾನ್​ ಹಬ್ಬದ ಪ್ರಯುಕ್ತ ಹೊಸ ಪೋಸ್ಟರ್​ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. 11.05ಕ್ಕೆ ವಿಶೇಷ ಪೋಸ್ಟರ್​ ಬಿಡುಗಡೆ ಮಾಡುವ ‘ರಾಬರ್ಟ್‘​ ಚಿತ್ರತಂಡ  ರಂಜಾನ್​ ಹಬ್ಬಕ್ಕೆ ಶುಭಾಶಯ ಕೋರಲಿದೆ.

‘ರಾಬರ್ಟ್‘​ ಚಿತ್ರದ ನಿರ್ದೇಶಕ ತರುಣ್​ ಸುಧೀರ್​​ ಮೇ 22 ರಂದು ಟ್ವೀಟ್​ ಮಾಡಿದ್ದು,  ರಂಜಾನ್​ ಹಬ್ಬಕ್ಕೆ ‘ರಾಬರ್ಟ್‘​ ಚಿತ್ರದ ಹೊಸ ಪೋಸ್ಟರ್​ ಮೂಲಕ ಆಗಮಿಸಲು ರೆಡಿಯಾಗಿದೆ ಎಂದು​ ಹೇಳಿದ್ದರು. ಅಭಿಮಾನಿಗಳು ಕೂಡ ಹೊಸ ಪೋಸ್ಟರ್​ ನೋಡಲು ಕಾದು ಕುಳಿತ್ತಿದ್ದಾರೆ.

 


ಏ.9ಕ್ಕೆ ‘ರಾಬರ್ಟ್‘​ ಚಿತ್ರ ಬಿಡುಗಡೆಯಾಗಿ ಧೂಳೆಬ್ಬಿಸಬೇಕಾಗಿತ್ತು. ಆದರೆ ಕೊರೋನಾ ಲಾಕ್​ಡೌನ್​ನಿಂದಾಗಿ ಚಿತ್ರತಂಡ ಹಾಕಿಕೊಂಡ ಯೋಜನೆ ಉಲ್ಟಾ-ಪಲ್ಟಾ ಆಗಿದೆ. ಹಾಗಾಗಿ ಚಿತ್ರದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ. ಲಾಕ್​ಡೌನ್​ ಮುಗಿದ ನಂತರ ‘ರಾಬರ್ಟ್‘​ ತೆರೆ ಮೇಲೆ ಬಿಡುಗಡೆ ಮಾಡಲು ತರುಣ್​ ಸುಧೀರ್​ ನಿರ್ಧರಿಸಿದ್ದಾರೆ.

PUBG: ಟೀಂ ಇಂಡಿಯಾ ಸ್ಟಾರ್​​ ಆಟಗಾರರ ಜೊತೆ ಪಬ್​ಜಿ ಆಡುವ ಸುವರ್ಣವಕಾಶ; ಅತ್ಯುತ್ತಮ ಪ್ಲೇಯರ್​​ಗೆ ಒನ್ ಪ್ಲಸ್ ಮೊಬೈಲ್
First published: May 25, 2020, 7:08 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading