D Boss Darshan: ದರ್ಶನ್​ ಎಂದರೆ ಧೈರ್ಯ, ಡಿ-ಬಾಸ್​ ಎಂದರೆ ಧಮ್​; ಹೀಗೆ ಹೇಳಿದ ನಟ ಯಾರು ಗೊತ್ತಾ?

ಶಿವರಾಜ್​ ಕೆಆರ್​ ಪೇಟೆ ನಟನೆಯ ‘ನಾನು ಮತ್ತು ಗುಂಡ’ ಸಿನಿಮಾ ಶುಕ್ರವಾರ ತೆರೆಗೆ ಬರುತ್ತಿದೆ. ನ್ಯೂಸ್​18 ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಅವರು ದರ್ಶನ್​ ಬಗ್ಗೆ ಮಾತನಾಡಿದ್ದಾರೆ.

Rajesh Duggumane | news18-kannada
Updated:January 23, 2020, 1:25 PM IST
D Boss Darshan: ದರ್ಶನ್​ ಎಂದರೆ ಧೈರ್ಯ, ಡಿ-ಬಾಸ್​ ಎಂದರೆ ಧಮ್​; ಹೀಗೆ ಹೇಳಿದ ನಟ ಯಾರು ಗೊತ್ತಾ?
ದರ್ಶನ್​
  • Share this:
ಚಾಲೆಂಜಿಂಗ್​ ಸ್ಟಾರ್​ ದರ್ಶನ್​ಗೆ ದರ್ಶನ್​ಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ವಿಶೇಷ ಎಂದರೆ ಕನ್ನಡ ಚಿತ್ರರಂಗದ ಅನೇಕ ಕಲಾವಿದರು ಕೂಡ ಅವರ ಬಿಗ್​ ಫ್ಯಾನ್​. ಅಷ್ಟು ಎತ್ತರಕ್ಕೆ ಬೆಳೆದರೂ ದರ್ಶನ್​ ಎಂದಿಗೂ ಬೀಗಿಲ್ಲ. ಈ ಕಾರಣಕ್ಕೆ ಡಿ ಬಾಸ್​ ಎಲ್ಲರಿಗೂ ಇಷ್ಟವಾಗುತ್ತಾರೆ. ಈ ಬಗ್ಗೆ ನಟ ಶಿವರಾಜ್​ ಕೆಆರ್ ಪೇಟೆ ಮಾತನಾಡಿದ್ದಾರೆ.

ಶಿವರಾಜ್​ ಕೆಆರ್​ ಪೇಟೆ ನಟನೆಯ ‘ನಾನು ಮತ್ತು ಗುಂಡ’ ಸಿನಿಮಾ ಶುಕ್ರವಾರ ತೆರೆಗೆ ಬರುತ್ತಿದೆ. ನ್ಯೂಸ್​18 ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಅವರು ದರ್ಶನ್​ ಬಗ್ಗೆ ಮಾತನಾಡಿದ್ದಾರೆ. “ಜೀವನದಲ್ಲಿ ಪ್ರತಿಯೊಬ್ಬರಿಗೂ ಒಂದು ವ್ಯಕ್ತಿಯನ್ನು ನೋಡಬೇಕು ಎಂದಿರುತ್ತದೆ. ನಾನು ದರ್ಶನ್​ ಅವರನ್ನು ಕಣ್ತುಂಬಿಕೊಳ್ಳಬೇಕು ಎಂದುಕೊಂಡಿದ್ದೆ. ಈಗ ದರ್ಶನ್​ ಜೊತೆ ‘ರಾಬರ್ಟ್’​ ಸಿನಿಮಾದಲ್ಲಿ ಆ್ಯಕ್ಟ್​ ಮಾಡಿದ್ದೇನೆ. ಇಂಥ ಅವಕಾಶ ನೀಡಿದ ನಿರ್ದೇಶಕ ತರುಣ್​ ಸುಧೀರ್​ಗೆ ಥ್ಯಾಂಕ್ಸ್​,” ಎಂದರು ಅವರು.ದರ್ಶನ್​ ದೇವರ ಸಮಾನ ಎಂದ ಶಿವರಾಜ್​ ಕೆಆರ್​ ಪೇಟೆ, “ಸಿನಿಮಾ ಶೂಟಿಂಗ್​ಗೆ ವಾರಾಣಿಸಿಗೆ ಹೋಗುವಾಗ ತುಂಬಾನೇ ಖುಷಿ ಆಗಿತ್ತು. ದೇವರ ಸನ್ನಿಧಿಯಲ್ಲಿ ದೇವರ ಜೊತೆ ಆ್ಯಕ್ಟ್​ ಮಾಡುತ್ತಿದ್ದೇನೆ ಅಂದುಕೊಂಡೆ. ಡಿ ಎಂದರೆ ದಾನ, ಧರ್ಮ, ಧೈರ್ಯ, ಧಮ್​ ಹೀಗೆ ಎಲ್ಲವೂ. ಅದಕ್ಕೆ ಅವರು ಡಿ ಬಾಸ್​,” ಎಂದರು.

ಶ್ರೀನಿವಾಸ್​ ತಿಮ್ಮಯ್ಯ ನಿರ್ದೇಶನದ 'ನಾನು ಮತ್ತು ಗುಂಡ' ಚಿತ್ರಕ್ಕೆ ಶಿವರಾಜ್​ ಕೆಆರ್ ಪೇಟೆ ನಾಯಕ. ಗೋವಿಂದೇ ಗೌಡ, ಸಂಯುಕ್ತ ಹೊರನಾಡು ಮುಖ್ಯಭೂಮಿಕೆಯಲ್ಲಿದ್ದಾರೆ. ಈ ಚಿತ್ರ ಜನವರಿ 24ರಂದು ತೆರೆಗೆ ಬರುತ್ತಿದೆ.

First published:January 23, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ