ದಾಸನ ಅಭಿಮಾನಿಗಳ ಕಾತುರತೆಗೆ ಜಸ್ಟ್​ ಬ್ರೇಕ್ ನೀಡಿದ ರಾಬರ್ಟ್​

Darshan: ಈ ಹಿಂದೆ ಎಲ್ಲಾ ಹಬ್ಬದ ಸಂದರ್ಭದಲ್ಲೂ ಡಿ ಬಾಸ್ ಅಭಿಮಾನಿಗಳಿಗೆ ರಾಬರ್ಟ್​ ತಂಡ ಪೋಸ್ಟರ್​ಗಳೊಂದಿಗೆ ಸರ್​ಪ್ರೈಸ್ ನೀಡಿತ್ತು. ಆದರೆ ಈ ಬಾರಿ ಗಣೇಶ ಹಬ್ಬದ ಪ್ರಯುಕ್ತ ಬಿಗ್ ಗಿಫ್ಟ್​ಗಾಗಿ ದಾಸನ ಅಭಿಮಾನಿಗಳು ಕಾಯುತ್ತಿದ್ದರು.

zahir | news18-kannada
Updated:September 2, 2019, 4:24 PM IST
ದಾಸನ ಅಭಿಮಾನಿಗಳ ಕಾತುರತೆಗೆ ಜಸ್ಟ್​ ಬ್ರೇಕ್ ನೀಡಿದ ರಾಬರ್ಟ್​
ರಾಬರ್ಟ್​
  • Share this:
ಸ್ಯಾಂಡಲ್​ವುಡ್​ನಲ್ಲಿ ಸೆಟ್ಟೇರಿದಾಗಲಿಂದಲೇ ಸಖತ್ ಸೌಂಡ್ ಮಾಡುತ್ತಿರುವ 'ರಾಬರ್ಟ್' ಈಗ ತಣ್ಣಗಾಗಿದ್ದಾನೆ. ಇದಕ್ಕೆ ಕಾರಣವನ್ನೂ ಚಿತ್ರ ನಿರ್ದೇಶಕ ತರುಣ್ ಸುಧೀರ್ ಬಿಚ್ಚಿಟ್ಟಿದ್ದಾರೆ. ಸದ್ಯ ಬಾಕ್ಸಾಫೀಸ್​ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ದುರ್ಯೋಧನನಾಗಿ ಅಬ್ಬರಿಸುತ್ತಿದ್ದಾರೆ. 'ಕುರುಕ್ಷೇತ್ರ' ಕಲೆಕ್ಷನ್ ಮುಗಿಲೆತ್ತರಕ್ಕೆ ಏರುತ್ತಿರುವಾಗಲೇ ಗಲ್ಲಾಪೆಟ್ಟಿಗೆಯಲ್ಲಿ ಆಳಲು 'ಒಡೆಯ' ಕೂಡ ಎಂಟ್ರಿ ಕೊಡುತ್ತಿದ್ದಾರೆ. ಹೀಗಾಗಿ ರಾಬರ್ಟ್​ ಎಂಟ್ರಿಯನ್ನು ತುಸು ತಡಮಾಡಲು ಚಿತ್ರತಂಡ ನಿರ್ಧರಿಸಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ನಿರ್ದೇಶಕ ತರುಣ್ ಸುಧೀರ್, 'ರಾಬರ್ಟ್​' ಅಪ್​ಡೇಟ್​ಗಳಿಗಾಗಿ ಕಾಯುತ್ತಿರುವ ಅಭಿಮಾನಿಗಳು ಕ್ಷಮಿಸಬೇಕು. ಈಗಾಗಲೇ ಡಿ ಬಾಸ್ ಅಭಿನಯದ 'ಕುರುಕ್ಷೇತ್ರ' ಚಿತ್ರವು ಉತ್ತಮವಾಗಿ ಪ್ರದರ್ಶನವಾಗುತ್ತಿದೆ. ಇದರ ಬೆನ್ನಲ್ಲೇ 'ಒಡೆಯ' ಕೂಡ ರಿಲೀಸ್ ಆಗಲಿದೆ. ಹೀಗಾಗಿ 'ರಾಬರ್ಟ್'​ ಚಿತ್ರವನ್ನು ಕೆಲ ದಿನಗಳ ಕಾಲ ನಿಲ್ಲಿಸುವುದಾಗಿ ತಿಳಿಸುತ್ತೇವೆ. ಹಾಗೆಯೇ ಕೆಲವೇ ದಿನಗಳಲ್ಲಿ ದೊಡ್ಡ ಸುದ್ದಿಯೊಂದಿಗೆ ಮರಳುತ್ತೇವೆ ಎಂದು ಹೇಳಿದ್ದಾರೆ.

ತರುಣ್ ಸುಧೀರ್ ಇಂತಹದೊಂದು ಟ್ವೀಟ್ ಮಾಡಲು ಮತ್ತೊಂದು ಕಾರಣ ಕೂಡ ಇದೆ. ಏಕೆಂದರೆ ಈ ಹಿಂದೆ ಎಲ್ಲಾ ಹಬ್ಬದ ಸಂದರ್ಭದಲ್ಲೂ ಡಿ ಬಾಸ್ ಅಭಿಮಾನಿಗಳಿಗೆ 'ರಾಬರ್ಟ್'​ ತಂಡ ಪೋಸ್ಟರ್​ಗಳೊಂದಿಗೆ ಸರ್​ಪ್ರೈಸ್ ನೀಡಿತ್ತು. ಆದರೆ ಈ ಬಾರಿ ಗಣೇಶ ಹಬ್ಬ ಪ್ರಯುಕ್ತ ಬಿಗ್ ಗಿಫ್ಟ್​ಗಾಗಿ ದಾಸನ ಅಭಿಮಾನಿಗಳು ಕಾಯುತ್ತಿದ್ದರು. ಇದಕ್ಕೆ ಸ್ಪಷ್ಟನೆ ನೀಡುವ ಉದ್ದೇಶದಿಂದ 'ರಾಬರ್ಟ್'​ ತಂಡ ಈ ಅಪ್​ಡೇಟ್ ನೀಡಿದೆ ಎನ್ನಲಾಗಿದೆ.

ಒಟ್ಟಿನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್​ ಅವರ 'ರಾಬರ್ಟ್'​​ ರೌದ್ರವತಾರವನ್ನು ವೀಕ್ಷಿಸಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದು, ಚಿತ್ರವು ಡಿಸೆಂಬರ್ ವೇಳೆಗೆ ತೆರೆಗಪ್ಪಳಿಸುವ ಸಾಧ್ಯತೆಯಿದೆ. ಏಕೆಂದರೆ ಈಗಾಗಲೇ ಒಂದು ಹಂತದ ಶೂಟಿಂಗ್ ಮುಗಿಸಿರುವ ಚಿತ್ರತಂಡ ಸೆಪ್ಟೆಂಬರ್​ನಲ್ಲಿ 2ನೇ ಹಂತದ ಚಿತ್ರೀಕರಣ ಶುರು ಮಾಡಲು ಪ್ಲ್ಯಾನ್ ಮಾಡಿಕೊಂಡಿದೆ. ಇದೇ ವೇಳೆ ದರ್ಶನ್ ಸಹ ಕೀನ್ಯಾ ಪ್ರವಾಸಕ್ಕೆ ತೆರಳಲಿದ್ದಾರೆ ಎನ್ನಲಾಗಿದೆ. ಹೀಗಾಗಿ 'ರಾಬರ್ಟ್'​ ನವೆಂಬರ್ ವೇಳೆ ಶೂಟಿಂಗ್ ಕಂಪ್ಲೀಟ್ ಮಾಡಿ, ಡಿಸೆಂಬರ್ ವೇಳೆಗೆ ಪ್ರತ್ಯಕ್ಷರಾಗುವ ಸಾಧ್ಯತೆಯಿದೆ.


 
First published:September 2, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ