Roberrt movie: ಎಲ್ಲೆಲ್ಲೂ ರಾಬರ್ಟ್​​ ಹವಾ: ಡಿ ಬಾಸ್​ ಅಭಿಮಾನಿಗಳಿಗೀಗ​ ಟ್ಯಾಟೂ ಕ್ರೇಜ್..!

ಹಾಗೆಯೇ ಸಂಗೊಳ್ಳಿ ರಾಯಣ್ಣ ಚಿತ್ರ ಬಿಡುಗಡೆ ವೇಳೆ ಸಹ ಅಭಿಮಾನಿಯೊಬ್ಬರು ಚಾಲೆಂಜಿಂಗ್ ಸ್ಟಾರ್​ ಚಿತ್ರವನ್ನು ಟ್ಯಾಟೂ ಹಾಕಿಸಿಕೊಂಡಿದ್ದರು. ಇಷ್ಟೇ ಅಲ್ಲದೆ ದಾಸನ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಟ್ಯಾಟೂ ಚಿತ್ರಕ್ಕಾಗಿ ದೇಹ ಒಂದು ಭಾಗವನ್ನು ಮೀಸರಿಸಿದ್ದಾರೆ.

zahir | news18
Updated:June 18, 2019, 2:59 PM IST
Roberrt movie: ಎಲ್ಲೆಲ್ಲೂ ರಾಬರ್ಟ್​​ ಹವಾ: ಡಿ ಬಾಸ್​ ಅಭಿಮಾನಿಗಳಿಗೀಗ​ ಟ್ಯಾಟೂ ಕ್ರೇಜ್..!
Darshans Roberrt
zahir | news18
Updated: June 18, 2019, 2:59 PM IST
ಸ್ಯಾಂಡಲ್​ವುಡ್​ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಅವರಿಗೆ ಬಹುದೊಡ್ಡ ಅಭಿಮಾನಿ ಬಳಗವೇ ಇದೆ. 'ದಾಸ' ನಿಂತರೂ ಕೂತರೂ ಅನುಕರಿಸುವ ಪಟಾಲಂ ಕೂಡ ಈ ಬಳಗದಲ್ಲಿರುವುದು ಅನೇಕ ಬಾರಿ ಜಗ್ಗಜ್ಜಾಹೀರಾಗಿದೆ. ಅಂತಹದದೊಂದು ಫ್ಯಾನ್ಸ್ ಪಡೆ ಈಗ 'ರಾಬರ್ಟ್' ಹಿಂದೆ ಬಿದ್ದಿದ್ದಾರೆ.

ಬಾಕ್ಸಾಫೀಸ್ ಸುಲ್ತಾನ್ ಇನ್ನು ರಾಬರ್ಟ್​ ಅಡ್ಡಾದಲ್ಲಿದ್ದಾರೆ. ಅದಾಗಲೇ ದರ್ಶನ್ ಅಭಿಮಾನಿಗಳು 'ರಾಬರ್ಟ್'​ ಸಂಭ್ರಮವನ್ನು ವಿಭಿನ್ನವಾಗಿ ಆರಂಭಿಸಿದ್ದಾರೆ. ಹೌದು, ಸೆಟ್ಟೇರಿದಾಗಲೇ ಸಖತ್ ಸದ್ದು ಮಾಡುತ್ತಿರುವ 'ರಾಬರ್ಟ್' ಚಿತ್ರದ ಟೈಟಲ್​ ಟ್ಯಾಟೂಗಳ ಮೊರೆ ಹೋಗುತ್ತಿದ್ದಾರೆ ಕರುನಾಡ ಕುಲದೀಪ ತೂಗುದೀಪ ಅಭಿಮಾನಿಗಳು.



'ರಾಬರ್ಟ್'​ ಚಿತ್ರದ ಶೀರ್ಷಿಕೆಯ ಡಿಸೈನ್​ನನ್ನು ಒಂದಷ್ಟು ಅಭಿಮಾನಿಗಳು ಹಚ್ಚೆ ಹಾಕಿಸಿಕೊಂಡಿದ್ದಾರೆ. ಈ ಮೂಲಕ ರಾಬರ್ಟ್​ ರೌದ್ರವತಾರಕ್ಕೆ ವಿಶೇಷ ಪ್ರಚಾರ ನೀಡಲು ಆರಂಭಿಸಿದ್ದಾರೆ. ಈ ಟ್ಯಾಟೂ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬಿಡುಗಡೆಗೆ ಮುನ್ನವೇ 'ರಾಬರ್ಟ್'​ ಕ್ರೇಜ್​ ನೋಡಿ ಇತರರು ಉಘೇ ಉಘೇ ಅನ್ನುತ್ತಿದ್ದಾರೆ.



ಕ್ರೇಜ್ ಕಾ ಬಾಪ್ ಚಾಲೆಂಜಿಂಗ್ ಸ್ಟಾರ್:
Loading...

ಈ ಹಿಂದೆ ಕೂಡ ಕರುನಾಡ ಕುಲದೀಪ ದರ್ಶನ್​ ತೂಗುದೀಪ ಅಭಿಮಾನಿ ಸಂಘದ ಅಧ್ಯಕ್ಷ ಆನಂದ ರಾಮ್ ಎಂಬವರು ತಮ್ಮ ಮೈಮೇಲೆ ಹಚ್ಚೆ ಹಾಕಿಸಿಕೊಂಡಿದ್ದರು. ​ ಬೆನ್ನ ಮೇಲೆ ಬರೋಬ್ಬರಿ 1.5 ಅಡಿ​ ಉದ್ದ 1.5 ಫೀಟ್​ ಅಗಲ ಅಳತೆಯ ದರ್ಶನ್‌ ಚಿತ್ರವನ್ನ ಟ್ಯಾಟೂ ಹಚ್ಚಾಗಿಸಿದ್ದರು. 'ಯಜಮಾನ'ನ ಟೈಟಲ್​ನೊಂದಿಗೆ ಬೀಡಿ ಸೇದುತ್ತಿರೋ ದರ್ಶನ್‌ನ ಫೋಟೋ ಬೆನ್ನ ಮೇಲೆ ಅರಳಿಸಿ ಆನಂದ್ ಚಾಲೆಂಜಿಂಗ್ ಸ್ಟಾರ್​ಗೆ ಹುಟ್ಟುಹಬ್ಬದ ಸ್ಪೆಷಲ್ ಗಿಫ್ಟ್ ನೀಡಿದ್ದರು.



ಹಾಗೆಯೇ 'ಸಂಗೊಳ್ಳಿ ರಾಯಣ್ಣ' ಚಿತ್ರ ಬಿಡುಗಡೆ ವೇಳೆ ಸಹ ಅಭಿಮಾನಿಯೊಬ್ಬರು ಚಾಲೆಂಜಿಂಗ್ ಸ್ಟಾರ್​ ಚಿತ್ರವನ್ನು ಟ್ಯಾಟೂ ಹಾಕಿಸಿಕೊಂಡಿದ್ದರು. ಇಷ್ಟೇ ಅಲ್ಲದೆ ದಾಸನ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಟ್ಯಾಟೂ ಚಿತ್ರಕ್ಕಾಗಿ ದೇಹ ಒಂದು ಭಾಗವನ್ನು ಮೀಸರಿಸಿದ್ದಾರೆ.



ಕಾರು ಬೈಕುಗಳಲ್ಲೂ ರಾಬರ್ಟ್​:

ಇಷ್ಟೇ ಅಲ್ಲದೆ ಕಾರು ಬೈಕುಗಳ ಮೇಲೂ ರಾಬರ್ಟ್​ ಸ್ಟಿಕ್ಕರುಗಳು ರಾರಜಿಸಲಾರಂಭಿಸಿದೆ. ಈಗಾಗಲೇ ಅನೇಕರು ದರ್ಶನ್​ ಅವರ 53ನೇ ಚಿತ್ರದ ಟೈಟಲ್ ಮತ್ತು ಬೈಕುಗಳ ಸ್ಟಿಕ್ಕರನ್ನು ತಮ್ಮ ವಾಹನಗಳ ಮೇಲೆ ಅಂಟಿಸಿಕೊಂಡಿದ್ದಾರೆ. ಅದೇ ರೀತಿ ರಾಬರ್ಟ್​ ಬೈಕ್ ಮಾಡೆಲ್​ನ ಮೊಡಿಫಿಕೇಶನ್​ಗಳ ಮೊರೆ ಹೋಗುತ್ತಿದ್ದಾರೆ.





First published:June 17, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...