ರಾಬರ್ಟ್ನಿಂದ ರಾಘವನವರೆಗಿನ ಜರ್ನಿ..... ಅಭಿಮಾನಿಗಳನ್ನು ಚಿತ್ರಮಂದಿರದತ್ತ ಕರೆ ತರುವಲ್ಲಿ ಯಶಸ್ವಿಯಾಗುತ್ತಿದೆ. ಒಂದೂವರೆ ವರ್ಷದಿಂದ ರಾಬರ್ಟ್ಗಾಗಿ ಕಾದು ಕುಳಿತಿದ್ದ ದರ್ಶನ್ ಅವರ ಸೆಲೆಬ್ರಿಟಿಗಳಿಗೆ ನಿಜಕ್ಕೂ ಶಿವರಾತ್ರಿ ಹಬ್ಬದಂದು ಭರ್ಜರಿ ಉಡುಗೊರೆ ಸಿಕ್ಕಿದೆ. ಇನ್ನು ಚಿತ್ರಮಂದಿರದಲ್ಲಿ ರಾಬರ್ಟ್ ಎಂಟ್ರಿಗಾಗಿ ಕಾದು ಕುಳಿತ ಅಭಿಮಾನಿಗಳು ದರ್ಶನ್ ಎಂಟ್ರಿ ಕಂಡ ಕೂಡಲೇ ಹುಚ್ಚೆದ್ದು ಕುಣಿಯುತ್ತಿದ್ದಾರೆ. ನಿನ್ನೆ ಬೆಳಗಿನ ಮೊದಲ ಶೋ ಹಾಗೂ ಸಂಜೆಯ ಬಹುತೇಕ ಶೋಗಳು ಹೌಸ್ ಫುಲ್ ಆಗಿದ್ದವು. ಇನ್ನು ವೀಕೆಂಡ್ನಲ್ಲೂ ರಾಬರ್ಟ್ ಅಬ್ಬರ ಮುಂದುವರೆಯಲಿದೆ. ಈ ಸಿನಿಮಾಗೆ ಈಗಾಗಲೇ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಬಾಕ್ಸಾಫಿಸ್ನಲ್ಲಿ ದರ್ಶನ್ ಓಡುವ ಕುದುರೆ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ಕನ್ನಡ ಹಾಗೂ ತೆಲುಗಿನ ತೆರೆಕಂಡಿರುವ ರಾಬರ್ಟ್ಗೆ ಟಾಲಿವುಡ್ನಲ್ಲೂ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ ಎನ್ನಲಾಗುತ್ತಿದೆ.
ದೊಡ್ಡ ಮಟ್ಟದಲ್ಲಿ ನಿರೀಕ್ಷೆಯೊಂದಿಗೆ ತೆರೆ ಕಂಡಿರುವ ರಾಬರ್ಟ್ ಸಿನಿಮಾದ ಮೊದಲ ದಿನದ ಕಲೆಕ್ಷನ್ ಲೆಕ್ಕಾಚಾರ ಆರಂಭವಾಗಿದೆ. ಸದ್ಯಕ್ಕೆ ಲಭ್ಯವಾಗಿರುವ ಮಾಹಿತಿಗಳ ಪ್ರಕಾರ ರಾಬರ್ಟ್ ಮೊದಲ ದಿನವೇ ಕೋಟಿ ಕೋಟಿ ಬಾಚಿಕೊಂಡಿದೆಯಂತೆ.
Roberrt first day collection Box office report💪*
👉17.24crore(kannada version
👉3.12 crore (telugu version)
Total 20.36 crore collection 🔥🔥🔥*
All time record in kannada industry
Follow Us ❤️ @OnlineDarshanFC#Roberrt | #DBoss | @dasadarshan
— 𝐎𝐧𝐥𝐢𝐧𝐞 𝐃𝐚𝐫𝐬𝐡𝐚𝐧 𝐅𝐂_ ᴿ⁰ᵇᴱʳʳᵗ ™ (@OnlineDarshanFC) March 12, 2021
All Time Day 1 Massive Record In Sandalwood
Roberrt Collects 17.24 Cr In Kannada
Andra And Telangana First Day Collection - 3.12 Cr#Dboss #Roberrt #RoberrtManiaBegins pic.twitter.com/HQ7117ihS0
— ROBERRT FILM🚩 (@Roberrt_Film) March 12, 2021
ಸದ್ಯಕ್ಕೆ ಲಭ್ಯವಾಗಿರುವ ಮಾಹಿತಿಗಳ ಪ್ರಕಾರ ಈಗ ಸಿಕ್ಕಿರುವ ಲೆಕ್ಕ ಕೇವಲ ಆನ್ಲೈನ್ ಬುಕ್ಕಿಂಗ್ನದ್ದು ಎನ್ನಲಾಗುತ್ತಿದೆ. ಇನ್ನು ಚಿತ್ರಮಂದಿರಗಳ ಬಳಿ ಮಾರಾಟವಾಗಿರುವ ಟಿಕೆಟ್ಗಳ ಲೆಕ್ಕವೇ ಬೇರೆ ಇದೆಯಂತೆ. ಇನ್ನು ವಾರಾಂತ್ಯ ಆರಂಭವಾಗಿದ್ದು, ಶನಿವಾರ ಹಾಗೂ ಭಾನುವಾರ ಸಹ ಜನ ಸಿನಿಮಾ ನೋಡಲು ಬರಲಿದ್ದಾರೆ ಅನ್ನೋ ನಿರೀಕ್ಷೆ ಇದೆ. ಇದರಿಂದಾಗಿ ವಾರಾಂತ್ಯದಲ್ಲಿ ರಾಬರ್ಟ್ ಕಲೆಕ್ಷನ್ ವಿಷಯದಲ್ಲಿ ಹೊಸ ದಾಖಲೆ ಬರೆಯುವ ಸಾಧ್ಯತೆ.
ಇದನ್ನೂ ಓದಿ: ಆದಿಪುರುಷ್ ಕುರಿತಾಗಿ ಹೊಸ ಅಪ್ಡೇಟ್ ಕೊಟ್ಟ ಪ್ರಭಾಸ್: ಸೀತೆ-ಲಕ್ಷ್ಮಣನನ್ನು ಪರಿಚಯಿಸಿದ ರಾಮ
ತರುಣ್ ಸುಧೀರ್ ನಿರ್ದೇಶನ ಹಾಗೂ ಇಡೀ ಚಿತ್ರತಂಡದ ಶ್ರಮಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಲಾಕ್ಡೌನ್ ನಂತರ ಬಾ ಬಾ ನಾಡು ರೆಡಿ ಎಂದಿದ್ದ ದರ್ಶನ್ಗೆ ಈಗ ದಾರಿ ಬಿಡಿ ರಾಬರ್ಟ್ ಬಂದ ಎನ್ನುತ್ತಿದ್ದಾರೆ ಪ್ರೇಕ್ಷಕರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ