HOME » NEWS » Entertainment » ROBERRT FAME ACTOR DARSHAN APOLOGIES TO JAGEESH ON BEHALF OF HIS FANS AE

Darshan: ಸೆಲೆಬ್ರಿಟಿ ಅಭಿಮಾನಿಗಳ ಪರವಾಗಿ ಜಗ್ಗೇಶ್​ ಕ್ಷಮೆ ಯಾಚಿಸಿದ ದರ್ಶನ್​

ಜಗ್ಗೇಶ್​ ಅವರು ನಮ್ಮ ಸೀನಿಯರ್​. ಅವರಲ್ಲದೆ ಬೇರೆಯವರು ನಮ್ಮ ಬಗ್ಗೆ ಮಾತನಾಡಲು ಸಾಧ್ಯವಾ ಎನ್ನುತ್ತಲೇ ಅಭಿಮಾನಿಗಳ ಪರವಾಗಿ ನಾನು ಜಗ್ಗೇಶ್​ ಅವರ ಬಳಿ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.

Anitha E | news18-kannada
Updated:February 25, 2021, 8:23 AM IST
Darshan: ಸೆಲೆಬ್ರಿಟಿ ಅಭಿಮಾನಿಗಳ ಪರವಾಗಿ ಜಗ್ಗೇಶ್​ ಕ್ಷಮೆ ಯಾಚಿಸಿದ ದರ್ಶನ್​
ಜಗ್ಗೇಶ್​ ಹಾಗೂ ದರ್ಶನ್​
  • Share this:
ದರ್ಶನ್​ ಹಾಗೂ ಅವರ ಸೆಲೆಬ್ರಿಟಿ ಅಭಿಮಾನಿಗಳ ಬಗ್ಗೆ ಅವಹೇಳನಕಾರಿಯಾಗಿ ಜಗ್ಗೇಶ್​ ಅವರು ಮಾತನಾಡಿದ್ದಾರೆ ಎನ್ನಲಾಗುತ್ತಿರುವ ಆಡಿಯೋ ಕ್ಲಿಪ್​ ವಿವಾದಕ್ಕೆ ಕೊನೆಗೂ ತೆರೆ ಬಿದ್ದಂತೆ ಕಾಣುತ್ತಿದೆ. ಕಳೆದ ಕೆಲವು ದಿನಗಳಿಂದ ಜಗ್ಗೇಶ್​ ಹಾಗೂ ದರ್ಶನ್​ ಅಭಿಮಾನಿಗಳ ನಡುವೆ ಆಡಿಯೋ ಕ್ಲಿಪ್​ ಕಾರಣದಿಂದಾಗಿ ಸಾಕಷ್ಟು ಮಾತಿನ ಚಕಮಕಿ ನಡೆದಿತ್ತು. ಮೂಸೂರಿನಲ್ಲಿ ತೋತಾಪುರಿ ಸಿನಿಮಾದ ಚಿತ್ರೀಕರಣದಲ್ಲಿದ್ದ ಜಗ್ಗೇಶ್​ ಅವರನ್ನು ಡಿಬಾಸ್​ ಅಭಿಮಾನಿಗಳು ಮುತ್ತಿಗೆ ಹಾಕಿದ್ದರು. ಆಡಿಯೋದಲ್ಲಿ ಕೆಟ್ಟದಾಗಿ ಮಾತನಾಡಿರುವ ಬಗ್ಗೆ ಕ್ಷಮೆಯಾಚಿಸುವಂತೆ ಒತ್ತಾಯಿಸಿದ್ದರು. ಈ ಘಟನೆಯಿಂದ ನೊಂದಿದ್ದ ಜಗ್ಗೇಶ್​ ಟ್ವಿಟರ್​ನಲ್ಲಿ ಲೈವ್​ ಬಂದು ತಮಗೆ ಮಾಡಿದ ಅವಮಾನ ಬಗ್ಗೆ ಬೇಸರ ಹಾಗೂ ಆಕ್ರೋಶ ವ್ಯಕ್ತಪಡಿಸಿದ್ದರು. ಯಾವ ನಟಹಾಗೂ ಆತನ ಅಭಿಮಾನಿಗಳು ನನ್ನ ಬಳಿ ಬರಲಾರರು ಎಂದಿದ್ದರು. ಇನ್ನು ಇದೇ ವಿಷಯವಾಗಿ ದರ್ಶನ್​ ಮಧ್ಯ ಪ್ರವೇಶಿಸಿ ಮಾತನಾಡಬೇಕಿತ್ತು ನಿನ್ನೆ ಸಂಜೆ ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ನೊಂದು ನುಡಿದಿದ್ದರು. ಈ ಕುರಿತಾಗಿ ಮೌನವಾಗಿದ್ದ ದರ್ಶನ್ ನಿನ್ನೆ ಪ್ರತಿಕ್ರಿಯಿಸಿದ್ದಾರೆ. 

ಖಾಸಗಿ ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ದರ್ಶನ್​ ತಮ್ಮ ಅಭಿಮಾನಿಗಳ ಪರವಾಗಿ ಜಗ್ಗೇಶ್​ ಅವರ ಬಳಿ ಕ್ಷಮೆ ಕೇಳಿದ್ದಾರೆ. ಇನ್ನು ದರ್ಶನ್​ ತಮ್ಮ ಅಭಿಮಾನಿಗಳನ್ನು ಸೆಲೆಬ್ರಿಟಿ ಎಂದು ಕರೆಯುತ್ತಾರೆ. ಜಗ್ಗೇಶ್​ ಅವರು ನಮ್ಮ ಸೀನಿಯರ್​. ಅವರಲ್ಲದೆ ಬೇರೆಯವರು ನಮ್ಮ ಬಗ್ಗೆ ಮಾತನಾಡಲು ಸಾಧ್ಯವಾ ಎನ್ನುತ್ತಲೇ ಅಭಿಮಾನಿಗಳ ಪರವಾಗಿ ನಾನು ಜಗ್ಗೇಶ್​ ಅವರ ಬಳಿ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.


ಆಡಿಯೋ ಲೀಕ್​ ಆದಾಗ ತಾನು ತಿರುಪತಿಯಲ್ಲಿದ್ದೆ. ಅಲ್ಲಿಂದ ಬಂದಾಗ ಮಧ್ಯರಾತ್ರಿ 2 ಗಂಟೆಯಾಗಿತ್ತು. ಆಗಲೂ ನಿರ್ಮಾಪಕ ವಿಖ್ಯಾತ್ ಕರೆ ಮಾಡುತ್ತಿದ್ದರು. ಆದರೂ ಅವರಿಗೆ ನಾನು ಮರು ದಿನ ಬೆಳಗ್ಗೆ ಕರೆ ಮಾಡಿದೆ. ಆಗ ವಿಷಯ ನನ್ನ ಗಮನಕ್ಕೆ ಬಂತು. ಅದನ್ನು ದೊಡ್ಡದು ಮಾಡುವುದು ಬೇಡ, ದೊಡ್ಡವರು ಏನೊ ಹೇಳುತ್ತಾರೆ ಬಿಟ್ಟು ಬಿಡಿ ಎಂದಿದ್ದರಂತೆ.

ಜಗ್ಗೇಶ್​ ಅವರಿಗೆ ಮುತ್ತಿಗೆ ಹಾಕಿದ ದಿನ

ಮೈಸೂರಿನಲ್ಲಿ ತೋತಾಪುರಿ ಚಿತ್ರೀಕರಣದ ಸೆಟ್​ನಲ್ಲಿರುವಾಗ ಜಗ್ಗೇಶ್​ ಅವರಿಗೆ ಮುತ್ತಿಗೆ ಹಾಕಲಾಗಿತ್ತು. ಅಂದು ನಾನು ಯಾವುದೋ ಕಾಡಿನಲ್ಲಿದ್ದೆ. ಸರಿಯಾಗಿ ಸಿಗ್ನಲ್​ ಸಿಗಲಿಲ್ಲ. ಆದರೂ ಸಿಗ್ನಲ್​ ಸಿಕ್ಕಾಗ ಹುಡುಗರಿಗೆ ಬೈದು ಸುಮ್ಮನಿರುವಂತೆ ಎಚ್ಚರಿಕೆ ಕೊಟ್ಟಿದ್ದರಂತೆ. ಸಾಲದಕ್ಕೆ ಏನಾದರೂ ಹೆಚ್ಚು-ಕಡಿಮೆ ಆದರೆ ಸರಿಯಾಗಿರುವುದಿಲ್ಲ ಎಂದಿದ್ದೆ.  ಅಲ್ಲದೆ ಜಗ್ಗೇಶ್​ ಅವರಿಗೂ ಕರೆ ಮಾಡಲು ಯತ್ನಿಸಿದೆ ಸಿಗ್ನಲ್​ ಸಿಗಲಿಲ್ಲ ಎಂದು ದರ್ಶನ್​ ನಿನ್ನೆ ಆ ಸಂದರ್ಶನದಲ್ಲಿ ಹೇಳಿದ್ದಾರೆ.

ನಡೆದದ್ದು ಏನು?

ಇನ್​ಸ್ಪಕ್ಟರ್​ ವಿಕ್ರಂ ಸಿನಿಮಾದ ನಿರ್ಮಾಪಕ ವಿಖ್ಯಾತ್​ ಅವರ ಜೊತೆ ಜಗ್ಗೇಶ್​ ಆಡಿಯೋ ಲೀಕ್​ ಆದಾಗಿನಿಂದ ಈ ವಿವಾದ ಹುಟ್ಟಿಕೊಂಡಿದ್ದು. ಆಡಿಯೋ ಕ್ಲಿಪ್​ನಲ್ಲಿ ಜಗ್ಗೇಶ್​ ದರ್ಶನ್​ ಅಭಿಮಾನಿಗಳ ಬಗ್ಗೆ ಹೀಯಾಳಿಸುವಂತೆ ಮಾತನಾಡಿದ್ದಾರೆ ಎನ್ನಲಾಗುತ್ತಿದೆ. ಇನ್ನು ಈ ಆಡಿಯೋ ಕ್ಲಿಪ್​ ಅನ್ನು ತಮ್ಮ ಸಿನಿಮಾ ಪ್ರಚಾರಕ್ಕಾಗಿ ನಿರ್ಮಾಪಕ ವಿಖ್ಯಾತ್ ಅವರೇ ಲೀಕ್​ ಮಾಡಿದ್ದಾರೆ ಎಂದು ಜಗ್ಗೇಶ್​ ಆರೋಪಿಸಿದ್ದರು. ಆ ಆಡಿಯೋದಲ್ಲಿರುವುದು ನನ್ನ ಧ್ವನಿಯೇ ಅಲ್ಲ ಎಂದಿದ್ದರು ಜಗ್ಗೇಶ್​.

ಇನ್ನು ಇದೇ ವಿಷಯ ಮುಂದುವರೆದು ದರ್ಶನ್​ ಅಭಿಮಾನಿಗಳು ಮೈಸೂರಿನಲ್ಲಿ ಚಿತ್ರೀಕರಣದ ಸೆಟ್​ನಲ್ಲಿ ಜಗ್ಗೇಶ್​ ಅವರನ್ನು ಮುತ್ತಿಗೆ ಹಾಕಿ ಕೆಟ್ಟದಾಗಿ ನಡೆಸಿಕೊಂಡಿದ್ದರು. ಹಿರಿಯ ನಟನಿಗೆ ಏಕ ವಚನದಲ್ಲಿ ಮಾತನಾಡಿಸುತ್ತಾ, ಕೆಟ್ಟದಾಗಿ ಬೈದು ಕ್ಷಮೆ ಕೇಳುವಂತೆ ಬೆದರಿಕೆ ಹಾಕಿದ್ದರು.

ಇದನ್ನೂ ಓದಿ: Rashmika Mandanna: ಮುಂಬೈನಲ್ಲಿ ಹೊಸ ಮನೆ ಖರೀದಿಸಿದ ರಶ್ಮಿಕಾ ಮಂದಣ್ಣ..!

ಈ ಘಟನೆಯಿಂದ ಬೇಸರಗೊಂಡ ಜಗ್ಗೇಶ್​ ಮರುದಿನ ಟ್ವಿಟರ್​ನಲ್ಲಿ ಲೈವ್​ ಬಂದು ದರ್ಶನ್​ ಹಾಗೂ ಅವರ ಅಭಿಮಾನಿಗಳ ಹೆಸರು ಉಲ್ಲೇಖಿಸದೆ ಯಾರೂ ತನ್ನ ಬಳಿ ಬರಲಾರರು ಎಂದಿದ್ದರು. ಇನ್ನು ಮುಂದೆ ಸಿನಿರಂಗ ಯಾವುದೇ ವಿಷಯಗಳಲ್ಲಿ ನಾನು ಇರುವುದಿಲ್ಲ ಎಂದೂ ಹೇಳಿದ್ದರು. ಸಿನಿರಂಗದಲ್ಲಿ ಇಂತಹ ಘಟನೆಗಳು ನಡೆದರೆ ಮುಂದೆ ರೌಡಿಸಂ ಆರಂಭವಾಗುತ್ತದೆ. ರಾಜ್​ಕುಮಾರ್​, ಶಂಕರ್​ ನಾಗ್​, ವಿಷ್ಣುವರ್ಧನ್​, ಅಂಬರೀಷ್​ ಅವರ ನಿಧನದ ನಂತರ ಕನ್ನಡಾಭಿಮಾನ ಸಾಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದರು. 40 ವರ್ಷಗಳ ನನ್ನ ಕಲಾ ಸೇವೆಗೆ ಮಾಡಿದ ಅವಮಾನ ಇದು ಎಂದಿದ್ದರು.

ಸಾಲದಕ್ಕೆ ನಿನ್ನೆ ಸಂಜೆ ಮೈಸೂರಿನಲ್ಲಿ ಸುದ್ದಿಗೋಷ್ಠಿ ಮಾಡಿದ ಜಗ್ಗೇಶ್​, ವಿಷಯ ಇಷ್ಟು ಗಂಭೀರವಾದರೂ ದರ್ಶನ್ ನನಗೆ ಕರೆ ಮಾಡಲಿಲ್ಲ. ಒಂದು ಕರೆ ಮಾಡಿದ್ದರೆ ಈ ಸಮಸ್ಯೆ ಬಗೆಹರಿದಿರುತ್ತಿತ್ತು ಎಂದು ಬೇಸರ ವ್ಯಕ್ತಪಡಿಸಿದರು. ಅಲ್ಲದೆ ಹಿಂದೆ ದರ್ಶನ್​ ಅವರಿಗೆ ಮಾಡಿದ್ದ ಸಹಾಯವನ್ನೂ ನೆನಪಿಸಿಕೊಂಡಿದ್ದಾರೆ ಜಗ್ಗೇಶ್​.
Published by: Anitha E
First published: February 25, 2021, 8:23 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories