• Home
  • »
  • News
  • »
  • entertainment
  • »
  • Roberrt: ಬಾಸು​ ಕೊಂಚ ಕೇಡಿ... ತುಂಬಾ ರಫ್​ ರೌಡಿ... ರಾಬರ್ಟ್​ ಬರ್ತಿದ್ದಾನೆ ನೋಡಿ..!

Roberrt: ಬಾಸು​ ಕೊಂಚ ಕೇಡಿ... ತುಂಬಾ ರಫ್​ ರೌಡಿ... ರಾಬರ್ಟ್​ ಬರ್ತಿದ್ದಾನೆ ನೋಡಿ..!

ರಾಬರ್ಟ್​ ಸಿನಿಮಾದಲ್ಲಿ ದರ್ಶನ್​

ರಾಬರ್ಟ್​ ಸಿನಿಮಾದಲ್ಲಿ ದರ್ಶನ್​

Roberrt Making Video Episodes 3: ರಾತ್ರೋರಾತ್ರಿ ಎಲ್ಲ ಬದಲಾಯಿಸಿ ರಣ್​ ಆಫ್​ ಕಚ್​ನಲ್ಲಿ ಚಿತ್ರೀಕರಣ ನಡೆಸಲು ನಿರ್ಧರಿಸಿದ ತರುಣ್​ ಸುಧೀರ್​ ಹಾಗೂ ಅವರ ತಂಡ ಕಳೆದ ಮಾರ್ಚ್​ನಲ್ಲಿ ಸುಡು ಬಿಸಿಲಿನ ನಡುವೆ ಈ ಹಾಡಿನ  ಸೆಟ್​ ಅನ್ನು ರಣ್​ ಆಫ್​ ಕಚ್​ನಲ್ಲಿ ನಿರ್ಮಿಸಿತ್ತು. ಚಿತ್ರೀಕರಣದ ಸೆಟ್​ಗೆ ಕಣ್ಣು ಬಿಡಲಾಗಷ್ಟು ಬಿಸಿಲಿನಲ್ಲಿ ಒಂದು ಕಿ.ಮೀ ನಡೆಯಬೇಕಿತ್ತಂತೆ. ಎಲ್ಲ ಸವಾಲುಗಳ ನಡುವೆ ಈ ಹಾಡಿನ ಶೂಟಿಂಗ್​ ಮುಗಿಸಿತ್ತು ರಾಬರ್ಟ್​ ತಂಡ. 

ಮುಂದೆ ಓದಿ ...
  • Share this:

ನೀನು ಮಾಸ್​ ಆದರೆ ನಾನು ಆ ಮಾಸ್​​ಗೆ.... ಅನ್ನೋ ಡೈಲಾಗ್​ ಸಿನಿಮಾದ ಟ್ರೇಲರ್​ ರಿಲೀಸ್ ಆದಾಗಲೇ ಸಾಕಷ್ಟು ಫೇಮಸ್​ ಆಗಿತ್ತು. ಸಖತ್​ ಫವರ್ ಫುಲ್​ ಡೈಲಾಗ್ಸ್​, ಕೇಳುತ್ತಿದ್ದಂತೆಯೇ ಕಾಲು ಕುಣಿಸುವ ಮ್ಯೂಸಿಕ್​, ಸಖತ್​ ಆ್ಯಕ್ಷನ್​, ಎಮೋಷನ್​ ಹೀಗೆ ಎಲ್ಲವೂ ಈ ರಾಬರ್ಟ್​ ಸಿನಿಮಾದಲ್ಲಿದೆಯಂತೆ. ದರ್ಶನ್​ ಅಭಿನಯದ ರಾಬಟ್ ಸಿನಿಮಾ ನಾಳೆ ತೆರೆಗಪ್ಪಳಿಸಲಿದೆ. ಡಿಬಾಸ್​ ಅಭಿಮಾನಿಗಳು ನಿದ್ದೆ ಮಾಡದೆ ಈ ಸಿನಿಮಾಗಾಗಿ ಕಾಯುತ್ತಿದ್ದಾರೆ. ಕನ್ನಡ ಸೇರಿದಂತೆ ತೆಲುಗಿನಲ್ಲೂ ಈ ಚಿತ್ರ ತೆರೆ ಕಾಣುತ್ತಿದೆ. ಕನ್ನಡದಂತೆಯೇ ತೆಲುಗಿನಲ್ಲೂ ಅದ್ಧೂರಿಯಾಗಿ ರಾಬರ್ಟ್​ ಬಿಡುಗಡೆಯಾಗಲಿದೆ. ತರುಣ್​ ಸುಧೀರ್​ ನಿರ್ದೇಶನದಲ್ಲಿ ದರ್ಶನ್​ ಹೊಸ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಮೊದಲ ಸಲ ಕನ್ನಡತಿ ಆಶಾ ಭಟ್​ ನಾಯಕಿಯಾಗಿ ಸ್ಯಾಂಡಲ್​ವುಡ್​ ಸಿನಿಪ್ರಿಯರಿಗೆ ಪರಿಚಯವಾಗಲಿದ್ದಾರೆ. ಭದ್ರಾವತಿಯ ಈ ಹುಡುಗಿ ಈಗಾಗಲೇ ಬಾಲಿವುಡ್​ ಸಿನಿಮಾಗಳಲ್ಲಿ ನಟಿಸಿದ್ದಾರೆ. 


ಕಳೆದ ಎರಡು ದಿನಗಳಿಂದ ದಿನಕ್ಕೊಂದು ಸಂಚಿಕೆಯಂತೆ ರಾಬರ್ಟ್​ ಚಿತ್ರದ ಮೇಕಿಂಗ್​ ವಿಡಿಯೋ ರಿಲೀಸ್ ಮಾಡುತ್ತಿದೆ ಚಿತ್ರತಂಡ. ಇಂದು ಅಂದರೆ ಮೂರನೇ ದಿನ ಮೇಕಿಂಗ್​ನ​ ಕೊನೆಯ ಹಾಗೂ ಮೂರನೇ ಸಂಚಿಕೆಯ ವಿಡಿಯೋವನ್ನು ಇಂದು ರಿಲೀಸ್​ ಮಾಡಿದ್ದಾರೆ.
ಮೂರನೇ ಸಂಚಿಕೆಯ ವಿಡಿಯೋದಲ್ಲಿ ರಾಬರ್ಟ್​ ಸಿನಿಮಾದ ಹಾಡುಗಳ ಮೇಕಿಂಗ್​ ಬಗ್ಗೆ ಮಾಹಿತಿ ನೀಡಲಾಗಿದೆ. ಕಣ್ಣು ಹೊಡಿಯಾಕಾ ಹಾಡಿನ ಚಿತ್ರೀಕರಣದ ಬಗ್ಗೆ ಮಾಹಿತಿ ನೀಡಿರುವ ಚಿತ್ರತಂಡ ಈ ಹಾಡಿನ ಶೂಟಿಂಗ್​ ಅನ್ನು ಮೊದಲು ವಿದೇಶದಲ್ಲಿ ಮಾಡಲು ನಿರ್ಧರಿಸಿತ್ತಂತೆ. ಆದರೆ ಆಗಷ್ಟೆ ವಿದೇಶದಲ್ಲಿ ಕೋವಿಡ್​ ಆರಂಭವಾಗಿತ್ತು. ಅದಕ್ಕೆ ವಿದೇಶಕ್ಕೆ ಹಾರಲು ಬುಕ್​ ಆಗಿದ್ದ ಟಿಕೆಟ್​ಗಳನ್ನು ಕ್ಯಾನ್ಸಲ್​ ಮಾಡಿ, ರಾತ್ರೋರಾತ್ರಿ ಬೇರೆ ಪ್ಲಾನ್​ ಮಾಡಿಕೊಂಡಿದ್ದರಂತೆ. 


ಇದನ್ನೂ ಓದಿ: Roberrt Diaries: ರಾಬರ್ಟ್​ ಚಿತ್ರಕ್ಕಾಗಿ ನಾಲ್ಕು ಎಕರೆ ಜಾಗದಲ್ಲಿ ನಿರ್ಮಾಣವಾಗಿತ್ತು ಶ್ರೀರಾಮನ ಸೆಟ್​..!


ರಾತ್ರೋರಾತ್ರಿ ಎಲ್ಲ ಬದಲಾಯಿಸಿ ರಣ್​ ಆಫ್​ ಕಚ್​ನಲ್ಲಿ ಚಿತ್ರೀಕರಣ ನಡೆಸಲು ನಿರ್ಧರಿಸಿದ ತರುಣ್​ ಸುಧೀರ್​ ಹಾಗೂ ಅವರ ತಂಡ ಕಳೆದ ಮಾರ್ಚ್​ನಲ್ಲಿ ಸುಡು ಬಿಸಿಲಿನ ನಡುವೆ ಈ ಹಾಡಿನ  ಸೆಟ್​ ಅನ್ನು ರಣ್​ ಆಫ್​ ಕಚ್​ನಲ್ಲಿ ನಿರ್ಮಿಸಿತ್ತು. ಚಿತ್ರೀಕರಣದ ಸೆಟ್​ಗೆ ಕಣ್ಣು ಬಿಡಲಾಗಷ್ಟು ಬಿಸಿಲಿನಲ್ಲಿ ಒಂದು ಕಿ.ಮೀ ನಡೆಯಬೇಕಿತ್ತಂತೆ. ಎಲ್ಲ ಸವಾಲುಗಳ ನಡುವೆ ಈ ಹಾಡಿನ ಶೂಟಿಂಗ್​ ಮುಗಿಸಿತ್ತು ರಾಬರ್ಟ್​ ತಂಡ. 


ಜೈ ಶ್ರೀರಾಮ್​ ಹಾಡು ನೋಡಲು ಕಣ್ಣಿಗೆ ಹಬ್ಬ: ದರ್ಶನ್​


ಜೈ ಶ್ರೀರಾಮ್​ ಹಾಡು ನೋಡಲು ಕಣ್ಣಿಗೆ ಹಬ್ಬ. ಈ ಹಾಡು ನೋಡಿದರೆ ಸಾಕು ಚಿತ್ರದ ನಿರ್ಮಾಪಕರು ಹೇಗೆ ಎಂದು ತಿಳಿಯುತ್ತದೆ ಎಂದು ದರ್ಶನ್​ ಹೇಳಿದ್ದಾರೆ. ಅಂದರೆ ಈ ಹಾಡಿಗಾಗಿ ಅಷ್ಟು ಖರ್ಚು ಮಾಡಿದ್ದಾರಂತೆ ನಿರ್ಮಾಪಕುಮಾಪತಿ. ಒಬ್ಬೊಬ್ಬರೂ ರೆಡಿಯಾಗಿ ಬರುವಷ್ಟರಲ್ಲಿ  11 ಗಂಟೆ ಆಗುತ್ತಿತ್ತು. ಶಾಟ್​ ರೆಡಿ ಎನ್ನುವಷ್ಟರಲ್ಲಿ 12 ಗಂಟೆಯಾಗುತ್ತಿತ್ತು. ಐದು ಸಾವಿರ ಜನರನ್ನು ಈ ಹಾಡಿಗಾಗಿ ಕರೆತರಲಾಗಿತ್ತು. ಜೈ ಶ್ರೀರಾಮ್​ ಎನ್ನುವ ಆ ಸ್ಟೆಪ್​​ ಸಖತ್ ವೈರಲ್​ ಆಯಿತು ಎಂದು ಸಂತಸ ವ್ಯಕ್ತಪಡಿಸಿದ್ದಾರೆ ತರುಣ್​ ಸುಧೀರ್​.


ದರ್ಶನ್​ ಸಖತ್​ ಸ್ಟೆಪ್​ ಹಾಕಿರುವ ಬೇಬಿ ಡ್ಯಾನ್ಸ್​ ಫ್ಲೋರ್​ ರೆಡಿ ಹಾಡು


ದರ್ಶನ್​ ನಾನು ಡ್ಯಾನ್ಸ್​ನಲ್ಲಿ ವೀಕ್​ ಅಂದ್ರೆ, ದರ್ಶನ್​ ತುಂಬಾ ಚೆನ್ನಾಗಿ ಡ್ಯಾನ್ಸ್​ ಮಾಡ್ತಾರೆ ಅಂತಾರೆ ತರುಣ್​ ಸುಧೀರ್​. ದರ್ಶನ್​ ಅವರನ್ನು ಯಾರೂ ಇಲ್ಲಿಯವರೆಗೆ ಸರಿಯಾಗಿ ಡ್ಯಾನ್ಸ್​ ಮಾಡಿಸುವ ಪ್ರಯತ್ನ ಮಾಡಿಲ್ಲ. ಆದರೆ ಈ ಸಲ ರಾಬರ್ಟ್​ನ ಬೇಬಿ ಡ್ಯಾನ್ಸ್​ ಫ್ಲೋರ್​ ರೆಡಿ ಹಾಡಿನಲ್ಲಿ ಆ ಪ್ರಯತ್ನ ಆಗಿದೆ ಎಂದಿದ್ದಾರೆ. ಒಬ್ಬ ಅಭಿಮಾನಿಯಾಗಿ ದರ್ಶನ್​ ಅವರು ಸಖತ್ತಾಗಿ ಡ್ಯಾನ್ಸ್ ಮಾಡ್ತಾರೆ ಅನ್ನೋದು ಅಭಿಪ್ರಾಯ ತರುಣ್​ ಅವರದ್ದು.
ಒಂದು ದಿನ... ಒಂದು ದಿನ... ಅಂತ ಡ್ಯಾನ್ಸ್​​ ಅಭ್ಯಾಸಕ್ಕೆ ಕರೆದು ಬೇಬಿ ಡ್ಯಾನ್ಸ್​ ಫ್ಲೋರ್​ ರೆಡಿ ಹಾಡಿಗೆ ಡ್ಯಾನ್ಸ್​ ಮಾಡಿಸಿದ್ದಾರೆ ಅನ್ನೋ ದರ್ಶನ್​ ತಾನು ಅಷ್ಟೇನೂ ಡ್ಯಾನ್ಸ್​ ಮಾಡಿಲ್ಲ, ತಕ್ಕಮಟ್ಟಿಗೆ ಮಾಡಿದ್ದೀನಿ ಅಂತಾರೆ.

Published by:Anitha E
First published: