ಜೋರಾಗಿ ಸೌಂಡ್​ ಮಾಡೋಕೆ ಹೇಳ್ತವರೆ ರೋರಿಂಗ್ ಸ್ಟಾರ್ ಶ್ರೀಮುರಳಿ

ನೂರಾರು ಡಾನ್ಸರ್​ಗಳು, ಮಿರಮಿರ ಮಿಂಚುವ ಕಲರ್​ಫುಲ್ ಸೆಟ್​ನಲ್ಲಿ ಭರಾಟೆ ಸಾಂಗ್​ ಅನ್ನು ಚಿತ್ರೀಕರಿಸಲಾಗಿದ್ದು, ನಾಯಕ ಶ್ರೀಮುರಳಿ ಮತ್ತು ತಂಡ ಭರ ಭರ.. ಹಾಡಿಗೆ ಹೆಜ್ಜೆ ಹಾಕಿದ್ದಾರೆ.

zahir | news18-kannada
Updated:August 11, 2019, 4:18 PM IST
ಜೋರಾಗಿ ಸೌಂಡ್​ ಮಾಡೋಕೆ ಹೇಳ್ತವರೆ ರೋರಿಂಗ್ ಸ್ಟಾರ್ ಶ್ರೀಮುರಳಿ
Srimurali
  • Share this:
ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ 'ಭರಾಟೆ' ಚಿತ್ರದ ಟೈಟಲ್ ಟ್ರ್ಯಾಕ್ ಬಿಡುಗಡೆಯಾಗಿದೆ. 'ಬಹದ್ದೂರ್' ಚೇತನ್ ನಿರ್ದೇಶನದ ಈ ಸಿನಿಮಾದ ಗೀತೆಯು ಹಾತಾಶೆಯಲ್ಲಿರುವವರಿಗೆ ಹೊಸ ಟಾನಿಕ್​ನಂತೆ ಮೂಡಿ ಬಂದಿದೆ. ಎಂದಿನಂತೆ ಪಂಚಿಂಗ್ ಪದಗಳೊಂದಿಗೆ ಅರ್ಜುನ್ ಜನ್ಯ ಸಂಗೀತಕ್ಕೆ ಚೇತನ್ ಸಾಹಿತ್ಯ ಒದಗಿಸಿದ್ದು, ಈ ಲಿರಿಕಲ್ ವಿಡಿಯೋ ಇದೀಗ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ.

ನೂರಾರು ಡಾನ್ಸರ್​ಗಳು, ಮಿರಮಿರ ಮಿಂಚುವ ಕಲರ್​ಫುಲ್ ಸೆಟ್​ನಲ್ಲಿ 'ಭರಾಟೆ' ಸಾಂಗ್​ ಅನ್ನು ಚಿತ್ರೀಕರಿಸಲಾಗಿದ್ದು, ನಾಯಕ ಶ್ರೀಮುರಳಿ ಮತ್ತು ತಂಡ ಭರ ಭರ.. ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇನ್ನು ಸದ್ಯ ಬಿಡುಗಡೆಯಾಗಿರುವ ಲಿರಿಕಲ್ ವಿಡಿಯೋ ಮೂಲಕ ಕಾಮಿಡಿ ಮಹಾರಾಜ ಸಾಧುಕೋಕಿಲ ಕೂಡ ಚಿತ್ರದಲ್ಲಿರುವುದು ಬಹಿರಂಗವಾಗಿದೆ.

ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ, ಜೀವನದ ಕನ್​ಫ್ಯೂಸನ್ನು ಮರೆತು..ಹುಟ್ಟಿಸಿದ ದೇವರು ಹುಲ್ಲು ಮೇಯಿಸಲ್ಲ ಎಂಬ ನಂಬಿಕೆಯೊಂದಿಗೆ ಭರ ಭರ ಭರ ಭರಾಟೆ..ಎಲ್ಲ ಕಡೆ ಸಖತ್ ಸೌಂಡ್ ಮಾಡುತ್ತಿದೆ. ಇನ್ನು ಚಿತ್ರದಲ್ಲಿ ನಾಯಕಿಯಾಗಿ ಶ್ರೀಲೀಲಾ ಕಾಣಿಸಲಿದ್ದು, ಹಾಗೆಯೇ ವಿಶೇಷ ಪಾತ್ರದೊಂದಿಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ಕೂಡ ಎಂಟ್ರಿಯಾಗಲಿದ್ದಾರೆ.

ಈಗಾಗಲೇ ರೋರಿಂಗ್ ಸ್ಟಾರ್ ಅಭಿಮಾನಿಗಳು 'ಭರಾಟೆ'ಯ ಸೌಂಡ್​ಗೆ ಫಿದಾ ಆಗಿದ್ದು, 'ಉಗ್ರಂ', 'ರಥಾವರ' ಮತ್ತು 'ಮಫ್ತಿ' ಚಿತ್ರದಂತೆ ಮತ್ತೊಂದು ಆ್ಯಕ್ಷನ್ ಪ್ಯಾಕ್ಡ್​​ ಸಿನಿಮಾದ ನಿರೀಕ್ಷೆಯಲ್ಲಿದ್ದಾರೆ ಶ್ರೀಮುರಳಿ ಫ್ಯಾನ್ಸ್​. ಇನ್ನು ಎಲ್ಲವೂ ಅಂದುಕೊಂಡಂತೆ ನಡೆದರೆ ಭರಾಟೆ ಆರ್ಭಟ ಸೆಪ್ಟೆಂಬರ್ 27 ರಂದು ಆರಂಭವಾಗಲಿದೆ.

First published:August 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ