ರೋರಿಂಗ್ ಸ್ಟಾರ್ ಶ್ರೀಮುರುಳಿ(Roaring Star Sri Murali) ಅವರಿಗೆ ಇಂದು ಹುಟ್ಟುಹಬ್ದ(Birthday)ದ ಸಂಭ್ರಮ. ಚಂದ್ರಚಕೋರಿ ಸಿನಿಮಾದ ನಟ ಶ್ರೀ ಮುರುಳಿ ಇಂದು 39ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಆದರೆ ಅಪ್ಪು(Appu) ಇಲ್ಲದ ನೋವಿನ ಮಧ್ಯೆ ಹುಟ್ಟಹಬ್ಬ ಬಂದಿರುವುದರಿಂದ ಈ ಬಾರಿ ಸಂಭ್ರಮವಿಲ್ಲದ ಜನ್ಮದಿನವಾಗಿದೆ. ಆದರೆ, ಸೋಷಿಯಲ್ ಮೀಡಿಯಾದಲ್ಲಿ ಅವರ ಅಭಿಮಾನಿಗಳು ನೆಚ್ಚಿನ ನಟನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಮದಗಜ(Madhagaja) ಸಕ್ಸಸ್ನಿಂದ ಶ್ರೀ ಮುರುಳಿಗೆ ಮತ್ತಷ್ಟು ಆನೆ ಬಲ ಬಂದಿದೆ. ಕನ್ನಡದ ಖ್ಯಾತ ನಟ ಪುನೀತ್ ರಾಜ್ಕುಮಾರ್ (Puneeth Rajkumar) ನಿಧನ ಹೊಂದದೇ ಇದ್ದಿದ್ದರೆ ಶ್ರೀಮುರಳಿ ಅದ್ದೂರಿಯಾಗಿ ಬರ್ತ್ಡೇ ಆಚರಣೆ ಮಾಡಿಕೊಳ್ಳುತ್ತಿದ್ದರು.ಅವರ ಸಾವಿನ ಹಿನ್ನೆಲೆಯಲ್ಲಿ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುವುದಿಲ್ಲ ಎಂದು ಶ್ರೀಮುರಳಿ ಹೇಳಿದ್ದಾರೆ. ಆ ಕಾರಣದಿಂದ ಈ ಬಾರಿ ಅವರ ಅಭಿಮಾನಿ(Fans)ಗಳು ಜನ್ಮದಿನವನ್ನು ಅದ್ದೂರಿಯಾಗಿ ಸಂಭ್ರಮಿಸುತ್ತಿಲ್ಲ. ಈ ಬಗ್ಗೆ ನಿನ್ನೆ ಶ್ರೀ ಮುರುಳಿ ಪೋಸ್ಟ್(Post)ವೊಂದನ್ನು ಮಾಡಿದ್ದರು. ಈ ಪೋಸ್ಟ್ ಮೂಲಕ ತಮ್ಮ ಅಭಿಮಾನಿಗಳಿಗೆ ಸಂದೇಶ(Messege) ರವಾನಿಸಿದ್ದರು. ಅದರಂತೆ ಅವರ ಅಭಿಮಾನಿಗಳು ಕೂಡ ನಡೆದುಕೊಂಡಿದ್ದಾರೆ. ಅವರ ನೆಚ್ಚಿನ ನಟನ ಮಾತನ್ನು ಕೇಳಿದ್ದಾರೆ.
ಮನೆ ಬಳಿ ಬರದಂತೆ ಮನವಿ ಮಾಡಿದ ಶ್ರೀ ಮುರುಳಿ!
ಸ್ಟಾರ್ ಹೀರೋಗಳ ಹುಟ್ಟುಹಬ್ಬವೆಂದರೆ ಮನೆ ಬಳಿ ಬಂದು ಸಂಭ್ರಮಿಸಿವುದು ಕಾಮನ್, ಹಾಗೇ ಶ್ರೀಮುರಳಿ ಬರ್ತ್ಡೇ ದಿನ ಅವರ ಅಭಿಮಾನಿಗಳು ಮನೆಯ ಮುಂದೆ ಜಮಾಯಿಸುತ್ತಿದ್ದರು. ಕೇಕ್ ಕತ್ತರಿಸಿ ಸಂಭ್ರಮಿಸುತ್ತಿದ್ದರು. ಆದರೆ, ಪುನೀತ್ ಸಾವಿನಿಂದ ಇಡೀ ಕರ್ನಾಟಕಕ್ಕೆ ಸೂತಕದ ಛಾಯೆ ಆವರಿಸಿದೆ. ಹೀಗಾಗಿ, ಶ್ರೀಮುರಳಿ ಬರ್ತ್ಡೇ ಆಚರಣೆ ಮಾಡಿಕೊಳ್ಳುತ್ತಿಲ್ಲ.ಈ ಬಗ್ಗೆ ನಿನ್ನೆ ಶ್ರೀ ಮುರುಳಿ
ನನ್ನ ಪ್ರೀತಿಯ ಅಭಿಮಾನಿಗಳೆ. ಈ ಬಾರಿ ನಿಮ್ಮೊಂದಿಗೆ ನನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲಾಗುವುದಿಲ್ಲ. ಕಾರಣವೇನೆಂದು ನಿಮಗೆ ಗೊತ್ತಿರುವುದೆಂದು ಭಾವಿಸುವೆ. ನಾನು ಬೆಂಗಳೂರಿನಲ್ಲೂ ಇರುವುದಿಲ್ಲ. ಸದಾ ನಿಮ್ಮ ಪ್ರೀತಿ ಹಾಗು ಆಶೀರ್ವಾದವನ್ನು ಬಯಸುವ… ನಿಮ್ಮ
ಶ್ರೀಮುರಳಿ (ಅಭಿಮಾನಿಗಳ ಅಭಿಮಾನಿ) ಎಂದು ಮನವಿ ಮಾಡಿಕೊಂಡಿದ್ದರು.
ಇದನ್ನು ಓದಿ: `ಪುಷ್ಪ’ ನಿರ್ಮಾಪಕರಿಗೆ ವಾರ್ನಿಂಗ್ ಕೊಟ್ಟ ಕಿರುಕುಳಕ್ಕೊಳಗಾದ ಪತಿಗಳ ಸಂಘ: ಸಿನಿಮಾ ಪ್ರದರ್ಶನ ನಿಲ್ಲಿಸುವುದಾಗಿ ಎಚ್ಚರಿಕೆ!
ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನರು ಶ್ರೀಮುರಳಿಗೆ ವಿಶ್ ಮಾಡುತ್ತಿದ್ದಾರೆ. ಅವರ ಫೋಟೋಗಳನ್ನು ಹಂಚಿಕೊಂಡು ಪ್ರೀತಿಯಿಂದ ಜನ್ಮದಿನದ ಶುಭಾಶಯ ತಿಳಿಸುತ್ತಿದ್ದಾರೆ. ‘ಭಗೀರ’ ಚಿತ್ರದಲ್ಲಿ ಶ್ರೀಮುರಳಿ ನಟಿಸುತ್ತಿದ್ದಾರೆ. ಈ ಚಿತ್ರತಂಡದ ಶ್ರೀಮುರಳಿಗೆ ಪೋಸ್ಟರ್ ಮೂಲಕ ವಿಶ್ ಮಾಡಿದ್ದಾರೆ. ಇನ್ನೂ ಶ್ರೀ ಮುರುಳಿ ಹುಟ್ಟಹಬ್ಬಕ್ಕೆ ಅವರ ಅಭಿಮಾನಿಗಳು ಕಾಮನ್ ಡಿಪಿ ಸಹ ಬಿಡುಗಡೆಮಾಡಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಈ ಫೋಟೋ ಟ್ರೆಂಡಿಂಗ್ನಲ್ಲಿದೆ.
ಇದನ್ನು ಓದಿ: `ಪುಷ್ಪ’ರಾಜ್ ಫುಲ್ ಮಾಸ್, ಟ್ರೈಲರ್ನಲ್ಲಿ ಹಚ್ಚಿದ್ದ ಫೈರ್ ಆರಿಹೋಯ್ತು ಅಂತಿದ್ದಾರೆ ಫ್ಯಾನ್ಸ್!
ಶ್ರೀ ಮುರುಳಿ ‘ಮದಗಜ’ ಸಿನಿಮಾ ಸಕ್ಸಸ್!
ಡಿಸೆಂಬರ್ 3ರಂದು ಶ್ರೀಮುರಳಿ ಅಭಿನಯದ ‘ಮದಗಜ’ ಸಿನಿಮಾ ರಿಲೀಸ್ ಆಗಿ ಮೆಚ್ಚುಗೆ ಪಡೆದುಕೊಂಡಿದೆ. ಸಾಕಷ್ಟು ಆ್ಯಕ್ಷನ್ ದೃಶ್ಯಗಳನ್ನು ಹೊಂದಿರುವ ಈ ಚಿತ್ರ ಕೋಟ್ಯಂತರ ರೂಪಾಯಿ ಕಮಾಯಿ ಮಾಡಿದೆ. ಈ ಕಾರಣಕ್ಕೆ ಅವರಿಗೆ ಈ ಬಾರಿಯ ಬರ್ತ್ಡೇ ವಿಶೇಷವಾಗಬೇಕಿತ್ತು. ಆದರೆ ಅಪ್ಪು ಅವರ ಅಕಾಲಿಕ ಮರಣದಿಂದ ಇಡೀ ಕುಟುಂಬವೇ ನೋವಿನಲ್ಲಿದೆ.
ಡಿಸೆಂಬರ್ 3 ರಂದು ತೆರೆಕಂಡಿದ್ದ ಸಿನಿಮಾಗೆ ಮೊದಲ ಮೂರು ದಿನದ ಗಳಿಕೆಯೇ 15 ಕೋಟಿ ದಾಟಿತ್ತು. ಈಗ 12 ದಿನಗಳತ್ತ ಕಾಲಿಡುತ್ತಿದ್ದು, ಸಿನಿಮಾದ ಬಾಕ್ಸಾಫೀಸ್ನಲ್ಲಿ ಭರ್ಜರಿಯಾಗೇ ಗಳಿಸಿದೆ ಎನ್ನಲಾಗಿದೆ. ಸುಮಾರು 26 ಕೋಟಿಗೂ ಅಧಿಕ ಮೊತ್ತದ ಹಣವನ್ನು 'ಮದಗಜ' ಸಿನಿಮಾಗೆ ಥಿಯೇಟರ್ ಕಲೆಕ್ಷನ್ನಿಂದಲೇ ಬಂದಿದೆ ಎನ್ನಲಾಗಿದೆ. ಹೀಗಾಗಿ ವರ್ಷದ ಕೊನೆಯಲ್ಲಿ ಬಿಡುಗಡೆಯಾದ ಸಿನಿಮಾ ಸಕ್ಸಸ್ ಲಿಸ್ಟ್ ಸೇರಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ