ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯಲ್ಲಿ ‘ಕಲಾವಿದ‘ ಸಿನಿಮಾ ಮೂಡಿಬಂದಿತ್ತು. ಸ್ಯಾಂಡಲ್ವುಡ್ ತೆರೆ ಮೇಲೆ ಸಖತ್ ಸೌಂಡ್ ಮಾಡಿತ್ತು. ಅದರಲ್ಲೂ ಆ ಸಿನಿಮಾ ಹಾಡುಗಳು ಇಂದಿಗೂ ಜನಜನಿತ. ಇದೀಗ ಕಲಾವಿದ ಟೈಟಲ್ ಕನ್ನಡದಲ್ಲಿ ಮರುಬಳಕೆಯಾಗಿದೆ. ಮತ್ತೊಮ್ಮೆ ಕಲಾವಿದ ಟೈಟಲ್ ನಲ್ಲಿ ಸಿನಿಮಾ ಮೂಡಿಬಂದಿದೆ.
ಕಲಾವಿದ ಸಿನಿಮಾ ಪದ್ಮರಾಜ್ ಫಿಲಂಸ್ ಬ್ಯಾನರ್ ನಲ್ಲಿ ನಿರ್ಮಾಣವಾಗಿದ್ದು, ತೆರೆಗೆ ಬರಲು ಸಿದ್ದವಾಗಿದೆ.
ಅದಕ್ಕೆ ಮುನ್ನುಡಿ ಎಂಬಂತೆ ಪ್ರಾದೇಶಿಕ ಸೆನ್ಸಾರ್ ಮಂಡಳಿ ಕಲಾವಿದನಿಗೆ ಯು/ಎ ಪ್ರಮಾಣ ಪತ್ರ ನೀಡಿದೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಶಿವಾನಂದ್ ಹೆಚ್.ಡಿ ನಿರ್ದೇಶಿಸಿದ್ದಾರೆ. ಹನ್ನೆರಡು ವರ್ಷಗಳಿಂದ ಕನ್ನಡದ ಹಲವು ಚಿತ್ರಗಳಿಗೆ ಸಹಾಯಕ ಹಾಗೂ ಸಹ ನಿರ್ದೇಶನ ಮಾಡಿರುವ ಅನುಭವ ಇವರಿಗಿದೆ. 'ಕಲಾವಿದ' ಶಿವಾನಂದ್ ನಿರ್ದೇಶನದ ಮೊದಲ ಚಿತ್ರ.
'ಕಲಾವಿದ' ಚಿತ್ರದ ನಾಯಕನಾಗಿ ಪ್ರದೀಪ್ ಕುಮಾರ್ ಅಭಿನಯಿಸಿದ್ದಾರೆ. ಈ ಚಿತ್ರದ ನಿರ್ಮಾಪಕರು ಆಗಿರುವ ಪ್ರದೀಪ್ ಕುಮಾರ್ ಮೂಲತಃ ಹಾಸನ ಜಿಲ್ಲೆಯವರು. ಬಾಲ್ಯದಿಂದಲೇ ಸಿನಿಮಾದಲ್ಲಿ ನಟಿಸಬೇಕೆಂಬ ಆಸೆ ಹೊತ್ತು ಬೆಂಗಳೂರಿಗೆ ಬಂದ ಇವರು, ಖಾಸಗಿ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸಿದ್ದಾರೆ. ನಂತರ ಕೆಲವು ನಾಟಕಗಳಲ್ಲಿ ಅಭಿನಯಿಸಿ, ಒಂದು ವರ್ಷ ಕಾಲ ಕೆಲವು ನಿರ್ದೇಶಕರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ನಂತರ ಕೋರಮಂಗಲದಲ್ಲಿ ರಂಗ್ ದೇ ಬಸಂತಿ ಎಂಬ ಹೋಟೆಲ್ ಆರಂಭಿಸಿದ್ದಾರೆ. ಅದರಿಂದ ಬಂದ ಹಣದಿಂದ ಈ ಸಿನಿಮಾ ನಿರ್ಮಿಸಿರೋದು ಪ್ರದೀಪ್ ಕುಮಾರ್ಗಿರೋ ಸಿನಿಮಾ ಮೇಲಿನ ಪ್ಯಾಷನ್.
![kalavida Kannada Movie]()
ಕಲಾವಿದ
ಧಾರಾವಾಹಿ ಮೂಲಕ ನಟನೆ ಆರಂಭಿಸಿ, ‘ರಣರಣಕ’ ಸಿನಿಮಾದಲ್ಲಿ ನಟಿಸಿದ್ದ ಸಂಭ್ರಮ ಈ ಚಿತ್ರದ ನಾಯಕಿ. ಮಂಜುನಾಥ್ ಹೆಗ್ಡೆ, ಅರುಣಾ ಬಾಲರಾಜ್, ಮೂಗು ಸುರೇಶ್, ವರ್ಷ ಮಲ್ಲೇಶ್, ಗೀತ( ಗುಂಡಮ್ಮ) ಶ್ರೀಧರ್, ಜಗದೀಶ್, ಲೋಕೇಶ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಚಿದಾನಂದ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ವಿವೇಕ್ ಚಕ್ರವರ್ತಿ - ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡಿದ್ದಾರೆ. ವೆಂಕಿ ಯು ಡಿ ವಿ ಸಂಕಲನ ಹಾಗೂ ಆರ್ಯ ರೋಷನ್ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
ರೋರಿಂಗ್ ಸ್ಟಾರ್ ಶ್ರೀ ಮುರಳಿ ಇತ್ತೀಚೆಗೆ 'ಕಲಾವಿದ' ಚಿತ್ರದ ಪೋಸ್ಟರ್ ರಿಲೀಸ್ ಮಾಡಿ, ಚಿತ್ರತಂಡಕ್ಕೆ ಶುಭಕೋರಿದ್ದಾರೆ. ಚಿತ್ರ ಉತ್ತಮವಾಗಿ ಮೂಡಬಂದಿರುವುದಾಗಿ ತಿಳಿಸಿರುವ ಪ್ರದೀಪ್ ಕುಮಾರ್ ಚಿತ್ರ ಬಿಡುಗಡೆಗೆ ಸರ್ಕಾರ ಅನುಮತಿ ನೀಡಿದ ಕೂಡಲೆ ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ 'ಕಲಾವಿದ'ನ ಆಗಮನವಾಗಲಿದೆ ಎಂದಿದ್ದಾರೆ.
ಟಿಕ್ಟಾಕ್ ಮಾಡುತ್ತಿದ್ದ ವಾರ್ನರ್ ಮುಂದೇನು ಮಾಡ್ತಾರೆ?; ಅಶ್ವಿನ್ ತಲೆಯಲ್ಲಿ ಹೀಗೊಂದು ಪ್ರಶ್ನೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ