ರೋರಿಂಗ್ ಸ್ಟಾರ್ ಶ್ರೀಮುರಳಿ (Bagheera Movie Shooting in Goa) ಅಭಿನಯದ ಬಘೀರ ಚಿತ್ರದ ಚಿತ್ರೀಕರಣ ಎಲ್ಲಿಗೆ ಬಂದಿದೆ. ಚಿತ್ರದ ಡೈರೆಕ್ಟರ್ ಡಾಕ್ಟರ್ ಸೂರಿ ಈಗಾಗಲೇ (Kannada Movie Bagheera) ಏನೆಲ್ಲ ಚಿತ್ರೀಕರಣ ಪೂರ್ಣ ಮಾಡಿದ್ದಾರೆ. ಬಘೀರ ಚಿತ್ರದಲ್ಲಿ ರೋರಿಂಗ್ ಸ್ಟಾರ್ ಶ್ರೀಮುರಳಿ ಹೇಗೆ ಕಾಣಿಸುತ್ತಾರೆ. ಸಿನಿಮಾದ (Bagheera Kannada Most Expected Movie) ಮಾಹಿತಿಯನ್ನ ಸಿನಿಮಾ ತಂಡ ಯಾಕೆ ಬಿಟ್ಟುಕೊಡ್ತಿಲ್ಲ. ಸದ್ಯ ಸಿನಿಮಾದ ಚಿತ್ರೀಕರಣ (Bagheera Sri Murali Expected Movie) ಎಲ್ಲಿ ನಡೆಯುತ್ತಿದೆ. ಬಘೀರ ಚಿತ್ರವನ್ನ ಯಾರು ನಿರ್ಮಿಸುತ್ತಿದ್ದಾರೆ. ಸಿನಿಮಾ ಕೂಡ ಪ್ಯಾನ್ ಇಂಡಿಯಾ ಸಿನಿಮಾನಾ. ಏನ್ ಇದರ ಕಥೆ, ಈ ಎಲ್ಲ ಮಾಹಿತಿಯ ಒಂದು ಸ್ಟೋರಿ ಇಲ್ಲಿದೆ ಓದಿ.
ರೋರಿಂಗ್ ಸ್ಟಾರ್ ಶ್ರೀ ಮುರಳಿ ಬಘೀರ ಎಲ್ಲಿಗೆ ಬಂತು?
ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಬಘೀರ ಚಿತ್ರದ ಚಿತ್ರೀಕರಣ ನಡೀತಾನೇ ಇದೆ. ಆದರೆ ಈ ಸಿನಿಮಾದ ಯಾವ ಮಾಹಿತಿನೂ ಇಲ್ಲಿವರೆಗೂ ರಿವೀಲ್ ಆಗಿಯೇ ಇಲ್ಲ. ಮೊನ್ನೆ ಶ್ರೀ ಮುರಳಿ ಜನ್ಮ ದಿನಕ್ಕೆ ಬಘೀರ ಚಿತ್ರದ ಪೋಸ್ಟ್ ಒಂದೇ ರಿಲೀಸ್ ಆಗಿತ್ತು.
ಬಘೀರ ಸಿನಿಮಾ ವಿಶೇಷವಾಗಿಯೇ ಇರುವಂತೆ ಕಾಣುತ್ತಿದೆ. ಚಿತ್ರದ ಪೋಸ್ಟರ್ ಅದನ್ನ ಈಗಲೇ ಹೇಳುತ್ತಿದೆ. ಆದರೆ ಸಿನಿಮಾ ತಂಡ ಈ ಬಗ್ಗೆ ಎಲ್ಲೂ ಏನೂ ಈಗಲೇ ಹೇಳಿಕೊಂಡಿದಲ್ಲ. ಆದರೆ ಈ ಚಿತ್ರದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಒಂದಷ್ಟು ಮಾಹಿತಿ ಹರಿದಾಡುತ್ತಲೇ ಇದೆ.
ಬಘೀರ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಯಿತೇ?
ರೋರಿಂಗ್ ಸ್ಟಾರ್ ಶ್ರೀಮುರಳಿ ಚಿತ್ರ ಜೀವನದಲ್ಲಿ ಬಘೀರ ಚಿತ್ರವೂ ವಿಶೇಷವಾಗಿಯೇ ಇದೆ. ಸ್ಪೆಷಲ್ ಆಗಿಯೇ ಈ ಚಿತ್ರವನ್ನ ತೆಗೆಯಲಾಗುತ್ತಿದೆ. ಈ ಕಾರಣಕ್ಕೋ ಏನೋ, ಸಿನಿಮಾದ ಡೈರೆಕ್ಟರ್ ಡಾಕ್ಟರ್ ಸೂರಿ ಚಿತ್ರದ ಯಾವ ವಿಚಾರನ್ನೂ ಬಿಟ್ಟುಕೊಡ್ತಿಲ್ಲ. ಆದರೂ ಒಂದಷ್ಟು ವಿಷಯ ಅದ್ಹೇಗೋ ರಿವೀಲ್ ಆಗಿದೆ. ಅವು ಇಂತಿವೆ
-ಬಘೀರ ಚಿತ್ರದ ಚಿತ್ರೀಕರಣ ಶೇಕಡ 60 ರಷ್ಟು ಪೂರ್ಣ
- ಬಘೀರ ಚಿತ್ರದ ಚಿತ್ರೀಕರಣ ಶೇಕಡ 80 ರಷ್ಟು ಆದಾಗ ಹೆಚ್ಚಿನ ಮಾಹಿತಿ ರಿವೀಲ್
- ಗೋವಾದಲ್ಲಿ ಬಘೀರ ಚಿತ್ರದ ಚಿತ್ರೀಕರಣ ನಡೆಯುತ್ತಿದೆ
-ಬಘೀರ ಕನ್ನಡದ ಮತ್ತೊಂದು ಹೈ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾ
-ಹೊಂಬಾಳೆ ಪ್ರೋಡಕ್ಷನ್ನ ಮಹತ್ವದ ಸಿನಿಮಾ ಈ ಬಘೀರ
ಬಘೀರ ಸಿನಿಮಾದ ಚಿತ್ರೀಕರಣ ಸದ್ಯ ಗೋವಾದಲ್ಲಿಯೇ ನಡೆಯುತ್ತಿದೆ. ಇಲ್ಲಿ ಮಹತ್ವದ ದೃಶ್ಯಗಳ ಚಿತ್ರೀಕರಣವೂ ನಡೆಯುತ್ತಿದೆ. ಕನ್ನಡದ ಮಟ್ಟಿಗೆ ಈ ಚಿತ್ರವೂ ಒಂದು ದೊಡ್ಡ ಬಜೆಟ್ ಸಿನಿಮಾನೇ ಆಗುತ್ತಿದೆ. ಈ ಚಿತ್ರವನ್ನ ಪ್ಯಾನ್ ಇಂಡಿಯಾ ಸಿನಿಮಾ ಅಂತಲೇ ಹೇಳಲಾಗುತ್ತಿದೆ.
ಸಮಾಜ ಜಂಗಲ್ ಆದ್ರೆ ನ್ಯಾಯಕ್ಕಾಗಿ ಬರ್ತಾನೆ ಬಘೀರ!
ಬಘೀರ ಚಿತ್ರದ ಪೋಸ್ಟ್ ನೋಡಿದ್ರೆ, ಈ ಒಂದು ಸಾಲು ನಿಮ್ಮನ್ನ ಸೆಳೆಯುತ್ತದೆ. ಸಮಾಜದಲ್ಲಿ ಆಗೋ ಅನ್ಯಾಯದ ವಿರುದ್ಧ ಹೋರಾಡೋನೇ ಈ ಬಘೀರ ಅನ್ನೋದನ್ನ ಚಿತ್ರದ ಪೋಸ್ಟರ್ ಹೇಳುತ್ತಿದೆ. ಅಲ್ಲಿಗೆ ಈ ಚಿತ್ರದಲ್ಲೂ ರೋರಿಂಗ್ ಸ್ಟಾರ್ ಶ್ರೀಮುರಳಿ ಅಬ್ಬರಿಸಲಿದ್ದಾರೆ ಅಂತಲೇ ಹೇಳಬಹುದು.
ರೋರಿಂಗ್ ಸ್ಟಾರ್ ಶ್ರೀಮುರಳಿ ತಮ್ಮ ಅಭಿನಯದ ಮೂಲಕ ಜನರನ್ನ ಸೆಳೆದು ಬಿಡ್ತಾರೆ. ಸಿನಿಮಾದಲ್ಲಿ ಒಳ್ಳೆ ಕಂಟೆಂಟ್ ಇದ್ರೆ ಮುಗೀತು. ಅದು ನೀಟ್ ಆಗಿಯೇ ಶ್ರೀಮುರಳಿ ಅಭಿನಯದ ಮೂಲಕ ಜನರಿಗೆ ತಲುಪಿ ಬಿಡುತ್ತದೆ. ಅಂತಹ ಈ ಸಿನಿಮಾದ ಕೆಲಸ ಈಗ ಭರದಿಂದಲೇ ಸಾಗಿದೆ.
ಇದನ್ನೂ ಓದಿ: Yash Birthday: ದುಬೈನಲ್ಲಿ ರಾಕಿ ಭಾಯ್ ಬರ್ತ್ ಡೇ ಸೆಲೆಬ್ರೇಷನ್ ಹೀಗಿತ್ತು
ಬಘೀರ ಚಿತ್ರವನ್ನ ಹೊಂಬಾಳೆ ಪ್ರೋಡಕ್ಷನ್ ಹೌಸ್ ನಿರ್ಮಿಸುತ್ತಿದೆ. ಈ ಮೂಲಕ ಹೊಂಬಾಳೆ ಕನ್ನಡಕ್ಕೆ ಮತ್ತೊಂದು ಒಳ್ಳೆ ಸಿನಿಮಾ ಕೊಡಲಿಕ್ಕೆ ಮುಂದಾಗಿದೆ. ಆದರೆ ಈ ಚಿತ್ರದ ಚಿತ್ರೀಕರಣ ಶೇಕಡ 80 ರಷ್ಟು ಆದಾಗಲೇ ಸಿನಿಮಾ ತಂಡ ಚಿತ್ರದ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಳ್ಳಲಿದೆ ಅನ್ನೋದು ಸದ್ಯದ ಮಾಹಿತಿ ಅಷ್ಟೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ