ರೋರಿಂಗ್ ಸ್ಟಾರ್ ಶ್ರೀ ಮುರಳಿ (Roaring Star Sri Murali) ಸದ್ಯ ಬಘೀರ ಚಿತ್ರದ ಚಿತ್ರೀಕರಣದಲ್ಲಿಯೇ ಬ್ಯುಸಿ ಇದ್ದರು. ಆದರೆ ನಿನ್ನೆ ಫೈಟ್ ಸೀನ್ ವೇಳೆ ಎಡಗಾಲು (Sri Murali in Rest) ಮಂಡಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ಆದರೂ ಇಂದು ಮತ್ತೆ ಚಿತ್ರೀಕರಣಕ್ಕೆ ಹೋಗ್ಬೇಕು ಅಂತಲೇ ಪ್ಲಾನ್ ಮಾಡಿದ್ದರು. ರೋರಿಂಗ್ ಸ್ಟಾರ್ ಶ್ರೀಮುರಳಿ (Bagheer Film Shooting) ಈಗ ಏನ್ ಯೋಚನೆ ಮಾಡ್ತಿದ್ದಾರೆ. ನಿನ್ನೆ ಪೆಟ್ಟು ಮಾಡಿಕೊಂಡ ಶ್ರೀಮುರಳಿ ಇವತ್ತು ಶೂಟಿಂಗ್ ಹೋದ್ರಾ? ಇಲ್ವಾ? ಶ್ರೀಮುರಳಿ ಮನೆಗೆ ಬಂದ್ರಾ? ಇಲ್ಲವೇ ಇನ್ನೂ ಆಸ್ಪತ್ರೆಯಲ್ಲಿಯೇ ಇದ್ದಾರಾ? ಏನ್ ಈಗೀನ (Sri Murali Health Upadates) ಅಪ್ಡೇಟ್ಸ್.? ಈ ಎಲ್ಲದ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ ಓದಿ.
ನನಗೆ ಪ್ರೋಡ್ಯೂಸರ್ ಕಷ್ಟ ಗೊತ್ತಿದೆ ನಮ್ಮಪ್ಪ ಕೂಡ ಪ್ರೋಡ್ಯೂಸರ್
ರೋರಿಂಗ್ ಸ್ಟಾರ್ ಶ್ರೀಮುರಳಿ ಬಘೀರ ಚಿತ್ರದ ಚಿತ್ರೀಕರಣದ ವೇಳೆ ಎಡಗಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ರಾಕ್ ಲೈನ್ ಸ್ಟುಡಿಯೋದಲ್ಲಿ ಫೈಟ್ ದೃಶ್ಯ ತೆಗೆಯೋವಾಗಲೇ ಈ ಒಂದು ಘಟನೆ ನಡೆದು ಹೋಗಿದೆ.
ಎಡಗಾಲಿನ ಮಂಡಿ ಚಿಪ್ಪಿಗೆ ತೀವ್ರವಾಗಿಯೇ ಪೆಟ್ಟು ಬಿದ್ದಿದೆ. ಈ ಹಿಂದೆ ಮದಗಜ ಚಿತ್ರೀಕರಣ ವೇಳೆ ಕೂಡ ಇದೇ ಕಾಲಿಗೆ ಪೆಟ್ಟಾಗಿತ್ತು. ಅದೇ ಕಾಲಿಗೆ ಈಗ ಮತ್ತೊಮ್ಮೆ ಪೆಟ್ಟು ಬಿದ್ದಿದೆ.
ಬಘೀರ ಚಿತ್ರದ ಫೈಟ್ ಸೀನ್-ಮಂಡಿಯೂರೋ ದೃಶ್ಯ
ಬಘೀರ ಚಿತ್ರಕ್ಕಾಗಿಯ ರಾಕ್ ಲೈನ್ ಸ್ಟುಡಿಯೋದಲ್ಲಿ ಸೆಟ್ ಹಾಕಲಾಗಿದೆ. ಇದೇ ಸೆಟ್ನಲ್ಲಿಯೇ ಸಾಹಸ ನಿರ್ದೇಶಕ ಚೇತನ್ ಅದ್ಭುತ ಫೈಟ್ ಸೀನ್ ಕಪೋಜ್ ಮಾಡಿದ್ದರು.
ಇದೇ ಸೀನ್ ನಲ್ಲಿಯೇ ರೋರಿಂಗ್ ಸ್ಟಾರ್ ಶ್ರೀಮುರಳಿ ಎಗರಿ ಟ್ವಿಸ್ಟ್ ಆಗಿಯೇ, ನೆಲಕ್ಕೆ ಮಂಡಿಯೂರಬೇಕಿತ್ತು. ಅದನ್ನ ಪಕ್ಕಾ ಪ್ಲಾನ್ ಮಾಡಿಕೊಂಡೇ ಶ್ರೀಮುರಳಿ ಆ್ಯಕ್ಷನ್ ದೃಶ್ಯದಲ್ಲಿ ಪಾಲ್ಗೊಂಡಿದ್ದರು.
ಹಳೆ ನೋವು, ಹೊಸ ಪೆಟ್ಟು-ರೋರಿಂಗ್ ಸ್ಟಾರ್ ರೆಸ್ಟು!
ಆದರೆ ಈ ದೃಶ್ಯ ತೆಗೆಯೋವಾಗಲೇ, ಶ್ರೀಮುರಳಿ ನೆಲಕ್ಕೆ ಮಂಡಿಯೂರಿದ್ದಾರೆ. ಆಗಲೇ ಮಂಡಿ ಚಿಪ್ಪಿಗೆ ಮತ್ತೆ ಪೆಟ್ಟು ಬಿದ್ದಿದೆ. ನಡೆಯಲಾರದಷ್ಟು ಯಾತನೆ ಕೂಡ ಕಾಣಿಸಿಕೊಂಡಿದೆ. ಆ ಕೂಡಲೇ ರಾಕ್ ಲೈನ್ ಸ್ಟುಡಿಯೋದಿಂದ ಶ್ರೀಮುರಳಿ ಆಸ್ಪತ್ರೆಗೂ ತೆರಳಿದ್ದಾರೆ.
ವೈದ್ಯರು ಒಂದಷ್ಟು ಸಲಹೆಯನ್ನೂ ಕೊಟ್ಟು ಕಳಿಸಿದ್ದಾರೆ. ಆ ಪ್ರಕಾರ ಈಗ ಶ್ರೀಮುರಳಿ ಮನೆಯಲ್ಲಿಯೇ ಇದ್ದಾರೆ. ರೆಸ್ಟ್ ಕೂಡ ತೆಗೆದುಕೊಳ್ಳುತ್ತಿದ್ದಾರೆ. ಆದರೆ ನಿನ್ನೆ ಪೆಟ್ಟು ಮಾಡಿಕೊಂಡ ಶ್ರೀಮುರಳಿ ಇವತ್ತು ಶೂಟಿಂಗ್ಗೆ ಹೋಗಬೇಕು ಅಂತಲೇ ಅಂದುಕೊಂಡಿದ್ದರು.
ಇಂದು ಬಘೀರ ಶೂಟಿಂಗ್ ಹೋಗೋಕೆ ಶ್ರೀಮುರಳಿ ಪ್ಲಾನ್
ನಿರ್ಮಾಪಕರು ಖರ್ಚು ಮಾಡಿ ಸೆಟ್ ಹಾಕಿಸಿದ್ದಾರೆ. ಒಂದು ದಿನ ವೇಸ್ಟ್ ಆದ್ರೂ ಕಷ್ಟ ಆಗುತ್ತದೆ. ನಮ್ಮ ತಂದೆ ಕೂಡ ಪ್ರೋಡ್ಯೂಸರ್ ಆಗಿದ್ದವರು. ಹಾಗಾಗಿಯೇ ಟೈಮ್ ವೇಸ್ಟ್ ಮಾಡಬಾರದು ಅಂತಲೇ ಇಂದು ಶ್ರೀಮುರಳಿ ಶೂಟಿಂಗ್ ಗೆ ಹೋಗೋಕೆ ಪ್ಲಾನ್ ಮಾಡಿದ್ದರು.
ಆದರೆ ಮಂಡಿ ನೋವು ತೀವ್ರವಾಗಿಯೇ ಇದೆ. ನಡೆಯಲು ಕೂಡ ಆಗದಂತೆ ಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿಯೇ ಇಂದು ಶೂಟಿಂಗ್ಗೆ ಹೋಗಬೇಕು ಅಂದು ಕೊಂಡಿದ್ದ ಶ್ರೀಮುರಳಿ ಈಗ ಶೂಟಿಂಗ್ಗೆ ಹೋಗೋದನ್ನ ಕ್ಯಾನ್ಸಲ್ ಮಾಡಿದ್ದಾರೆ.
ಇದನ್ನೂ ಓದಿ: Rishab Shetty: ಬಾಲಿವುಡ್ ಮಂದಿಗೆ ರಿಷಬ್ ಶೆಟ್ಟಿ ಧನ್ಯವಾದ ಹೇಳಿದ್ಯಾಕೆ? ಇಲ್ಲಿದೆ ನೋಡಿ ಆ ಹೊಸ ವಿಷಯ!
ಅತಿ ಶೀಘ್ರದಲ್ಲಿಯೇ ಶೂಟಿಂಗ್ ಹೋಗೋಕೆ ಶ್ರೀಮುರಳಿ ತವಕಿಸುತ್ತಿದ್ದಾರೆ. ಆದರೆ ವೈದ್ಯರು ರೆಸ್ಟ್ಗೆ ಸಲಹೆ ಕೊಟ್ಟಿದ್ದಾರೆ. ಎಡಗಾಲ ಮಂಡಿಗೆ ಶಸ್ತ್ರ ಚಿಕಿತ್ಸೆಗೂ ಸಲಹೆ ಕೊಟ್ಟಿದ್ದಾರೆ ಅನ್ನೋ ಮಾಹಿತಿ ಕೂಡ ಇದೆ. ಒಟ್ಟಾರೆ, ಶ್ರೀಮುರಳಿ ಸದ್ಯ ಮನೆಯಲ್ಲಿಯೇ ರೆಸ್ಟ್ ತೆಗೆದುಕೊಳ್ಳುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ