ರಾಜಮೌಳಿ ನಿರ್ದೇಶನದಲ್ಲಿ ಜೂನಿಯರ್ ಎನ್ಟಿಆರ್ ಹಾಗೂ ರಾಮ್ ಚರಣ್ ತೇಜ ತೆರೆ ಹಂಚಿಕೊಳ್ಳುತ್ತಿರುವ ಸಿನಿಮಾ ಆರ್ಆರ್ಆರ್. ಬಾಹುಬಲಿ ನಂತರ ರಾಜಮೌಳಿ ಅವರು ನಿರ್ದೇಶನ ಮಾಡುತ್ತಿರುವ ಚಿತ್ರ ಇದಾಗಿದ್ದು, ಇದರ ಬಗ್ಗೆ ಸಿನಿಪ್ರಿಯರಲ್ಲಿ ಸಾಕಷ್ಟು ದೊಡ್ಡ ಮಟ್ಟದ ನಿರೀಕ್ಷೆ ಇದೆ. ಈ ಚಿತ್ರದ ಬಗ್ಗೆ ರಾಜಮೌಳಿ ಅವರ ನಿರ್ದೇಶನದಿಂದಾಗಿ ಟಾಲಿವುಡ್ ಮಾತ್ರವಲ್ಲದೆ ಬೇರೆ ಭಾಷೆಗಳ ಚಿತ್ರರಂಗವರಿಗೂ ತುಂಬಾ ಕುತೂಹಲವಿದೆ. ಬಾಹುಬಲಿ ಸಿನಿಮಾದಿಂದಾಗಿ ರಾಜಮೌಳಿ ಅವರ ನಿರ್ದೇಶನದ ಸಿನಿಮಾಗಳ ಮೇಲೆ ಎಲ್ಲರ ಗಮನ ನೆಟ್ಟಿದೆ. ಎಲ್ಲ ಸರಿಯಾಗಿದಿದ್ದರೆ, ಈಗಾಗಲೇ ಆರ್ಆರ್ಆರ್ ರಿಲೀಸ್ ಆಗಿರುತ್ತಿತ್ತು. ಆದರೆ ಕೊರೋನಾ ಕಾರಣದಿಂದಾಗಿ ಸಿನಿಮಾ ಚಿತ್ರೀಕರಣಕ್ಕೆ ಬ್ರೇಕ್ ಬಿದ್ದಿತ್ತು. ಲಾಕ್ಡೌನ್ ಸಡಿಲಗೊಂಡ ಕೂಡಲೇ ರಾಜಮೌಳಿ ಹಾಗೂ ಅವರ ತಂಡ ಶೂಟಿಂಗ್ ಆರಂಭಿಸಿತು. ಸಿನಿಮಾದ ನಿರ್ಮಾಪಕ ದಾನಯ್ಯ, ನಿರ್ದೇಶಕ ರಾಜಮೌಳಿ ಹಾಗೂ ರಾಮ್ ಚರಣ್ಗೆ ಕೋವಿಡ್ ಸೋಂಕಾಗಿದ್ದ ಕಾರಣ ಶೂಟಿಂಗ್ ಮತ್ತಷ್ಟು ತಡವಾಯಿತು. ಇದ್ದ ಎಲ್ಲ ಅಡೆತಡೆಗಳು ನಿವಾರಣೆಯಾಗಿದ್ದು, ಇತ್ತೀಚೆಗಷ್ಟೆ ರಾಜಮೌಳಿ ಅವರು ಆರ್ಆರ್ಆರ್ ಸಿನಿಮಾದ ಕ್ಲೈಮ್ಯಾಕ್ಸ್ ಚಿತ್ರೀಕರಣದ ಅಪ್ಡೇಟ್ ಕೊಟ್ಟಿದ್ದರು. ನಂತರ ಇದೇ ಚಿತ್ರಂಡ ಸಿನಿಮಾದ ರಿಲೀಸ್ ದಿನಾಂಕ ಪ್ರಕಟಿಸಿತು.
ಹೈವೋಲ್ಟೇಜ್ ಸಿನಿಮಾಗಾಗಿ ರಾಮ್ಚರಣ್ ಹಾಗೂ ಜೂನಿಯರ್ ಎನ್ಟಿಆರ್ ಅಭಿಮಾನಿಗಳ ಜೊತೆ ಇತರೆ ಸಿನಿಪ್ರಿಯರು ಕಾಯುತ್ತಿದ್ದಾರೆ. ಇದೇ ವರ್ಷ ಅಕ್ಟೋಬರ್ 13ಕ್ಕೆ ಆರ್ಆರ್ಆರ್ ರಿಲೀಸ್ ಆಗಲಿದೆ. ಸಿನಿಪ್ರಿಯರಲ್ಲಿ ಕುತೂಹಲ ಹೆಚ್ಚಿಸುವ ಕಾರಣಕ್ಕೆ ಚಿತ್ರತಂಡ ಈಗ ಚಿತ್ರದ ಮೇಕಿಂಗ್ ವಿಡಿಯೋ ರಿಲೀಸ್ ಮಾಡಿದೆ.
ನಿರ್ದೇಶಕ ರಾಜಮೌಳಿ ಮಾಡಿರುವ ಲೆಟೆಸ್ಟ್ ಟ್ವೀಟ್...
A glimpse into the making of @RRRMovie… Hope you all love it.:)https://t.co/afM8x6aIOP#RoarOfRRR #RRRMovie @tarak9999 @AlwaysRamCharan @ajaydevgn @aliaa08 @OliviaMorris891 @DVVMovies @PenMovies @LycaProductions
ಇಂದು ಬೆಳಿಗ್ಗೆ 11 ಗಂಟೆಗೆ ಚಿತ್ರತಂಡ ಮೇಕಿಂಗ್ ವಿಡಿಯೋ ಬಿಡುಗಡೆ ಮಾಡಿದೆ. ಈ ವಿಡಿಯೋ ನೋಡಿದವರಿಗೆ ಸಿನಿಮಾದ ಬಗ್ಗೆ ಇದ್ದ ನಿರೀಕ್ಷೆ ದುಪ್ಪಟ್ಟಾಗಿದೆ. ಇನ್ನು ಬಾಹುಬಲಿಯನ್ನು ತೆರೆ ಮೇಲೆ ತರಲು ಶ್ರಮಿಸಿದ್ದ ತಂಡವೇ ಈ ಚಿತ್ರದಲ್ಲೂ ಕೆಲಸ ಮಾಡುತ್ತಿದೆ. ಇನ್ನು ಈ ವಿಡಿಯೋ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಲಕ್ಷಗಟ್ಟಲೆ ವೀಕ್ಷಣೆ ಕಂಡಿದೆ.
ರಾಮರಾಜು ಪಾತ್ರದಲ್ಲಿ ರಾಮ್ ಚರಣ್ ಹಾಗೂ ಭೀಮ್ ಆಗಿ ಜೂನಿಯರ್ ಎನ್ಟಿಆರ್ ನಟಿಸುತ್ತಿದ್ದಾರೆ. ರಾಮ್ ಚರಣ್ ಹುಟ್ಟುಹಬ್ಬಕ್ಕೆ ರಾಮರಾಜು ಪಾತ್ರವನ್ನು ಪರಿಚಯಿಸುವ ವಿಡಿಯೋ ರಿಲೀಸ್ ಮಾಡಲಾಗಿತ್ತು. ಈ ವಿಡಿಯೋಗೆ ಎನ್ಟಿಆರ್ ಕಂಠದಾನ ಮಾಡಿದ್ದರು. ಮಲಯಾಳಂ ಒಂದು ಭಾಷೆಯಲ್ಲಿ ಮಾತ್ರ ಬೇರೆಯವರ ದನಿಯಿತ್ತು.
ಇದನ್ನೂ ಓದಿ: ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಅಲ್ಲು ಅರ್ಜುನ್ ಮಗಳು ಸ್ಟೈಲಿಶ್ ಪ್ರಿನ್ಸೆಸ್ ಅಲ್ಲು ಅರ್ಹಾ
ಅಂತೆಯೇ ಎನ್ಟಿಆರ್ ಅವರ ಭೀಮ್ ಪಾತ್ರವನ್ನು ರಾಮ್ ಚರಣ್ ಅವರ ಕಂಠದಲ್ಲಿ ಪರಿಚಯಿಸಲಾಗಿತ್ತು. ಆದರೆ ಭೀಮ್ ಪಾತ್ರದ ವಿಡಿಯೋವನ್ನು ಲಾಕ್ಡೌನ್ ಸಡಿಲಗೊಂಡ ನಂತರ ರಿಲೀಸ್ ಮಾಡಲಾಯಿತು.
ಇದನ್ನೂ ಓದಿ: Bigg Boss 8 Kannada: ಸುಳ್ಳು ಹೇಳುತ್ತಾ ಜಗಳ ಹಚ್ಚುವ ಕೆಲಸ ಮಾಡುವ ಚಕ್ರವರ್ತಿಗೆ ಹಾಡಿನ ಮೂಲಕ ಬಿಸಿ ಮುಟ್ಟಿಸಿದ ಶಮಂತ್ ಗೌಡ-ಸಂಬರಗಿ
ಅಂದಾಜು 400 ಕೋಟಿ ಬಜೆಟ್ನಲ್ಲಿ ಆರ್ಆರ್ಆರ್ ಸಿನಿಮಾ ರಿಲೀಸ್ ಆಗಲಿದೆ. ಇದರಲ್ಲಿ ಹಾಲಿವುಡ್ ಹಾಗೂ ಬಾಲಿವುಡ್ ಸ್ಟಾರ್ಗಳೂ ನಟಿಸುತ್ತಿದ್ದಾರೆ. ಬಾಲಿವುಡ್ನ ಆಲಿಯಾ ಭಟ್ ಹಾಗೂ ಅಜಯ್ ದೇವಗನ್ ಸಹ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಒಲಿವಿಯಾ ಮೊರಿಸ್ ಸಹ ತಾರಾಗಣದಲ್ಲಿದ್ದಾರೆ. ಈ ಸಿನಿಮಾ ರಿಲೀಸ್ ಆಗುವ ಹಂತ ತಲುಪಿದ್ದಕ್ಕೆ ಅಭಿಮಾನಿಗಳು ಖುಷಿಯಲ್ಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ