ಖ್ಯಾತ ಗಾಯಕಿ ವಸುಂಧರಾ ದಾಸ್​ಗೆ ಕ್ಯಾಬ್​ ಚಾಲಕನಿಂದ ಕಿರುಕುಳ; ದೂರು ದಾಖಲು

Latha CG | news18
Updated:November 2, 2018, 12:59 PM IST
ಖ್ಯಾತ ಗಾಯಕಿ ವಸುಂಧರಾ ದಾಸ್​ಗೆ ಕ್ಯಾಬ್​ ಚಾಲಕನಿಂದ ಕಿರುಕುಳ; ದೂರು ದಾಖಲು
ವಸುಂಧರಾ ದಾಸ್
  • News18
  • Last Updated: November 2, 2018, 12:59 PM IST
  • Share this:
-ಮುನಿರಾಜು, ನ್ಯೂಸ್​ 18 ಕನ್ನಡ

ಬೆಂಗಳೂರು,(ನ.02): ಸಿಲಿಕಾನ್ ಸಿಟಿಯಲ್ಲಿ ದಿನೇ ದಿನೇ ಕ್ಯಾಬ್​ ಚಾಲಕರ ಉಪಟಳ ಹೆಚ್ಚಾಗುತ್ತಿದೆ. ಅವಾಚ್ಯ ಶಬ್ಧಗಳಿಂದ ನಿಂದಿಸುವುದು, ಲೈಂಗಿಕ ಕಿರುಕುಳ ನೀಡುವುದು. ಹೀಗೆ ಅವರ ಉಪಟಳದಿಂದ ಪ್ರಯಾಣಿಕರು ಬೇಸತ್ತಿದ್ದಾರೆ. ಇದೀಗ ಖ್ಯಾತ ಗಾಯಕಿ ವಸುಂಧರಾ ದಾಸ್​ಗೆ ಕ್ಯಾಬ್​ ಚಾಲಕನೋರ್ವ ಕಿರುಕುಳ ನೀಡಿದ್ದಾನೆ.

ಈ ಘಟನೆ ನಡೆದಿರುವುದು ಅಕ್ಟೋಬರ್​ 29 ರ ಸಂಜೆ 4.30 ರ ಸುಮಾರಿಗೆ. ಆದರೆ ಈ ಪ್ರಕರಣ ಈಗ  ಬೆಳಕಿಗೆ ಬಂದಿದೆ. ಬೆಂಗಳೂರಿನ ಹೃದಯ ಭಾಗದಲ್ಲೇ ಇಂತಹ ಘಟನೆ ಸಂಭವಿಸಿದೆ. ಮಲ್ಲೇಶ್ವರಂನ ಮಾರ್ಗೋಸಾ ರಸ್ತೆಯಲ್ಲಿ ವಸುಂಧರಾ ದಾಸ್​ ಹೋಗುತ್ತಿದ್ದಾಗ, ಕ್ಯಾಬ್​ ಚಾಲಕ ಭಾಷ್ಯಂ ಸರ್ಕಲ್ ಸಿಗ್ನಲ್‌ನಿಂದ ಹಿಂಬಾಲಿಸಿಕೊಂಡು ಬಂದಿದ್ದಾನೆ. ಇಟಿಯೋಸ್​ ಕಾರಿನಲ್ಲಿ ಬಂದ ಆತ ಮಲ್ಲೇಶ್ವರಂ 18ನೇ ಕ್ರಾಸ್ ಬಳಿ ಕಾರು ಅಡ್ಡಗಟ್ಟಿದ್ದಾನೆ. ಬಳಿಕ ಆತ ಕಾರಿನಿಂದ ಇಳಿದು ವಸುಂಧರಾ ದಾಸ್ ಕಾರಿನ ಬಾಗಿಲು ತೆರೆಯಲು ಯತ್ನಿಸಿದ್ದಾನೆ. ಇದೇ ವೇಳೆ ವಸುಂಧರಾ ದಾಸ್​ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಬಳಿಕ ಟ್ರಾಫಿಕ್ ಹೆಚ್ಚಾಗಿದ್ದರಿಂದ ಅಲ್ಲಿಂದ ತೆರಳಿದ್ದಾನೆ. ಕ್ಯಾಬ್​ ಚಾಲಕನ ಕಾರು ನಂಬರ್ KA-05.AE-3933 ಎನ್ನಲಾಗಿದೆ.

ಇದನ್ನೂ ಓದಿ: ಲವ್ - ಸೆಕ್ಸ್ - ದೋಖಾ: ಬೆಡ್​ ರೂಮ್​ನಲ್ಲಿ ಹೆಂಡತಿ ಜೊತೆ ಅವನಿದ್ದ..!

ಈ ಸಂಬಂಧ ವಸುಂಧರಾ ದಾಸ್ ಮಲ್ಲೇಶ್ವರಂ ಠಾಣೆಗೆ ದೂರು ನೀಡಿದ್ದಾರೆ. ಐಪಿಸಿ ಸೆಕ್ಷನ್ 509, 341, 354 ಮತ್ತು 504ರ ಅಡಿ ಪ್ರಕರಣ ದಾಖಲಾಗಿದೆ. ಪೊಲೀಸರು ಇಟಿಯೋಸ್ ಕಾರು ಚಾಲಕನಿಗಾಗಿ ಶೋಧ ನಡೆಸಿದ್ದಾರೆ.

ಇದನ್ನೂ ನೋಡಿ:

First published:November 2, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading