ಮೂರು ವರ್ಷದ ಸಂಬಂಧಕ್ಕೆ ಬ್ರೇಕ್​; ನಾನು ದ್ವಿಲಿಂಗಿ ಎಂದ ನಟಿ!

ಇತ್ತೀಚೆಗೆ ತಮ್ಮ ಇನ್​​ಸ್ಟಾಗ್ರಾಂನಲ್ಲಿ ಸ್ಟೋರಿಯಲ್ಲಿ ಪೋಸ್ಟ್​ವೊಂದನ್ನು ಹಾಕಿರುವ ಲಿಲಿ ರೀನ್ಹಾರ್ಟ್​ ‘ನಾನು ಪಶ್ಚಿಮ ಹಾಲಿವುಡ್​​, ಕ್ಯಾಲಿಫೋರ್ನಿಯಾದ ಎಲ್​​ಜಿಬಿಟಿಕ್ಯೂ+ಫಾರ್​​ #ಬ್ಲಾಕ್​​​ ಲೈವ್ಸ್​ಮ್ಯಾಟರ್​​​ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದೇನೆ. ಲೈಂಗಿಕತೆಯ ಬಗ್ಗೆ ಮಾತನಾಡಲಿದ್ದೇನೆ ಎಂದು ಬರೆದುಕೊಂಡಿದ್ದಾರೆ

ಲಿಲಿ ರೀನ್ಹಾರ್ಟ್​

ಲಿಲಿ ರೀನ್ಹಾರ್ಟ್​

 • Share this:
  ಹಾಲಿವುಡ್​​  ‘ರಿವರ್​ಡೇಲ್‘​​ ಸಿನಿಮಾದ ನಟಿ ಲಿಲಿ ರೀನ್ಹಾರ್ಟ್​ ತಾನು ದ್ವಿಲಿಂಗಿ ಎಂದು ಹೇಳಿಕೊಂಡಿದ್ದಾರೆ. 23 ವರ್ಷದ ರೀನ್ಹಾರ್ಟ್​  ‘ದಿ ಸೂಟ್​​ ಲೈಫ್​​​​ ಆಫ್​​ ಜಾಕ್​​​ ಆ್ಯಂಡ್​​ ಕೋಡಿ‘ ಸಿನಿಮಾದ ನಟ ಕೋಲ್​​​ ಸ್ಟ್ರೌಟ್​ ಜೊತೆಗೆ ಸಂಬಂಧದಲ್ಲಿದ್ದರು. ಇತ್ತೀಚೆಗೆ ಇವರಿಬ್ಬರು ಸಂಬಂಧ ಮುರಿದುಬಿದ್ದಿದೆ. ಇದಾಗ ಬಳಿಕ  ಲಿಲಿ ರೀನ್ಹಾರ್ಟ್​ ನಾನು ದ್ವಿಲಿಂಗಿ ಎಂದು ಹೇಳಿಕೊಂಡಿದ್ದಾರೆ.

  ಇತ್ತೀಚೆಗೆ ತಮ್ಮ ಇನ್​​ಸ್ಟಾಗ್ರಾಂನಲ್ಲಿ ಸ್ಟೋರಿಯಲ್ಲಿ ಪೋಸ್ಟ್​ವೊಂದನ್ನು ಹಾಕಿರುವ ಲಿಲಿ ರೀನ್ಹಾರ್ಟ್​ ‘ನಾನು ಪಶ್ಚಿಮ ಹಾಲಿವುಡ್​​, ಕ್ಯಾಲಿಫೋರ್ನಿಯಾದ ಎಲ್​​ಜಿಬಿಟಿಕ್ಯೂ+ಫಾರ್​​ #ಬ್ಲಾಕ್​​​ ಲೈವ್ಸ್​ಮ್ಯಾಟರ್​​​ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದೇನೆ. ಲೈಂಗಿಕತೆಯ ಬಗ್ಗೆ ಮಾತನಾಡಲಿದ್ದೇನೆ ಎಂದು ಬರೆದುಕೊಂಡಿದ್ದಾರೆ.

  ನಾನು ಇಲ್ಲಿಯವರೆಗೆ ಈ ವಿಚಾರವನ್ನು ಸಾರ್ವನಿಕವಾಗಿ ಹೇಳಿಕೊಂಡಿಲ್ಲ. ನಾನು ದ್ವಿಲಿಂಗಿ ಎಂದು ಹೆಮ್ಮೆ ಪಡುತ್ತೇನೆ . ನಾನು ಪ್ರತಿಭಟನೆಗೆ ಸೇರುತ್ತೇನೆ, ನೀವು ಈ ಪ್ರತಿಭಟನೆಗೆ ಬಂದು ಭಾಗವಹಿಸಿ ಎಂದು ಕಾರ್ಯಕ್ರಮದ​ ವಿವರಗಳನ್ನು ಸಹಿತ ರೀನ್ಹಾರ್ಟ್ ಬರೆದು ಹಾಕಿದ್ದಾರೆ.  23 ವರ್ಷದ ಲಿಲಿ ರೀನ್ಹಾರ್ಟ್​ ಮೂರು ವರ್ಷಗಳ ಕಾಲ ಗೆಳೆಯ ಕೋಲ್​​ ಸ್ಟ್ರೌಲ್​ ಜೊತೆಗೆ ರಿಲೇಷನ್​ಶಿಫ್​ನಲ್ಲಿದ್ದರು. ಆದರೆ ಇತ್ತೀಚೆಗೆ ಇವರಿಬ್ಬರ ಸಂಬಂಧ ಮುರಿದುಬಿದ್ದಿದೆ. ಅದಾದ ಬಳಿಕ ತಾನು ದ್ವಿಲಿಂಗಿ ಎಂದು ರೀನ್ಹಾರ್ಟ್​ ಹೇಳಿಕೊಂಡಿದ್ದಾರೆ. ಲಿಲಿ ರೀನ್ಹಾರ್ಟ್​ ‘ರಿವರ್​​ಡೇಲ್​‘ ಸಿನಿಮಾಗೆ ‘ಟೀನ್​​​ ಚಾಯ್ಸ್​ ಅವಾರ್ಡ್​‘ ಪಡೆದಿದ್ದಾರೆ.

  BSNL: ಬಿಎಸ್​ಎನ್​ಎಲ್ 365 ರೂ. ಪ್ರಿಪೇಯ್ಡ್ ಪ್ಲಾನ್​; ಒಂದು ವರ್ಷ ವ್ಯಾಲಿಡಿಟಿ!

  ಕೊರೋನಾ ನಿಧಿ ಸಂಗ್ರಹಕ್ಕೆ ತನ್ನ ನಗ್ನ ಫೋಟೋ ಹರಾಜಿಗಿಟ್ಟ ನಟಿ!
  First published: