Viral Video: ಅಯ್ಯೋ.. ಇದೇನಾಯ್ತು ಜೆನಿಲಿಯಾ ಗಂಡನಿಗೆ? ಹಿಂಗಾ ಊಟ ಮಾಡೋದು ರಿತೇಶ್​ ದೇಶ್​​ಮುಖ್​​​!

ಕೆಲವು ಮರಾಠಿ ಮತ್ತು ಹಿಂದಿ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡುತ್ತಿರುವ ರಿತೇಶ್ ಈಗ ಮತ್ತೊಂದು ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್(Viral) ಆಗುತ್ತಿದೆ. ಈ ವಿಡಿಯೋದಲ್ಲಿ ರಿತೇಶ್ ಅವತಾರ ನೋಡಿ ಅಭಿಮಾನಿಗಳು ಮುಗುಳ್ನಕ್ಕಿದ್ದಾರೆ.

ರಿತೇಶ್​ ದೇಶ್​​ಮುಖ್​

ರಿತೇಶ್​ ದೇಶ್​​ಮುಖ್​

  • Share this:
ನಟ ರಿತೇಶ್ ದೇಶ್​ ಮುಖ್(Riteish Deshmukh)ಮರಾಠಿ(Marathi)-ಹಿಂದಿ(Hindi) ಚಿತ್ರರಂಗದಲ್ಲಿ ಜನಪ್ರಿಯ ಹೆಸರು. ಬೆಳ್ಳಿತೆರೆಯಲ್ಲಿ ರಿತೇಶ್ ಜನಪ್ರಿಯರಾಗಿರುವಂತೆಯೇ, ಅವರು ಸಾಮಾಜಿಕ ಮಾಧ್ಯಮ(Social Media)ದಲ್ಲಿ ಜನಪ್ರಿಯರಾಗಿದ್ದಾರೆ. ಅದರ ಹಲವು ರೀಲ್(Reel) ಗಳು ವೈರಲ್ ಆಗುತ್ತಿವೆ. ಅವರು ಮತ್ತು ಅವರ ಪತ್ನಿ, ನಟಿ ಜೆನಿಲಿಯಾ ಡಿಸೋಜಾ(Genelia D’Souza) ದೇಶಮುಖ್  ಇನ್‌ಸ್ಟಾಗ್ರಾಮ್‌ನಲ್ಲಿ ಹಲವಾರು ಹಾಸ್ಯಮಯ ರೀಲ್‌ಗಳನ್ನು ಹಂಚಿಕೊಂಡಿದ್ದಾರೆ, ಈ ರೀಲ್‌ಗಳಿಗೆ ಅಭಿಮಾನಿಗಳು ವಿಭಿನ್ನ ರೀತಿಯಲ್ಲಿ ಕಮೆಂಟ್(Comment) ಮಾಡುತ್ತಾರೆ. ಕೆಲವು ಮರಾಠಿ ಮತ್ತು ಹಿಂದಿ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡುತ್ತಿರುವ ರಿತೇಶ್ ಈಗ ಮತ್ತೊಂದು ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್(Viral) ಆಗುತ್ತಿದೆ. ಈ ವಿಡಿಯೋದಲ್ಲಿ ರಿತೇಶ್ ಅವತಾರ ನೋಡಿ ಅಭಿಮಾನಿಗಳು ಮುಗುಳ್ನಕ್ಕಿದ್ದಾರೆ.

ತಟ್ಟೆ ತುಂಬಾ ಊಟ ಮಾಡಿದ ರಿತೇಶ್​!

ವೈರಲ್​ ಆದ ಈ  ವಿಡಿಯೋದಲ್ಲಿ ರಿತೇಶ್ ಊಟದ ಬಗ್ಗೆ ಮಾತನಾಡಿದ್ದಾರೆ. ತಮ್ಮ ತಟ್ಟೆಯಲ್ಲಿ ಸಾಕಷ್ಟು ಆಹಾರವನ್ನು ಹಾಕಿಕೊಂಡು ವಿಚಿತ್ರವಾಗಿ ತಿನ್ನುತ್ತಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಯಾವ ಮಟ್ಟಿಗೆ ಇವರು ಊಟ ಮಾಡಿದ್ದಾರೆ ಅಂದರೆ, ಅವರ ಹೊಟ್ಟೆ ಅಂಗಿಯಿಂದ ಹೊರ ಬಂದು ಗುಂಡಿಗಳು ಕಳಚಿಕೊಂಡಿದೆ. ಹಾಗಂತ ಇದು ರಿಯಲ್​ ಅಲ್ಲ ರೀಲ್​. ಹೌದು, ಇನ್​ಸ್ಟಾಗ್ರಾಂ ರೀಲ್ಸ್​ಗಾಗಿ ಈ ರಿತೇಶ್​ ದೇಶ್​ ಮುಖ್​ ಡಿಫ್ರೆಂಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ ಈ ವಿಡಿಯೋಗೆ ಹಲವಾರು ಜನರು ಚಿತ್ರ, ವಿಚಿತ್ರ ರೀತಿಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.
View this post on Instagram


A post shared by Riteish Deshmukh (@riteishd)

ಮಿಸ್ಟರ್​ ಮಮ್ಮಿ ಸಿನಿಮಾಗಾಗಿ ಈ ಅವತಾರ!

ಇಷ್ಟು ಫಿಟ್ ಆಗಿರುವ ರಿತೇಶ್ ಗೆ ಇಷ್ಟು ದೊಡ್ಡ ಹೊಟ್ಟೆ ಹೇಗೆ ಬಂತು ಎಂದು ಈಗ ನಿಮಗೆ ಆಶ್ಚರ್ಯವಾಗಬಹುದು? ಇದಕ್ಕೆ ರಿತೇಶ್ ಅವರ ಹೊಸ ಚಿತ್ರ - ಮಿಸ್ಟರ್ ಮಮ್ಮಿ ಎಂಬ ಸಿನಿಮಾವೇ ಉತ್ತರ. ರಿತೇಶ್ 'ಯೇ ಲೋ ಕ್ಯಾಲೋರಿ ಮೀಲ್ಸ್​' ಎಂದು ರಿತೇಶ್​ ದೇಶ್​ ಮುಖ್ ಬರೆದುಕೊಂಡಿದ್ದಾರೆ. ತೂಕ ಹೆಚ್ಚಿಸಿಕೊಳ್ಳಿ ಎಂದು ನಿಮ್ಮ ನಿರ್ದೇಶಕರು ಹೇಳಿದಾಗ ಹೀಗಾಗುತ್ತದೆ ಎಂದು ರಿತೇಶ್​​ ಅವರು ಹೇಳಿದ್ದಾರೆ. ನೋಡುವುದಕ್ಕೆ ಈ ವಿಡಿಯೋ ಸಖತ್​ ಫನ್ನಿಯಾಗಿತ್ತು ಅಭಿಮಾನಿಗಳು ಮತ್ತೆ ಮತ್ತೆ ನೋಡುತ್ತಿದ್ದಾರೆ.

ಇದನ್ನೂ ಓದಿ: ಇದಕ್ಕಿಂತ ಇನ್ಯಾವ ಲಕ್​ ಬೇಕ್​ ಗುರೂ! ಅದ್ಧೂರಿಯಾಗಿ ನೆರವೇರಿದ ವಿಜಯ್​ - ರಶ್ಮಿಕಾ ಸಿನಿಮಾ ಮುಹೂರ್ತ

ವೈರಲ್​ ಆಗಿತ್ತು ಮಿಸ್ಟರ್​ ಮಮ್ಮಿ ಸಿನಿಮಾದ ಪೋಸ್ಟರ್​

ಜನವರಿಯಲ್ಲಿ ರಿತೇಶ್ ದೇಶ್‌ಮುಖ್ ಮತ್ತು ಜೆನಿಲಿಯಾ ದೇಶಮುಖ್ ಕಾಮಿಡಿ ಸಿನಿಮಾ ಮಿಸ್ಟರ್ ಮಮ್ಮಿ ಘೋಷಿಸಿದ್ದರು. ಈ ಸಿನಿಮಾದ ಪೋಸ್ಟರ್​ ಅನ್ನು ರಿತೇಶ್ ಪೋಸ್ಟರ್​ ಮಾಡಿದ್ದಾರೆ. ಈ ಚಿತ್ರದ ಪೋಸ್ಟರ್ ತುಂಬಾ ಕುತೂಹಲಕಾರಿಯಾಗಿ ಕಾಣುತ್ತಿದೆ, ಹೆಸರೇ ಹೇಳುವಂತೆ ಸಿನಿಮಾದಲ್ಲಿ ಏನೋ ಒಂದು ವಿಚಿತ್ರ ಕಾಣಿಸುತ್ತಿದೆ. ಈ ನಡುವೆ ಮಿಸ್ಟರ್ ಮಮ್ಮಿ ಚಿತ್ರವನ್ನು ಶಾದ್ ಅಲಿ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಅವರು ಪ್ರಸಿದ್ಧ ಹಾಸ್ಯ ನಾಟಕ ಬಂಟಿ ಔರ್ ಬಬ್ಲಿ ಸಿನಿಮಾಗೆ ಆ್ಯಕ್ಷನ್​ ಕಟ್​ ಹೇಳಿದ್ದರು.
View this post on Instagram


A post shared by Riteish Deshmukh (@riteishd)

ಇದನ್ನೂ ಓದಿ: ಇದೇ ಅಲ್ವಾ ಅಭಿಮಾನ ಅಂದ್ರೆ! ಕಿಚ್ಚ ಸುದೀಪ್​ ಭೇಟಿಯಾಗಲು ಎಲ್ಲಿಂದ ನಡೆದುಕೊಂಡು ಬಂದಿದ್ದಾರೆ ನೋಡಿ..

ಸ್ಯಾಂಡಲ್​ವುಡ್​ಗೆ ಜೆನಿಲಿಯಾ ಕಮ್​ಬ್ಯಾಕ್​!

ಜನಾರ್ಧನ ರೆಡ್ಡಿ ಮಗ ಕಿರೀಟಿ ರೆಡ್ಡಿ ಮೊದಲ ಸಿನಿಮಾ ಮುಹೂರ್ತ ಅದ್ಧೂರಿಯಾಗಿ ಕೆಲವೇ ದಿನಗಳ ಹಿಂದೆ ನಡೆದಿತ್ತು ನಟಿ ಶ್ರೀಲೀಲಾ ಈ ಸಿನಿಮಾದಲ್ಲಿ ನಾಯಕಿಯಾಗಿದ್ದಾರೆ. ಇದೇ ವೇಳೆ ಈ ಸಿನಿಮಾದ ಮತ್ತೊಂದು ವಿಶೇಷ ಎಂದರೆ ಒಂದು ದಶಕ ಕಾಲದ ವಿರಾಮದ ನಂತರ  ದಕ್ಷಿಣ ಸಿನಿ ರಂಗದ ಜನಪ್ರಿಯ ನಟಿ ಎನಿಸಿಕೊಂಡಿದ್ದ ನಟಿ ಜೆನಿಲಿಯಾ ಈ ಸಿನಿಮಾ ಮೂಲಕ ಕನ್ನಡಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ.‌ ನಟಿ ಜೆನಿಲಿಯಾ 2008 ರಲ್ಲಿ ಶಿವರಾಜ್ ಕುಮಾರ್ ಅವರ ಸತ್ಯ ಇನ್ ಲವ್ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು.
Published by:Vasudeva M
First published: