Rishab Shetty: ಕೊರೋನಾ ಎಫೆಕ್ಟ್​ - ರಿಷಭ್​ ಶೆಟ್ಟಿ ವರ್ಕ್ ​ಫ್ರಂ ಹೋಂ: ಫೋಟೋ ವೈರಲ್​..!

Rishab Shetty: ಸ್ಯಾಂಡಲ್​ವುಡ್​ನಲ್ಲೂ ಸಾಕಷ್ಟು ಸಿನಿಮಾಗಳ ಚಿತ್ರೀಕರಣಕ್ಕೆ ಬ್ರೇಕ್​ ಬಿದ್ದಿದೆ. ಆದರೆ ನಟ ಹಾಗೂ ನಿರ್ದೇಶಕ ರಿಷಭ್​ ಶೆಟ್ಟಿ ಬಹಳ ನಿಷ್ಠೆಯಿಂದ ಊರಿಗೆ ಹೋಗಿದ್ದು, ಅಲ್ಲಿಯೂ ಅವರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಅಂದರೆ ವರ್ಕ್​ ಫ್ರಂ ಹೋಂ ಜೋರಾಗಿ ನಡೆಯುತ್ತಿದೆ. 

ಮಗನಿಗೆ ಎಣ್ಣೆ ಸ್ನಾನ ಮಾಡಿಸುತ್ತಿರುವ ನಿರ್ದೇಶಕ ರಿಷಭ್​ ಶೆಟ್ಟಿ

ಮಗನಿಗೆ ಎಣ್ಣೆ ಸ್ನಾನ ಮಾಡಿಸುತ್ತಿರುವ ನಿರ್ದೇಶಕ ರಿಷಭ್​ ಶೆಟ್ಟಿ

  • Share this:
ಕೊರೋನಾ ಮಹಾಮಾರಿಯಿಂದಾಗಿ ರಾಜ್ಯವೇ ಸ್ತಬ್ಧವಾಗಿದೆ. ಅದರಲ್ಲೂ ವಿಶ್ವದೆಲ್ಲೆಡೆ ವೈರಸ್​ನಿಂದಾಗಿ ಹರಡುತ್ತಿರುವ ಸೋಂಕನ್ನು ತಡೆಯಲು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಇದಕ್ಕೆ ಚಿತ್ರತಂಗವೂ ಹೊರತಾಗಿಲ್ಲ. ಸಿನಿಮಾಗಳ ಚಿತ್ರೀಕರಣವನ್ನು ನಿಲ್ಲಿಸಿರುವ ಚಿತ್ರತಂಡಗಳು ಸದ್ಯ ಮನೆಯಲ್ಲಿ ಗೃಹ ಬಂಧನಕ್ಕೊಳಗಾಗಿದ್ದಾರೆ. 

ಸ್ಯಾಂಡಲ್​ವುಡ್​ನಲ್ಲೂ ಸಾಕಷ್ಟು ಸಿನಿಮಾಗಳ ಚಿತ್ರೀಕರಣಕ್ಕೆ ಬ್ರೇಕ್​ ಬಿದ್ದಿದೆ. ಆದರೆ ನಟ ಹಾಗೂ ನಿರ್ದೇಶಕ ರಿಷಭ್​ ಶೆಟ್ಟಿ ಬಹಳ ನಿಷ್ಠೆಯಿಂದ ಊರಿಗೆ ಹೋಗಿದ್ದು, ಅಲ್ಲಿಯೂ ಅವರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಅಂದರೆ ವರ್ಕ್​ ಫ್ರಂ ಹೋಂ ಜೋರಾಗಿ ನಡೆಯುತ್ತಿದೆ.

Rishab Shetty revealed his sons name in a teaser on children's day
ಮಗ ರಣ್​ ವಿತ್ ಶೆಟ್ಟಿ ಜೊತೆ ರಿಷಭ್​ ಹಾಗೂ ಪ್ರಗತಿ


ಅದರೆ ಇದೇನು ಸಿನಿಮಾ ನಿರ್ದೇಶಕರು ವರ್ಕ್ ಫ್ರಂ ಹೋಂ ಅಂತೀರಾ...! ಹೌದು, ರಿಷಭ್​ ತಮ್ಮ ಊರಲ್ಲಿ ಮಗ ಹಾಗೂ ಹೆಂಡತಿಯೊಂದಿಗೆ ಕಾಲ ಕಳೆಯುತ್ತಿದ್ದು, ರಣವಿತ್​ ಶೆಟ್ಟಿಗೆ ಎಣ್ಣೆ ಹಚ್ಚಿ ಮಸಾಜ್​ ಮಾಡುತ್ತಾ ಸ್ನಾನಕ್ಕೆ ತಯಾರು ಮಾಡುತ್ತಿದ್ದಾರೆ.'ಊರೂರೇ ಖಾಲಿಯಾಗಿದೆ, ಆಫೀಸ್ ಬೀಗ ಹಾಕಿದೆ, ಸಿನಿಮಾದಿಂದ ಚಿಕ್ಕ ಬ್ರೇಕ್ ಸಿಕ್ಕಿದೆ. ಎಲ್ಲಾ ಆತಂಕಗಳನ್ನ ಹಿಂದೆ ಬಿಟ್ಟು ಹುಟ್ಟಿದೂರಲ್ಲಿ, ನಾನು ಬೆಳೆದಿದ್ ಮನೇಲಿ, ಮಗರಾಯನಿಗೆ ಮಜ್ಜನ ನೀಡೋ ನೆಮ್ಮದಿನೇ ಬೇರೆ! ಒಟ್ಟಾರೆ ಎಲ್ಲರ ತರ ನಮ್ದೂ ‘ವರ್ಕ್ ಫ್ರಂ ಹೋಂ’ ಜೋರಾಗ್ ನೆಡಿತಿದೆ.' ಎಂದು ರಿಷಭ್​ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Dhananjaya: ಸೂಲಿಬೆಲೆ ವಿವಾದ: ಸುಂದರ ಕವಿತೆ ಮೂಲಕ ಟೀಕಾಕಾರರ ಬಾಯಿಮುಚ್ಚಿಸಿದ ಡಾಲಿ ಧನಂಜಯ್

ಅಪ್ಪ-ಮಗನ ಈ ಅಪರೂಪದ ಚಿತ್ರ ನೋಡಿದರೆ ಎಂತಹವರ ಮುಖದಲ್ಲಿ ಮಂದಹಾಸ ಮೂಡದಿದರದು. ಇಂತಹ ಪೋಸ್ಟ್​ ನೋಡಿದ ರಿಷಭ್​ ಗೆಳೆಯ ರಕ್ಷಿತ್ ಸುಮ್ಮನಿರಲು ಹೇಗೆ ಸಾದ್ಯ. ಸಾಧ್ಯವೇ ಇಲ್ಲ. ರಕ್ಷಿತ್​ ಬಹಳ ಸುಂದರವಾಗಿ ಅದಕ್ಕೆ ಟ್ವೀಟ್​ ಮಾಡಿದ್ದಾರೆ. 'ನನ್ನ ಮುಗ್ಧತೆಯ ಅರಿವು ನನಗಿಲ್ಲ, ನನ್ನ ಹೆತ್ತವನೊಮ್ಮೆ ನೋಡು, ಅವನ ಮುಗ್ಧತೆಯಲ್ಲವೆ ನನಗೆಲ್ಲ' ಎಂದು ಮಗು ರಣ್​ವಿತ್​ನ ಪರವಾಗಿ ರಕ್ಷಿತ್​ ಈ ಸಾಲುಗಳನ್ನು ಬರೆದಿದ್ದಾರೆ. 

Rishib Shetty enjoying work from home with his son Ranvit shetty photo gone viral
ರಕ್ಷಿತ್​ ಶೆಟ್ಟಿ ಮಾಡಿದ ಟ್ವೀಟ್​


ರಕ್ಷಿತ್​ ಶೆಟ್ಟಿ ಸಹ ಕೊಂಚ ರಿಲ್ಯಾಕ್ಸ್ ಮೂಡ್​ನಲ್ಲಿ ಇರುವಂತಿದೆ. ಈಗಷ್ಟೆ ತಮ್ಮ ಉತ್ತರ ಭಾರತದಲ್ಲಿ ನಡೆಯುತ್ತಿದ್ದ '777 ಚಾರ್ಲಿ' ಚಿತ್ರೀಕರಣದ ಶೆಡ್ಯೂಲ್​ ಮುಗಿಸಿದ್ದಾರೆ. ನಿನ್ನೆಯಷ್ಟೆ ತಮ್ಮ ಹೊಸ ಸಿನಿಮಾ 'ಸಪ್ತ ಸಾಗರದಾಚೆ ಎಲ್ಲೋ' ಪೋಸ್ಟರ್​ ಬಿಡುಗಡೆ ಮಾಡಿದ್ದಾರೆ.

Corona Kiss: ಬಾಯ್​ಫ್ರೆಂಡ್​ ಜೊತೆ ಕೊರೋನಾ ಕಿಸ್​ ಮಾಡಿದ ಬಿ-ಟೌನ್​ ನಟಿ: ಚಿತ್ರಕ್ಕೆ ಶೀರ್ಷಿಕೆ ಕೊಡಿ ಎಂದ ಬಿಕಿನಿ ಸುಂದರಿ..!

First published: