Kantara Trailer: ರಿಷಬ್ ಶೆಟ್ಟಿ​ ಅಭಿನಯದ ಕಾಂತಾರ ಟ್ರೈಲರ್ ರಿಲೀಸ್​; ಇದು ಕೇವಲ ಸಿನಿಮಾ ಅಲ್ಲ ಒಂದು ದಂತಕಥೆ!

ಟ್ರೈಲರ್​ ನಲ್ಲಿ ದೈವ ದೃಶ್ಯವನ್ನು ಅದ್ಬುತವಾಗಿ ಚಿತ್ರಿಕರಿಸಲಾಗಿದೆ.  ರಿಷಬ್​ ಶೆಟ್ಟಿ ಸಿನಿಮಾ ಬಗ್ಗೆ ಭಾರೀ ಕುತೂಹಲ ಮೂಡಿಸಿದ್ದಾರೆ. ಕಂಬಳ ದೃಶ್ಯವನ್ನು ಟ್ರೇಲರ್​ನಲ್ಲಿ ಕಾಣಬಹುದಾಗಿದೆ.

ರಿಷಬ್ ಶೆಟ್ಟಿ ಅಭಿನಯ ಕಾಂತಾರ ಚಿತ್ರ

ರಿಷಬ್ ಶೆಟ್ಟಿ ಅಭಿನಯ ಕಾಂತಾರ ಚಿತ್ರ

  • Share this:
ಹೊಂಬಾಳೆ ಫಿಲಂಸ್ (Hombale Films) ಮೂಲಕ ವಿಜಯ್ ಕಿರಗಂದೂರು (Vijay Kiragandur) ಅವರು ನಿರ್ಮಿಸಿರುವ ಹಾಗೂ ನಿರ್ದೇಶಿಸಿ ನಾಯಕ ನಟನಾಗಿ ಅಭಿನಯಿಸಿರುವ ರಿಷಬ್​ ಶೆಟ್ಟಿ (Rishab Shetty) ಅವರ  ಕಾಂತಾರ ಚಿತ್ರದ ಟ್ರೈಲರ್  ಬಿಡುಗಡೆಯಾಗಿದೆ. ಸೆಪ್ಟಂಬರ್ 30ರಂದು ಸಿನಿಮಾ ರಿಲೀಸ್ ಆಗಲಿದ್ದು, ಇದೀಗ ಚಿತ್ರದಲ್ಲಿ ಟ್ರೈಲರ್ (Trailer) ಬಿಡುಗಡೆಯಾಗಿದೆ. 3 ನಿಮಿಷದ ಕಾಂತಾರ ಸಿನಿಮಾ ಟ್ರೈಲರ್​​ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಸ್ಯಾಂಡಲ್​ವುಡ್​ನ ಘಟಾನುಘಟಿಗಳು ಸಹ ಟ್ರೈಲರ್​ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಟ್ರೈಲರ್​ನಲ್ಲಿ  ರಿಷಬ್​ ಎಂಟ್ರಿ ಸೂಪರ್​​



ಟ್ರೈಲರ್​ ನಲ್ಲಿ ದೈವ ದೃಶ್ಯವನ್ನು ಅದ್ಬುತವಾಗಿ ಚಿತ್ರಿಕರಿಸಲಾಗಿದೆ.  ರಿಷಬ್​ ಶೆಟ್ಟಿ ಸಿನಿಮಾ ಬಗ್ಗೆ ಭಾರೀ ಕುತೂಹಲ ಮೂಡಿಸಿದ್ದಾರೆ. ಕಂಬಳ ದೃಶ್ಯವನ್ನು ಟ್ರೇಲರ್​ನಲ್ಲಿ ಕಾಣಬಹುದಾಗಿದೆ. ಕಂಬಳದ ಸ್ಪರ್ಧಿಯಾಗಿ ಓಟಕ್ಕಿಳಿಯೋ ರಿಷಬ್​​ ಟ್ರೈಲರ್​ ಮೂಲಕವೇ ಸಖತ್​ ಸದ್ದು ಮಾಡ್ತಿದ್ದಾರೆ.

ಸೂಪರ್​ ಹಿಟ್​ ಆಗಿದೆ ಸಿಂಗಾರ ಸಿರಿಯೇ ಸಾಂಗ್​

ಕಾಂತಾರ ಚಿತ್ರದ ಸಿಂಗಾರ ಸಿರಿಯೇ ಎಂಬ ಅದ್ಭುತ ಹಾಡು ಸ್ವಾತಂತ್ರ್ಯ ಅಮೃತ ಮಹೋತ್ಸವದ ಸುಸಂದರ್ಭದಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರವನ್ನು ರಿಷಬ್ ಶೆಟ್ಟಿ ನಿರ್ದೇಶಿಸಿದ್ದು, ನಾಯಕ ನಟನಾಗಿ ಕೂಡಾ ಅವರೇ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚಿಗಷ್ಟೇ  ಬಿಡುಗಡೆಯಾದ ಚಿತ್ರದ ಹೊಸ ಸಿಂಗಾರ ಸಿರಿಯೇ ಹೆಸರಿನ ಹಾಡು ಬಿಡುಗಡೆ ಆಗಿದ್ದು, ಪ್ರೇಕ್ಷಕರು ಈ ಹಾಡಿಗೆ ತಲೆದೂಗಿದ್ದಾರೆ. ಈ ಸಾಂಗ್ ಲಕ್ಷ ಲಕ್ಷ ವೀಕ್ಷಣೆ ಪಡೆದುಕೊಳ್ಳುತ್ತಿದೆ.





ಅಜನೀಶ್ ಲೋಕನಾಥ್ ಸಂಗೀತ

ಅಜನೀಶ್ ಲೋಕನಾಥ್ ಸಂಗೀತ ನೀಡಿ, ಪ್ರಮೋದ್ ಮರವಂತೆ ಬರೆದಿರುವ ಸಿಂಗಾರ ಸಿರಿಯೆ ಹಾಡಿನಲ್ಲಿ ಕರುನಾಡ ಸಂಸ್ಕ್ರತಿಯ ಭವ್ಯ ಪರಂಪರೆಯನ್ನು ಮನಮುಟ್ಟುವಂತೆ ತೋರಿದ್ದಾರೆ ನಿರ್ದೇಶಕ ರಿಷಬ್ ಶೆಟ್ಟಿ. ಹಲವು ಜನಪದ ನೃತ್ಯಗಳ ಹಿನ್ನೆಲೆಯಲ್ಲಿ ನಾಯಕ, ನಾಯಕಿಗೆ ಪ್ರೇಮದ ವಿಷಯ ತಿಳಿಸುವ ರೀತಿ ಈ ಹಾಡಿನಲ್ಲಿ ಸೊಗಸಾಗಿ ಮೂಡಿಬಂದಿದೆ.

ವಿಜಯ್ ಪ್ರಕಾಶ್, ಅನನ್ಯಾ ಭಟ್ ಹಾಗೂ ಪನ್ನಾರ್ ವಲ್ಟುರ್​ ಗಾಯನ ಹಾಡಿನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ರಿಷಬ್ ಶೆಟ್ಟಿ ಹಾಗೂ ಸಪ್ತಮಿ ಗೌಡ ಅವರ ಕೆಮಿಸ್ಟ್ರಿ ಪ್ರೇಕ್ಷಕರಿಗೆ ಇಷ್ಟವಾಗಿದೆ.

ಹಿರಿಯ ಯಕ್ಷಗಾನ ಕಲಾವಿದರು ಭಾಗಿ

ತಮ್ಮ ಹುಟ್ಟೂರಾದ ಕೆರಾಡಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಇಡೀ ಚಿತ್ರವನ್ನು ಚಿತ್ರೀಕರಿಸಿರುವ ನಿರ್ದೇಶಕ ರಿಷಬ್, ಈ ಹಾಡು ತನ್ನ ತವರೂರಿನ ನೆನಪುಗಳಿಗೆ ಹತ್ತಿರವಾಗಿದೆ ಎಂದು ಹೇಳುತ್ತಾರೆ. ಹಾಡಿನ ಆರಂಭಿಕ ದೃಶ್ಯದಲ್ಲಿ ಹಿರಿಯ ಯಕ್ಷಗಾನ ಕಲಾವಿದ ನಾಗರಾಜ ಪಾಣಾರ್ ವಾಲ್ತೂರ್ ಮತ್ತು ಅವರ ಮಕ್ಕಳು ಇದ್ದಾರೆ. ನಾಗ ಎಂದೇ ಪ್ರಸಿದ್ದವಾಗಿರುವ ಇವರು ಯಕ್ಷಗಾನ ಮತ್ತು ಕಂಬಳ ಸಂಸ್ಕೃತಿಯಲ್ಲಿ ಬಹಳ ಹಿಂದಿನಿಂದಲೂ ಪರಿಚಿತರು ಮತ್ತು ನಮ್ಮ ಮನೆಯವರು ಎರಡು ತಲೆಮಾರುಗಳಿಂದ ಪರಿಚಿತರು.

ಲವ್ ಟ್ರ್ಯಾಕ್‌ನಲ್ಲಿ ಚಿತ್ರ ಮೂಡಿ ಬಂದಿದೆ

ನಾನು ಯಾವಾಗಲೂ ಇದನ್ನು ಮುಂದಿನ ಪೀಳಿಗೆಗಾಗಿ ಸಂಗ್ರಹಿಸಿಲು ಬಯಸಿದ್ದೆ. ಕಾಂತಾರದಲ್ಲಿ ನನಗೆ ಅವಕಾಶ ಸಿಕ್ಕಿತು. ನಾಗನಿಗೆ ಹಾಡು ಹಾಡಲು ಹೇಳಿ ಆ ಟ್ಯೂನ್ ಅನ್ನು ಅಜನೀಶ್ ಅವರಿಗೆ ಕಳುಹಿಸಿದ್ದೆ. ಅದು ಅಂತಿಮವಾಗಿ ಸಿಂಗಾರ ಸಿರಿಯೇ ಹಾಡಿನೊಂದಿಗೆ ಹೊರಬಂದಿದೆ. ಹಾಡಿನ ಚಿತ್ರೀಕರಣ ನನ್ನ ಊರಿನ ರಸ್ತೆಗಳಲ್ಲಿ ನಡೆದಿದೆ. ನಾನು ಪ್ರತಿ ರಸ್ತೆಯೊಂದಿಗಿನ ಸಂಪರ್ಕ, ಬಹಳಷ್ಟು ನೆನಪುಗಳಿವೆ ಎಂದು ತಿಳಿಸಿದ್ದಾರೆ. ಇದೆಲ್ಲವನ್ನೂ ಲವ್ ಟ್ರ್ಯಾಕ್‌ನಲ್ಲಿ ಹೊರತರಲಾಗಿದೆ ಎಂದು ರಿಷಬ್ ಶೆಟ್ಟಿ  ಈ ಹಿಂದೆಯೇ ವಿವರಿಸಿದ್ದಾರೆ.
Published by:Pavana HS
First published: