Katha Sangama: ಡಿಸೆಂಬರ್​ 6ಕ್ಕೆ ತೆರೆಗಪ್ಪಳಿಸಲಿದೆ ಪ್ರಯೋಗಾತ್ಮಕ ಸಿನಿಮಾ 'ಕಥಾ ಸಂಗಮ'

Katha Sangama: ಈಗಾಗಲೇ 'ಕಥಾ ಸಂಗಮ' ಚಿತ್ರದ ಟ್ರೈಲರ್​ ಬಿಡುಗಡೆಯಾಗಿದೆ. ಹೊಸತನದಿಂದ ಕೂಡಿರುವ ಈ ಟ್ರೈಲರ್​ ಸಿನಿ ಪ್ರಿಯರಲ್ಲಿ ಕುತೂಹಲ ಹೆಚ್ಚಿಸಿದೆ. ಈಗಾಗಲೇ ಚಿತ್ರೀಕರಣ ಮುಗಿಸಿ, ಸೆನ್ಸಾರ್​ ಮುಂದಿದ್ದ ಇದಕ್ಕೆ 'ಯು' ಪ್ರಮಾಣ ಪತ್ರ ಸಿಕ್ಕಿದೆ. ಈ ಕುರಿತು ರಿಷಭ್​ ಟ್ವೀಟ್​ ಮಾಡಿದ್ದಾರೆ.

ಅದೇ ರೀತಿ ಸ್ಯಾಂಡಲ್​ವುಡ್​ನಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿರುವ ಕಥಾ ಸಂಗಮ ಚಿತ್ರ ಕೂಡ ಡಿಸೆಂಬರ್ 6 ರಂದು ಬಿಡುಗಡೆಯಾಗಲಿದೆ.

ಅದೇ ರೀತಿ ಸ್ಯಾಂಡಲ್​ವುಡ್​ನಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿರುವ ಕಥಾ ಸಂಗಮ ಚಿತ್ರ ಕೂಡ ಡಿಸೆಂಬರ್ 6 ರಂದು ಬಿಡುಗಡೆಯಾಗಲಿದೆ.

  • Share this:
ಪ್ರಯೋಗಾತ್ಮಕ ಸಿನಿಮಾಗಳ ಪಟ್ಟಿಗೆ ಸೇರುವ ಕನ್ನಡದ 'ಕಥಾ ಸಂಗಮ' ಚಿತ್ರದ ರಿಲೀಸ್​ಗೆ ದಿನಾಂಕ ಫಿಕ್ಸ್​ ಆಗಿದೆ. 'ಬೆಲ್ ​ಬಾಟಮ್' ನಂತರ ನಟ ಹಾಗೂ ನಿರ್ದೇಶಕ​  ರಿಷಭ್​ ಶೆಟ್ಟಿ ಕೈಗೆತ್ತಿಕೊಂಡಿರುವ ಸಿನಿಮಾ ಇದಾಗಿದೆ.

ಈಗಾಗಲೇ 'ಕಥಾ ಸಂಗಮ' ಚಿತ್ರದ ಟ್ರೈಲರ್​ ಬಿಡುಗಡೆಯಾಗಿದೆ. ಹೊಸತನದಿಂದ ಕೂಡಿರುವ ಈ ಟ್ರೈಲರ್​ ಸಿನಿಪ್ರಿಯರಲ್ಲಿ ಕುತೂಹಲ ಹೆಚ್ಚಿಸಿದೆ. ಈಗಾಗಲೇ ಚಿತ್ರೀಕರಣ ಮುಗಿಸಿ, ಸೆನ್ಸಾರ್​ ಮುಂದಿದ್ದ ಇದಕ್ಕೆ 'ಯು' ಪ್ರಮಾಣ ಪತ್ರ ಸಿಕ್ಕಿದೆ. ಈ ಕುರಿತು ರಿಷಭ್​ ಟ್ವೀಟ್​ ಮಾಡಿದ್ದಾರೆ.ಮಾಡುವ ಪ್ರತಿಯೊಂದು ಕೆಲಸದಲ್ಲೂ ವಿಭನ್ನತೆ ತೋರುವ ರಿಷಭ್​ ತಮ್ಮ ಸಿನಿಮಾಗೆ ಸಿಕ್ಕಿರುವ ಪ್ರಮಾಣ ಪತ್ರದ ಬಗ್ಗೆಯೂ ಸನ್ನೆಗಳ ಮೂಲಕ ತೋರುವ ಚಿತರದೊಂದಿಗೆ ಟ್ವೀಟ್​ ಮಾಡಿದ್ದಾರೆ.ಈ ಸಿನಿಮಾದಲ್ಲಿ 7 ಕತೆಗಳ ಸಂಗಮವಾಗಲಿದ್ದು, 7 ನಿರ್ದೇಶಕರು ಕೆಲಸ ಮಾಡಿದ್ದಾರೆ. ನಿರ್ದೇಶಕ ಪುಟ್ಟಣ್ಣ ಕಣಗಾಲರಿಗೆ ಅರ್ಪಿಸಿರುವ ಈ ಸಿನಿಮಾದಲ್ಲಿ ರಿಷಭ್​ ಶೆಟ್ಟಿ ಸಹ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

ಇದನ್ನೂ ಓದಿ: ಯೂಟ್ಯೂಬ್‍ನಲ್ಲಿ 'ಒಡೆಯ'ನ ದರ್ಬಾರ್​: 'ಕಾಣೆಯಾಗಿರುವೆ ನಾನು' ಹಾಡಿಗೆ ಸಿಗುತ್ತಿದೆ ಲಕ್ಷಗಟ್ಟಲೆ ವೀಕ್ಷಣೆ!

ಕಿರಣ್ ರಾಜ್‌ ಕೆ, ಶಶಿಕುಮಾರ್‌ ಪಿ, ಚಂದ್ರಜಿತ್‌ ಎಲ್ಲಿಯಪ್ಪ, ರಾಹುಲ್‌ ಪಿ.ಕೆ., ಜೈಶಂಕರ್‌ ಎ., ಕರಣ್‌ ಅನಂತ್‌, ಜಮದಗ್ನಿ ಮನೋಜ್‌ ಏಳು ಕತೆಗಳನ್ನು ನಿರ್ದೇಶಿಸಿದ್ದಾರೆ. ಏಳು ಮಂದಿ ಸಂಗೀತ ನಿರ್ದೇಶಕರು ಕೆಲಸ ಮಾಡಿದ್ದಾರೆ.

ಉಳಿದಂತೆ ಹರಿಪ್ರಿಯಾ, ಒಂದು ಮೊಟ್ಟೆಯ ಕಥೆ ಖ್ಯಾತಿಯ ರಾಜ್​ ಬಿ. ಶೆಟ್ಟಿ, ಕಿಶೋರ್​, ಪ್ರಕಾಶ್​ ಬೆಳವಾಡಿ ಸೇರಿದಂತೆ ಹಲವಾರು ತಾರಾಗಣದಲ್ಲಿದ್ದಾರೆ. ಕೌಟುಂಬಿಕ, ಕ್ರೈಂ ಥ್ರಿಲ್ಲರ್​, ಸಸ್ಪೆನ್ಸ್​, ಪ್ರೇಮ ಕತೆ ಸೇರಿದಂತೆ ಎಲ್ಲವೂ ಇರುವ ಈ ಸಿನಿಮಾವನ್ನು ವರ್ಷಾಂತ್ಯಕ್ಕೆ ಕಣ್ತುಂಬಿಕೊಳ್ಳಬಹುದಾಗಿದೆ.

Hardik Pandya: ಸಿನಿಮಾ ನೋಡಿ ಬಾಲಿವುಡ್​ ನಟಿಗೆ ನಾಯಿ ಮರಿ ಗಿಫ್ಟ್​ ಮಾಡಿದ ಕ್ರಿಕೆಟಿಗ ಹಾರ್ದಿಕ್​ ಪಾಂಡ್ಯ..!

 

First published: