ಕಾಂತಾರ (Kantara) ಸಿನಿಮಾದ ವರಾಹ ರೂಪಂ (Varaha Roopam) ಹಾಡಿನ ವಿವಾದ ವಿಚಾರವಾಗಿ ನಟ ರಿಷಬ್ ಶೆಟ್ಟಿ (Rishab Shetty) ಅವರು ಟ್ವೀಟ್ (Tweet) ಮಾಡಿದ್ದಾರೆ. ಕಾಂತಾರ ಸಿನಿಮಾದ ವರಾಹ ರೂಪಂ ಹಾಡು ಸಿನಿಮಾದಷ್ಟೇ ಹಿಟ್ ಆಗಿದೆ. ದೇಶಾದ್ಯಂತ ಹಾಡು ಹಿಟ್ ಆಗುತ್ತಿದ್ದಂತೆ ಇದರ ಕಾಪಿ ರೈಟ್ ವಿಚಾರ ಮುನ್ನೆಲೆಗೆ ಬಂತು. ಕೇರಳ ಮೂಲದ ಮ್ಯೂಸಿಕ್ ಬ್ಯಾಂಡ್ ತೈಕ್ಕುಡಂ ಬ್ರಿಡ್ಜ್ (Thaikkudam Bridge) ವರಾಹ ರೂಪಂ ಹಾಡು ತಮ್ಮ ನವರಸಂ (Navarasam) ಹಾಡಿನ ಕಾಪಿಯಾಗಿದೆ ಎಂದು ಆರೋಪಿಸಿತು. ಈ ಆರೋಪ ಮುಂದೆ ದೊಡ್ಡ ವಿವಾದವಾಗಿ ಕೋರ್ಟ್ (Court) ಹಾಡನ್ನು ಪ್ಲೇ ಮಾಡದಂತೆ ತಡೆಯನ್ನೂ ಕೊಟ್ಟಿತು. ನಂತರದಲ್ಲಿ ಹಾಡಿಗೆ ಸ್ಟೇ ಬಂದ ನಂತರ ಚಿತ್ರತಂಡ ಹಾಡನ್ನು ಬದಲಾಯಿಸಿ ಒಟಿಟಿಯಲ್ಲಿ (OTT) ಬಿಡುಗಡೆ ಮಾಡಿತು. ಆದರೆ ಈಗ ಈ ವಿಚಾರವಾಗಿ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು ಒರಿಜಿನಲ್ ಹಾಡನ್ನು ಬಳಸಲು ಕೋರ್ಟ್ ಅನುಮತಿ ನೀಡಿದೆ.
ಟ್ವೀಟ್ನಲ್ಲಿ ಏನಿದೆ?
ರಿಷಬ್ ಶೆಟ್ಟಿ ಕಾಂತಾರ ಹಾಡಿನ ಕುರಿತು ಟ್ವೀಟ್ ಮಾಡಿದ್ದು ಶೀಘ್ರ ಹಾಡು ಬದಲಾಯಿಸುವುದಾಗಿ ಹೇಳಿದ್ದಾರೆ. ದೈವಾನು ದೈವಗಳ ಆಶೀರ್ವಾದ ಹಾಗು ಜನರ ಅಭಿಮಾನದಿಂದ ವರಾಹರೂಪಂ ಕೇಸ್ ಗೆದ್ದಿದ್ದೇವೆ. ಜನರ ಕೋರಿಕೆಯನ್ನು ಪರಿಗಣಿಸಿ ಅತಿ ಶೀಘ್ರದಲ್ಲಿ OTT platform ನಲ್ಲಿ ಹಾಡನ್ನು ಬದಲಾಯಿಸಲಿದ್ದೇವೆ ಎಂದು ನಟ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ದೈವಾನು ದೈವಗಳ ಆಶೀರ್ವಾದ ಹಾಗು ಜನರ ಅಭಿಮಾನದಿಂದ ವರಾಹರೂಪಂ ಕೇಸ್ ಗೆದ್ದಿದ್ದೇವೆ. ಜನರ ಕೋರಿಕೆಯನ್ನು ಪರಿಗಣಿಸಿ ಅತಿ ಶೀಘ್ರದಲ್ಲಿ OTT platform ನಲ್ಲಿ ಹಾಡನ್ನು ಬದಲಾಯಿಸಲಿದ್ದೇವೆ . @VKiragandur@ChaluveG @AJANEESHB @Karthik1423 @hombalefilms @KantaraFilmhttps://t.co/STsNEyKmuT
— Rishab Shetty (@shetty_rishab) December 3, 2022
ಕಾಂತಾರ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದ್ದು ಎಲ್ಲರೂ ಇಷ್ಟಪಟ್ಟಿದ್ದ ವರಾಹ ರೂಪಂ ಹಾಡಿನ ಆಡಿಯೋ ಮತ್ತು ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ಗಳಿಗೆ ಮತ್ತೆ ಸೇರಿಸಲಾಗಿದೆ. ಕೇರಳ ನ್ಯಾಯಾಲಯದಲ್ಲಿ ಕಾನೂನು ಹೋರಾಟದಲ್ಲಿ ಕಾಂತಾರ ತಂಡ ಗೆಲುವು ಸಾಧಿಸಿದೆ. ನವೆಂಬರ್ 25 ರಂದು ಹಾಡಿನ ಮೇಲೆ ನಿಷೇಧವನ್ನು ತೆಗೆದುಹಾಕಲಾಗಿದೆ.
ಒಟಿಟಿಯಲ್ಲಿ ಲಭ್ಯವಾಗಿದೆ ಹಾಡು
ಹಾಡನ್ನು ಈಗ OTT ವರ್ಷನ್ ಮತ್ತು ಆಡಿಯೋ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ಗಳಲ್ಲಿ ಸೇರಿಸಲಾಗಿದೆ. ಬಾಕ್ಸ್ ಆಫೀಸ್ನಲ್ಲಿ ಕೋಟಿಗಳನ್ನು ಗಳಿಸಿದ ನಂತರ, ಕೇರಳ ಮೂಲದ ಮ್ಯೂಸಿಕ್ ಬ್ಯಾಂಡ್ ತೈಕ್ಕುಡಂ ಬ್ರಿಡ್ಜ್ ತಂಡ ಕಾಂತಾರ ಹಾಡು ಕಾಪಿ ಎಂದು ಮೊಕದ್ದಮೆ ಹೂಡಿತ್ತು. ವರಾಹ ರೂಪಂ ತಮ್ಮ ನವರಸಂ ಹಾಡಿನ ಕಾಪಿಯಾಗಿದೆ ಎಂದು ಅವರು ಆರೋಪಿಸಿದ್ದರು.
ಇದನ್ನೂ ಓದಿ: Kantara Varaha Roopam Song: ವರಾಹ ರೂಪಂ ಹಾಡಿಗೆ ಮತ್ತೆ ತಡೆ! ಕಾಂತಾರ ತಂಡಕ್ಕೆ ಕೇರಳ ಹೈಕೋರ್ಟ್ ನೋಟಿಸ್
ತೈಕ್ಕುಡಂ ಬ್ರಿಡ್ಜ್ ಸಾಮಾಜಿಕ ಮಾಧ್ಯಮದಲ್ಲಿ ಹಾಡಿನ ಟ್ಯೂನ್ ಕಾಪಿ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು. ತೈಕ್ಕುಡಂ ಬ್ರಿಡ್ಜ್ ಯಾವುದೇ ರೀತಿಯಲ್ಲಿ ಕಾಂತಾರದೊಂದಿಗೆ ಸಂಬಂಧ ಹೊಂದಿಲ್ಲ. ಆಡಿಯೋ ವಿಷಯದಲ್ಲಿ ನಮ್ಮ ಐಪಿ ನವರಸಂ ಮತ್ತು ವರಾಹ ರೂಪಂ ನಡುವಿನ ಸಾಮ್ಯತೆಗಳು ಕಾಪಿ ರೈಟ್ನ ಸ್ಪಷ್ಟ ಉಲ್ಲಂಘನೆಯಾಗಿದೆ. ನಮ್ಮ ದೃಷ್ಟಿಕೋನದಲ್ಲಿ ಪ್ರೇರಿತ ಮತ್ತು ಕೃತಿಚೌರ್ಯದ ನಡುವಿನ ವ್ಯತ್ಯಾಸ ವಿಭಿನ್ನವಾಗಿದೆ. ಆದ್ದರಿಂದ ನಾವು ಇದಕ್ಕೆ ಕಾರಣವಾದ ತಂಡದ ವಿರುದ್ಧ ಕಾನೂನು ಹೋರಾಟ ಮಾಡಲು ಬಯಸುತ್ತೇವೆ ಎಂದು ಪೋಸ್ಟ್ ಮಾಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ