HOME » NEWS » Entertainment » RISHAB SHETTY TO PORTRAY UNDERWORLD DON AMAR ALVA HG

Rishab Shetty: ಅಂಡರ್​​ವರ್ಲ್ಡ್​ಗೆ​ ಕಾಲಿಟ್ಟ ಶೆಟ್ರು; ಭೂಗತ ದೊರೆ ಅಮರ್​ ಆಳ್ವ ಪಾತ್ರದಲ್ಲಿ ​​​ರಿಷಬ್

Amar Alva: ರಿಷಬ್​​ ಅಂಡರ್​​ವರ್ಲ್ಡ್ ಸಿನಿಮಾವೊಂದರಲ್ಲಿ ನಟಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಅಂಡರ್​​ವರ್ಲ್ಡ್ ಡಾನ್​​ ಅಮರ್​ ಆಳ್ವ ಪಾತ್ರದಲ್ಲಿ ಶೆಟ್ರು ಬಣ್ಣ ಹಚ್ಚಲಿದ್ದಾರೆ.

news18-kannada
Updated:June 1, 2020, 3:41 PM IST
Rishab Shetty: ಅಂಡರ್​​ವರ್ಲ್ಡ್​ಗೆ​ ಕಾಲಿಟ್ಟ ಶೆಟ್ರು; ಭೂಗತ ದೊರೆ ಅಮರ್​ ಆಳ್ವ ಪಾತ್ರದಲ್ಲಿ ​​​ರಿಷಬ್
ರಿಷಬ್​ ಶೆಟ್ಟಿ
  • Share this:
ಸ್ಯಾಂಡಲ್​ವುಡ್​ ನಟ ರಿಷಬ್​ ಶೆಟ್ಟಿ ಹೊಸ ಕಥೆ, ವಿಭಿನ್ನ ಪಾತ್ರಗಳ ಮೂಲಕ ಸಿನಿಮಾ ಮಾಡುತ್ತಾ, ನಟಿಸುತ್ತಾ ಬಂದಿದ್ದಾರೆ. ಸದ್ಯ ಲಾಕ್​​ಡೌನ್​​ ಸಮಯವನ್ನು ತಮ್ಮ ಮುಂದಿನ ರುದ್ರಪ್ರಯಾಗ ಸಿನಿಮಾಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಲಾಕ್​ಡೌನ್​ ಮುಗಿದಂತೆ ಸಿನಿಮಾ ಶೂಟಿಂಗ್​ ಮಾಡಲು ಶೆಟ್ರು ತಯಾರಿ ನಡೆಸಿದ್ದಾರೆ. ಇದರ ನಡುವೆ ರಿಷಬ್​​​ ಶೆಟ್ಟಿ ಅಂಡರ್​​ವರ್ಲ್ಡ್​ನತ್ತ ಹೊರಟಿದ್ದಾರೆ ಎಂಬ ಮಾತುಗಳು ಕೇಳಿಬಂದಿದೆ.

ಅಂದಹಾಗೇ, ರಿಷಬ್​​ ಅಂಡರ್​​ವರ್ಲ್ಡ್ ಕಥೆ ಆಧಾರಿತ ಸಿನಿಮಾವೊಂದರಲ್ಲಿ ನಟಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಅಂಡರ್​​ವರ್ಲ್ಡ್ ಡಾನ್​​ ಅಮರ್​ ಆಳ್ವ ಪಾತ್ರದಲ್ಲಿ ಶೆಟ್ರು ಬಣ್ಣ ಹಚ್ಚಲಿದ್ದಾರೆ. ಇದು 1980-90ರ ನಡುವಿನ ಘಟನಾವಳಿಯ ಕುರಿತ ಸಿನಿಮಾವಾಗಿದ್ದು, ಅದಕ್ಕಾಗಿ ಕಥೆ ಮತ್ತು ಸಂಭಾಷಣೆ ಬರೆಯುತ್ತಿದ್ದಾರೆ. ಅದಕ್ಕಾಗಿ ನಿತೇಶ್​​ ಇವರಿಗೆ ಸಹಾಯ ಮಾಡುತ್ತಿದ್ದಾರೆ.

ರಿಷಬ್​ ‘ಬೆಲ್​ ಬಾಟಂ‘ ಸಿನಿಮಾದಲ್ಲಿ ಡಿಟೆಕ್ವಿಟ್​ ದಿವಾಕರ್​ರಾಗಿ ಬಣ್ಣ ಹಚ್ಚಿದ್ದರು. ಆದರೀಗ ಅಂಡರ್​​ವರ್ಲ್ಡ್ ಅಮರ್​ ಪಾತ್ರಕ್ಕೆ ಧುಮುಕಲಿದ್ದಾರೆ. ಹೊಸ ಪಾತ್ರದ ಮೂಲಕ ಸ್ಯಾಂಡಲ್​ವುಡ್​ನಲ್ಲಿ ಮತ್ತೊಮ್ಮೆ ಹವಾ ಎಬ್ಬಿಸಲು ಶೆಟ್ರು ತಯಾರಿ ನಡೆಸುತ್ತಿದ್ದಾರೆ. ಆದರೆ ಈ ಸಿನಿಮಾ ಯಾರು ನಿರ್ಮಾಣ ಮಾಡುತ್ತಿದ್ದಾರೆ? ನಿರ್ದೇಶನ, ಕ್ಯಾಮೆರಾ ಯಾರು?ಎಂಬ ಬಗ್ಗೆ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.

ಸದ್ಯ ರಿಷಭ್​ ‘ರುದ್ರ ಪ್ರಯಾಗ‘ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಅದರೊಂದಿಗೆ ಬೆಲ್​ಬಾಟಂ 2, ಹರಿಕಥೆ ಗಿರಿಕಥೆ ಸಿನಿಮಾ ಕೂಡ ಅವರ ಕೈಯಲ್ಲಿದೆ. ಆದರೆ ಅಮರ್​ ಆಳ್ವಾ ಕುರಿತಾಗಿ ಮೂಡಿಬರುವ ಸಿನಿಮಾ 2021ಕ್ಕೆ ಸೆಟ್ಟೇರಲಿದೆ.

ಅಮರ್​ ಆಳ್ವ

ಭೂಗತ ಲೋಕವನ್ನು ಆಳಿದವರಲ್ಲಿ ಅಮರ್​ ಆಳ್ವ ಕೂಡ ಒಬ್ಬರು. ಮೂಲತಃ ಮಂಗಳೂರಿನವರು. ಮುತ್ತಪ್ಪ ರೈ, ಜಯರಾಜ್​, ಆಯಿಲ್​ ಕುಮಾರ್​ರಂತೆ ಅಮರ್​ ಆಳ್ವ ಕೂಡ ಹಿಂದೊಮ್ಮೆ ಭೂಗತ ಲೋಕದಲ್ಲಿ ಸದ್ದು ಮಾಡಿದ್ದರು. ಆದರೆ 1992ರಲ್ಲಿ ಅವರನ್ನು ಕೊಲ್ಲಲಾಯಿತು.

Remove China Apps: ಚೀನಾಗೆ ಬುದ್ಧಿ ಕಲಿಸಿದ ಭಾರತ; 10 ದಿನದಲ್ಲಿ10 ಲಕ್ಷ ಡೌನ್​ಲೋಡ್​ ಆದ ‘ರಿಮೂವ್​ ಚೀನಾ ಆ್ಯಪ್​​​‘
First published: June 1, 2020, 3:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories