ಯಾವುದೇ ವ್ಯಕ್ತಿ ದಿಢೀರ್ ಫೇಮಸ್ ಆಗಿಬಿಟ್ಟಾಗ ಅವರ ಡಿಮ್ಯಾಂಡ್ ಹೆಚ್ಚಾಗುತ್ತದೆ. ಅವರ ಸಂದರ್ಶನ, ಫೋಟೋ, ವಿಡಿಯೋ ನೋಡಲು ಜನರು ಮುಗಿಬೀಳುತ್ತಾರೆ. ಖ್ಯಾತ ಮ್ಯಾಗಜಿನ್, ಚಾನೆಲ್, ಪತ್ರಿಕೆಗಳು ಅವರ ಇಂಟರ್ವ್ಯೂ ಮಾಡುತ್ತವೆ. ಇದೀಗ ರಿಷಬ್ ಶೆಟ್ಟಿ ಅವರ ಸದ್ಯದ ಪರಿಸ್ಥಿತಿ ಹೀಗೆಯೇ ಇದೆ. ರಿಷಬ್ ಬಿಟ್ಟರೂ ಕಾಂತಾರ (Kantara) ಕ್ರೇಜ್ ಅವರನ್ನು ಬಿಡುತ್ತಿಲ್ಲ. ತಾವೇ ಬರೆದು, ನಿರ್ದೇಶಿಸಿ, ನಟಿಸಿದ ಕಾಂತಾರ ಸಿನಿಮಾದ (Cinema) ಸಕ್ಸಸ್ ಖುಷಿಯಲ್ಲಿದ್ದಾರೆ ನಟ ರಿಷಬ್ ಶೆಟ್ಟಿ (Rishab Shetty). ಇದೀಗ ಅವರಿಗೆ ಇನ್ನೊಂದು ಹಿರಿಮೆ ಸಿಕ್ಕಿದೆ. ಫೇಮಸ್ ಮ್ಯಾಗಜಿನ್ (Magazine) ಒಂದು ತನ್ನ ಕವರ್ ಪೇಜ್ಗಾಗಿ (Coverpage) ನಟನ ಸ್ಟೈಲಿಷ್ ಫೋಟೋಶೂಟ್ ಮಾಡಿದೆ. ಇದರ ವಿಡಿಯೋವನ್ನು ರಿಷಬ್ ಅವರ ಪತ್ನಿ ಪ್ರಗತಿ ಶೆಟ್ಟಿ (Pragathi Shetty) ಅವರೂ ತಮ್ಮ ಸ್ಟೋರಿಯಲ್ಲಿ ಶೇರ್ ಮಾಡಿದ್ದಾರೆ.
ಮ್ಯಾಗಜಿನ್ ಕವರ್ ಪೇಜ್ನಲ್ಲಿ ಕಾಂತಾರ ಹೀರೋ
ಪ್ರಸಿದ್ಧ ಹ್ಯಾಶ್ಟ್ಯಾಗ್ ಮ್ಯಾಗಜಿನ್ ಕವರ್ ಪುಟದಲ್ಲಿ ರಿಷಬ್ ಶೆಟ್ಟಿ ಅವರು ಮಿಂಚಲಿದ್ದಾರೆ. ಅವರ ಫೋಟೋ ಕವರ್ ಪೇಜ್ನಲ್ಲಿ ರಾರಾಜಿಸಲಿದೆ. ರಿಷಬ್ ಶೆಟ್ಟಿ ಈ ಸಂಬಂಧಿತ ಫೋಟೋಶೂಟ್ನ ಬಿಟಿಎಸ್ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.
ವೈರಲ್ ಆಯ್ತು ಬಿಟಿಎಸ್ ವಿಡಿಯೋ
ರಿಷಬ್ ಶೆಟ್ಟಿ ಅವರ ವೀಡಿಯೋ ಈಗ ವೈರಲ್ ಆಗಿದ್ದು ಈ ವಿಡಿಯೋಗೆ ಸುಮಾರು 86 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. 267ಕ್ಕೂ ಹೆಚ್ಚು ಜನರು ವೀಡಿಯೋ ನೋಡಿ ಕಾಮೆಂಟ್ ಮಾಡಿದ್ದಾರೆ. ಇದೀಗ ಮ್ಯಾಗಜಿನ್ ಮುಖಪುಟದಲ್ಲಿ ಕನ್ನಡದ ಹೀರೋ ಮಿಂಚಲಿದ್ದು ಇದು ಸಿನಿ ಪ್ರೇಕ್ಷಕರಿಗೆ ಸಖತ್ ಖುಷಿ ಕೊಟ್ಟಿದೆ.
View this post on Instagram
ಕಾಂತಾರ 2 ಸಿನಿಮಾ ಬರುತ್ತಾ?
ಕಾಂತಾರ ಸಿನಿಮಾ ಹವಾ ಜೋರಾಗಿದ್ದು 400 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿರುವ ಸಿನಿಮಾ ಹಿಂದಿಯಲ್ಲಿ ಮಾತ್ರ 75 ಕೋಟಿಗೂ ಹೆಚ್ಚು ಬಾಚಿದೆ. ಇನ್ನು ಟಾಲಿವುಡ್ನಲ್ಲಿ 50 ಕೋಟಿ ಗಳಿಸಿ ಈಗಲೂ ಸಕ್ಸಸ್ಫುಲ್ ಆಗಿ ರನ್ ಆಗುತ್ತಿದೆ. ಸಿನಿಮಾ ವ್ಯಾಪಕ ಮೆಚ್ಚುಗೆ ಗಳಿಸುತ್ತಿದ್ದು ಎಲ್ಲಾ ಭಾಷೆಗಳಲ್ಲಿಯೂ ಯಶಸ್ವಿ ಪ್ರದರ್ಶನ ಕಂಡಿದೆ. ಈಗ ಸಿನಿಮಾ ತುಳುವಿನಲ್ಲಿಯೂ ರಿಲೀಸ್ ಆಗಲಿದ್ದು ಮತ್ತೊಮ್ಮೆ ಕಲೆಕ್ಷನ್ ನಂಬರ್ಸ್ ಜಾಸ್ತಿಯಾಗುವ ಅವಕಾಶವಿದೆ.
ಇದೀಗ ಸಿನಿಮಾ ಎರಡನೇ ಭಾಗ ಬರುತ್ತಾ ಎನ್ನುವ ಕುತೂಹಲ ಹೆಚ್ಚಾಗಿದೆ. ಆದರೆ ಈ ಬಗ್ಗೆ ರಿಷಬ್ ಅವರು ಯಾವುದೇ ಹೇಳಿಕೆ ಕೊಟ್ಟಿಲ್ಲ. ಪ್ರೇಕ್ಷಕರು ಮಾತ್ರ ಕಾಂತಾರ ಸೀಕ್ವೆಲ್ ಸಿನಿಮಾ ಅಪ್ಡೇಟ್ ಬಗ್ಗೆ ಕುತೂಹಲ ತೋರಿಸುತ್ತಿದ್ದಾರೆ. ಅದರ ಜೊತೆಗೆ ಇತ್ತೀಚೆಗೆ ದಿಗಂತ್ ಅವರು ರಿಷಬ್ ಕಾಂತಾರ 2ನಲ್ಲಿ ಬ್ಯುಸಿ ಇದ್ದಾರೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದು ಫ್ಯಾನ್ಸ್ ಈ ವಿಚಾರ ತಿಳಿದು ಖುಷಿಪಟ್ಟಿದ್ದಾರೆ.
ಬ್ಯಾಚುರಲ್ ಪಾರ್ಟಿಯಿಂದ ಔಟ್
ಹೊಂಬಾಳೆ ಫಿಲ್ಮ್ಸ್ ಜೊತೆಗಿನ ರಿಷಬ್ ಒಪ್ಪಂದದ ಕಾರಣ ನಟ ರಕ್ಷಿತ್ ಶೆಟ್ಟಿ ಅವರ ಸಿನಿಮಾದಿಂದ ಕಾಂತಾರ ಹೀರೋ ಹೊರಗೆ ಬಂದಿದ್ದಾರೆ ಎನ್ನಲಾಗಿದೆ. ಬ್ಯಾಚುರಲ್ ಪಾರ್ಟಿ ಸಿನಿಮಾದಲ್ಲಿ ಅಚ್ಯುತ್ ಕುಮಾರ್ ಹಾಗೂ ದಿಗಂತ್ ಜೊತೆ ನಟಿಸಬೇಕಿದ್ದ ರಿಷಬ್ ಶೆಟ್ಟಿ ಈಗ ಸಿನಿಮಾದಿಂದ ಹೊರಗೆ ಬಂದಿದ್ದು ಅವರ ಪಾತ್ರಕ್ಕಾಗಿ ಬೇರೆ ಹೀರೋನನ್ನು ಹುಡುಕಲಾಗುತ್ತಿದೆ ಎಂದು ವಿಚಾರ ತಿಳಿದುಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ