HERO Trailer: ಸ್ವರ್ಣದೋಕುಳಿಲಿರುವ ಲಂಕೆಯಲ್ಲಿನ ರಕ್ತಸಿಕ್ತ ಕಥೆಯೇ ಈ ಹೀರೋ..!

Rishab Shetty- Hero The Film: ಸಂಕ್ರಾಂತಿ ಹಬ್ಬದ ಪ್ರಯುಕ್ತ ರಿಷಭ್​ ಶೆಟ್ಟಿ ಹಾಗೂ ಹೀರೋ ಸಿನಿಮಾದ ಚಿತ್ರತಂಡ ಟ್ರೇಲರ್​ ರಿಲೀಸ್​ ಮಾಡಲು ನಿರ್ಧರಿಸಿದ್ದು. ಹೇಳಿದಂತೆ ಸಮಯಕ್ಕೆ ಸರಿಯಾಗಿ ಹೀರೋ ಟ್ರೇಲರ್ ಬಿಡುಗಡೆ ಮಾಡಿದ್ದಾರೆ. 

ಹೀರೋ ಸಿನಿಮಾದಲ್ಲಿ ರಿಷಭ್​ ಶೆಟ್ಟಿ ಹಾಗೂ ಗಾನವಿ ಲಕ್ಷ್ಮಣ್​

ಹೀರೋ ಸಿನಿಮಾದಲ್ಲಿ ರಿಷಭ್​ ಶೆಟ್ಟಿ ಹಾಗೂ ಗಾನವಿ ಲಕ್ಷ್ಮಣ್​

  • Share this:
ಸ್ಯಾಂಡಲ್​ವುಡ್​ನ ಪ್ರತಿಭಾವಂತ ನಟ ಹಾಗೂ ನಿರ್ದೇಶಕ ರಿಷಭ್​ ಶೆಟ್ಟಿ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಒಂದು ಕಡೆ ನಟನೆ ಜೊತೆಗೆ ನಿರ್ದೇಶನ. ಸಿನಿಮಾಗಳಲ್ಲಿ ಅಭಿನಯಿಸುತ್ತಲೇ ನಿರ್ದೇಶನ ಸಹ ಮಾಡುತ್ತಿರುವ ರಿಷಭ್​ ಅವರ ಬಹು ನಿರೀಕ್ಷಿತ ಸಿನಿಮಾ ಹೀರೋ. ಈ ಸಿನಿಮಾ ಲಾಕ್​ಡೌನ್​ನಲ್ಲಿ ಸಖತ್ ಸದ್ದು ಮಾಡಿತ್ತು. ಅದಕ್ಕೂ ಕಾರಣ ಇದೆ. ರಿಷಭ್​ ಶೆಟ್ಟಿ ಹಾಗೂ ತಂಡವರು ಲಾಕ್​ಡೌನ್​ನಲ್ಲಿ ಸುಮ್ಮನೆ ಕೂರಲಾಗದೆ ಚಿತ್ರೀಕರಣ ಮುಗಿಸಿದ್ದ ಸಿನಿಮಾ ಹೀರೋ. ​ಲಾಕ್​ಡೌನ್​ ಆರಂಭವಾಗುತ್ತಿದ್ದಂತೆಯೇ ಊರಿಗೆ ಹೋಗಿದ್ದ ರಿಷಭ್​ ಶೆಟ್ಟಿ ಆಗಲೇ ಈ ಸಿನಿಮಾದ ಪ್ಲಾನ್​ ಮಾಡಿ, ಅನ್​ಲಾಕ್​ ಆರಂಭವಾಗುತ್ತಿದ್ದಂತೆಯೇ ಚಿತ್ರೀಕರಣ ಮುಗಿಸಿದ್ದರು. ಕೇವಲ 24 ಮಂದಿ ಸೇರಿಕೊಂಡು ಈ ಹೀರೋ ಸಿನಿಮಾ ನಿರ್ಮಿಸಿದ್ದಾರೆ. ಇತ್ತೀಚೆಗಷ್ಟೆ ಈ ಸಿನಿಮಾದ ಪುಟ್ಟ ವಿಡಿಯೋ ಹಾಗೂ ಒಂದು ಫಸ್ಟ್​ಲುಕ್​ ಪೋಸ್ಟರ್​ ಹಂಚಿಕೊಂಡಿದ್ದರು. ರಿಷಭ್​ ಶೆಟ್ಟಿ ನಾಯಕನಾಗಿ ಅಭಿನಯಿಸಿರುವ ಹೀರೋ ಚಿತ್ರದ ಟ್ರೇಲರ್​ ಈಗ ರಿಲೀಸ್​ ಆಗಿದೆ. 

ಸಂಕ್ರಾಂತಿ ಹಬ್ಬದ ಪ್ರಯುಕ್ತ ರಿಷಭ್​ ಶೆಟ್ಟಿ ಹಾಗೂ ಹೀರೋ ಸಿನಿಮಾದ ಚಿತ್ರತಂಡ ಟ್ರೇಲರ್​ ರಿಲೀಸ್​ ಮಾಡಲು ನಿರ್ಧರಿಸಿದ್ದು. ಹೇಳಿದಂತೆ ಸಮಯಕ್ಕೆ ಸರಿಯಾಗಿ ಹೀರೋ ಟ್ರೇಲರ್ ಬಿಡುಗಡೆ ಮಾಡಿದ್ದಾರೆ.ಸಿನಿಮಾದಲ್ಲಿ ವಿಲನ್​ ಆಗಿ ಪ್ರಮೋದ್​ ಶೆಟ್ಟಿ ಕಾಣಿಸಿಕೊಂಡಿದ್ದು, ಪ್ರಮೋದ್​ ಅವರನ್ನು ಚಕ್ರಾಧಿಪತಿ ರಾವಣನಿಗೆ ಹೋಲಿಕೆ ಮಾಡಲಾಗಿದೆ. ಲಂಕಾಸುರನಂತಿರುವ ಪ್ರಮೋದ್​ ಶೆಟ್ಟಿಯ ಅಡಿಯಾಳುಗಳಿಗೆ ಕ್ರೌರ್ಯವೇ ಕರ್ಮ, ನಿಷ್ಠೆಯಿಂದ ಕ್ರೌರ್ಯವನ್ನೇ ಕರ್ಮವನ್ನಾಗಿ ಮಾಡುವ ಅವರಿಗೆ ಬಿಸಿ ನೆತ್ತರು ಮೈ ಸೋಕಿದರೆ ಅವರಿಗೆ ಹಸಿರು. ಇಂತಹ ರಕ್ತಸಿಕ್ತ ಸಸ್ಪೆನ್ಸ್ ಕಥೆಯಲ್ಲಿ ಸೇಡು, ಮೋಸ, ಪ್ರೀತಿ, ದ್ವೇಷ ಎಲ್ಲವೂ ಇದೆ. ಸಂಕ್ರಾಂತಿ ಹಬ್ಬಕ್ಕೆ ರಿಲೀಸ್ ಆಗಿರುವ ಈ ಹೀಟೋ ಟ್ರೇಲರ್​ ಸಿನಿಮಾಗ ಬಗೆಗಿನ ಕುತೂಹಲವನ್ನು ದುಪ್ಪಟ್ಟು ಮಾಡಿದೆ. ಟ್ರೇಲರ್ ನೋಡಿದವರು ಈಗ ಸಿನಿಮಾ ರಿಲೀಸ್ ದಿನಾಂಕ ಯಾವಾಗ ಎಂದು ಕಾಯುತ್ತಿದ್ದಾರೆ.


ರಿಷಭ್​ ಶೆಟ್ಟಿ ಫಿಲ್ಮ್ಸ್​ ನಿರ್ಮಾಣದ ಈ ಸಿನಿಮಾವನ್ನು ಭರತ್ ರಾಜ್​ ಎಂ ನಿರ್ದೇಶಿಸಿದ್ದಾರೆ. ಭರತ್​ ರಾಜ್​ ಈ ಸಿನಿಮಾದ ಮೂಲಕ ನಿರ್ದೇಶಕರಾಗಿ ಪರಿಚಯವಾಗುತ್ತಿದ್ದಾರೆ. ಇದರಲ್ಲಿ ರಿಷಭ್​ ಶೆಟ್ಟಿ ಹಾಗೂ ಗಾನವಿ ಲಕ್ಷ್ಮಣ್​ ನಟಿಸಿದ್ದಾರೆ. ಅಜನೀಶ್​ ಲೋಕನಾಥ್​ ಸಂಗೀತ ನೀಡಿದ್ದಾರೆ. ಈಗಾಗಲೇ ಹೀರೋ ಸಿನಿಮಾದ ಡಬ್ಬಿಂಗ್​ ಸಹ ಮುಗಿದಿದೆ.

ಇದನ್ನೂ ಓದಿ: ಎಲ್ಲೆಡೆ ಸಂಕ್ರಾಂತಿ ಹಬ್ಬದ ಸಂಭ್ರಮ: ಅಭಿಮಾನಿಗಳಿಗೆ ಶುಭ ಕೋರಿದ ದರ್ಶನ್​-ಪುನೀತ್​ ರಾಜ್​ಕುಮಾರ್​..!
ಇನ್ನು ರಿಷಭ್​ ಶೆಟ್ಟಿ ಸದ್ಯ ಹರಿಕಥೆ ಅಲ್ಲ ಗಿರಿಕಥೆಯ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ರಿಷಭ್​ ಶೆಟ್ಟಿ ಅವರ ಕೈಯಲ್ಲಿರುವ ಪ್ರಾಜೆಕ್ಟ್​ಗಳ ವಿಷಯಕ್ಕೆ ಬಂದರೆ, ನಾತುರಾಮ್, ಮಹನಿಯರೇ ಮಹಿಳೆಯರೇ, ಕೌ ಬಾಯ್ ಕೃಷ್ಣ, ಗರುಡ ಗಮನ ವೃಷಭ ವಾಹನ, ಬೆಲ್‌ ಬಾಟಂ 2 ಚಿತ್ರಗಳಲ್ಲಿ ರಿಷಬ್ ಶೆಟ್ಟಿ ನಟಿಸುತ್ತಿದ್ದಾರೆ. ಇದರ ಜೊತೆ ರುದ್ರಪ್ರಯಾಗ ಎಂಬ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
Published by:Anitha E
First published: