Rishab Shetty: ಲಾಕ್​ಡೌನ್​ನಲ್ಲೇ ಸಿನಿಮಾ ಮಾಡಿ ಹೀರೋ ಆದ ರಿಷಭ್​ ಶೆಟ್ಟಿ: ರಿಲೀಸ್​ ಆಯ್ತು ಫಸ್ಟ್​ ಲುಕ್​ ಪೋಸ್ಟರ್​..!

Hero Movie First Look Poster: ರಿಷಭ್​ ಶೆಟ್ಟಿ ಹೀರೋ ಆಗಿ ಪ್ರೇಕ್ಷಕನ ಮುಂದೆ ಬರಲಿದ್ದಾರೆ. ಹೀರೋ ಎಂದು ಟೈಟಲ್​ ನೀಡಿರುವ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದಾರೆ. ಅದರ ಫಸ್ಟ್​ಲುಕ್​ ಪೋಸ್ಟರ್​ ಇಂದು ರಿಲೀಸ್​ ಆಗಿದೆ.

Anitha E | news18-kannada
Updated:September 10, 2020, 12:48 PM IST
Rishab Shetty: ಲಾಕ್​ಡೌನ್​ನಲ್ಲೇ ಸಿನಿಮಾ ಮಾಡಿ ಹೀರೋ ಆದ ರಿಷಭ್​ ಶೆಟ್ಟಿ: ರಿಲೀಸ್​ ಆಯ್ತು ಫಸ್ಟ್​ ಲುಕ್​ ಪೋಸ್ಟರ್​..!
ಹೀರೋ ಸಿನಿಮಾದಲ್ಲಿ ರಿಷಭ್​ ಶೆಟ್ಟಿ
  • Share this:
ರಿಷಭ್​ ಶೆಟ್ಟಿ ಸದ್ಯಕ್ಕೆ ಅಭಿನಯ ಹಾಗೂ ನಿರ್ದೇಶನದಲ್ಲಿ ಬ್ಯುಸಿಯಾಗಿರುವ ನಟ. ಕೈತುಂಬ ಸಿನಿಮಾಗಳು, ಆದರೆ ಲಾಕ್​ಡೌನ್​ನಿಂದಾಗಿ ಯಾವುದೂ ಸೆಟ್ಟೇರಿರಲಿಲ್ಲ. ಆದರೆ ಲಾಕ್​ಡೌನ್​ ಆರಂಭವಾಗುತ್ತಿದ್ದಂತೆಯೇ ತಮ್ಮ ಹಳ್ಳಿಗೆ ಹೋಗಿ ಮಗ ಹಾಗೂ ಹೆಂಡತಿ ಜೊತೆ ಅಲ್ಲೇ ಇದ್ದರು. ಅಲ್ಲೇ ಮಗನ ಹುಟ್ಟುಹಬ್ಬವನ್ನೂ ಪಕ್ಕಾ ಹಳ್ಳಿ ಸೊಗಡಿನಲ್ಲಿ ಸಂಭ್ರಮಿಸಿದ್ದರು. ಇವೆಲ್ಲದರ ನಡುವೆಯೇ ರಿಷಭ್​ ಒಂದು ಸಿನಿಮಾವನ್ನು ಮಾಡಿ ಪೂರ್ಣಗೊಳಿಸಿದ್ದಾರೆ. ಹೌದು, ಈ ಬಗ್ಗೆ ಕಳೆದ ಎರಡು ದಿನಗಳಿಂದ ರಿಷಭ್​ ತಮ್ಮ ರಿಷಭ್​ ಶೆಟ್ಟಿ ಫಿಲ್ಸ್ಮ್​ ಇನ್​ಸ್ಟಾಗ್ರಾಂ ಖಾತೆಯಲ್ಲಿ ಅಪ್ಡೇಟ್​ ನೀಡುತ್ತಿದ್ದರು. ಮೊನ್ನೆ, ನಿಮಗೆಲ್ಲ ಒಂದು ಸರ್ಪ್ರೈಸ್​ ಇದೆ ಎಂದು ಪೋಸ್ಟ್ ಮಾಡಿದ್ದರು. ನಂತರ ಸಿನಿಮಾ ಮಾಡಿರುವ ವಿಷಯ ಹಂಚಿಕೊಂಡರು. ಆ ಪೋಸ್ಟ್​ನಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದು, ಅದು ಸಖತ್​ ಕಾಮಿಡಿಯಾಗಿತ್ತು. ಜೊತೆಗೆ ಈ ಸಿನಿಮಾದ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದ್ದು, ಅದರ ಟೈಟಲ್​ ಹಾಗೂ ಫಸ್ಟ್​ಲುಕ್​ ಪೋಸ್ಟರ್​ ನಾಳೆ ರಿಲೀಸ್​ ಮಾಡಲಿದ್ದೇವೆ ಎಂದು ಹಂಚಿಕೊಂಡಿದ್ದರು.





 

 

 

View this post on Instagram


 

 


Title, Firstlook ಹಾಗೂ ಉಳಿದ ವಿವರಗಳೊಂದಿಗೆ ನಾಳೆ ಮತ್ತೆ ಭೇಟಿಯಾಗೋಣ.


A post shared by Rishab Shetty Films (@rishabshettyfilms) on






ರಿಷಭ್​ ಶೆಟ್ಟಿ ಫಿಲ್ಮ್ಸ್​ ನಿರ್ಮಾಣದ ಈ ಸಿನಿಮಾವನ್ನು ಭರತ್ ರಾಜ್​ ಎಂ ನಿರ್ದೇಶಿಸಿದ್ದಾರೆ. ಭರತ್​ ರಾಜ್​ ಈ ಸಿನಿಮಾದ ಮೂಲಕ ನಿರ್ದೇಶಕರಾಗಿ ಪರಿಚಯವಾಗುತ್ತಿದ್ದಾರೆ. ಇದರಲ್ಲಿ ರಿಷಭ್​ ಶೆಟ್ಟಿ ಹಾಗೂ ಗಾನವಿ ಲಕ್ಷ್ಮಣ್​ ನಟಿಸಿದ್ದಾರೆ. ಅಜನೀಶ್​ ಲೋಕನಾಥ್​ ಸಂಗೀತ ನೀಡಿದ್ದಾರೆ.




ಈ ಸಿನಿಮಾಗೆ ಹೀರೋ ಎಂದು ಟೈಟಲ್​ ನೀಡಲಾಗಿದ್ದು, ಅದರ ಫಸ್ಟ್​ಲುಕ್​ ಪೋಸ್ಟರ್​ ಅನ್ನೂ ಸಹ ಇಂದು ರಿಲೀಸ್ ಮಾಡಲಾಗಿದೆ. ಈ ಸಿನಿಮಾವನ್ನು ಲಾಕ್​ಡೌನ್​ನಲ್ಲಿ ಸುಮ್ಮನೆ ಕೂರಲಾಗದೆ ಮಾಡಲಾಗಿದೆಯಂತೆ.



ರಿಷಭ್​ ಶೆಟ್ಟಿ ಅವರು ನಾತುರಾಮ್, ಮಹನಿಯರೇ ಮಹಿಳೆಯರೇ, ಕೌ ಬಾಯ್ ಕೃಷ್ಣ, ಗರುಡ ಗಮನ ವೃಷಭ ವಾಹನ, ಹರಿಕಥೆ ಅಲ್ಲ ಗಿರಿಕಥೆ, ಬೆಲ್‌ ಬಾಟಂ 2 ಚಿತ್ರಗಳಲ್ಲಿ ರಿಷಬ್ ಶೆಟ್ಟಿ ನಟಿಸುತ್ತಿದ್ದಾರೆ. ಇದರ ಜೊತೆ ರುದ್ರಪ್ರಯಾಗ ಎಂಬ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
Published by: Anitha E
First published: September 10, 2020, 12:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading