Rishab Shetty: ರಿಷಭ್​ ಶೆಟ್ಟಿ ಅಭಿನಯದ ಹೀರೋ ಸಿನಿಮಾ ಟ್ರೇಲರ್​ ರಿಲೀಸ್​ಗೆ ಡೇಟ್​ ಫಿಕ್ಸ್​..!

Hero Film Trailer: ಹೀರೋ ಸಿನಿಮಾದ ಟ್ರೇಲರ್​ ರಿಲೀಸ್​ಗೆ ದಿನಾಂಕ ನಿಗದಿಯಾಗಿದೆ. ಸಂಕ್ರಾಂತಿ ಹಬ್ಬದಂದು ಅಂದರೆ, ಜ.14ರಂದು ಬೆಳಿಗ್ಗೆ 10ಕ್ಕೆ ಹೀರೋ ಟ್ರೇಲರ್​ ರಿಲೀಸ್​ ಆಗಲಿದೆ. ಈ ಬಗ್ಗೆ ರಿಷಭ್​ ಶೆಟ್ಟಿ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದಾರೆ.

ಹೀರೋ ಸಿನಿಮಾದಲ್ಲಿ ರಿಷಭ್​ ಶೆಟ್ಟಿ

ಹೀರೋ ಸಿನಿಮಾದಲ್ಲಿ ರಿಷಭ್​ ಶೆಟ್ಟಿ

  • Share this:
ಸ್ಯಾಂಡಲ್​ವುಡ್​ನ ಪ್ರತಿಭಾವಂತ ನಟ ಹಾಗೂ ನಿರ್ದೇಶಕ ರಿಷಭ್​ ಶೆಟ್ಟಿ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಒಂದು ಕಡೆ ನಟನೆ ಜೊತೆಗೆ ನಿರ್ದೇಶನ. ಸಿನಿಮಾಗಳಲ್ಲಿ ಅಭಿನಯಿಸುತ್ತಲೇ ನಿರ್ದೇಶನ ಸಹ ಮಾಡುತ್ತಿರುವ ರಿಷಭ್​ ಅವರ ಬಹು ನಿರೀಕ್ಷಿತ ಸಿನಿಮಾ ಹೀರೋ. ಈ ಸಿನಿಮಾ ಲಾಕ್​ಡೌನ್​ನಲ್ಲಿ ಸಖತ್ ಸದ್ದು ಮಾಡಿತ್ತು. ಅದಕ್ಕೂ ಕಾರಣ ಇದೆ. ರಿಷಭ್​ ಶೆಟ್ಟಿ ಹಾಗೂ ತಂಡವರು ಲಾಕ್​ಡೌನ್​ನಲ್ಲಿ ಸುಮ್ಮನೆ ಕೂರಲಾಗದೆ ಚಿತ್ರೀಕರಣ ಮುಗಿಸಿದ್ದ ಸಿನಿಮಾ ಹೀರೋ. ​ಲಾಕ್​ಡೌನ್​ ಆರಂಭವಾಗುತ್ತಿದ್ದಂತೆಯೇ ಊರಿಗೆ ಹೋಗಿದ್ದ ರಿಷಭ್​ ಶೆಟ್ಟಿ ಆಗಲೇ ಈ ಸಿನಿಮಾದ ಪ್ಲಾನ್​ ಮಾಡಿ, ಅನ್​ಲಾಕ್​ ಆರಂಭವಾಗುತ್ತಿದ್ದಂತೆಯೇ ಚಿತ್ರೀಕರಣ ಮುಗಿಸಿದ್ದರು. ಇತ್ತೀಚೆಗಷ್ಟೆ ಈ ಸಿನಿಮಾದ ಪುಟ್ಟ ವಿಡಿಯೋ ಹಾಗೂ ಒಂದು ಫಸ್ಟ್​ಲುಕ್​ ಪೋಸ್ಟರ್​ ಹಂಚಿಕೊಂಡಿದ್ದರು. ರಿಷಭ್​ ಶೆಟ್ಟಿ ನಾಯಕನಾಗಿ ಅಭಿನಯಿಸಿರುವ ಹೀರೋ ಚಿತ್ರದ ಕುರಿತಾಗಿ ಈಗ ಹೊಸ ಅಪ್ಡೇಟ್​ ಕೊಟ್ಟಿದ್ದಾರೆ ಶೆಟ್ರು .

ಸಿನಿಮಾದ ಫಸ್ಟ್​ಲುಕ್​ ಪೋಸ್ಟರ್​ಗೆ ಸಾಕಷ್ಟು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಪ್ರೇಕ್ಷಕರು ಚಿತ್ರದ ಟ್ರೇಲರ್​ ಹಾಗೂ ರಿಲೀಸ್​ಗಾಗಿ ಕಾಯುತ್ತಿದ್ದಾರೆ. ಒಂದೊಂದಾಗಿ ಸ್ಟಾರ್​ ನಟರು ನಟಿಸಿರುವ ಚಿತ್ರತಂಡಗಳು ಸಿನಿಮಾಗಳ ರಿಲೀಸ್​ ದಿನಾಂಕ ಪ್ರಕಟಿಸುತ್ತಿದ್ದಂತೆಯೇ ರಿಷಭ್​ ಶೆಟ್ಟಿ ಸಹ ಹೀರೋ ಸಿನಿಮಾ ಕುರಿತಾಗಿ ಪ್ರಕಟಿಸಿದ್ದಾರೆ. ​
ಹೀರೋ ಸಿನಿಮಾದ ಟ್ರೇಲರ್​ ರಿಲೀಸ್​ಗೆ ದಿನಾಂಕ ನಿಗದಿಯಾಗಿದೆ. ಸಂಕ್ರಾಂತಿ ಹಬ್ಬದಂದು ಅಂದರೆ, ಜ.14ರಂದು ಬೆಳಿಗ್ಗೆ 10ಕ್ಕೆ ಹೀರೋ ಟ್ರೇಲರ್​ ರಿಲೀಸ್​ ಆಗಲಿದೆ. ಈ ಬಗ್ಗೆ ರಿಷಭ್​ ಶೆಟ್ಟಿ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದಾರೆ.


ರಿಷಭ್​ ಶೆಟ್ಟಿ ಫಿಲ್ಮ್ಸ್​ ನಿರ್ಮಾಣದ ಈ ಸಿನಿಮಾವನ್ನು ಭರತ್ ರಾಜ್​ ಎಂ ನಿರ್ದೇಶಿಸಿದ್ದಾರೆ. ಭರತ್​ ರಾಜ್​ ಈ ಸಿನಿಮಾದ ಮೂಲಕ ನಿರ್ದೇಶಕರಾಗಿ ಪರಿಚಯವಾಗುತ್ತಿದ್ದಾರೆ. ಇದರಲ್ಲಿ ರಿಷಭ್​ ಶೆಟ್ಟಿ ಹಾಗೂ ಗಾನವಿ ಲಕ್ಷ್ಮಣ್​ ನಟಿಸಿದ್ದಾರೆ. ಅಜನೀಶ್​ ಲೋಕನಾಥ್​ ಸಂಗೀತ ನೀಡಿದ್ದಾರೆ.


ಈಗಾಗಲೇ ಹೀರೋ ಸಿನಿಮಾದ ಡಬ್ಬಿಂಗ್​ ಸಹ ಮುಗಿದಿದೆ. ಇನ್ನೇನು ಸಿನಿಮಾ ರಿಲೀಸ್​ ಆಗುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ.
ಇನ್ನು ರಿಷಭ್​ ಶೆಟ್ಟಿ ಸದ್ಯ ಹರಿಕಥೆ ಅಲ್ಲ ಗಿರಿಕಥೆಯ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ರಿಷಭ್​ ಶೆಟ್ಟಿ ಅವರ ಕೈಯಲ್ಲಿರುವ ಪ್ರಾಜೆಕ್ಟ್​ಗಳ ವಿಷಯಕ್ಕೆ ಬಂದರೆ, ನಾತುರಾಮ್, ಮಹನಿಯರೇ ಮಹಿಳೆಯರೇ, ಕೌ ಬಾಯ್ ಕೃಷ್ಣ, ಗರುಡ ಗಮನ ವೃಷಭ ವಾಹನ, ಬೆಲ್‌ ಬಾಟಂ 2 ಚಿತ್ರಗಳಲ್ಲಿ ರಿಷಬ್ ಶೆಟ್ಟಿ ನಟಿಸುತ್ತಿದ್ದಾರೆ. ಇದರ ಜೊತೆ ರುದ್ರಪ್ರಯಾಗ ಎಂಬ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
Published by:Anitha E
First published: