Harikathe Alla Girikathe: ವೀಕೆಂಡ್​ನಲ್ಲಿ ಕಾಮಿಡಿ ಕಿಕ್​ ಕೊಡಲು ಓಟಿಟಿಯಲ್ಲಿ 'ಹರಿಕಥೆ ಅಲ್ಲ ಗಿರಿಕಥೆ'

ಹರಿಕಥೆ ಅಲ್ಲ ಗಿರಿಕಥೆ ಚಿತ್ರವನ್ನು ನೀವು ವೂಟ್ ಸೆಲೆಕ್ಟ್‌ನಲ್ಲಿ ನೋಡಬಹುದಾಗಿದೆ. ಜನರನ್ನು ಮತ್ತಷ್ಟು ನಗಿಸಲು ಓಟಿಟಿಯಲ್ಲಿ ಹರಿಕಥೆ ಅಲ್ಲ ಗಿರಿಕಥೆ ಬರ್ತಿದೆ. ವೀಕೆಂಡ್​ನಲ್ಲಿ ಸಿನಿಮಾ ನೋಡೋ ಜನರಿಗೆ ಹರಿಕಥೆ  ಅಲ್ಲ ಗಿರಿಕಥೆ ಹಾಸ್ಯದ ಕಿಕ್​ ಕೊಡಲಿದೆ.

ಹರಿಕಥೆ ಅಲ್ಲ ಗಿರಿಕಥೆ ಚಿತ್ರ

ಹರಿಕಥೆ ಅಲ್ಲ ಗಿರಿಕಥೆ ಚಿತ್ರ

  • Share this:
ಇತ್ತೀಚಿಗಷ್ಟೆ ತೆರೆಕಂಡು ಪ್ರೇಕ್ಷಕರನ್ನು ನಗೆಕಡಲಲ್ಲಿ ತೇಲಿಸಿದ ‘ಹರಿಕಥೆ ಅಲ್ಲ ಗಿರಿಕಥೆ ( Harikathe Alla Girikathe ) ಸಿನಿಮಾ ಇದೀಗ ಓಟಿಟಿಯಲ್ಲಿ ರಿಲೀಸ್ ಅಗಿದೆ. ಈ ಚಿತ್ರದಲ್ಲಿ ರಚನಾ ಇಂದೆರ್ ಹಾಗೂ ಪ್ರಮೋದ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಹರಿಕಥೆ ಅಲ್ಲ ಗಿರಿಕಥೆ ಚಿತ್ರವನ್ನು ನೀವು ವೂಟ್ ಸೆಲೆಕ್ಟ್‌ನಲ್ಲಿ (Voot Select) ನೋಡಬಹುದಾಗಿದೆ. ಜನರನ್ನು ಮತ್ತಷ್ಟು ನಗಿಸಲು ಓಟಿಟಿಯಲ್ಲಿ ಹರಿಕಥೆ ಅಲ್ಲ ಗಿರಿಕಥೆ ಬರ್ತಿದೆ. ವೀಕೆಂಡ್​ನಲ್ಲಿ ಸಿನಿಮಾ ನೋಡೋ ಜನರಿಗೆ ಹರಿಕಥೆ  ಅಲ್ಲ ಗಿರಿಕಥೆ ಹಾಸ್ಯದ ಕಿಕ್​ ಕೊಡಲಿದೆ.

ಕರಣ್ ಅನಂತ್ ಹಾಗೂ ಅನಿರುದ್ಧ ಮಹೇಶ್, ಚಿತ್ರಕ್ಕೆ ಕಥೆ ಬರೆದು ನಿರ್ದೇಶಿಸಿದರೆ, ಸಂದೇಶ್ ನಾಗರಾಜ್ ಚಿತ್ರವನ್ನು ನಿರ್ಮಿಸಿದ್ದಾರೆ. 'ಹರಿಕಥೆ ಅಲ್ಲ ಗಿರಿಕಥೆ' ಚಿತ್ರದಲ್ಲಿ ರಿಷಭ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಹೊನ್ನವಳ್ಳಿ ಕೃಷ್ಣ, ರಚನಾ ಇಂದೆರ್, ತಪಸ್ವಿನಿ ಪೂಣಚ್ಛ, ಪ್ರಮೋದ್ ಶೆಟ್ಟಿ ಇತರರು ತಾರಾಗಣದಲ್ಲಿದ್ದಾರೆ.

ಜನರನ್ನು ನಕ್ಕು ನಕ್ಕಿಸೋದೆ ಇವರ ಉದ್ದೇಶ

ಮೂವರು ಗಿರಿಗಳ ನೆಲೆಗಟ್ಟಿನಲ್ಲಿ ಈ ಚಿತ್ರವನ್ನು ಹೆಣೆಯಲಾಗಿದೆ. ಒಬ್ಬ ಗಿರಿ ಉದಯೋನ್ಮುಖ ನಿರ್ದೇಶಕನಾದರೆ, ಮತ್ತೊಬ್ಬ ವಿಲನ್ ಹಾಗೂ ಮತ್ತೋರ್ವ ನಟಿ ಗಿರಿಜಾ ಈ ಮೂವರು ಅಕಸ್ಮಿಕವಾಗಿ ಸೇರಿಕೊಳ್ಳುತ್ತಾರೆ. ಈ ಮೂವರು ಸೇರಿಕೊಂಡು ಸಿನಿಮಾ ಮಾಡಲು ನಿರ್ಧರಿಸುತ್ತಾರೆ. ಇದೇ ಚಿತ್ರದ ಮೂಲ ತಿರುಳು. ಇದೊಂದು ಪಕ್ಕಾ ಮನರಂಜನಾತ್ಮಕ ಸಿನಿಮಾವಾಗಿದ್ದು, ಪ್ರೇಕ್ಷಕರನ್ನು ಎರಡು ಗಂಟೆ ನಗಿಸಬೇಕು ಎಂಬುದೇ ಸಿನಿಮಾದ ಮೂಲ ಉದ್ದೇವಾಗಿದೆ.

rishab shetty new film hari kathe alla giri kathe a story plot
ಹರಿ ಕಥೆ ಅಲ್ಲ ಗಿರಿ ಕಥೆ


ಸಖತ್​ ಕಿಕ್​ ಕೊಡುತ್ತೆ ಹೊನ್ನವಳ್ಳಿ ಕಾಮಿಡಿ

ರಿಷಭ್ ಶೆಟ್ಟಿ ಹಾಗೂ ಹಿರಿಯ ನಟ ಹೊನ್ನವಳ್ಳಿ ಕೃಷ್ಣ ನಟನೆ ಗಮನಸೆಳೆಯುತ್ತದೆ. ಇಬ್ಬರ ನಡುವಿನ ಹಾಸ್ಯ ಸಂಭಾಷಣೆ, ನೋಡುಗರನ್ನು ಹಿಡಿದಿಟ್ಟುಕೊಳ್ಳುತ್ತದೆ. ಜತೆಗೆ ಸಾಕಷ್ಟು ಮನರಂಜನೆಯಾಗಿದೆ. ಈ ಮೂವರ ನಡುವಿನ ಹಾಸ್ಯ ಭರಿತ ಸಂಭಾಷಣೆಯನ್ನು  ವೂಟ್‌ಸೆಲೆಕ್ಟ್‌ನಲ್ಲಿ ವೀಕ್ಷಿಸಬಹುದು.

ಇದನ್ನೂ ಓದಿ: Gaalipata 2: ಭಟ್ರು ಜೊತೆ ಗಣಿ ಬಿಟ್ಟ ಗಾಳಿಪಟ-2 ಸೂಪರ್​ ಹಿಟ್​; ಮೊದಲ ದಿನವೇ ಬಾಕ್ಸ್​ ಆಫೀಸ್​ನಲ್ಲಿ ಭರ್ಜರಿ ಕಲೆಕ್ಷನ್​

ಇದೊಂದು ವಿಶೇಷ ಜರ್ನಿ ಎಂದ ರಿಷಭ್​

ನಾನು ಮೊದಲಿಗೆ ಕಥೆ ಓದಿಗಾಗಲೇ ಬೌಲ್ಡ್ ಆದೆ. ಇದೊಂದು ಹಾಸ್ಯಭರಿತ ಒಟಿಟಿಯಲ್ಲಿ ಜನ ಯಾವ ರೀತಿ ಸ್ವೀಕರಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ನನಗೆ ಸಿಕ್ಕಿದ್ದ ಪಾತ್ರ ತುಂಬಾ ಸವಾಲಿನಿಂದ ಕೂಡಿತ್ತು. ವೂಟ್‌ನಲ್ಲಿ ಚಿತ್ರ ವೀಕ್ಷಿಸಲು ಉತ್ಸುಕನಾಗಿದ್ದೇನೆ. ಅಲ್ಲದೆ, ಜನರ ಪ್ರತಿಕ್ರಿಯೆ ಯಾವ ರೀತಿ ಬರುತ್ತದೆ ನೋಡಬೇಕು. ಇದೊಂದು ವಿಶೇಷ ಜರ್ನಿ. ಇಂಥ ತಂಡದೊಂದಿಗೆ ಕೆಲಸ ಮಾಡಿದ್ದು ತುಂಬಾ ಖುಷಿ ನೀಡಿತು ಎಂದು ನಟ ರಿಷಭ್ ಶೆಟ್ಟಿ ತಿಳಿಸಿದ್ದಾರೆ.

ಚಿತ್ರ ಹರಿಕಥೆ ಅಲ್ಲ ಗಿರಿಕಥೆ ಹಾಗೂ ನನ್ನ ಪಾತ್ರ ಗಿರಿಜಾ ಮನಸಿಗೆ ತುಂಬಾ ಹತ್ತಿರವಾಗಿದೆ. ಚಿತ್ರಕ್ಕಾಗಿ ಸಾಕಷ್ಟು ವರ್ಕ್ ಮಾಡಿದ್ದೆ. ಪ್ರತಿಯೊಂದು ಸಂಭಾಷಣೆ, ಸನ್ನಿವೇಶ ಅದ್ಭುತವಾಗಿ ಮೂಡಿ ಬಂದಿದೆ. ನಮ್ಮನಡುವಿನ ಕೆಮಿಸ್ಟ್ರಿ ಆನ್‌ಸ್ಕ್ರೀನ್‌ನಲ್ಲಿ ತುಂಬಾ ಚೆನ್ನಾಗಿ ಬಂದಿದೆ. ವೂಟ್ ಸೆಲೆಕ್ಟ್‌ನಲ್ಲಿ ಚಿತ್ರ ನೋಡಲು ಉತ್ಸುಕನಾಗಿರುವೆ ಎಂದು ಚಿತ್ರದ ನಾಯಕಿ ರಚನಾ ಇಂದೆರ್ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ; Gaalipata 2 Review: ಕಾಮಿಡಿಯೂ, ಎಮೋಷನ್​​ಗಳೂ - ಭಾವನೆಗಳ ಬಣ್ಣ ತುಂಬಿ ಹಾರಿದ ಗಾಳಿಪಟ!

"ಈ ಸಿನಿಮಾ ತುಂಬಾ ವಿಶೇಷದಿಂದ ಕೂಡಿದೆ. ಸಿನಿಮಾ ಚಿತ್ರಿಕರಣದ ವೇಳೆ ಉತ್ತಮ ಅನುಭವ ಉಂಟಾಯಿತು. ಸಿನಿಮಾ ವೀಕ್ಷಿಸುವಾಗಿ ಪ್ರತಿಯೊಂದು ಸೆಕೆಂಡ್ ಕೂಡ ನಗು ತರಿಸುತ್ತದೆ. ಒಂದು ಅದ್ಭುತ ತಂಡದೊಂದಿಗೆ ಕೆಲಸ ಮಾಡಿದ ತೃಪ್ತಿಯಿದೆ. ಇದೊಂದು ಅದ್ಭುತ ಜರ್ನಿಯಾಗಿತ್ತು. ಮೂವರ ಜರ್ನಿ ಕುರಿತು ಚಿತ್ರಿಕರಿಸಿರುವ ಈ ಚಿತ್ರದ ವೈಯಕ್ತಿಕ ಬದುಕನ್ನು ಅನಾವರಣಗೊಳಿಸಿದೆ. ವೂಟ್ ಮೂಲಕ ಸಿನಿರಸಿಕರಿಗೆ ಮತ್ತಷ್ಟು ಮನಮುಟ್ಟಲಿದೆ" ಎನ್ನುತ್ತಿದೆ ಚಿತ್ರತಂಡ
Published by:Pavana HS
First published: