Rishab Shetty: ಗಿರಿಕಥೆ ಹೇಳೋದ್ರಲ್ಲಿ ಬ್ಯುಸಿಯಾದ ರಿಷಭ್​ ಶೆಟ್ಟಿ..!

ಹೀರೋ ಸಿನಿಮಾದ ಕೆಲಸ ಮುಗಿಯುತ್ತಿದ್ದಂತೆಯೇ ಹರಿಕಥೆ ಅಲ್ಲ ಗಿರಿಕಥೆ ಚಿತ್ರದ ಚಿತ್ರೀಕರಣ ಆರಂಭವಾಗಿದೆ. ಶೂಟಿಂಗ್​ ಭರದಿಂದ ಸಾಗಿದೆ ಎಂದು ರಿಷಭ್​ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಹರಿಕಥೆ ಅಲ್ಲ ಗಿರಿಕಥೆ ಸಿನಿಮಾದ ಚಿತ್ರೀಕರಣದಲ್ಲಿ ರಿಷಭ್​ ಶೆಟ್ಟಿ

ಹರಿಕಥೆ ಅಲ್ಲ ಗಿರಿಕಥೆ ಸಿನಿಮಾದ ಚಿತ್ರೀಕರಣದಲ್ಲಿ ರಿಷಭ್​ ಶೆಟ್ಟಿ

  • Share this:
ಸ್ಯಾಂಡಲ್​ವುಡ್​ನ ಪ್ರತಿಭಾವಂತ ನಟ ಹಾಗೂ ನಿರ್ದೇಶಕ ರಿಷಭ್​ ಶೆಟ್ಟಿ ಲಾಕ್​ಡೌನ್​ಗೆ ಮುಂಚಿತವಾಗಿ ಹಾಗೂ ನಂತರದಲ್ಲೂ ಸಖತ್​ ಬ್ಯುಸಿಯಾಗಿದ್ದಾರೆ. ಒಂದರ ಹಿಂದೆ ಒಂದರಂತೆ ತಮ್ಮ ಪ್ರಾಜೆಕ್ಟ್​ಗಳನ್ನು ಪೂರ್ಣಗೊಳಿಸುತ್ತಿದ್ದಾರೆ. ಇತ್ತೀಚೆಗಷ್ಟೆ ಲಾಕ್​ಡೌನ್​ ಸಡಿಲಗೊಂಡ ನಂತರ ಆರಂಭಿಸಿದ್ದ ಹೀರೋ ಸಿನಿಮಾದ ಚಿತ್ರೀಕರಣ, ಡಬ್ಬಿಂಗ್​ ಹಾಗೂ ಎಡಿಟಿಂಗ್​ ಅನ್ನು ಮುಗಿಸಿದ್ದಾರೆ. ಈಗ ತಮ್ಮ ಬಹುನಿರೀಕ್ಷಿತ ಸಿನಿಮಾ ಸಂದೇಶ್​ ನಾಗರಾಜ್​ ಅವರ ಬ್ಯಾನರ್​ ಅಡಿ ನಿರ್ಮಾಣವಾಗುತ್ತಿರುವ ಹರಿಕಥೆ ಅಲ್ಲ ಗಿರಿ ಕಥೆ ಕಡೆ ಮುಖ ಮಾಡಿದ್ದಾರೆ. ರಿಷಭ್​ ಶೆಟ್ಟಿ ನಟಿಸುತ್ತಿರುವ ಈ ಸಿನಿಮಾದ ಮುಹೂರ್ತ ಲಾಕ್​ಡೌನ್​ ಸಡಿಲಗೊಳ್ಳುತ್ತಿದ್ದಂತೆಯೇ ಬೆಂಗಳೂರಿನಲ್ಲಿ ನೆರವೇರಿತ್ತು. ಈ ಚಿತ್ರವನ್ನು ಗಿರಿ ಕೃಷ್ಣ ನಿರ್ದೇಶಿಸುತ್ತಿದ್ದು, ಇವರು ಎದೆಗಾರಿಕೆ, ಕಿರಿಕ್​ ಪಾರ್ಟಿ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ರಿಷಭ್​ ಶೆಟ್ಟಿ ನಾಯಕನಾಗಿ ನಟಿಸುತ್ತಿರುವ ಮೂರನೇ ಸಿನಿಮಾ ಇದಾಗಿದ್ದು, ಇದರಲ್ಲಿ ನಾಯಕಿಯರಿಗಾಗಿ ಈ ಹಿಂದೆಯೇ ಹುಟುಕಾಟ ಆರಂಭಿಸಿತ್ತು ಚಿತ್ರತಂಡ.

ಅಲ್ಲದೆ, ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವುದಾಗಿ ರಿಷಭ್​ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದರು. ಇದರಿಂದಾಗಿ ಸಾಕಷ್ಟು ಮಂದಿ ರಿಷಭ್​ ಅವರ ಈ ನಿರ್ಧಾರವನ್ನು ಮೆಚ್ಚಿಕೊಂಡಿದ್ದರು. ಬಾಲಿವುಡ್​ನಲ್ಲಿ ನೆಪೋಟಿಸಂನಿಂದಾಗಿ ಪ್ರತಿಭೆಗಳಿಗೆ ಬೆಳೆಯಲು ಅವಕಾಶ ವಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿರುವಾಗ ಕನ್ನಡದಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಾಗುತ್ತಿದೆ ಎಂದು ಸಿನಿಪ್ರಿಯರು ಖುಷಿ ಪಟ್ಟಿದ್ದರು.
ಹೇಳಿದಂತೆಯೇ ಆಡಿಷನ್​ ಮಾಡಿದ್ದರು. ಆದರೆ ಅವರಿಗೆ ಅಗತ್ಯವಿದ್ದ ನಾಯಕಿ ಮಾತ್ರ ಸಿಗಲಿಲ್ಲ. ನಂತರದಲ್ಲಿ ಅವರೇ ಸಾಮಾಜಿಕ ಜಾಲತಾಣದಲ್ಲಿ ಹುಡುಕಾಟ ನಡೆಸಿ, ನಾಯಕಿಯನ್ನು ಆಯ್ಕೆ ಮಾಡಿದ್ದರು. ಈ ಸಿನಿಮಾದಲ್ಲಿ ಈಗ ಇಬ್ಬರು ನಾಯಕಿರು. ಕೆಲವೇ ದಿನಗಳ ಹಿಂದೆಯಷ್ಟೆ ಚಿತ್ರದ ನಾಯಕಿಯರನ್ನು ಸಖತ್ ಕಾಮಿಯಾಗಿ ಪೋಸ್ಟರ್ ಮಾಡಿ ಪರಿಚಯಿಸಿದ್ದರು ರಿಷಭ್​ ಶೆಟ್ಟಿ.


ಇನ್ನು, ಹೀರೋ ಸಿನಿಮಾದ ಕೆಲಸ ಮುಗಿಯುತ್ತಿದ್ದಂತೆಯೇ ಹರಿಕಥೆ ಅಲ್ಲ ಗಿರಿಕಥೆ ಚಿತ್ರದ ಚಿತ್ರೀಕರಣ ಆರಂಭವಾಗಿದೆ. ಶೂಟಿಂಗ್​ ಭರದಿಂದ ಸಾಗಿದೆ ಎಂದು ರಿಷಭ್​ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.


ಈಗಾಗಲೇ ಲವ್​ ಮಾಕ್ಟೇಲ್​ ಸಿನಿಮಾದಲ್ಲಿ ಆದಿತಿಯಾಗಿ ಪರಿಚಯವಾಗಿರುವ ರಚನಾ ಇಂದರ್​ ಈ ಚಿತ್ರದಲ್ಲಿ ಎರಡನೇ ನಾಯಕಿಯಾದರೆ, ತಪಸ್ವಿನಿ ಪೂಣಚ್ಚ ಹರಿಕಥೆ ಅಲ್ಲ ಗಿರಿಕಥೆ ಚಿತ್ರದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇನ್ನು ತಪಸ್ವಿನಿ ಇದೇ ಮೊದಲ ಬಾರಿಗೆ ನಟಿಸುತ್ತಿರುವ ಸಿನಿಮಾ ಇದಾಗಿದೆ. ಬೆಂಗಳೂರಿನಲ್ಲಿ ಒಂದು ದಿನದ ಚಿತ್ರೀಕರಣದ ಮುಗಿದ ನಂತರ, ಮೈಸೂರಿನಲ್ಲಿ ಶೂಟಿಂಗ್​ ನಡೆಯಲಿದೆ. ಇಡೀ ಸಿನಿಮಾದ ಚಿತ್ರೀಕರಣ ಮೈಸೂರಿನಲ್ಲೇ ನಡೆಯಲಿದೆಯಂತೆ.
Published by:Anitha E
First published: