'ಬೆಲ್​ ಬಾಟಂ' ಟ್ರೈಲರ್​ನಲ್ಲಿ 80ರ ದಶಕದ ಕಂಪು ​; ಹೊಸ ಅವತಾರದಲ್ಲಿ ರಿಷಬ್​

ಈ ಚಿತ್ರದಲ್ಲಿ ರಿಷಬ್​ ಅವರದ್ದು ಪೊಲೀಸ್​ ಪೇದೆ ಪಾತ್ರ. ಅವರು, ಪ್ರಕರಣವೊಂದರ ತನಿಖೆಗೆ ಪತ್ತೆದಾರಿ ವೇಷ ಧರಿಸುತ್ತಾರೆ. ನಂತರ ಕೊಲೆ ಪ್ರಕರಣವನ್ನು ಹೇಗೆ ಬೇಧಿಸುತ್ತಾರೆ ಎಂಬುದು ಚಿತ್ರದ ಒಂದೆಳೆ.

Rajesh Duggumane | news18
Updated:January 10, 2019, 12:25 PM IST
'ಬೆಲ್​ ಬಾಟಂ' ಟ್ರೈಲರ್​ನಲ್ಲಿ 80ರ ದಶಕದ ಕಂಪು ​; ಹೊಸ ಅವತಾರದಲ್ಲಿ ರಿಷಬ್​
ಬೆಲ್​ ಬಾಟಂ ಚಿತ್ರದ ಪೋಸ್ಟರ್​
Rajesh Duggumane | news18
Updated: January 10, 2019, 12:25 PM IST
ಬುಧವಾರ ಬಿಡುಗಡೆ ಆಗಿರುವ 'ಬೆಲ್​ ಬಾಟಂ' ಚಿತ್ರದ ಟ್ರೈಲರ್​ನಲ್ಲಿ ನಿಮಗೆ ಹುಡುಕಿದರೂ ಒಂದೇ ಒಂದು ಆಧುನಿಕ ಜಗತ್ತಿನ ದೃಶ್ಯಗಳು ಕಾಣುವುದಿಲ್ಲ. ಕಾರಣ, ಈ ಚಿತ್ರದ ಕಥೆ ಸಂಪೂರ್ಣವಾಗಿ 80ರ ದಶಕದಲ್ಲೇ ಸಾಗಲಿದೆ. ಅದಕ್ಕೆ ಪೂರಕವಾದ ದೃಶ್ಯಗಳನ್ನು ನಿರ್ದೇಶಕ ಜಯತೀರ್ಥ ಕಟ್ಟಿಕೊಟ್ಟಿದ್ದಾರೆ ಎಂಬುದು ಟ್ರೈಲರ್​ನಲ್ಲಿ ಸಾಬೀತಾಗಿದೆ.

ಇತ್ತೀಚೆಗೆ ಬಿಡುಗಡೆ ಆಗಿದ್ದ ಚಿತ್ರದ ಹಾಡು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಈಗ ಚಿತ್ರತಂಡ ಟ್ರೇಲರ್​ ರಿಲೀಸ್​ ಮಾಡಿಕೊಂಡಿದೆ. ಪಕ್ಕಾ ರೆಟ್ರೊ ಶೈಲಿಯಲ್ಲಿ ಮೂಡಿಬಂದಿರುವ ಈ ಟ್ರೈಲರ್​ ಎಲ್ಲರ ಗಮನ ಸೆಳೆದಿದೆ. ಹರಿಕಥೆ ಮೂಲಕವೇ ಇಡೀ ಟ್ರೈಲರ್​​​ ನಿರೂಪಣೆ ಮಾಡಿರುವುದು ವಿಶೇಷ.

ಇದನ್ನೂ ಓದಿ: Petta Movie Review: ಮೊದಲ ಗತ್ತಿನಲ್ಲಿ ಕಂಬ್ಯಾಕ್​ ಮಾಡಿದ 'ಸೂಪರ್​ ಸ್ಟಾರ್​' ರಜನಿ

‘ಬೆಲ್​ ಬಾಟಂ’ ಚಿತ್ರದ ಒಂದೆಳೆ, ನಾಯಕ ರಿಷಬ್​ ಪಾತ್ರ ಹೇಗಿರಲಿದೆ ಎಂಬುದನ್ನು ಹರಿಕಥೆಯ ಮೂಲಕವೇ ಪ್ರೇಕ್ಷಕರಿಗೆ ಮುಟ್ಟಿಸುವ ಕೆಲಸ ಮಾಡಿದ್ದಾರೆ ನಿರ್ದೇಶಕ ಜಯತೀರ್ಥ. ಡಾ. ರಾಜ್​ಕುಮಾರ್​ ಸಿನಿಮಾದ ಚಿತ್ರಿಕೆಗಳು, ಆಕಾಶವಾಣಿ ವಾರ್ತಾ ಪ್ರಸಾರದ ತುಣುಕು ಮತ್ತಿತ್ಯಾದಿ ವಿಚಾರ ರೆಟ್ರೊ ದೃಶ್ಯದ ರಂಗನ್ನು ಹೆಚ್ಚಿಸಿದೆ. ಪ್ರತಿ ದೃಶ್ಯಗಳು ನೋಡುಗರಿಗೆ ನಗು ಉಕ್ಕಿಸುತ್ತವೆ.ಈ ಚಿತ್ರದಲ್ಲಿ ರಿಷಬ್​ ಅವರದ್ದು ಪೊಲೀಸ್​ ಪೇದೆ ಪಾತ್ರ. ಅವರು, ಪ್ರಕರಣವೊಂದರ ತನಿಖೆಗೆ ಪತ್ತೆದಾರಿ ವೇಷ ಧರಿಸುತ್ತಾರೆ. ನಂತರ ಕೊಲೆ ಪ್ರಕರಣವನ್ನು ಹೇಗೆ ಬೇಧಿಸುತ್ತಾರೆ ಎಂಬುದು ಚಿತ್ರದ ಹೈಲೈಟ್​. ಚಿತ್ರದಲ್ಲಿ ರಿಷಬ್​ಗೆ ಜೊತೆಯಾಗಿ ಹರಿಪ್ರಿಯಾ ಕಾಣಿಸಿಕೊಂಡಿದ್ದಾರೆ. ನಾಯಕನ ತಂದೆ ಪಾತ್ರದಲ್ಲಿ ಅಚ್ಯುತ್​ ಕುಮಾರ್​ ಬಣ್ಣ ಹಚ್ಚಿದ್ದಾರೆ. ನಿರ್ದೇಶಕರಾದ ಯೋಗರಾಜ್​ ಭಟ್​ ಹಾಗೂ ಶಿವಮಣಿ ಚಿತ್ರದಲ್ಲಿ ಬೇರೆ ಮಾದರಿಯ ಪೋಷಾಕು ಧರಿಸಿದ್ದಾರೆ. ಜ.18ರಂದು ಚಿತ್ರ ತೆರೆಗೆ ಬರುತ್ತಿದೆ.

ಇದನ್ನೂ ಓದಿ: ಯಶ್​ ಆಫರ್​ ನೀಡಿದರೆ ಈ ಬಾಲಿವುಡ್​ ನಟಿ ಕನ್ನಡ ಚಿತ್ರರಂಗಕ್ಕೆ ಕಾಲಿಡ್ತಾರಂತೆ!
Loading...

First published:January 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ