• Home
  • »
  • News
  • »
  • entertainment
  • »
  • Rishab Shetty: ವಾವ್ ನನ್ನ ಫೇವರೇಟ್ ನಟ! ರಿಷಬ್ ಶೆಟ್ಟಿ ಹೊಸ ಪೋಸ್ಟ್

Rishab Shetty: ವಾವ್ ನನ್ನ ಫೇವರೇಟ್ ನಟ! ರಿಷಬ್ ಶೆಟ್ಟಿ ಹೊಸ ಪೋಸ್ಟ್

ಪೆದ್ರೋ ಸಿನಿಮಾ ದೃಶ್ಯ

ಪೆದ್ರೋ ಸಿನಿಮಾ ದೃಶ್ಯ

ಫೋಟೋ ಶೇರ್ ಮಾಡಿದ ಕಾಂತಾರ ಹೀರೋ ವಾವ್ ಮೈ ಫೇವರೇಟ್ ಹೀರೋ ಎಂದು ಕ್ಯಾಪ್ಶನ್ ಬರೆದಿದ್ದಾರೆ. ನಿರ್ದೇಶಕ ನಟೇಶ್ ಹೆಗ್ಡೆ (Natesh Hegde) ನಿರ್ದೇಶಿಸಿರುವ ಪೆದ್ರೋ (Pedro) ಸಿನಿಮಾದಲ್ಲಿ ನಟಿಸಿರುವ ಗೋಪಾಲ ಹೆಗ್ಡೆ ಅವರಿಗೆ ವಿಮರ್ಶಕರ ಮೆಚ್ಚುಗೆ ಸಿಕ್ಕಿದೆ.

  • News18 Kannada
  • Last Updated :
  • Bangalore, India
  • Share this:

ರಿಷಬ್ ಶೆಟ್ಟಿ ಅವರು ಇತ್ತೀಚೆಗೆ ಫೇಸ್​​ಬುಕ್​​ನಲ್ಲಿ (Facebook) ಒಂದು ಪೋಸ್ಟ್ ಶೇರ್ ಮಾಡಿದ್ದಾರೆ. ಇದರಲ್ಲಿ ನಟ ಗೋಪಾಲ ಹೆಗ್ಡೆ (Gopala Hegde) ಅವರ ಫೋಟೋ ಕೂಡಾ ಶೇರ್ ಮಾಡಿದ್ದಾರೆ. ಈ ಫೋಟೋದಲ್ಲಿ ಅವರು ಆಟೋಗ್ರಾಫ್ ಬರೆಯುವುದನ್ನು ಕಾಣಬಹುದು. ಈ ಫೋಟೋ ಶೇರ್ ಮಾಡಿದ ಕಾಂತಾರ ಹೀರೋ ವಾವ್ ಮೈ ಫೇವರೇಟ್ ಹೀರೋ ಎಂದು ಕ್ಯಾಪ್ಶನ್ ಬರೆದಿದ್ದಾರೆ. ನಿರ್ದೇಶಕ ನಟೇಶ್ ಹೆಗ್ಡೆ (Natesh Hegde) ನಿರ್ದೇಶಿಸಿರುವ ಪೆದ್ರೋ (Pedro) ಸಿನಿಮಾದಲ್ಲಿ ನಟಿಸಿರುವ ಗೋಪಾಲ ಹೆಗ್ಡೆ ಅವರಿಗೆ ವಿಮರ್ಶಕರ ಮೆಚ್ಚುಗೆ ಸಿಕ್ಕಿದೆ. ಪೆದ್ರೋ ಸಿನಿಮಾವನ್ನು ರಿಷಬ್ ಶೆಟ್ಟಿ (Rishab Shetty) ನಿರ್ಮಿಸಿದ್ದಾರೆ.


ನಿರ್ದೇಶಕರೇ ಶೇರ್ ಮಾಡಿದ ಪೋಸ್ಟ್


ತಂದೆಯ ಪೋಸ್ಟ್ ಶೇರ್ ಮಾಡಿದ ನಟೇಶ್, ಇವರು 54ನೇ ವಯಸ್ಸಿನಲ್ಲಿ ತಮ್ಮ ಆಟೋಗ್ರಾಫ್ ಸೈನ್ ಮಾಡುತ್ತಾರೆಂದು ಯಾರು ಅಂದುಕೊಂಡಿದ್ದರು. ಧರ್ಮಶಾಲಾ ಇಂಟರ್​​ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಿಮ್ಮೆಲ್ಲ ಪ್ರೀತಿಗೆ ಧನ್ಯವಾದಗಳು ಎಂದು ಬರೆದಿದ್ದಾರೆ.


54 ವರ್ಷದ ಗೋಪಾಲ ಹೆಗ್ಡೆ ಸೈನ್ ಮಾಡೋ ಫೊಟೋ


ಗೋಪಾಲ ಹೆಗ್ಡೆ ಅವರು 54ರ ವಯಸ್ಸಿನಲ್ಲಿ ಆಟೋಗ್ರಾಫ್ ಸೈನ್ ಮಾಡುತ್ತಿರುವ ಫೋಟೋ ನೋಡುವಾಗ ಮನಸಿಗೆ ಆಪ್ತ ಎನಿಸುತ್ತದೆ. ತಮ್ಮ ಇಳಿ ವಯಸ್ಸಿನಲ್ಲಿ ಸಿನಿಮಾದಲ್ಲಿ ನಟಿಸಿ ಮೆಚ್ಚುಗೆ ಗಳಿಸುತ್ತಿರುವುದು ನಿಜಕ್ಕೂ ಚಿಕ್ಕ ವಿಚಾರವಲ್ಲ. ಇದೇ ಪೋಸ್ಟ್​ ಅನ್ನು ರಿಷಬ್ ಅವರೂ ಕೂಡಾ ಹಂಚಿಕೊಂಡಿದ್ದಾರೆ.


ಪೆದ್ರೋ ಕಥೆ ಏನು?


ಶಿರಸಿ ಪಕ್ಕದ ಊರಲ್ಲಿ ನಡೆಯುವ ಘಟನೆ ಕುರಿತು ಈ ಸಿನಿಮಾ ಮಾಡಲಾಗಿದೆ. ಊರಿನಲ್ಲಿ ಕ್ರಿಶ್ಚಿಯನ್ ವ್ಯಕ್ತಿ ಪೆದ್ರೋ ತಿಳಿಯದೇ ದನವೊಂದನ್ನು ಸಾಯಿಸುತ್ತಾರೆ. ಆ ನಂತರ ಅವರನ್ನು ಊರಿನ  ಜನರು ನೋಡುವ ದೃಷ್ಟಿಯೇ ಬದಲಾಗುತ್ತದೆ. ಈ ಕುರಿತು ಈ ಸಿನಿಮಾ ಸುತ್ತುತ್ತದೆ.
ಬಂಡವಾಳ ಹೂಡಿದ್ದು ರಿಷಬ್ ಶೆಟ್ಟಿ


ಡಾಕ್ಯುಮೆಂಟರಿ ಟೈಪ್​ನ ಈ ಸಿನಿಮಾಗೆ ರಿಷಬ್ ಶೆಟ್ಟಿ ಅವರು ಬಂಡವಾಳ ಹೂಡಿದ್ದಾರೆ. ಈ ಸಿನಿಮಾ ಈಗ ಫಿಲ್ಮ್​ ಫೆಸ್ಟಿವಲ್​ನಲ್ಲಿ ಪ್ರದರ್ಶಿಸಲಾಗಿದ್ದು ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ಈ ಸಿನಿಮಾ ಅಧಿಕೃತವಾಗಿ ಬಿಡುಗಡೆಯಾಗಿಲ್ಲ.


ದಕ್ಷಿಣ ಭಾರತದ ದೂರದ ಹಳ್ಳಿಯೊಂದರಲ್ಲಿ, ಬಹಿಷ್ಕೃತ ಮತ್ತು ಕುಡುಕ, ಪೆದ್ರೋ ಆಕಸ್ಮಿಕವಾಗಿ ಹಸುವನ್ನು ಕೊಂದು ಇಡೀ ಸಮುದಾಯದ ವಿರುದ್ಧ ಸರಣಿ ಘಟನೆಗಳಿಗೆ ಕಾರಣವಾಗುತ್ತಾರೆ.


ಇದನ್ನೂ ಓದಿ: Niveditha Gowda: ಬ್ಯಾಕ್ ಟು ಬ್ಯಾಕ್ ಲಿಪ್ ಕಿಸ್! ಚಂದನ್ ನಿವೇದಿತಾ ರೊಮ್ಯಾನ್ಸ್


ಸಿನಿಮಾ ಈಗಾಗಲೇ ವ್ಯಾಪಕ ಮೆಚ್ಚುಗೆ ಗಳಿಸಿಕೊಂಡಿದ್ದು ಸಾಕ್ಷ್ಯ ಚಿತ್ರಗಳಂತಹ ಸಿನಿಮಾ ವಿಭಾಗದಲ್ಲಿ ಬರುವ ಈ ಮೂವಿ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದೆ.

Published by:Divya D
First published: