• Home
  • »
  • News
  • »
  • entertainment
  • »
  • Rishab Shetty-Kamblihula: ಕಂಬ್ಳಿಹುಳ ಸಿನಿಮಾಗೆ ರಿಷಬ್ ಶೆಟ್ಟಿ ಸಪೋರ್ಟ್

Rishab Shetty-Kamblihula: ಕಂಬ್ಳಿಹುಳ ಸಿನಿಮಾಗೆ ರಿಷಬ್ ಶೆಟ್ಟಿ ಸಪೋರ್ಟ್

ಕಂಬ್ಳಿಹುಳ ಸಿನಿಮಾ ಬಗ್ಗೆ ರಿಷಬ್ ಪೋಸ್ಟ್

ಕಂಬ್ಳಿಹುಳ ಸಿನಿಮಾ ಬಗ್ಗೆ ರಿಷಬ್ ಪೋಸ್ಟ್

ಸ್ಯಾಂಡಲ್​​ವುಡ್​​ನಲ್ಲಿ ಕಂಬ್ಳಿ ಹುಳ ಸಿನಿಮಾ ಸಖತ್ ಸದ್ದು ಮಾಡುತ್ತಿದೆ. ಈಗ ಈ ಸಿನಿಮಾ ಬಗ್ಗೆ ನಟ ರಿಷಬ್ ಶೆಟ್ಟಿ ಪೋಸ್ಟ್ ಮಾಡಿದ್ದಾರೆ.

  • News18 Kannada
  • Last Updated :
  • Bangalore, India
  • Share this:

ಕಾಂತಾರದ (Kantara) ಅಬ್ಬರದ ಮಧ್ಯೆ ಕನ್ನಡದ ಒಂದಷ್ಟು ಸಿನಿಮಾಗಳು  (Cinema) ರಿಲೀಸ್​​ಗೆ ಕಾಯುತ್ತಿದ್ದವು. ಈಗ ಕಂಬ್ಳಿಹುಳ (Kamblihula) ಸಿನಿಮಾ ರಿಲೀಸ್ ಆಗಿದೆ. ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆಯೂ ಸಿಗುತ್ತಿದೆ. ಈಗ ಸಿನಿಮಾ ಬಗ್ಗೆ ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಕಾಮೆಂಟ್ ಮಾಡಿದ್ದಾರೆ. ಸಿನಿಮಾ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ (Social Media) ಪೋಸ್ಟ್ ಶೇರ್ ಮಾಡಿದ್ದಾರೆ ರಿಷಬ್. 'ಕಂಬ್ಳಿ ಹುಳ' ಚಿತ್ರಕ್ಕೆ ಎಲ್ಲೆಡೆಯಿಂದ ಸಾಕಷ್ಟು ಪ್ರಶಂಸೆ ಕೇಳಿಬರುತ್ತಿದೆ. ಆದಷ್ಟು ಬೇಗ ಸಿನಿಮಾ ನೋಡುತ್ತೇನೆ. ಒಂದು ಉತ್ತಮ ಚಿತ್ರವನ್ನು ಗೆಲ್ಲಿಸಲು ಇಡೀ ಚಿತ್ರರಂಗ ಒಟ್ಟಾಗಿ ನಿಂತಿರುವುದು ಹೆಮ್ಮೆಯ ವಿಷಯ. ಇದು ಜನತೆಗೂ ತಲುಪಿ ಚಿತ್ರಮಂದಿರಗಳು ಹೌಸ್ ಫುಲ್ ಆಗಲಿ. ನಿರ್ದೆಶಕ ನವನ್ ಹಾಗು ತಂಡಕ್ಕೆ ಅಭಿನಂದನೆಗಳು! ಎಂದು ರಿಷಬ್ ಶೆಟ್ಟಿ ಪೋಸ್ಟ್​​ಗೆ ಕ್ಯಾಪ್ಶನ್ ಕೊಟ್ಟಿದ್ದಾರೆ.


ಕಂಬ್ಳಿಹುಳ ಸಿನಿಮಾ ರಾಜ್ಯದೆಲ್ಲೆಡೆ ಸದ್ದಯ ಮಾಡುತ್ತಿದ್ದು ಯೋಗರಾಜ್ ಭಟ್, ಜಯತೀರ್ಥ, ಬಿಎಂ ಗಿರಿರಾಜ್, ಕಿರಣ್‌ ರಾಜ್, ಧನಂಜಯ್, ವಿನಯ್ ರಾಜ್‌ಕುಮಾರ್ ಸೇರಿದಂತೆ ಅನೇಕರು ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಪ್ರೋತ್ಸಾಹಿಸಿದ್ದಾರೆ. ಈಗ ಈ ಸಾಲಿಗೆ ರಿಷಬ್ ಶೆಟ್ಟಿ ಅವರೂ ಸೇರಿದ್ದು ಶೀಘ್ರ ಸಿನಿಮಾ ನೋಡುವುದಾಗಿ ಹೇಳಿದ್ದಾರೆ.
ಬಿಡುಗಡೆಗೆ ಮುನ್ನವೇ ಕುತೂಹಲ ಹುಟ್ಟಿಸಿದ್ದ ಸಿನಿಮಾ


ಕಂಬ್ಳಿಹುಳ ಸಿನಿಮಾ ರಿಲೀಸ್ಗೂ ಮುನ್ನವೇ ಸದ್ದು ಮಾಡಿತ್ತು. ಈ ಸಿನಿಮಾದ ಹಾಡಿನ ಮೂಲಕವೇ ನಿರೀಕ್ಷೆ ದುಪ್ಪಟ್ಟಾಗಿತ್ತು. “ಜಾರಿ ಬಿದ್ದರೂ ಯಾಕೀ ನಗು” ಎಂಬ ಹಾಡು ಈಗಾಗಲೇ ಸಿನಿ ರಸಿಕರ ನಾಲಿಗೆ ಮೇಲೆ ನಲಿದಾಡುತ್ತಿದೆ. ಖ್ಯಾತ ಗಾಯಕ ವಿಜಯ್ ಪ್ರಕಾಶ್ ದನಿಯಲ್ಲಿ ಮೂಡಿ ಬಂದಿರುವ ಹಾಡು ವೈರಲ್ ಆಗಿತ್ತು.


ಮಲೆನಾಡಿನಲ್ಲಿಯೇ ಶೂಟಿಂಗ್


ಶೃಂಗೇರಿ, ತೀರ್ಥಹಳ್ಳಿ, ಕೊಪ್ಪ, ಸಕಲೇಶಪುರಗಳಲ್ಲಿ ಕಂಬ್ಳಿಹುಳ ಚಿತ್ರೀಕರಣಗೊಂಡಿದೆ. ಚಿತ್ರದ ನಾಯಕ ಅಂಜನ್ ನಾಗೇಂದ್ರ ಹಾಗೂ ನಾಯಕಿ ಅಶ್ವಿತಾ ಹೆಗ್ಡೆ ಈಗಾಗಲೇ ಕನ್ನಡ ಸಿನಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಇನ್ನು ರೋಹಿತ್ ಕುಮಾರ್, ದೀಪಕ್ ರೈ ಪಣಜಿ, ಸಂಧ್ಯಾ ಅರಕೆರೆ, ಸಂಪತ್ ಶೆಟ್ಟಿ ಸೇರಿದಂತೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.


ಇದನ್ನೂ ಓದಿ: Kambli Hula Movie: ಕಂಬ್ಳಿಹುಳ ಚಿಟ್ಟೆಯಾಗುವ ಸಮಯ! ನವೆಂಬರ್ 4ಕ್ಕೆ ಬಹು ನಿರೀಕ್ಷಿತ ಸಿನಿಮಾ ರಿಲೀಸ್


ಕೊಪ್ಪ ತಾಲೂಕಿನ ಕಮ್ಮರಡಿಯ ಸಮೀಪದ ಕುಡಿನಲ್ಲಿ ಗ್ರಾಮದ ಪ್ರತಿಭೆ ನವನ್ ಶ್ರೀನಿವಾಸ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ನವನ್ ಶ್ರೀನಿವಾಸ್ ಚಿತ್ರರಂಗಕ್ಕೆ ಹೊಸಬರಾದರೂ, ಈಗಾಗಲೇ ಕಿರು ಚಿತ್ರಗಳ ಮೂಲಕ ಪರಿಚಿತರಾಗಿದ್ದಾರೆ. ನವನ್ ಶ್ರೀನಿವಾಸ್ ಈಗಾಗಲೇ ತಮ್ಮ ಕಿರುಚಿತ್ರಗಳ ಮೂಲಕ ನಿರೀಕ್ಷೆ ಮೂಡಿಸಿದವರು. ಗೋಣಿಚೀಲ, ಜೋಡಿ ಕುದುರೆ ಎಂಬ ಕಿರು ಚಿತ್ರಗಳನ್ನು ನಿರ್ದೇಶಿಸಿದ್ದು, ಸಿನಿ ರಸಿಕರ ಗಮನ ಸೆಳೆದಿದ್ದರು.


ಸಿಂಪಲ್ ಸುನಿ ಸಪೋರ್ಟ್


ಸಿಂಪಲ್‌ ಸುನಿ ಅವರು ಕಂಬ್ಳಿಹುಳ ಚಿತ್ರತಂಡಕ್ಕೆ ಸಾಥ್‌ ನೀಡಿದ್ದಾರೆ. ಸಿನಿಮಾ ನೋಡುವವರಿಗೆ ಒಂದು ಭರ್ಜರಿ ಆಫರ್‌ ನೀಡಿದ್ದಾರೆ. ಕಂಬ್ಳಿಹುಳ ಸಿನಿಮಾ ಸೆಕೆಂಡ್ ಹಾಫ್ ಮುಗಿಸಿ ಚಿತ್ರಮಂದಿರದಿಂದ ಹೊರಬರುವ ಪ್ರೇಕ್ಷಕ ಪ್ರಭುಗಳು ಸಿನಿಮಾ ಚೆನ್ನಾಗಿಲ್ಲ ಅಂದ್ರೆ ಅವರು ತೆಗೆದುಕೊಂಡ ಟಿಕೆಟ್ ನ ಅರ್ಧಹಣವನ್ನು ವಾಪಾಸ್ಸು ಮಾಡುವುದಾಗಿ ಹೇಳಿದ್ದಾರೆ. ಈ ಆಫರ್ ಮುಂದಿನ ಮೂರು ದಿನಗಳು ಮಾತ್ರ ಲಭ್ಯವಿದೆ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

Published by:Divya D
First published: