Rishab Shetty: ಹರಿಕಥೆ ಅಲ್ಲಾ ಗಿರಿಕಥೆ ಬಗ್ಗೆ ರಿಷಭ್​ ಹೇಳಿದ್ದೇನು: ಇಲ್ಲಿದೆ ವಿಡಿಯೋ..!

Harikathe Alla GiriKathe: ನಟ ಹಾಗೂ ನಿರ್ದೇಶಕ ರಿಷಭ್​ ಶೆಟ್ಟಿ ಅವರ ಅಭಿನಯದ ಹೊಸ ಸಿನಿಮಾ ಹರಿಕಥೆ ಅಲ್ಲಾ ಗಿರಿಕಥೆ ಬಗ್ಗೆ ಕಳೆದ ಶನಿವಾರವಷ್ಟೆ ನಿಮಗೆ ತಿಳಿಸಿದ್ದೆವು. ಪ್ರತಿ ಸಲ ಏನಾದರೂ ಹೇಳಬೇಕಾದರೆ ಅದನ್ನು ವಿಡಿಯೋ ಮೂಲಕ ಹೇಳುವ ರಿಷಭ್ ಶೆಟ್ಟಿ, ಈ ಸಲವೂ ತಮ್ಮ ಚಿತ್ರದ ಕುರಿತು ಒಂದು ವಿಡಿಯೋ ತುಣುಕು ಹಂಚಿಕೊಂಡಿದ್ದಾರೆ.

Anitha E | news18-kannada
Updated:June 22, 2020, 11:06 AM IST
Rishab Shetty: ಹರಿಕಥೆ ಅಲ್ಲಾ ಗಿರಿಕಥೆ ಬಗ್ಗೆ ರಿಷಭ್​ ಹೇಳಿದ್ದೇನು: ಇಲ್ಲಿದೆ ವಿಡಿಯೋ..!
ರಿಷಭ್​ ಶೆಟ್ಟಿ
  • Share this:
ರಿಷಭ್​ ಶೆಟ್ಟಿ ಸ್ಯಾಂಡಲ್​ವುಡ್​ನ ಪ್ರತಿಭಾವಂತ ಪ್ರತಿಭೆ. ನಿರ್ದೇಶನದ ಜೊತೆಗೆ ಅಭಿನಯವನ್ನೂ ಮಾಡುವ ಇವರಿಗೆ ಕಡಿಮೆ ಸಮಯದಲ್ಲೇ ದೊಡ್ಡ ಅಭಿಮಾನಿ ಬಳಗವೇ ಹುಟ್ಟುಕೊಂಡಿದೆ. 

ರಿಷಭ್​ ಶೆಟ್ಟಿ ಕೈತುಂಬ ಕೆಲಸ ಇದ್ದು, ಲಾಕ್​ಡೌನ್​ನಿಂದಾಗಿ ಎಲ್ಲವೂ ಸದ್ಯಕ್ಕೆ ನಿಂತಿದೆ. ಲಾಕ್​ಡೌನ್​ ಸಮಯದಲ್ಲಿ ಹೆಂಡತಿ ಹಾಗೂ ಮಗು ಜೊತೆ ತಮ್ಮೂರಿಗೆ ಹೋಗಿ ಅಲ್ಲೇ ಕಾಲ ಕಳೆಯುತ್ತಿದ್ದ ರಿಷಭ್ ಲಾಕ್​ಡೌನ್​ ಸಡಿಲಗೊಳ್ಳುತ್ತಿದ್ದಂತೆಯೇ ಬೆಂಗಳೂರಿಗೆ ಮರಳಿದ್ದಾರೆ.

Rishab Shetty celebrated his son RanvitShetty Birthday in village style
ತಮ್ಮ ಊರಿನಲ್ಲಿ ಮಗನ ಮೊದಲ ಹುಟ್ಟುಹಬ್ಬ ಆಚರಿಸಿದ ರಿಷಭ್​ ಶೆಟ್ಟಿ ದಂಪತಿ


ಬೆಂಗಳೂರಿಗೆ ಮರಳುತ್ತಿದ್ದಂತೆಯೇ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ಅವರು ನಾಯಕನಾಗಿ ನಟಿಸುತ್ತಿರುವ 'ಹರಿಕಥೆ ಅಲ್ಲಾ ಗಿರಿಕಥೆ' ಸಿನಿಮಾದ ಮುಹೂರ್ತ ನೆರವೇರಿಸಿದ್ದಾರೆ.


ನಟ ಹಾಗೂ ನಿರ್ದೇಶಕ ರಿಷಭ್​ ಶೆಟ್ಟಿ ಅವರ ಅಭಿನಯದ ಹೊಸ ಸಿನಿಮಾ 'ಹರಿಕಥೆ ಅಲ್ಲಾ ಗಿರಿಕಥೆ' ಬಗ್ಗೆ ಕಳೆದ ಶನಿವಾರವಷ್ಟೆ ನಿಮಗೆ ತಿಳಿಸಿದ್ದೆವು. ಪ್ರತಿ ಸಲ ಏನಾದರೂ ಹೇಳಬೇಕಾದರೆ ಅದನ್ನು ವಿಡಿಯೋ ಮೂಲಕ ಹೇಳುವ ರಿಷಭ್ ಶೆಟ್ಟಿ, ಈ ಸಲವೂ ತಮ್ಮ ಚಿತ್ರದ ಕುರಿತು ಒಂದು ವಿಡಿಯೋ ತುಣುಕು ಹಂಚಿಕೊಂಡಿದ್ದಾರೆ.



ಸಂದೇಶ್​ ನಾಗರಾಜು ಇದೇ ಮೊದಲ ಬಾರಿಗೆ ರಿಷಭ್​ ಶೆಟ್ಟಿ ಅವರೊಂದಿಗೆ ಈ ಚಿತ್ರಕ್ಕಾಗಿ ಕೈ ಜೋಡಿಸಿದ್ದಾರೆ. ರಿಷಭ್​ ಶೆಟ್ಟಿ ಅವರ ಕಚೇರಿಯಲ್ಲಿ ಪುಟ್ಟದಾಗಿ ಪೂಜೆ ಮಾಡುವ ಮೂಲಕ ಸಿನಿಮಾದ ಮುಹೂರ್ತ ನೆರವೇರಿಸಲಾಯಿತು.

ಇದನ್ನೂ ಓದಿ: ಸುಶಾಂತ್​ ನಟನೆಯ ಎಂ.ಎಸ್​.ಧೋನಿ ಬಯೋಪಿಕ್ ಮೇಲಿತ್ತು ಅಕ್ಷಯ್​ ಕುಮಾರ್ ಕಣ್ಣು..!

ರಿಷಭ್​ ಶೆಟ್ಟಿ ಅವರ ಯಾವುದಧೇ ಸಿನಿಮಾ ಹಾಗೂ ಅವರ ಮನೆಯ ಕಾರ್ಯಕ್ರಮಗಳಾದರೂ ಅವರ ಗೆಳೆಯ ರಕ್ಷಿತ್ ಶೆಟ್ಟಿ ಹಾಜರಿರುತ್ತಾರೆ. ಮುಹೂರ್ತದಲ್ಲೂ ರಕ್ಷಿತ್ ಶೆಟ್ಟಿ ಜೊತೆ ಸಂದೇಶ್ ನಾಗರಾಜ್ ಹಾಗೂ ರಿಷಭ್​ ಅವರ ಕುಟುಂಬದವರು  ಭಾಗಿಯಾಗಿದ್ದರು.

Sushant Singh Rajput: ಸೆಲೆಬ್ರಿಟಿ ಫೋಟೋಗ್ರಾಫರ್​ ಡಬೂ ರತ್ನಾನಿ ಕ್ಯಾಮೆರಾದಲ್ಲಿ ಸೆರೆಯಾದ ಸುಶಾಂತ್: ಇಲ್ಲಿವೆ​ ಫೋಟೋಗಳು..!


ಇದನ್ನೂ ಓದಿ: ಸಿನಿಮಾ ಆಗಲಿದೆ ಸುಶಾಂತ್​ ಜೀವನ: ರಿಲೀಸ್​ ಆಯ್ತು ಟೈಟಲ್​ ಪೋಸ್ಟರ್​..!
First published: June 22, 2020, 10:22 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading