• Home
  • »
  • News
  • »
  • entertainment
  • »
  • Kantara Review: ಇದು ಶಿವನ ಸಂಘರ್ಷದ ದಂತಕಥೆ: ಕಾಂತಾರದಲ್ಲಿ ರಿಷಬ್ ಹೊಸ ಅವತಾರ!

Kantara Review: ಇದು ಶಿವನ ಸಂಘರ್ಷದ ದಂತಕಥೆ: ಕಾಂತಾರದಲ್ಲಿ ರಿಷಬ್ ಹೊಸ ಅವತಾರ!

ಕಾಂತಾರಾ ಸಿನಿಮಾ ಪೋಸ್ಟರ್

ಕಾಂತಾರಾ ಸಿನಿಮಾ ಪೋಸ್ಟರ್

ಕೆಜಿಎಫ್ ಚಾಪ್ಟರ್ 1 ಹಾಗೂ ಕೆಜಿಎಫ್‌ ಚಾಪ್ಟರ್ 2 ನಿರ್ಮಿಸಿ, ಬಂಗಾರದ ಬೆಳೆ ತೆಗಿದಿದ್ದ ನಿರ್ಮಾಪಕ ವಿಜಯ್ ಕಿರಗಂದೂರು ಈ ಸಿನಿಮಾಕ್ಕೂ ಹಣ ಹೂಡಿದ್ದಾರೆ. ಅವರ ಹೊಂಬಾಳೆ ಫಿಲ್ಮ್ಸ್‌ ಮೂಲಕ ಕಾಂತಾರಾ ಕಂಗೊಳಿಸುತ್ತಿದೆ. ರಿಷಬ್‌ ಇಲ್ಲಿ ನಿರ್ದೇಶನದ ಜೊತೆಗೆ ನಟನೆಯನ್ನೂ ಮಾಡಿದ್ದಾರೆ. ಕುಂದಾಪುರದ ಈ ಪ್ರತಿಭಾವಂತ ಕಲಾವಿದ ಎರಡರಲ್ಲೂ ಸಕ್ಸಸ್‌ ಆಗಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಮುಂದೆ ಓದಿ ...
  • Share this:

ಕನ್ನಡ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾ ‘ಕಾಂತಾರ’ (Kantara) ಸಿನಿ ಅಂಗಳಕ್ಕೆ ಬಂದಿದೆ. ನಿನ್ನೆಯೇ ಪ್ರಿಮಿಯರ್ ಶೋ (Premier Show) ನಡೆದಿದ್ದು, ಕಾಂತಾರ ವೀಕ್ಷಿಸಿದ ಪ್ರೇಕ್ಷಕರು ಅದ್ಭುತವೊಂದನ್ನು ನೋಡಿದ್ದಾಗಿ ಮೆಚ್ಚಿದ್ದಾರೆ. ನಟ, ನಿರ್ದೇಶಕ ಕಮ್ ನಿರ್ಮಾಪಕ ರಿಷಬ್ ಶೆಟ್ಟಿ (Rishab Shetty) ಕಾಂತಾರದ ನಾಯಕ. ಕೆಜಿಎಫ್ ಚಾಪ್ಟರ್ 1 (KGF Chapter 1) ಹಾಗೂ ಕೆಜಿಎಫ್‌ ಚಾಪ್ಟರ್ 2 (KGF Chapter 2) ನಿರ್ಮಿಸಿ, ಬಂಗಾರದ ಬೆಳೆ ತೆಗಿದಿದ್ದ ನಿರ್ಮಾಪಕ ವಿಜಯ್ ಕಿರಗಂದೂರು (Vijay Kiragandur) ಈ ಸಿನಿಮಾಕ್ಕೂ ಹಣ ಹೂಡಿದ್ದಾರೆ. ಅವರ ಹೊಂಬಾಳೆ ಫಿಲ್ಮ್ಸ್‌ (Hombale Films) ಮೂಲಕ ಕಾಂತಾರಾ ಕಂಗೊಳಿಸುತ್ತಿದೆ. ರಿಷಬ್‌ ಇಲ್ಲಿ ನಿರ್ದೇಶನದ ಜೊತೆಗೆ ನಟನೆಯನ್ನೂ ಮಾಡಿದ್ದಾರೆ. ಕುಂದಾಪುರದ (Kundapura) ಈ ಪ್ರತಿಭಾವಂತ ಕಲಾವಿದ ಎರಡರಲ್ಲೂ ಸಕ್ಸಸ್‌ ಆಗಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಹಾಗಿದ್ರೆ ಹೇಗಿದೆ ಕಾಂತಾರಾ? ಪ್ರೀಮಿಯರ್ ಶೋ ನೋಡಿದವ್ರು ಹೇಳಿದ್ದೇನು? ಸೋಶಿಯಲ್ ಮೀಡಿಯಾಗಳಲ್ಲಿ ಫ್ಯಾನ್ಸ್ ಏನ್ ಬರೆದಿದ್ದಾರೆ? ಇಲ್ಲಿದೆ ಸಂಪೂರ್ಣ ಮಾಹಿತಿ…


ಕಾಂತಾರಾ ಎಂಬ ಒಂದು ದಂತಕಥೆ…


ದಕ್ಷಿಣ ಕನ್ನಡದ ಕಾಲ್ಪನಿಕ ಹಳ್ಳಿಯಲ್ಲಿ ನೆಲೆಗೊಂಡಿರುವ ಕಾಂತಾರವು ಕಂಬಳ ಮತ್ತು ಭೂತ ಕೋಲದ ಸಾಂಪ್ರದಾಯಿಕ ಸಂಸ್ಕೃತಿಯನ್ನು ಜೀವಂತಗೊಳಿಸುವ ದೃಶ್ಯ ವೈಭವವಾಗಿದೆ. ದೇವಮಾನವರು ರಕ್ಷಕರು ಮತ್ತು ಅವರ ಶಕ್ತಿಗಳು ಗ್ರಾಮವನ್ನು ಸುತ್ತುವರೆದಿವೆ ಎಂದು ನಂಬಲಾಗಿದೆ. ಕಥೆಯಲ್ಲಿ, ನೆಲದ ಸಂಪ್ರದಾಯ ಮತ್ತು ಸಂಸ್ಕೃತಿಯ ಉದ್ದಕ್ಕೂ ಅಹಂಕಾರದ ಕದನವು ಸುತ್ತುತ್ತಿರುವಾಗ ಏರಿಳಿತವಿದೆ.


ಕಾಂತಾರ ಸಿನಿಮಾಇದು ಶಿವನ ಸಾಹಸದ ಕಥನ


ಕಥೆಯ ಆತ್ಮವು ಮಾನವ ಮತ್ತು ಪ್ರಕೃತಿ ಸಂಘರ್ಷದಲ್ಲಿದೆ, ಇದರಲ್ಲಿ ಶಿವ ಬಂಡಾಯ ಮತ್ತು ಪ್ರಕೃತಿಯ ವಿರುದ್ಧ ಕೆಲಸ ಮಾಡುತ್ತಾನೆ. ಅವನು ತೊಡಗಿಸಿಕೊಳ್ಳುವ ತೀವ್ರವಾದ ಘರ್ಷಣೆಗಳಿವೆ. ಕೊನೆಯಲ್ಲಿ ಹಳ್ಳಿಗರು ಮತ್ತು ದುಷ್ಟ ಶಕ್ತಿಗಳ ನಡುವಿನ ಯುದ್ಧಕ್ಕೆ ಕಾರಣವಾಗುತ್ತದೆ. ಚಿತ್ರದ ನಾಯಕ ಶಿವ ತನ್ನ ಅಸ್ತಿತ್ವವನ್ನು ಗ್ರಹಿಸುವ ಮೂಲಕ ಗ್ರಾಮದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಮರುಸ್ಥಾಪಿಸಲು ಸಾಧ್ಯವಾಗುತ್ತದೆಯೇ? ಎಂಬುದೇ ಚಿತ್ರದ ತಿರುಳು.


ಇದನ್ನೂ ಓದಿ: Anushka Shetty Marriage: ಶುಭಯೋಗ ಕೂಡಿ ಬಂತಮ್ಮ, ಅನುಷ್ಕಾ ಶೆಟ್ಟಿ ಮದ್ವೆಯಂತಮ್ಮ! ಕನ್ನಡತಿ ಕೈ ಹಿಡಿಯೋ ವರ ಇವರೇ!


ಪ್ರಿಮಿಯರ್ ಶೋ ನೋಡಿದವರು ಹೇಳಿದ್ದೇನು?


ನಿನ್ನೆಯೇ ಪ್ರಿಮಿಯರ್ ಶೋ ನಡೆದಿದ್ದು, ಸಿನಿರಂಗದ ಗಣ್ಯರ ಜೊತೆಗೆ ಅಭಿಮಾನಿಗಳೂ ಕಾಂತಾರವನ್ನು ಕಣ್ತುಂಬಿಸಿಕೊಂಡಿದ್ದಾರೆ. ಉತ್ತಮ ನಟನೆ, ಉತ್ತಮ ನಿರ್ದೇಶನ, ಉತ್ತಮ ಕಥಾಹಂದರ ಸಿನಿಮಾ ಅಂತ ಕೊಂಡಾಡುತ್ತಿದ್ದಾರೆ. ಕೆಲವರಂತೂ ಈ ಬಾರಿ ರಿಷಬ್ ಅತ್ಯುತ್ತಮ ನಟ ಪ್ರಶಸ್ತಿಗೆ ಅರ್ಹ ಅಂತ ಹೊಗಳಿದ್ದಾರೆ.ಶಿವನಾಗಿ ಮಿಂಚಿದ ರಿಷಬ್


ಲಾಕ್‌ ಡೌನ್ ಸಮಯದಲ್ಲಿ ಹುಟ್ಟಿದ ಕಥೆ


ಕೋವಿಡ್ ಲಾಕ್‌ಡೌನ್‌ನ ಮಧ್ಯದಲ್ಲಿ ಅವರ ತವರು ಕುಂದಾಪುರದ ಕೆರಾಡಿ ನಲ್ಲಿಯೇ ಕಥೆ ಹುಟ್ಟಿದ್ದಂತೆ. “ಹಳ್ಳಿಯಲ್ಲಿ ವಾಸಿಸುವ ಹುಡುಗನೊಂದಿಗೆ ಸಂಭಾಷಣೆಯ ಸಮಯದಲ್ಲಿ ಅವನು ತನ್ನ ತಂದೆಯ ಬಗ್ಗೆ ಒಂದು ಘಟನೆಯನ್ನು ಹಂಚಿಕೊಂಡಿದ್ದನಂತೆ. 90ರ ದಶಕದಲ್ಲಿ ನಡೆದ ನಿವಾಸಿಗಳು ಮತ್ತು ಅರಣ್ಯ ಅಧಿಕಾರಿಗಳ ನಡುವಿನ ಸಂಘರ್ಷ ನನ್ನ ಆಸಕ್ತಿಯನ್ನು ಸೆಳೆಯಿತು. ಒನ್-ಲೈನ್ ಅದರಿಂದ ಬೆಳೆದು ನಂತರ ನಾವು ಅದರ ಸುತ್ತ ಪಾತ್ರಗಳು ಮತ್ತು ಕಥೆಯನ್ನು ಅಭಿವೃದ್ಧಿಪಡಿಸಿದ್ದೇವೆ ಅಂತ ರಿಷಬ್ ಹೇಳಿದ್ದಾರೆ. "ಇದು ನಮ್ಮ ಭೂಮಿಯಿಂದ, ನಮ್ಮ ಬೇರುಗಳಿಂದ, ತಲೆಮಾರುಗಳ ಮೂಲಕ ಕೇಳಿದ ಕಥೆಗಳು, ನಮ್ಮ ಸಂಸ್ಕೃತಿಗೆ ಟ್ಯಾಪ್ ಮಾಡದ ಮತ್ತು ಆಳವಾಗಿ ಬೇರೂರಿರುವ ಕಥೆ" ಎಂದು ರಿಷಬ್ ಹೇಳುತ್ತಾರೆ.


ಇದನ್ನೂ ಓದಿ: Yash: ಗನ್​ ಹಿಡಿದು ಫೀಲ್ಡ್​ಗೆ ಇಳಿದ ಯಶ್​, KGF 3 ಕುರಿತು ಸುಳಿವು ನೀಡಿದ ರಾಕಿಭಾಯ್ ಟ್ವೀಟ್


ಬಹು ತಾರಾಗಣದ ಸಿನಿಮಾ


ಕಾಂತಾರಾದಲ್ಲಿ ದೊಡ್ಡ ತಾರಾ ಬಳಗವೇ ಇದೆ. ಶಿವನಾಗಿ ರಿಷಬ್ ಶೆಟ್ಟಿ, ಲೀಲಾ ಆಗಿ ಸಪ್ತಮಿ ಗೌಡ ನಟಿಸಿದ್ದಾರೆ. ಪ್ರಮುಖ ಪಾತ್ರದಲ್ಲಿ ಕಿಶೋರ್, ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್, ಉಗ್ರಂ ರವಿ ಸೇರಿದಂತೆ ಘಟಾನುಘಟಿಗಳಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತವಿದ್ದು, ವಿಜಯ ಪ್ರಕಾಶ್, ಅನನ್ಯಾ ಭಟ್ ಮತ್ತಿತರ ದನಿಯಲ್ಲಿ ಹಾಡುಗಳು ಮೂಡಿ ಬಂದಿವೆ.

Published by:Annappa Achari
First published: